ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ದ ವತಿಯಿಂದ ರಾಜ್ಯೋತ್ಸವ ಆಚರಣೆ ಅಂಗವಾಗಿ ನಗರದ ಟೈಲರ್ ಮಂಜಿಲ್‌ನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ.
ಸಭೆಯ ಅಧ್ಯಕ್ಷತೆವಹಿಸಿದ್ದ ಸಂಘಟನೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ಈಬಾರಿಯ ರಾಜ್ಯೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ನವೆಂಬರ್ ೧೧ನೇ ತಾರೀಖು ಆಚರಣೆ ಮಾಡಲಾಗುತ್ತಿದೆ.ಅಂದು ಬೆಳಿಗ್ಗೆ ಅಂತರ್ ಶಾಲಾ ಕಾಲೇಜ್ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಾಗು ಸಾಯಂಕಾಲ ವಿವಿಧ ಕಲಾ ತಂಡಗಳೊಂದಿಗೆ ರಸಮಂಜರಿ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೧ ಜನ ಸಾಧಕರಿಗೆ ಕುವೆಂಪು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ ಹಾಗು ತಾಲೂಕು ಪದಾಧಿಕಾರಿಗಳಾದ ಹಣಮಗೌಡ ಶಖಾಪುರ,ಶ್ರೀನಿವಾಸ ಲಕ್ಷ್ಮೀಪುರ,ಹಣಮಂತ ಹಾಲಗೇರಾ,ಆನಂದ ಮಾಚಗುಂಡಾಳ,ಪ್ರಕಾಶ ಹೆಗ್ಗಣದೊಡ್ಡಿ,ಮರಿಲಿಂಗಪ್ಪ ಅಡ್ಡೊಡಗಿ,ಸೋಮನಾಥ ಹಾಲಗೆರಾ, ಯುವ ಘಟಕದ ನಾಗರಾಜ ಡೊಣ್ಣಿಗೇರಾ,ಸಾಯಬಣ್ಣ ಬೆಂಕಿದೊರೆ,ವಿದ್ಯಾರ್ಥಿ ಘಟಕದ ಶಾಂತಗೌಡ ದೇವಾಪುರ,ಆಂಜನೇಯ ದೇವರಗೋನಾಲ,ನಗರಘಟಕದ ಬಾಷಾ ಪರಸನಹಳ್ಳಿ,ಸೋಮನಾಥ ಹಾಲಗೇರಾ ಸೇರಿದಂತೆ ಅನೇಕರಿದ್ದರು. ಇದೇ ಸಂದರ್ಭದಲ್ಲಿ ಚಂದ್ಲಾಪುರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು:ಶ್ರೀನಿವಾಸಗೌಡ ಗೌರವಾಧ್ಯಕ್ಷ,ದೇವಿಂದ್ರಪ್ಪಗೌಡ ಅಧ್ಯಕ್ಷ,ಭೀಮಣ್ಣಗೌಡ ಮತ್ತು ಭೀಮಾಶಂಕರ ಉಪಾಧ್ಯಕ್ಷರು,ಆದಿಶೇಷ ಪ್ರಧಾನ ಕಾರ್ಯದರ್ಶಿ,ಮರೆಪ್ಪ ದೊರಿ ಸಹಕಾರ್ಯದರ್ಶಿ,ಭೀಮಣ್ಣ ಬಿರಾದಾರ ಸಂಘಟನಾ ಕಾರ್ಯದರ್ಶಿ,ದೇವರಾಜ ರುಕ್ಮಾಪುರ ಸಹ ಸಂಘಟನಾ ಕಾರ್ಯದರ್ಶಿ,ಬಸವರಾಜ ದೊಡ್ಮನಿ ಪ್ರಧಾನ ಸಂಚಾಲಕ,ಮಂಜು ಸಂಚಾಲಕ,ರಾಮಣ್ಣ ಸಹ ಸಂಚಾಲಕ ಹಾಗು ವೆಂಕಟೇಶ ಮತ್ತು ಹನುಮಂತ ಖಜಾಂಚಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…