ಬಿಸಿ ಬಿಸಿ ಸುದ್ದಿ

ಬ್ಯಾಂಕ್‌ಗಳ ಸಾಲ ವ್ಯವಸ್ಥೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವೆ: ಸಂಸದ ಡಾ. ಉಮೇಶ್ ಜಾಧವ್

ಕಲಬುರಗಿ: ಬ್ಯಾಂಕ್‌ಗಳಲ್ಲಿ ರೈತರು ಸೇರಿದಂತೆ ಫಲಾನುಭವಿಗಳಿಗೆ ಸರಿಯಾಗಿ ಸಾಲ ವಿತರಣೆಯಾಗುವ ನಿಟ್ಟಿನಲ್ಲಿ ಮುಂಬರುವ ಸಂಸತ್ ಅಧಿವೇಶನದಲ್ಲಿ ಚರ್ಚಿಸುವುದಾಗಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ ಅವರು ತಿಳಿಸಿದರು.
ಶನಿವಾರ ನಗರದ ಎನ್.ವಿ.ಸೊಸೈಟಿಯ ಸಂಗಮೇಶ್ವರ್ ಆಡಿಟೋರಿಯಂನಲ್ಲಿ ಕಲಬುರಗಿ ಲೀಡ್ ಬ್ಯಾಂಕ್ ವತಿಯಿಂದ ನಡೆದ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆ, ಪಿಎಂ ಸ್ವನಿಧಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಇನ್ನಿತರ ಹಲವಾರು ಒಳ್ಳೊಳ್ಳೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಇವುಗಳ ಬಗ್ಗೆ ಸರಿಯಾಗಿ ಜಾಗೃತಿಯಾಗುತ್ತಿಲ್ಲ ಎಂದು ವಿ?ದ ವ್ಯಕ್ತಪಡಿಸಿದ ಅವರು, ಈ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು.

ಗ್ರಾಹಕರು ತಮ್ಮ ಮೇಲೆ ಸಾಕ? ನಿರೀಕ್ಷೆ ಇಟ್ಟುಕೊಟ್ಟಿದ್ದಾರೆ. ಅದನ್ನು ಹುಸಿಗೊಳಿಸಬಾರದು ಎಂದ ಅವರು ಬ್ಯಾಂಕಿಗೆ ಬರುವ ಯುವಕನ್ನು ತಮ್ಮ ಮಕ್ಕಳಂತೆ ಕಾಣಬೇಕು. ಅವರಿಗೆ ಸರ್ಕಾರದ ಸಾಲ-ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಹೇಳಿದರು.

ಯೋಜನೆಗಳ ಜಾರಿ ನಿಟ್ಟಿನಲ್ಲಿ ಕಲಬುರಗಿ ವಾಣಿಜ್ಯ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸರ್ಕಾರದ ವಿವಿಧ ಇಲಾಖೆಗಳನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಳೆದ ಸಭೆಯಲ್ಲಿ ತಾನು ತಿಳಿಸಿದ್ದರೂ, ಇಬ್ಬರು ಮುದ್ರಾ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ನೀಡಿಲ್ಲ ಎಂದು ಈ ಸಂದರ್ಭದಲ್ಲಿ ಗರಂ ಅದ ಸಂಸದರು, ಭಾರತೀಯ ಸ್ಟೇಟ್ ಬ್ಯಾಂಕ್‌ನ ಯೋಜನೆಗಳ ರೀತಿಯಲ್ಲಿ ಇತರೆ ಬ್ಯಾಂಕ್‌ಗಳು ಸರಿಯಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಕರೆ ನೀಡಿದರು. ಸಾಲ ಯೋಜನೆಗಳ ಕುರಿತಂತೆ ಪ್ರತಿತಿಂಗಳು ಬ್ಯಾಂಕರ್‌ಗಳ ಸಭೆ ಕರೆದು ವಿಮರ್ಶಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರಣ್ಣ ವಣಿಕ್ಯಾಳ ಅವರು ಮಾತನಾಡಿ, ಗ್ರಾಹಕರು ಹಾಗೂ ಫಲಾನುಭವಿಗಳಿಗೆ ಯೋಜನೆಗಳ ?ರತ್ತು ಮತ್ತು ನಿಬಂಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕನ್ನಡ ಭಾ?ಯಲ್ಲಿಯೂ ಮಾಹಿತಿ ಒದಗಿಸಬೇಕು. ಈ ಬಗ್ಗೆ ಮಾಹಿತಿ ಕೇಂದ್ರ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಸಾಲ ಮತ್ತಿತರ ಯೋಜನೆಗಳನ್ನು ಬ್ಯಾಂಕ್‌ಗಳು ಸರಿಯಾಗಿ ಜಾರಿ ಮಾಡಿದಲ್ಲಿ ಗ್ರಾಹಕರು ದೂರು ಹೊತ್ತು ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರರ ಕಚೇರಿಯತ್ತ ಅಲೆದಾಡುವುದು ತಪ್ಪುತ್ತದೆ. ದೂರುಗಳು ಬಾರದ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ಸೇಟ್ ಬ್ಯಾಂಕ್ (ಎಲ್‌ಹೆಚ್‌ಓ-ನೆಟ್‌ವಕ್-೧) ಪ್ರಧಾನ ವ್ಯವಸ್ಥಾಪಕ ಎಸ್, ರಾಧಾಕೃ?ನ್ ಅವರು ಮಾತನಾಡಿ, ಬ್ಯಾಂಕಿಗೆ ಬರುವ ಪ್ರತಿಯೊಬ್ಬ ಗ್ರಾಹಕನ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಯಾವುದೇ ಗ್ರಾಹಕ ಆಥವಾ ಫಲಾನುಭವಿ ಬ್ಯಾಂಕಿನಿಂದ ಮುಖ ಮತ್ತು ಹೃದಯದಲ್ಲಿ ನಗುಹೊತ್ತು ಹೊರಹೊಗಬೇಕೇ ಹೊರತು, ನೋವು-ದು:ಖಗಳನ್ನಲ್ಲ ಎಂದು ಮನಮಿಡಿಯುವಂತೆ ನುಡಿದರು.

ಸಹಾಯಕ ಪ್ರಧಾನ ವ್ಯವಸ್ಥಾಪಕ ( ಎಸ್‌ಎಂಇ) ಗಿರೀಶ್ ಅವರು ಮಾತನಾಡಿ, ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆ ಸಾಧನೆಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೆಮ್ಮೆಯಿಂದ ಗಣ್ಯರ ಗಮನಕ್ಕೆ ತಂದರು. ಈ ಸಾಧನೆ ಹಿಂದೆ ಜನನಾಯಕರು, ಬ್ಯಾಂಕ್ ಅಧಿಕಾರಿಗಳು ಮುಂತಾದವರ ಶ್ರಮವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಬ್ಯಾಂಕ್‌ಗಳ ವಿವಿಧ ಸಾಲ-ಸವಲತ್ತುಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ವ?ಕ್ಕೊಮ್ಮೆ ೩೩೦ ರೂಪಾಯಿ ಕಟ್ಟಿ ಅನಾರೋಗ್ಯಕ್ಕೀಡಾಗಿ ಮನೋಹರ್ ಬಬಲಾದ ಅವರ ಪತ್ನಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸಂಸದರು ಮನೋಹರ್ ಬಬಲಾದ ಅವರಿಗೆ ೨ ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿದರು.

ಆನಂದ್ ಜಿ. ಎಂಬುವರಿಗೆ ಯೂನಿಯನ್ ಬ್ಯಾಂಕ್ ವತಿಯಿಂದ ೬೬ ಲಕ್ಷ ರೂಪಾಯಿಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ಮಾಣದ ಸಾಲ ವಿತರಿಸಲಾಯಿತು. ಇನ್ನು ಕಮಲಾಪುರ ಕೆಜಿಬಿ ಬ್ಯಾಂಕ್ ವತಿಯಿಂದ ಡೈರಿ ಅಭಿವೃದ್ಧಿಗಾಗಿ ೨೯ ಲಕ್ಷ ರೂ.ಗಳ ಚೆಕ್ ಸಹ ಫಲಾನುಭವಿಗೆ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ೧೭ ಮಳಿಗೆಗಳನ್ನು ಲೋಕಸಭಾ ಸದಸ್ಯ ಜಾಧವ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀ? ಶಶಿ, ಕಲಬುರಗಿ ಎಸ್‌ಬಿಐ (ಎಓ-೨) ಉಪ ಪ್ರಧಾನ ವ್ಯವಸ್ಥಾಪಕ ಜೊಬಿ ಜೋಸ್, ನಬಾರ್ಡ್ ಡಿಡಿಎಂ ರಮೇಶ್‌ಭಟ್, ಎಸ್‌ಬಿಐನ ಜನರಲ್ ಮ್ಯಾನೇಜರ್ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಇಂತೇಸಾರ್ ಹುಸೇನ್, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಗುರುರಾಜ್.ಎಸ್, ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕಿ ಶ್ರೀಮತಿ ನಳಿನಿ, ಬರೋಡಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಸುನೀಲ್ ಕುಮಾರ್, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ್ ಹೆಗ್ಡೆ ಮುಂತಾದವರು ಇದ್ದರು, ಎಸ್‌ಬಿಐ ಉಪ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago