ಕಲಬುರಗಿ: ಜಿಲ್ಲೆಯ ವಾಡಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಶನಿವಾರ ನಡೆದ ಕಲಬುರಗಿ 8ನೇ ಎಐಡಿವೈಓ ಜಿಲ್ಲಾ ಯುವಜನ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಪ್ರತಿನಿಧಿ ಅಧಿವೇಶನದಲ್ಲಿ ಮುಖ್ಯ ಗೊತ್ತುವಳಿಯನ್ನು ಸದಸ್ಯ ಮಲ್ಲಿನಾಥ ಹುಂಡೇಕಲ್ ಮಂಡಿಸಿದ್ದರು.ನಂತರ ಎಲ್ಲಾ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರ್ವಾನುಮತದಿಂದ ಅಂಗೀಕಾರ ಮಾಡಿ ಸೆಕ್ರೆಟರಿಯೆಟ್ ಸದಸ್ಯೆ ಅಂಬಿಕಾ ಅನುಮೋದಿಸಿದ್ದರು . ನಂತರ ಸಂಘಟನಾತ್ಮಕ ವರದಿಯನ್ನು ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್ ಮಂಡಿಸಿದರು. ಸಹಮತ ನೀಡಿ ಸದಸ್ಯ ಶಿವಕುಮಾರ ಇ. ಕೆ. ಅನುಮೋದನೆ ಮಾಡಿದರು.
ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಯುವಜನರ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ ಬಂದಿದೆ .ಶ್ರಮಾಧಾರಿತ ಕಾರ್ಖಾನೆ ಸ್ಥಾಪಿಸಬೇಕು ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು. ಉದ್ಯೋಗದ ನೇಮಕಾತಿಗಾಗಿ ಇರುವ ಅರ್ಜಿ ಶುಲ್ಕ ರದ್ದುಪಡಿಸಬೇಕು. ಅಶ್ಲೀಲ ಸಿನಿಮಾ ಸಾಹಿತ್ಯ ಪ್ರಸಾರ ತಡೆಗಟ್ಟಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ,ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು.
ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಬೆಲೆಯೇರಿಕೆ ನಿಯಂತ್ರಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕುಟುಂಬಕ್ಕೆ ವಾರ್ಷಿಕ ಕನಿಷ್ಠ 200 ಮಾನವ ದಿನಗಳ ಉದ್ಯೋಗ ಖಾತ್ರಿ ಪಡಿಸಬೇಕು. ಕೆಪಿಎಸ್ಸಿ ನೇಮಕಾತಿಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರ ವನ್ನು ತಡೆಗಟ್ಟಬೇಕು.ಹೀಗೆ ಇನ್ನು ಹಲವು ಪ್ರಮುಖ ಬೇಡಿಕೆ ಈಡೇರಿಸುವಂತೆ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲು ಅಂಗೀಕರಿಸಲಾಯಿತು .
ನಂತರ ಇದೇ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ ನೇತೃತ್ವದಲ್ಲಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ನಿಂಗಣ್ಣ ಜಂಬಗಿ, ಭೀಮಾಶಂಕರ ಪಾಣೇಗಾಂವ್ ಉಪಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ಬಲಿಷ್ಠ ಹೋರಾಟ ರೂಪಿಸಲು ಹಾಗೂ ಬಲಪಡಿಸಲು ನೂತನ ಜಿಲ್ಲಾ ಸಮಿತಿ ಚುನಾಯಿಸಲಾಯಿತು.
ನೂತನ ಜಿಲ್ಲಾ ಅಧ್ಯಕ್ಷರಾಗಿ ಜಗನ್ನಾಥ ಎಸ್.ಎಚ್. ಉಪಾಧ್ಯಕ್ಷರುಗಳಾಗಿ ಸಿದ್ದು ಚೌದ್ರಿ ,ಶರಣು ವಿ.ಕೆ, ಮಲ್ಲಿನಾಥ ಹುಂಡೇಕಲ್ ಕಾರ್ಯದರ್ಶಿ ಅಂಬಿಕಾ ಎಸ್.ಜಿ, ಜಂಟಿ ಕಾರ್ಯದರ್ಶಿಗಳಾಗಿ ಈಶ್ವರ ಇ.ಕೆ. ಗೌತಮ್ ಪರತುರಕರ್, ರಮೇಶ್ ದೇವಕರ. ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಪುಟ್ಟರಾಜ ಲಿಂಗಶೆಟ್ಟಿ, ರಘು ಪವಾರ್, ಶ್ರೀನಿವಾಸ್, ದುರ್ಗಪ್ಪ ಜೇವರ್ಗಿ, ಶ್ರೀಶರಣ ಹೊಸಮನಿ,ಅಜಯ ಗುತ್ತೇದಾರ , ಪಾರ್ವತಿ ಕೋಟಗಾರ, ಸಿದ್ದಮ್ಮ ಎಸ್.ಜಿ, ತೇಜಸ್ ಇಬ್ರಾಹಿಂಪುರ,ರಾಜು ಒಡೆಯರ್, ಮಲ್ಲು ಧರಿಯಾಪುರ, ಬಸವರಾಜ ನಾಟೆಕಾರ್, ದತ್ತು ಹುರುಡೇಕರ. ಹೀಗೆ ಜಿಲ್ಲಾ ಸಮಿತಿಗೆ – 21 ಜನ ಮತ್ತು ಕೌನ್ಸಿಲ್ ಸದಸ್ಯರಾಗಿ 21ಜನ,ಒಟ್ಟು 42 ಜನ ಸಮಿತಿಗೆ ಆಯ್ಕೆ ಮಾಡಲಾಯಿತು.
ಈ ಸಮ್ಮೇಳದ ಸಂದೇಶ ಜಿಲ್ಲೆಯಾದ್ಯಂತ ಮುಟ್ಟಬೇಕು ಮತ್ತು ಜಿಲ್ಲೆಯ ವಿವಿಧ ತಾಲೂಕಗಳಿಂದ ಪ್ರತಿನಿಧಿಗಳು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದರು ಎಂದು ಕಚೇರಿ ಕಾರ್ಯದರ್ಶಿ ಈಶ್ವರ ಇ.ಕೆ. ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…