ತೊಗರಿಯಗೊಡ್ಡು ರೋಗವು ನಂಜಾಣುಗಳಿಂದ ಉಂಟಾಗುವ ಅಂತರ್ವ್ಯಾಪಿಯಾಗಿದ್ದು ಅಸೆರಿಯಾಕಜಾನಿಎನ್ನುವರಸ ಹೀರುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಶಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆರೋಗದ ಸ್ಥಳದಿಂದ ಸುಮಾರು೩ ಕಿ. ಮಿ. ವರೆಗೂ ಪ್ರಸಾರವಾಗುವವು. ರೋಗಾಣು ಮತ್ತುರೋಗಾಣುವಾಹಕ ಮೈಟ್ ನುಶಿಗಳು ಬಂಜರು ಭೂಮಿ ಮತ್ತು ಹೊಲದಒಡ್ಡಿನ ಮೇಲೆ ಬೆಳೆದ ತೊಗರಿ ಮತ್ತುಕಾಡುತೊಗರಿಮಾತ್ರ ಮೀಸಲಾಗಿದ್ದು ಬೇರೆ ಬೆಳೆಯ ಮೇಲೆ ಬರುವುದಿಲ್ಲ.
ಬಹು ವಾರ್ಷಿಕತೊಗರಿ, ತಾನಾಗಿಯೇ ಬೆಳೆದ ತೊಗರಿ ಗಿಡಗಳು ಮತ್ತು ಕೂಳೆ ತೊಗರಿಯುರೋಗಾಣುವಿಗೆ ಮತ್ತು ವಾಹಕ ಮೈಟ್ ನುಶಿಗಳಿಗೆ ಆಸರೆ ನೀಡಿರೋಗಾಣುವಿನ ಸಂತತಿ ಮುಂದುವರೆಸಲು ಸಹಾಯವಾಗುವವು. ತೊಗರಿಯನ್ನು ಹೆಚ್ಚು ಎತ್ತರದ ಬೆಳೆಗಳಾದ ಜೋಳ ಮತ್ತು ಸೆಜ್ಜೆಯ ಜೊತೆ ಅಂತರ ಬೆಳೆಯಾಗಿ ಬೆಳೆದಾಗ ರೋಗದತೀವ್ರತೆ ಹೆಚ್ಚಾಗುವುದು.
ಸಾಮಾನ್ಯವಾಗಿರೋಗದ ಲಕ್ಷಣಗಳು ಬೇಸಿಗೆಯ ಬಿಸಿಲಿನಲ್ಲಿಕಡಿಮೆಯಾಗಿ ಮುಂಗಾರಿನಲ್ಲಿ ಪುನಃ ಮರುಕಳಿಸುವವು.ಬೇಸಿಗೆಯ ನೆರಳು ಮತ್ತುಆರ್ದ್ರತೆ ಮೈಟ್ ನುಶಿಗಳ ಅಭಿವೃದ್ಧಿಗೆ ಸಹಕಾರಿಯಾಗುವವು.ರೋಗ ಬಂದ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿನ ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುವುದುಂಟು.
ಇಂತಹಗಿಡದ ಎಲೆಗಳು ಸಣ್ಣದಾಗಿದ್ದು ಮೇಲ್ಬಾಗದಲ್ಲಿ ತಿಳಿ ಮತ್ತುದಟ್ಟ ಹಳದಿ ಬಣ್ಣದ ಮೊಸಾಯಿಕ್‌ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುತ್ತವೆ.ರೋಗದ ಪ್ರಾರಂಬಿತ ಹಂತದಲ್ಲಿ – ಮೊಸಾಯಿಕ್ತರಹದ ತಿಳಿ ಹಳದಿ ಬಣ್ಣವುಎಲೆಯ ನರಗಳಗುಂಟ ಪ್ರಸರಿಸಿ ನರಗಳು ಎದ್ದುಕಾಣಿಸುವುವು. ರೋಗದತೀವ್ರತೆಕಡಿಮೆಇದ್ದಾಗ ಎಲೆಗಳು, ತಿಳಿ ಹಳದಿ ಬಣ್ಣವಾಗಿದ್ದು ಮೊಸಾಯಿಕ್ ಲPಣಗಳನ್ನು ಹೊಂದಿರುವುವು.
ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.ರೋಗದ ಪ್ರಾರಂಭದ ಹಂತದಲ್ಲಿರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು.ರೋಗಾಣುವಿನ ಮತ್ತುರೋಗವಾಹಕ ಮೈಟ್ ನುಸಿಗಳ ಪ್ರಮಾಣಕಡಿಮೆ ಮಾಡಲು ಪರ್ಯಾಯ ಬೆಳೆಯಿಂದ ಬೆಳೆಯ ಪರಿವರ್ತನೆ ಮಾಡಬೇಕು.ಈ ರೋಗವನ್ನು ತಡೆದುಕೊಳ್ಳುವ ಅಥವಾ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಬಿ.ಎಸ್. ಎಂ. ಆರ್-೭೩೬ , ತಳಿ- ೮೧೧ , ತಳಿ-೧೫೨ ಎಂಬ ತಳಿಗಳನ್ನು ಉಪಯೋಗಿಸಬೇಕು., ಬೆಳೆಯ ಪ್ರಾರಂಭಿಕ ಹಂತದಲ್ಲಿಬೇವಿನ ನುಶಿ ನಾಶಕ ೨ ಮಿಲೀ ಪ್ತತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…