ಬಿಸಿ ಬಿಸಿ ಸುದ್ದಿ

ಫ್ಲಿಪ್ ಕಾರ್ಟ್ – ಕೃಷಿ ಉತ್ಪಾದಕ ಸಂಸ್ಥೆಗಳ ಪಾಲುದಾರಿಕೆ ಮತ್ತಷ್ಟು ಬಲವರ್ಧನೆ

– ಮಾರುಕಟ್ಟೆ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಮತ್ತು ಕೃಷಿ ಸಮುದಾಯದ ಬೆಳವಣಿಗೆಗೆ ಈ ಪಾಲುದಾರಿಕೆ ಪೂರಕ
– ಗುಲ್ಬರ್ಗಾದ ನಿಸರ್ಗ ಕೃಷಿ ಉತ್ಪಾದಕ ಕಂಪನಿ, ಪುರ್ನಿಯಾದ ಅರನ್ಯಕ ಅಗ್ರಿ ಪ್ರಡ್ಯೂಸರ್ ಕಂಪನಿ ಮತ್ತು ಸಾಮಾಜಿಕ ಕ್ಷೇತ್ರದ ಸಂಸ್ಥೆಗಳ ಜೊತೆಗೆ ಒಪ್ಪಂದ

ಬೆಂಗಳೂರು: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ನಲ್ಲಿ ಕೃಷಿ ಸಮುದಾಯಗಳ ಪ್ರಗತಿ ಮತ್ತು ಉತ್ತಮ ಮಾರುಕಟ್ಟೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಸ್ಥೆಗಳ (ಎಫ್ ಪಿಒಗಳು) ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡಿದೆ.

ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಬಿಹಾರದ ಪುರ್ನಿಯಾದ ಅರಣ್ಯಕ್ ಅಗ್ರಿ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಅಂಚೆಟ್ಟಿ ಎಫ್ ಪಿಸಿಎಲ್, ಗುಲ್ಬರ್ಆದ ನಿಸರ್ಗ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಅನಂತಪುರದ ಸತ್ಯ ಸಾಯಿ ಫಾರ್ಮರ್ ಫೆಡರೇಷನ್ ಸೇರಿದಂತೆ ಇನ್ನೂ ಅನೇಕ ಪ್ರಮುಖವಾದ ಕೃಷಿ ಉತ್ಪಾದಕ ಸಂಸ್ಥೆಗಳ ಜೊತೆಗೆ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಇದಲ್ಲದೇ, ಫ್ಲಿಪ್ ಕಾರ್ಟ್ ಆಂಧ್ರಪ್ರದೇಶ ಮಹಿಳಾ ಅಭಿವೃದ್ಧಿ ಸೊಸೈಟಿ(ಎಪಿಎಂಎಎಸ್), ದ್ವಾರ ಫೌಂಡೇಷನ್ ಆಫ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ (ಎಫ್ ಡಿಆರ್ ವಿಸಿ), ಸಹಜ ಆಹಾರಂ ಪ್ರೊಡ್ಯೂಸರ್ ಕಂಪನಿ (ಎಸ್ಎಪಿಸಿಒ), ಸಮೃದ್ಧಿ ಮತ್ತು ವೃತ್ತಿಯಂತಹ ಹಲವಾರು ಸ್ವಯಂಸೇವಾ ಸಂಸ್ಥೆಗಳೊಂದಿಗೂ ಸಹಭಾಗಿತ್ವ ಮಾಡಿಕೊಂಡಿದೆ.

ಈ ಪಾಲುದಾರಿಕೆಗಳ ಮೂಲಕ ಫ್ಲಿಪ್ ಕಾರ್ಟ್ ಧಾನ್ಯಗಳು. ಸ್ಟಾಪಲ್ ಗಳು ಮತ್ತು ಕಾಳುಗಳ ಮೂಲಗಳನ್ನು ತಲುಪಲು ಸಾಧ್ಯವಾಗುತ್ತದೆ ಮತ್ತು ರೈತರನ್ನು ತನ್ನ ಪ್ಲಾಟ್ ಫಾರ್ಮ್ ವ್ಯಾಪ್ತಿಗೆ ತರಲು ಸಾಧ್ಯವಾಗುತ್ತದೆ. ಇದರಿಂದ ಕೃಷಿ ಸಮುದಾಯದ ಸಾವಿರಾರು ಜೀವನೋಪಾಯಗಳ ಉತ್ತಮ ಜೀವನಕ್ಕೆ ನೆರವಾಗಲಿದೆ. ಈ ಹೊಸ ತಾಣಗಳು ಇ-ಕಾಮರ್ಸ್ ಮತ್ತು ತಂತ್ರಜ್ಞಾನದ ಬಳಕೆಗೆ ಅವಕಾಶ ದೊರೆಯುತ್ತದೆ. ಅಲ್ಲದೇ, ರೈತರ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಕೃಷಿ ಸಮುದಾಯದ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಬೆಂಬಲ ಸಿಕ್ಕಂತಾಗುತ್ತದೆ.

ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನ ಗ್ರಾಸರಿ ವಿಭಾಗದ ಉಪಾಧ್ಯಕ್ಷೆ ಸ್ಮೃತಿ ರವಿಚಂದ್ರನ್ ಅವರು, “ಹಲವು ವರ್ಷಗಳಿಂದ ರೈತ ಉತ್ಪಾದಕ ಸಂಸ್ಥೆಗಳ (ಎಫ್ ಪಿಒಗಳು) ಜೊತೆಗಿನ ಸಹಭಾಗಿತ್ವಕ್ಕೆ ವೇಗ ನೀಡುವತ್ತ ನಾವು ಆದ್ಯತೆ ನೀಡಿದ್ದೇವೆ. ಅಲ್ಲದೇ, ಕೃಷಿ ಸಮುದಾಯಗಳು ಇಂದಿನ ಇ-ಕಾಮರ್ಸ್ ಮತ್ತು ತಂತ್ರಜ್ಞಾನಗಳಿಂದ ತಮ್ಮ ಕೊಡುಗೆಗಳು ಮತ್ತು ಲಾಭಾಂಶಗಳ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ.

ನಮ್ಮ ಸಮರ್ಪಿತವಾದ ಉಪಕ್ರಮಗಳು ನಮ್ಮ ಮಾರುಕಟ್ಟೆ ಪ್ಲಾಟ್ ಫಾರ್ಮ್ ನಲ್ಲಿ ಉತ್ತಮ ಗುಣಮಟ್ಟದ ಸ್ಟೇಪಲ್ಸ್, ಬೇಳೆಕಾಳು ಮತ್ತು ಮಸಾಲೆಗಳ ಮಾರಾಟಕ್ಕೆ ಮಾರುಕಟ್ಟೆಯನ್ನು ಒದಗಿಸುತ್ತದೆ ಮತ್ತು ಇದರ ಮೂಲಕ ದೇಶಾದ್ಯಂತ ಇರುವ ರೈತ ಸಮುದಾಯಗಳಿಗೆ ಹೆಚ್ಚಿನ ಮಾರುಕಟ್ಟೆಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ದೇಶಾದ್ಯಂತ ಲಕ್ಷಾಂತರ ರೈತರು ಮತ್ತು ಕಡಿಮೆ ಸೇವೆ ಸಲ್ಲಿಸುವ ಸಮುದಾಯಗಳ ಜೀವನೋಪಾಯವನ್ನು ಧನಾತ್ಮಕವಾದ ರೀತಿಯಲ್ಲಿ ಪರಿಣಾಮ ಬೀರುವ ಹಾಗೂ ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೊಡಗಿಕೊಳ್ಳುವಂತೆ ಮಾಡುವುದನ್ನು ನಾವು ಮುಂದುವರಿಸಲು ಬಯಸುತ್ತೇವೆ’’ ಎಂದು ತಿಳಿಸಿದರು.

ಫೌಂಡೇಷನ್ ಫಾರ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ ನ ಸಿಇಒ ಅಲೋಕ್ ಡೇ ಅವರು ಮಾತನಾಡಿ, “ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಟಾಟಾ ಟ್ರಸ್ಟ್ಸ್ –ಎಫ್ ಡಿಆರ್ ವಿಸಿಗಳ ಜಂಟಿ ಉಪಕ್ರಮದ ಮೂಲಕ ಮಹಿಳಾ ಕೃಷಿಕರಿಗೆ ತಲ್ಲ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಈ ನಿಟ್ಟಿನಲ್ಲಿ ನಾವು ಫ್ಲಿಪ್ ಕಾರ್ಟ್ ನೊಂದಿಗೆ ಶಕ್ತಿಶಾಲಿಯಾದ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ. ಈ ಪಾಲುದಾರಿಕೆಯಿಂದ ಕೃಷಿಕರಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೆಂಬಲವಾಗಿ ನಿಲ್ಲಲಿದ್ದೇವೆ. ಇದರ ಜೊತೆಗೆ ಗುಣಮಟ್ಟ, ಸಕಾಲದಲ್ಲಿ ಉತ್ಪನ್ನಗಳನ್ನು ಪೂರೈಕೆ ಮಾಡುವುದು ಮತ್ತು ಪ್ರೋತ್ಸಾಹದಾಯಕವಾದ ಬೆಲೆಯನ್ನು ನೀಡುವುದನ್ನು ಖಾತರಿಪಡಿಸುವ ಮೂಲಕ ಗ್ರಾಹಕ ತೃಪ್ತಿಯನ್ನು ಹೆಚ್ಚಿಸಲಾಗುತ್ತದೆ.

ಇತ್ತೀಚೆಗೆ, ಈ ಉಪಕ್ರಮದಡಿ ರಾಜಸ್ಥಾನದ ಬರನ್ ನಲ್ಲಿರುವ ಹಡೊಟಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟಿಎಡ್ (ಎಚ್ಎಂಕೆಪಿಸಿಎಲ್) ಫ್ಲಿಪ್ ಕಾರ್ಟ್ ನಲ್ಲಿ ತನ್ನ `ಹೋಲ್ ಕಾರಿಯೆಂಡರ್’ ನ ಮೊದಲ ವ್ಯವಹಾರವನ್ನು ನಡೆಸಿದೆ. ಇದು ಈ ಸಮುದಾಯದಲ್ಲಿ ಸಾಕಷ್ಟು ವಿಶ್ವಾಸವನ್ನು ಮೂಡಿಸಿದೆ ಮತ್ತು ಈ ಉಪಕ್ರಮದಡಿ ಇನ್ನೂ ಹೆಚ್ಚು ಇಂತಹ ಕೃಷಿ ಉತ್ಪಾದಕ ಸಂಸ್ಥೆಗಳನ್ನು ತರಲಿದ್ದೇವೆ ಎಂಬ ವಿಶ್ವಾಸ ನಮಗಿದೆ’’ ಎಂದು ತಿಳಿಸಿದರು.

ಫ್ಲಿಪ್ ಕಾರ್ಟ್ ತನ್ನ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ನಲ್ಲಿ ಅತ್ಯುತ್ಕೃಷ್ಠವಾದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಪ್ಯಾಕೇಜಿಂಗ್ ಮತ್ತು ಸಂಸ್ಕರಣಾ ಘಟಕಗಳಿಗೆ (ಪ್ರಾದೇಶಿಕ ಪ್ಯಾಕೇಜಿಂಗ್ ಕೇಂದ್ರಗಳು) ಎಫ್ ಪಿಒ ಭೇಟಿಗಳನ್ನು ಆಯೋಜಿಸಿದೆ. ಈ ಮೂಲಕ ವಿವಿಧ ಪ್ರದೇಶಗಳಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತೆ ಬಗ್ಗೆ ಗ್ರಾಹಕರ ನಿರೀಕ್ಷೆಗಳು ಹೇಗಿರುತ್ತವೆ ಎಂಬುದರ ಬಗ್ಗೆ ಕೃಷಿ ಉತ್ಪಾದಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ಈ ಎಫ್ ಪಿಒಗಳ ಭೇಟಿಯ ಸಂದರ್ಭದಲ್ಲಿ ಗುಣಮಟ್ಟ ತಂಡಗಳು ತಮ್ಮ ತಂಡಗಳೊಂದಿಗೆ ಫ್ಲಿಪ್ ಕಾರ್ಟ್ ನ ಉತ್ಪನ್ನ ಗುಣಮಟ್ಟ, ಆಹಾರ ಸುರಕ್ಷತೆ ಮತ್ತು ತರಬೇತಿ ನೀಡುವ ಸೆಶನ್ ಗಳನ್ನು ನಡೆಸಿಕೊಡಲಿವೆ. ಈ ಎಫ್ ಪಿಒಗಳ ಮೂಲಕ ಫ್ಲಿಪ್ ಕಾರ್ಟ್ ಮತ್ತು ರೈತರ ನಡುವೆ ತಡೆರಹಿತವಾದ ವ್ಯವಹಾರ ಸೌಲಭ್ಯ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಫ್ಲಿಪ್ ಕಾರ್ಟ್ ಒತ್ತು ನೀಡುತ್ತಿದೆ.

ಮುಂಬರುವ ತಿಂಗಳುಗಳಲ್ಲಿ ಫ್ಲಿಪ್ ಕಾರ್ಟ್ ಕರ್ನಾಟಕದ ಲಾಭವಿಲ್ಲದ ಸಂಸ್ಥೆಯಾದ ವೃತ್ತಿ ಸಂಸ್ಥೆಯನ್ನು ತನ್ನ ವ್ಯಾಪ್ತಿಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಮೂಲಕ ಲಕ್ಷಾಂತರ ವ್ಯಕ್ತಿಗಳು/ಕುಟುಂಬಗಳ ಜೀವನ ಮತ್ತು ಜೀವನೋಪಾಯವನ್ನು ಸುಧಾರಣೆ ಮಾಡುವ ಉದ್ದೇಶವನ್ನು ಹೊಂದಿದೆ.

ಅಂದರೆ, ಗುಲ್ಬರ್ಗಾದಿಂದ ತೊಗರಿಬೇಳೆಯಂತಹ ಉತ್ಪನ್ನಗಳನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ತರಲಿದೆ. ಇದಲ್ಲದೇ, ಮುಂಬರುವ ಭತ್ತ ಕೊಯ್ಲಿನ ಸಂದರ್ಭದಲ್ಲಿ ಕರ್ನಾಟಕದ ಕೊಪ್ಪಳದಿಂದ ಭತ್ತ/ಅಕ್ಕಿಯನ್ನು ತನ್ನ ಪ್ಲಾಟ್ ಫಾರ್ಮ್ ವ್ಯಾಪ್ತಿಗೆ ತರುವ ಗುರಿಯನ್ನು ಹಾಕಿಕೊಂಡಿದೆ. ಈ ಮೂಲಕ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲವನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುವುದು ಮತ್ತು ಇಂತಹ ಏಜೆನ್ಸಿಗಳು ಮತ್ತು ಕೃಷಿ ಸಮುದಾಯಗಳ ಜೊತೆಗೆ ಇನ್ನಷ್ಟು ಆಳವಾದ ಪಾಲುದಾರಿಕೆಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago