ಶರಣರದು ಭಗವಂತನಿಗೆ ಅರ್ಪಿತವಾದ ಬಾಳು. ಅವರು ತಮ್ಮ ತನು-ಮನಗಳನ್ನು ಭಗವಂತನಿಗೆ ಮಾರಿಕೊಂಡವರು. ಬೀಸುವ ಗಾಳಿ, ಸುರಿವ ಮಳೆ, ಸರಿಯುವ ಮೋಡ, ಹರಿಯುವ ಹಳ್ಳ, ಮಿನುಗುವ ಜಿಂಕೆ ಹೀಗೆ ಎಲ್ಲವೂ ಭಗವಂತ ನೀಡಿದ ಪ್ರಸಾದ ಎಂದು ಬಗೆದು ಪ್ರಸಾದಿಕ ಜೀವನ ನಡೆಸಿದವರು ಶರಣರು. ಹಸಿದ ಹೊಟ್ಟೆಗೆ ಅನ್ನ ಕೊಡದ, ಬಿದ್ದವರನ್ನು ಮೇಲೆಕ್ಕೆತ್ತದ ದೇವರು, ಧರ್ಮ ಇರುವುದಿಲ್ಲ. ಧರ್ಮ-ದೇವರುಗಳಿಂದ ನಮ್ಮ ಬದುಕಿಗೆ ಔನ್ನತ್ಯ ತಂದುಕೊಳ್ಳಬಹುದು ಎಂದು ಹೇಳಿದರು. ಅಂತೆಯೇ ಬೇಧರಹಿತ ಸಮಾಜ ಕಟ್ಟಲು, ಹಸಿವುಮುಕ್ತ ಬಾರತ ನಿಮಾಣ ಮಾಡಲು ಬಸವಾದಿ ಪ್ರಮಥರು ಸಂಕಲ್ಪ ತೊಟ್ಟಿದ್ದರು.
ನೋಡುವ ಕಣ್ಣು, ಮುಟ್ಟುವ ಕೈ, ಆಡುವ ನಾಲಿಗೆ, ಕೇಳುವ ಕಿವಿ, ಕಾಯ-ಜೀವ ಎಲ್ಲವೂ ಭಗವಂತನ ಪ್ರಸಾದ. ಇದನ್ನೇ ಜೇಡರ ದಾಸಮಯ್ಯನವರು “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನ್ನು ಉಂಡು ಅನ್ಯರ ಹೊಗಳುವ ಕುನ್ನಿಗಳನೆನೆಂಬೆ ರಾಮನಾಥ” ಎಂದು ಕರೆದಿದ್ದಾರೆ.
ಪ್ರಕೃತಿ ಪುರುಷನ ಲೀಲಾವಿಲಾಸದಿಂದ ಸೃಷ್ಟಿಯಾದ ಈ ವಿಶ್ವಕ್ಕೆ ನಮ್ಮಿಂದ ಏನೂ ಮಾಡಲಾಗಿಲ್ಲ. ಪ್ರಕೃತಿ ವಿರುದ್ಧವಾಗಿ ನಡೆಯುತ್ತಿರುವ ನಮ್ಮಿಂದ ಈ ವಿಶ್ವಕ್ಕೆ ಏನು ಕೊಡುಗೆ? ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ಅನ್ನವನ್ನು ಪ್ರಸಾದ, ನೀರನ್ನು ಪಾದೋದಕ ಮಾಡಿದ ಕೀರ್ತಿಯ ಕಿರೀಟಧಾರಿ ಬಸವಣ್ಣನವರ ಕಾಲದಲ್ಲಿ ಬಿಬ್ಬಿ ಬಾಚಯ್ಯ ಎಂಬ ಶರಣರು ಜೀವಿಸಿದ್ದರು. ವಿಪ್ರ ಕುಲದಲ್ಲಿ ಹುಟ್ಟಿದ ಇವರು, ಕಂತಿ ಬಿಕ್ಷೆ ಬೇಡಿ ಅವರಿವರ, ಉಳ್ಳವರ ಮನೆಯಲ್ಲಿ ಉಳಿದ (ಮಿಕ್ಕ) ಪ್ರಸದವನ್ನು ಹೊತ್ತುಗಾಡಿಯಲ್ಲಿ ತಂದು ಹಸಿದವರಿಗೆ, ಬಡವರಿಗೆ ಪ್ರಸಾದ ತಲುಪಿಸುವ ಕಾಯಕ ಮಾಡುತ್ತಿದ್ದರು. ಬ್ರಾಹ್ಮಣ ಕುಲದಲ್ಲಿ ಹುಟ್ಟಿ ವೇದ, ಶಾಸ್ತ್ರ, ಉಪನಿಷತ್ ಬಲ್ಲವರಾಗಿದ್ದರೂ ಇಲ್ಲದವರಿಗೆ, ಅಗತ್ಯವಿದ್ದವರಿಗೆ ಪ್ರಸಾದ ಮುಟ್ಟಿಸುವ ಕಾಯಕ ಮಾಡುವ ಶ್ರೇಷ್ಠ ಪ್ರಸಾದಿಯಾಗಿದ್ದರು.
ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೊಬ್ಬೂರು ಗ್ರಾಮದ ಬಿಬ್ಬಿ ಬಾಚಯ್ಯನವರು ಏಣಾಂಕಧರ ಸೋಮೇಶ್ವರ ಅಂಕಿತನಾಮದಲ್ಲಿ ೧೦೨ ವಚನಗಳನ್ನು ಬರೆದಿದ್ದಾರೆ. ಗೊಬ್ಬೂರು ಗ್ರಾಮದಲ್ಲಿ ಈಗಲೂ “ಅರ್ಪಣದ ಕಟ್ಟೆ” ಎಂಬುದಿದ್ದು, ಇದು ಬಾಚಯ್ಯನ ಗದ್ದುಗೆಯಾಗಿರಬೇಕೆಂದು ಶೋಧಕರು ಗುರುತಿಸಿದ್ದಾರೆ.
ಈತನ ಈ ಕಾಯಕ ನೋಡಿ ಒಳಗೊಳಗೆ ಉರಿದುಕೊಳ್ಳುತ್ತಿದ್ದ ಕೆಲ ಕುಹಕಿಗಳು ಇವರ ಪ್ರಸಾದ ತುಂಬಿದ ಬಂಡಿಯನ್ನು ತಡೆಗಟ್ಟಿ, ಅದರಲ್ಲೇನಿದೆ? ತೋರಿಸು. ಇಲ್ಲದಿದ್ದಲ್ಲಿ ನಿನ್ನನ್ನು ಊರಿನಿಂದ ಹೊರ ಹಾಕುತ್ತೇವೆ ಎಂದು ಕೇಳಿದರು. ಬಾಚಯ್ಯನವರು ಬಂಡಿಯನ್ನು ಮುಟ್ಟಗೊಡದಿದ್ದಾಗ ಬಂಡಿಯೊಳಗಿದ್ದ ಅನ್ನವನ್ನು ಸರಿಸಿ ನೋಡಿದರೆ ಅದರಲ್ಲಿ ಪ್ರಸಾದದ ಬದಲು ಬೆಂಕಿ ಕಾಣಿಸಿಕೊಂಡಿತ್ತು ಎಂಬ ಪವಾಡದ ಕಥೆಯನ್ನು ಇವರ ಬಗ್ಗೆ ಹೇಳಲಾಗುತ್ತಿದೆ, ಪ್ರಸಾದದಲ್ಲಿ ಕುಲ ಜಾತಿಗಳಿಲ್ಲ. ನಮ್ಮ ಮೈ ಮನಗಳೆಲ್ಲವೂ ಕೂಡಲ ಸಂಗಮದೇವನೊಲಿಸುವ ಪ್ರಸಾದ ಕಾಯ ಕೆಡಿಸಲಾಗದು ಎಂದು ಅವರು ಹೇಳುತ್ತಿದ್ದರಂತೆ!
ಶರಣರು ಬದುಕಿ ಬೋಧಿಸಿದ ಷಟಸ್ಥಲಗಳ ಪ್ರಾಣ,ಲಿಂಗ, ಪ್ರಸಾದಿಯಾಗಿದ್ದ ಬಿಬ್ಬಿ ಬಾಚಯ್ಯನವರು, ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರ ಪ್ರಸಾದದ ಫಲವಾಗಿ ಕ್ರಮವಾಗಿ ಭಕ್ತಿ, ಜ್ಞಾನ, ವೈರಾಗ್ಯಗಳು ಸಾಧ್ಯವಾಯಿತು ಎಂದು ಹೇಳಿರುವುದು ಬೆಡಗಿನಿಂದ ಕೂಡಿದೆ. ಸಕಲವೂ ಸಾಧ್ಯವಾಯಿತು ಎಂದು ಹೇಳಿರುವುದರಲ್ಲಿ ಶರಣರ ಘನ ವ್ಯಕ್ತಿತ್ವವೂ ಅಡಗಿದೆ.
ಅರಿವು, ಜ್ಞಾನವಿಲ್ಲದೆ ನಾವು ಮಾಡುವ ಎಲ್ಲ ಕೆಲಸಗಳು ವ್ಯರ್ಥ. ಅರಿವಿಲ್ಲದೆ ಮಾಡುವ ಪೂಜೆ ಕೂಡ ನಿಷ್ಫಲ. ಅಂಥವರಿಗೆ ಸತ್ಯದ ದರ್ಶನವಾಗಲಿ, ಶಿವನ ದರ್ಶನವಾಗಲಿ ಸಾಧ್ಯವಾಗುವುದಿಲ್ಲ. ತೋರಿಕೆಯ ಪೂಜೆಯು ಸ್ವಾದವಿಲ್ಲದ ಹಣ್ಣು, ಸೌರಭವಿಲ್ಲದ ಕುಸುಮ, ಸಾರವಿಲ್ಲದ ದ್ರವ್ಯದಂತೆ. ಅಂಥವರಲ್ಲಿ ಏಣಾಂಕಧರ ಸೋಮೇಶ್ವರ ಅಡಿ ಇಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನೋಡಬಾರದ್ದನ್ನು ನೋಡಿ, ಕೇಳಬಾರದ್ದನ್ನು ಕೇಳಿ, ಮುಟ್ಟಬಾರದ್ದನ್ನು ಮುಟ್ಟಿ ಮೈ ಮನಗಳನ್ನು ಮಲಿನ ಮಾಡಿಕೊಂಡಿರುವ ಮನುಷ್ಯರು ಶರಣರ ದರ್ಶನ ಮಾಡಿಕೊಳ್ಳುವುದು ಅಗತ್ಯವಿದೆ.
(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯ ನಗರ ಕಲಬುರಗಿ)
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…