ಕಲಬುರಗಿ: ೨೬-೧೦-೨೦೨೧ ರಿಂದ ೦೧-೧೧-೨೦೨೧ ನಡೆಯುತ್ತಿರುವಂಥ ಕನ್ನಡ ರಂಗ ರಾಜ್ಯೋತ್ಸವದಲ್ಲಿ ೨೭-೧೦-೨೦೨೧ತಾರೀಕು ಪ್ರದರ್ಶನವಾದ ನಾಟಕ ‘ನಕ್ಷತ್ರದ ಧೂಳು’ ನಿರ್ದೇಶನ ಪ್ರವೀಣ್ ರೆಡ್ಡಿ ಈ ನಾಟಕದ ಪ್ರಯೋಗದ ಬಗ್ಗೆ ಕೆಲವೊಂದು ಮಾತುಗಳನ್ನು ಹೇಳಲೇಬೇಕು. ಈ ನಾಟಕ ನೋಡಲು ಪ್ರಾರಂಭವಾದಾಗ ನಾಟಕದ ಪ್ರಯೋಗ ಹೊಸ ರೀತಿಯ ಮಡಿಲನ್ನ ತುಂಬುತಾ ಅರಿವಾಗುವಂತೆ ಭಾಸವಾಗುತ್ತದೆ.
ಮೊದಲೇ ಏಕವ್ಯಕ್ತಿ ಪ್ರದರ್ಶನ ಬೇರೆ, ಮೈಯಲ್ಲಿ ರೋಮಗಳು ಕೆಲವೊಮ್ಮೆ ಝಲ್ಲೆಂದು ಎದ್ದು ನಿಲ್ಲುವಂತೆ ಭಾಸವಾಗುವ ಆ ಅನುಭಾವ ನಿಜಕ್ಕೂ ಹೇಳಲಾಗದ ಅನುಭವವೆ ಸರಿ. ವೇದಿಕೆಯ ಮೇಲೆ ಒಬ್ಬ ನಟ ಪಾತ್ರಕ್ಕೆ ತುಂಬ ಬೇಕಾದಂಥ ಭಾವನೆಗಳು ನಟನಿಗೆ ತನ್ನ ಬದುಕನ್ನ ಜತೆಗೆ ಹೋರಾಟ ಮಾಡುವಂಥ ಧೀಮಂತ ದಿಟ್ಟತನದ ನಿಲ್ಲುವಂತಹ ಭಂಗಿಗಳು ನಾಟಕದ ಮೊದಲಿಂದಲೇ ಜನರನ್ನು ಮೋಡಿ ಮಾಡಲು ಪ್ರಾರಂಭಿಸಿತು.
ಈ ನಾಟಕದಲ್ಲಿ ಒಬ್ಬ ಹೋರಾಟಗಾರನ ಒಬ್ಬ ನಟನ ಬದುಕಿನ ನಡುವೆ ಹೋರಾಟದ ಹಲವಾರು ಸೆಳೆತಗಳು ನಿಜಕ್ಕೂ ದಂಗು ಬಡಿಸುವಂತಿದೆ. ನಾಟಕ ನೋಡಿದ ಮೇಲೆ ಒಬ್ಬ ವಿದ್ಯಾರ್ಥಿ ಎದೆತಟ್ಟಿ ಹೋರಾಟ ಮಾಡಲು ಸಿದ್ಧನಾಗುವ ರೀತಿಯಲ್ಲಿ ಈ ನಾಟಕ ತುಂಬಾ ಪರಿಣಾಮಕಾರಿ ವಾಗುತ್ತದೆ. ಆದ್ರೆ ಈ ನಾಟಕದಲ್ಲಿ ಕೆಲವೊಂದು ಲಕ್ಷಣಗಳು ತುಂಬಾ ಮನಸ್ಸಿಗೆ ಬೇಸರ ಮಾಡಿರುವುದೂ ಉಂಟು ಯಾಕೆಂದ್ರೆ ಒಂದ್ಕಡೆ ನಾಟಕದ ಕಥಾವಸ್ತು ಜನರ ನಡುವೆ ಹೋರಾಡುತ್ತಿದ್ದರೆ ಇನ್ನೊಂದು ನಾಟಕದ ನಾಥನ ಹೋರಾಟ ಈ ಎರಡರ ನಡುವೆ ಪ್ರೇಕ್ಷಕರ ಸ್ವೀಕರಿಸುವಂತಹ ಮನೋಭಾವ ನಾ ತುಂಬಾ ಗಾಂಭಿರ್ಯವಾಗಿ ಮೂಡಿ ಬರುವುದರಲ್ಲಿ ಸಂಶಯವೇ ಇಲ್ಲ.
ಇವತ್ತಿನ ಸಮಾಜಕ್ಕೆ ನೇರವಾಗಿ ದಿಟ್ಟವಾಗಿ ಹೇಳುವಂತಹ ಧೈರ್ಯವಾಗಿ ಹೇಳುವಂತಹ ನಾಟಕ ಇದಾಗಿದೆ. ಈ ನಾಟಕದ ನಾಟಕದ ಕಥಾವಸ್ತು ಬೇರೆ ಕಡೆಯೇ ಆಲೋಚನೆ ಮಾಡಲು ಹಚ್ಚಿದರೆ ಪ್ರತ್ಯಕ್ಷವಾಗಿ ನೋಡುವ ಪ್ರೇಕ್ಷಕನ ಮನ ಸ್ಥಿತಿ ಇನ್ನೊಂದು ರೀತಿಯಲ್ಲಿ ಆಲೋಚನೆ ಮಾಡಲು ಒತ್ತಾಯ ಮಾಡುತ್ತದೆ. ಹಾಗೆ ನೋಡಿದರೆ ಇವತ್ತಿನ ರಂಗಭೂಮಿಯ ಜೀವಂತಿಕೆಗೆ ಆಳಕ್ಕೆ ಹೊಕ್ಕು ನೋಡುವಂಥ ನಟರ ಮತ್ತು ಕಥಾವಸ್ತುವಿನ ಬರಹಗಾರರ ಆಲೋಚನೆ ಹಾಗೂ ಅದರ ಜೊತೆಗೆ ನಿರ್ದೇಶನ ಮಾಡುವಂತ ಇದರಲ್ಲಿ ಕಾಣುವುದು 1ಆಶ್ಚರ್ಯವೆ ಸರಿ. ಇವತ್ತಿನ ಕಾಲಘಟ್ಟದಲ್ಲಿ ಒಬ್ಬ ವಿಶ್ವವಿದ್ಯಾಲಯದಲ್ಲಿ ಓದುವಂತಹ ಒಬ್ಬ ವಿದ್ಯಾರ್ಥಿಯ ಜೀವನವನ್ನು ಆಧರಿಸಿ ಈ ನಾಟಕದ ಕತೆಯನ್ನು ಕಟ್ಟಿರುವುದು ತುಂಬಾ ಸಂತೋಷದವಾಗುತ್ತದೆ. ಒಬ್ಬ ವಿದ್ಯಾರ್ಥಿಗೆ ಇರಬೇಕಾದಂತಹ ಜವಾಬ್ದಾರಿ, ಸಮಾಜದ ಬಗ್ಗೆ ಕಳಕಳಿ ಮತ್ತು ವಿದ್ಯಾರ್ಥಿಯಾಗಿ ವಿದ್ಯೆಯನ್ನ ಕಲಿಯುವಂಥ ಹರಸಾಹಸದ ನಿಷ್ಠಾವಂತ ಪ್ರಜೆಯಾಗಿ ಹೊರ ಹೊಮ್ಮುವ ಜವಾಬ್ದಾರಿಯನ್ನು ಹೇಳುತ್ತದೆ ಈ ನಾಟಕ.
ಈ ನಕ್ಷತ್ರ ಧೂಳು ಎಂಬ ವ್ಯಕ್ತಿಯ ಪ್ರಯೋಗ ‘ರೋಹಿತ್ ವೇಮುಲಾ’ ಅವರ ಬದುಕನ್ನಾಧರಿಸಿ ಮಾಡುವಂತ ಏಕವ್ಯಕ್ತಿ ರಂಗ ಪ್ರಸ್ತುತಿ ಇದಾಗಿದೆ. ನಕ್ಷತ್ರ ಎಂಬುವುದು ಜನರ ಮೇಲೆ ಪರಿಣಾಮ ಕೆಲವೊಮ್ಮೆ ರೊಚ್ಚಿಗೇಳಿಸುವಂತ ಮನಸ್ಥಿತಿಯೂ ಉಂಟಾಗುವ ಸಾಧ್ಯತೆ ತುಂಬ ಎದ್ದು ಕಾಣುತ್ತದೆ. ನಟನ ಬದುಕಿನ ಹೋರಾಟದ ಜೊತೆಗೆ ಕಥೆಯಲ್ಲಿ ಬರುವ ರೋಹಿತನ ಗೆಳೆಯರ ಸಹಾಯವು ತುಂಬಾ ಮೆಚ್ಚುಗೆ ಬೇಕಾಗಿರುವಂಥ ದೃಶ್ಯ ಕಣ್ಣಿಗೆ ಕಾಣುತ್ತದೆ ಆದರೆ ಹೋರಾಟದ ಶಕ್ತಿಗೆ ಸಹಾಯ ಸಹಕಾರ ಸಿಗದೇ ಇದ್ದಾಗ ಏಕಾಂಗಿಯಾಗಿ ಒಂಟಿತನದಲ್ಲಿ ಬಿಂದು ಹೋಗುತ್ತದೆ ಆದರೂ ಬೆಂಬಿಡದ ಈ ಹೋರಾಟದ ಮನಸ್ಥಿತಿಗಳು ತನ್ನ ದಿಟ್ಟವಾದ ನಿಲುವಿನಿಂದ ಹೋರಾಡುವ ಮನಸ್ಥಿತಿಗಳು ಹುಟ್ಟುತ್ತವೆ ಎನ್ನುವುದಕ್ಕೆ 1 ಉತ್ತಮ ಆದರ್ಶದ ಉದಾಹರಣೆ ಈ ನಾಟಕವಾಗಿದೆ. ಈ ತರಹದ ನಾಟಕಗಳು ಇವತ್ತಿನ ಯುವ ಪೀಳಿಗೆಗೆ ಹೊಸ ಆದರ್ಶದಾಯಕ ಹೊಸ ಆಲೋಚನೆ ಮಾಡುವಂಥಾ ನಿಟ್ಟಿನಲ್ಲಿ ಈ ರಂಗ ಪ್ರಯೋಗಗಳೂ ಯಶಸ್ವಿ ಕಾಣಲೆಂದು ನಮ್ಮ ಆಶಯ.
ಮತಿ ನಾಟಕ ನಿಜ ಕಥಾವಸ್ತುವಿನಿಂದ ಆಧಾರಿತವಾಗಿರುವುದರಿಂದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಇದರ ಪ್ರಯೋಗ ಆಗುವುದರಿಂದ ವಿದ್ಯಾರ್ಥಿಗಳ ಆಲೋಚನೆ ಸಂವಿಧಾನಕ್ಕೆ ಬೇಕಾಗಿರುವಂಥ ಪ್ರಬಲವಾಗಿರುವಂತಹ ವಿದ್ಯಾರ್ಥಿಯ ಹೊಸ ರೀತಿಯ ಶಕ್ತಿ ಆಲೋಚನೆ ಮಾಡಲು ಪ್ರಾರಂಭಿಸುತ್ತದೆ ಎನ್ನುವುದರಲ್ಲಿ 2ಮಾತೇ ಇಲ್ಲ ದಲಿತರ ಮೇಲೆ ಆಗುವಂಥ ದೌರ್ಜನ್ಯವೊ ಅಥವಾ ವಿದ್ಯಾರ್ಥಿಗಳ ಮೇಲೆ ಆಗುವಂಥ ದೌರ್ಜನ್ಯಗಳ ಕೃತ್ಯವು ಈ ಎಲ್ಲವೂ 1ರಾಜಕೀಯ ಪ್ರಭಾವ ಒತ್ತಡವನ್ನು ಹೆೇಗೆ ಮಣಿ ತವೆ ಎನ್ನುವುದು ತುಂಬ ನಿಖರವಾಗಿ ತೋರಿಸುವಂಥ ಈ ನಾಟಕದ ಪ್ರಯೋಗ. ಈ ನಾಟಕದಲ್ಲಿ ನಟನಾಗಿ ಗೆಳೆಯ ಲಕ್ಷ್ಮಣ ಮಂಡಲಗೇರಾ ಮಾಡಿರುವಂಥ ಅಭಿನಯ ಅದ್ಭುತವಾಗಿದೆ. ಹಾಗೂ ನಾಟಕದ ಪೂರಕವಾಗಿ ಇರಬೇಕಾಗಿರುವಂತಹ ರಂಗಪರಿಕರ, ರಂಗವಿನ್ಯಾಸ ನಾಟಕದ ಪ್ರಯೋಗಕ್ಕೆ ತಕ್ಕಂತೆ ಇರುವುದು ಅಲ್ಲಲ್ಲಿ ಕಾಣುತ್ತೇವೆ. ನಾಟಕದಲ್ಲಿ ಲಕ್ಷ್ಮಣ ಅವರ ನಟನೆ ಇನ್ನೂ ಆಳವಾಗಿ ಜನರ ಮನಸ್ಥಿತಿಯನ್ನು ಮುಟ್ಟುವಂಥ ಪ್ರಯತ್ನ ಆಗಬೇಕಾಗಿದೆ ಎನಿಸುತ್ತದೆ.
ಕಥಾವಸ್ತು ಮತ್ತು ನಟನೆಯ ನಡುವೆ ಇರುವಂಥ ಬಾಂಧವ್ಯದ ಹಲವಾರು ಆಯಾಮಗಳು ಅಲ್ಲಲ್ಲಿ ಕೊಂಡಿಗಳು ಕಳಚಿ ಹೋಗುತ್ತಿರುವುದು ಕಾಣಿಸುತ್ತಿತ್ತು ಆದರೂ ಕಥೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಹರಸಾಹಸ ಮಾಡಿ ಉತ್ತಮ ಪ್ರದರ್ಶನಕ್ಕೆ ನಾಂದಿಯಾಗಿದೆ. ಅಷ್ಟಕ್ಕೂ ಒಬ್ಬ ಒಬ್ಬ ನಿರ್ದೇಶಕನಿಗೆ ನಟನಿಗೆ ಮತ್ತು ಬರಹಗಾರನಿಗೆ ಎದೆಗಾರಿಕೆ ಈ ಸಮಾಜದ ಸತ್ಯಘಟನೆ ಅರಿವಾಗಿದ್ದೇ ಆಗ ಮಾತ್ರ ಈ ಥರದ ಪ್ರದರ್ಶನ ಪ್ರಯೋಗಗಳು ಮಾಡಿಸುವುದಕ್ಕೆ ಮತ್ತು ಮಾಡುವುದಕ್ಕೆ 1ರೀತಿಯ ಶಕ್ತಿಯಾಗುತ್ತದೆ . ಈ ಪ್ರಪಂಚದಲ್ಲಿ ಆಗುಹೋಗುಗಳ ಬಗ್ಗೆ ನೇರವಾಗಿ ನಿಖರವಾಗಿ ಹೇಳುವಂತೆ ಈ ನಾಟಕ ತುಂಬಾ ಪ್ರೇಕ್ಷಕರಿಗೆ ಮುಟ್ಟುತ್ತದೆ ಮತ್ತು ರಂಗಾಸಕ್ತರಲ್ಲಿ ಬೇಸರ ಹೊಸ ಉಂಟುಮಾಡುತ್ತದೆ.
ಯಾಕೆಂದರೆ ಪ್ರಪಂಚದಲ್ಲಿ ಹಲವಾರು ವಿಚಾರಗಳು ಅವರವರು ವೈಯಕ್ತಿಕವಾಗಿ ಅವರದೇ ಆದಂತಹ ನೀರಿನಲ್ಲಿ ಇರೋದ್ರಿಂದ ಕೆಲವು ಸಂಘ ಸಂಸ್ಥೆಗಳಿಗೆ ಕೆಲವು ಸಂಸ್ಥೆಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅವರಂತೆಯೇ ಕೆಲ್ಸ ಮಾಡೋರಿಗೆ ನಾಟುವುದು ಸರೀನೆ ಅಂತ ಹೇಳ ಬಹುದು ಆದರೆ ಒಬ್ಬ ವಿದ್ಯಾರ್ಥಿ ತನ್ನ ಬದುಕನ್ನ ಕೊಟ್ಟುಕೊಳ್ಳುತ್ತಾ ಹೋರಾಟ ಮಾಡುತ್ತಾ ಈ ಹೊರಜಗತ್ತಿನ ದಬ್ಬಾಳಿಕೆಯನ್ನು ಸಹಿಸ್ಕೊಳ್ತಾ ಯಾರ ಸಹಾಯವೂ ಸಿಗದನೆ ತನ್ನ ಸೋಲನ್ನು ತಾನೇ ಒಪ್ಪಿಕೊಂಡಿರುವುದು ಎಲ್ಲೋ 1ಕಡೆ ಬೇಸರ ಉಂಟು ಕಲ್ವರಿ ರಂಗಾಯಣವು ಈ ತರದ ಪ್ರಯೋಗಗಳನ್ನ ಮತ್ತು ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಈ ಥರದ ಪ್ರಯೋಗಳು ಇವತ್ತಿನ ಯುವಕರಿಗೆ ರಂಗ ಪ್ರೇಕ್ಷಕರಿಗೆ ನಟನೆಯನ್ನು ಕಲಿಯುವಂತಹ ಹೊಸ ಪೀಳಿಗೆಗೆ ಇದೊಂದು ರೀತಿಯ ದೊಡ್ಡ ಸಾಧನೆ ಅಂತ ಹೇಳೋದರಲ್ಲಿ ತಪ್ಪೇನಿಲ್ಲ ಕಲಬುರಗಿ ರಂಗಾಯಣ ಈ ರೀತಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮತ್ತೆ ಹೊಸ ಹೊಸ ರೀತಿಯ ಆಲೋಚನೆಗೆ ಮತ್ತು ಪ್ರೇಕ್ಷಕರಿಗೆ ಮನಮುಟ್ಟುವಂತೆ ಪ್ರಯೋಗಗಳನ್ನ ಸಂಸ್ಥೆಗಳನ್ನು ನಮ್ಮ ಆಶಯ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…