ಕೂ ಆಪ್‌ನಲ್ಲಿ ನಾಡಿನ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ ಗಣ್ಯರು

ಬೆಂಗಳೂರು: ವಿವಿಧ ರಾಜಕೀಯ ಮುಖಂಡರು ನಾಡಿನ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ: ”ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಸುಸಂದರ್ಭದಲ್ಲಿ ನರಕ ಚತುರ್ದಶಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ದುಷ್ಟಶಿಕ್ಷಣ ಹಾಗೂ ಶಿಷ್ಟರಕ್ಷಣದ ಸಂಕೇತವಾಗಿರುವ ನರಕ ಚತುರ್ದಶಿ ಹಬ್ಬವು ಜನರ ಎಲ್ಲ ದುರಿತಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ಕೋರಿದ್ದಾರೆ.

ಬಿ.ಎಸ್‌ ಯಡಿಯೂರಪ್ಪ: ನಾಡಿನ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಈ ಸಂಭ್ರಮದ ಬೆಳಕಿನ ಹಬ್ಬವು ನೋವುಗಳ ಕತ್ತಲೆಯನ್ನು ದೂರಸರಿಸಿ ನಲಿವಿನ ಬೆಳಕನ್ನು ಪಸರಿಸಲಿ, ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿಗಳನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಕೋವಿಡ್ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನಾಚರಿಸೋಣ’ ಎಂದು ಬಿ ಎಸ್ ಯಡಿಯೂರಪ್ಪ ಕೂ ಮಾಡಿದ್ದಾರೆ.

ಬಿ ವೈ ವಿಜಯೇಂದ್ರ: ‘ರಾಜ್ಯದ ಜನತೆಗೆ ನರಕಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವಾದ ಸಂಭ್ರಮದ ದೀಪಾವಳಿಯು ರಾಜ್ಯದ ಪ್ರತಿ ಕುಟುಂಬಗಳನ್ನು ಜ್ಞಾನ, ಸತ್ ಚಿಂತನೆಗಳಿಂದ ಬೆಳಗಿಸಲಿ. ಬದುಕಿನ ಎಲ್ಲಾ ಸಂಕಷ್ಟ, ಅಂಧಕಾರ, ರೋಗಗಳು ನಿವಾರಣೆಯಾಗಿ ಸಂತಸ, ಸಂಭ್ರಮ ನೆಲೆಗೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ’ ಎಂದು ಬಿ ವೈ ವಿಜಯೇಂದ್ರ ಕೂ ಮಾಡಿದ್ದಾರೆ.

ಸಚಿವ ಕೆ ಗೋಪಾಲಯ್ಯ: ರಾಜ್ಯದ ಜನರಿಗೆ ನರಕಚತುರ್ದಶಿ ಮತ್ತು ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸಡಗರ, ಸಂಭ್ರಮದ ಈ ಹಬ್ಬ ತಮ್ಮೆಲ್ಲರ ಮನೆಮನಗಳನ್ನು ಶಾಶ್ವತವಾಗಿ ಬೆಳಗಲಿ. ಪ್ರತಿಯೊಬ್ಬರಿಗೂ ಸಂತಸ, ಯಶಸ್ಸು, ಆಯುರಾರೋಗ್ಯವನ್ನು ಭಗವಂತ ಕರುಣಿಸಲಿ. ಎಲ್ಲೆಡೆ ಸುಖ ಶಾಂತಿ ನೆಲೆಸಲಿ ಎಂದು ಹಾರೈಸುತ್ತೇನೆ.

ಅಬ್ದುಲ್‌ ಅಜೀಂ: ಕರ್ನಾಟಕ ರಾಜ್ಯ ಮೈನಾರಿಟಿ ಮಿಷನ್‌ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಕತ್ತಲನ್ನು ಕರಗಿಸಿ ಸುತ್ತಲೂ ಬೆಳಕು ಚೆಲ್ಲುವ ದೀಪದಂತೆ ನಿಮ್ಮ ಮನಸ್ಸಿನಲ್ಲಿ ಇರುವ ಗೋಂದಲ ದೂರವಾಗಿ ಶಾಂತಿ-ನೆಮ್ಮದಿಯೊಂದಿಗೆ ಗುರಿ ಮುಟ್ಟುವ ಛಲ ನಿಮ್ಮದಾಗಲಿ…!!

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ: ನಾಡಿನ ಎಲ್ಲರಿಗೂ ನರಕ ಚತುರ್ದಶಿ, ದೀಪಾವಳಿ ಹಬ್ಬದ ಶುಭಾಶಯಗಳು.
ದುಷ್ಟತನ, ದುರ್ಗುಣ ಹರಣ ಸಂಕೇತವಾದ ನರಕ ಚತುರ್ದಶಿಯು ಕಷ್ಟ-ನೋವುಗಳನ್ನು ನಿವಾರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಕತ್ತಲೆ ಕಳೆದ ಬೆಳಕು ತೋರುವ ದೀಪಾವಳಿ ಹಬ್ಬವು ಸರ್ವರಿಗೂ ಶುಭವನ್ನುಂಟು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ: ಎಲ್ಲರಿಗೂ ನರಕ ಚತುರ್ದಶಿ, ದೀಪಾವಳಿ ಹಬ್ಬದ ಶುಭಾಶಯಗಳು.
ನರಕಾಸುರನನ್ನು ಭಗವಾನ್ ಶ್ರೀಕೃಷ್ಣನು ವಧೆ ಮಾಡಿ ಲೋಕದಲ್ಲಿ ಶಾಂತಿನೆಲೆಸುವಂತೆ ಮಾಡಿದ ದಿನವಿಂದು.ಈ ನರಕ ಚತುರ್ದಶಿಯು ಬದುಕಿನ ಎಲ್ಲಾ ಸಂಕಷ್ಟ, ಅಂಧಕಾರವನ್ನು ನಿವಾರಿಸಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ದೀಪಗಳ ಹಬ್ಬ ಎಲ್ಲರಿಗೂ ಸಂತಸ ತರಲಿ.

ಸಂಸದ ತೇಜಸ್ವೀ ಸೂರ್ಯ: Greetings to all on the auspicious occasion of Deepavali. May this festival add more strength to your personal, professional life & aid in fulfilling your ambitions.ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ದೀಪಗಳ ಈ ಹಬ್ಬವು ತಮ್ಮೆಲ್ಲರ ಬದುಕಿನಲ್ಲಿ ಸುಖ,ಶಾಂತಿ,ಆರೋಗ್ಯ, ನೆಮ್ಮದಿ ತರಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಕೂ ಮಾಡಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420