ಬಿಸಿ ಬಿಸಿ ಸುದ್ದಿ

ಶೌಚಾಲಯ ಕೋಡ್ರಿ ಇಲ್ಲಾ ಕುರ್ಚಿ ಖಾಲಿ ಮಾಡ್ರಿ: ಮಹಿಳೆಯರಿಂದ ಪ್ರತಿಭಟನೆ

ಕಲಬುರಗಿ: ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಮಹಿಳೆಯರು ಶೌಚಾಲಯ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಆಗ್ರಹಿಸಿ ಇಂದು ಗ್ರಾಮ ಪಂಚಾಯತಿಯ ಮುಂದೆ ತಮಟೆ ಬಾರಿ‌ಸಿ ಪ್ರತಿಭಟನೆ ನಡೆಸಿದರು.

ನಮ್ಮ ದೇಶಕ್ಕೆ ಸ್ವತಂತ್ರ ಬಂದರು ಸಹಿತ ಇನ್ನೂ ನಮ್ಮ ಊರುಗಳಲ್ಲಿ ಸರಿಯಾದ ಶೌಚಾಲಯ ನಿರ್ಮಾಣವಾಗಿಲ್ಲ. ಈ ಸರಕಾರ ಇದ್ದು ಇಲ್ಲದಂತಾಗಿದೆ ,ನಮಗೆ ಶೌಚಾಲಯ ವ್ಯವಸ್ಥೆ ಮಾಡಿ ಇಲ್ಲವೇ ಖಾಲಿಮಾಡಿ ! ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತಿಯ ಆಡಳಿತ ವೈಖರಿಗೆ ಚಿ…ಛೀ..ಥೂ ಎಂದು ಉಗಿದು ಹಿಡಿಶಾಪ ಹಾಕಿದರು.

ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಕೆರಿಯ ಹೆಣ್ಣುಮಕ್ಕಳು, ಸೇರಿದಂತೆ ಇತರೆಲ್ಲ ಸಮುದಾಯದ ಮಹಿಳೆಯರು ಮಲ ಜಲಭಾದೆ ಗಾಗಿ ಶೌಚಕ್ಕಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಮರ್ಯಾದಸ್ಥ ಹೆಣ್ಣುಮಕ್ಕಳು ಹಾಗೂ ಪ್ರಾಪ್ತ ವಯಸ್ಸಿನ ಕಿಶೋರಿಯರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ,ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮೌನವಹಿಸಿದ ಕಾರ್ಯವೈಖರಿಗೆ ಮಹಿಳೆಯರು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಗ್ರಾಮದಿಂದ ಯಡ್ರಾಮಿಗೆ ಹೋಗುವ ಮುಖ್ಯ ರಸ್ತೆಯೇ ಊರಿನ ಎಲ್ಲಾ ಹೆಣ್ಣು ಮಕ್ಕಳ ಶೌಚಾಲಯದ ಕೇಂದ್ರ ಸ್ಥಳವಾಗಿತ್ತು. ಆ ರಸ್ತೆಯಲ್ಲಿ ಬಹಳಷ್ಟು ಜನಗಳ ಮತ್ತು ವಾಹನಗಳ ಓಡಾಟವಿರುವುದರಿಂದ ಊರಿನ ಎಲ್ಲಾ ಸಮುದಾಯದ ಮಹಿಳೆಯರು ಅವಮಾನ, ಮುಜುಗರ ಅನುಭವಿ‌ಸುತ್ತಿದ್ದಾರೆ.

ನಿಜಕ್ಕೂ ಇದು ಅಮಾನವೀಯ ಘಟನೆಯಾಗಿದೆ. ಸರಿಯಾದ ಶೌಚಾಲಯವನ್ನು ನಿರ್ಮಿಸಿಕೊಟ್ಟು ಅನುಕೂಲ ಮಾಡಿಕೊಡಬೇಕೆಂದು ಸಮಸ್ಯೆಯನ್ನು ಆಲಿಸದೆ ಕಿವುಡರಾಗಿರುವ ಗ್ರಾಮ ಪಂಚಾಯತಿಯ ಆಡಳಿತ ವರ್ಗಕ್ಕೆ ಹಾಗೂ ಸಮಸ್ಯೆಯನ್ನು ಹೇಳಲು ಅಸಹಾಯಕರಾಗಿರುವ ಚುನಾಯಿತ ಪ್ರತಿನಿಧಿಗಳಿಗೆ ತಮಟೆ ಬಡಿಯುವ ಮೂಲಕ ಎಚ್ಚರಿಸಿ ಪ್ರತಿಭಟನೆಯನ್ನು ಕೈಗೊಂಡರು.

ಪಂಚಾಯತಿಯ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ನಿಮ್ಮಲ್ಲಿ ಮಾನವೀಯತೆ ಎನ್ನುವ ಅಂಶವು ಕಿಂಚಿತ್ತು ಇದ್ದರೆ ಕೊಡಲೇ ಸಮಸ್ಯೆಗೆ ಸ್ಪಂದಿಸಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಘೋಷಣೆ ಕೂಗಿದರು.

ಮಹಿಳೆಯರ ಪ್ರತಿಭಟನೆಗೆ ಬೆಂಬಲ ‌ಸೂಚಿಸಿದ ಭಾರತ ಕಮ್ಯುನಿಸ್ಟ್ ಪಕ್ಷ ಯಡ್ರಾಮಿ ಕಾರ್ಯದರ್ಶಿ ಭೀಮರಾಯ ಮುದಬಸಪ್ಪಗೋಳ ಹಾಗೂ ಪಕ್ಷದ ಪ್ರಮುಖರಾದ ಸಾಹೇಬಗೌಡ ಮುರಡಿ, ಬೀರಪ್ಪ ಪೂಜಾರಿ, ಶರಣು ಬಿಲ್ಲಾ, ದೇವೇಂದ್ರ ಕಡಿ, ರಾಮು ಕುಸ್ತಿ, ಮೇರಮ್ಮ ವರವಿ, ಯಲ್ಲಮ್ಮ ಗೌಂಡಿ, ನೀಲಮ್ಮ ತಳಗೇರಿ, ರುದ್ರಮ್ಮ ಅಲ್ಲಾಪುರ, ಕೊಂತೆಮ್ಮ ಎಂಟಮಾನ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago