ಸುರಪುರ: ರಾಜ್ಯಾದ್ಯಂತ ಕಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸುರಪುರ ತಾಲೂಕಿನಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಎಲ್ಲೆಡೆ ೧ ರಿಂದ ೫ನೇ ತರಗತಿಗೆ ಶಾಲೆಗಳು ಆರಂಭಗೊಂಡಿವೆ.
ತಾಲೂಕಿನ ಬಿಜಾಸಪುರ (ಕೃಷ್ಣಾಪುರ ಕ್ಯಾಂಪ್) ಸರಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸುವ ಮೂಲಕ ಮಕ್ಕಳ ಓದಿಗೆ ಶುಭ ಹಾರೈಸಿದ್ದಾರೆ.ಬೆಳಿಗ್ಗೆ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಶಾಲೆಯ ಮುಖ್ಯಗುರು ಸೇರಿ ಎಲ್ಲಾ ಶಿಕ್ಷಕರು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ತರಗತಿಗಳಿಗೆ ಕರೆತಂದು ಕೂಡಿಸಿದ್ದಾರೆ.ಅಲ್ಲದೆ ಮದ್ಹ್ಯಾನದ ವೇಳೆಗೆ ಎಲ್ಲಾ ಮಕ್ಕಳಿಗೂ ಹೋಳಿಗೆ ಊಟ ಮಾಡಿಸುವ ಮೂಲಕ ಮಕ್ಕಳು ನಿತ್ಯವು ಶಾಲೆಗೆ ಬರುವಂತೆ ಪ್ರೇರಣೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಅಮರೇಶ ಕುಂಬಾರ ಮಾತನಾಡಿ,ಕಳೆದ ೨೦ ತಿಂಗಳ ನಂತರದಲ್ಲಿ ೧ ರಿಂದ ೫ನೇ ತರಗತಿಗಳು ಆರಂಭಗೊಂಡಿವೆ.ಆದ್ದರಿಂದ ಇಂದು ಬೆಳಿಗ್ಗೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ.ಈಗ ಬಿಜಾಸಪುರ ಶಾಲೆಗೆ ಭೇಟಿ ನೀಡಿದ್ದು ಇಲ್ಲಿಯ ಮಕ್ಕಳ ಹಾಜರಾತಿ ಕಂಡು ಸಂತೋಷವಾಗುತ್ತಿದೆ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ,ಈ ಶಾಲೆಗೆ ಎಸ್ಟಿಎಮ್‌ಸಿ ಮತ್ತು ಮುಖ್ಯಗುರು ಸೇರಿ ಶಿಕ್ಷಕ ವೃಂದದ ಸೇವೆ ಹೆಮ್ಮೆ ಮೂಡಿಸಿದೆ.ಶಾಲೆಗೆ ೨೦ ತಿಂಗಳ ನಂತರ ಮೊದಲ ದಿನ ಮಕ್ಕಳು ಆಗಮಿಸಿರುವುದರಿಂದ ಎಲ್ಲಾ ಮಕ್ಕಳಿಗೆ ವಿಶೇಷವಾದ ಸಿಹಿ ಹೋಳಿಗೆ ಊಟ ಮಾಡಿಸುವ ಮೂಲಕ ಸ್ವಾಗತಿಸಿದ್ದಾರೆ.ಜೊತೆಗೆ ಇಂದು ನಮ್ಮ ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳೊಂದಿಗೆ ಸೇರಿ ಹೋಳಿಗೆ ಊಟ ಸವಿದು ಮಕ್ಕಳು ನಿತ್ಯವು ಶಾಲೆಗೆ ಬರುವಂತೆ ಅವರಲ್ಲಿ ಪ್ರೇರಣೆ ಮೂಡಿಸಿರುವುದು ಖುಷಿಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯಕ,ಇಸಿಒ ಸಣ್ಣ ಹಣಮಂತ,ಬಿಆರ್‌ಪಿ ಖಾದರಪಟೇಲ್,ಬಿಐಇಆರ್‌ಟಿ ರಾಜಶೇಖರ ದೇಸಾಯಿ,ಸಿಆರ್‌ಪಿ ಷಣ್ಮುಖಪ್ಪ ನುಚ್ಚಿ ಹಾಗು ಶಾಲೆಯ ಮುಖ್ಯಗುರು ಸುಮಲತಾ, ಶಿಕ್ಷಕರಾದ ವಿರೇಶ ಕಾದಳ್ಳಿ,ಪ್ರೇಮಾ,ರಾಜಶ್ರೀ ಸೇರಿದಂತೆ ಅನೇಕ ಮುಖಂಡರು ಮತ್ತು ಅಡುಗೆ ಸಿಬ್ಬಂದಿಗಳಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…