ಆಳಂದ: ತಾಲೂಕಿನ ವಿವಿಧಡೆ ಹೊಸ ಹಾಗೂ ಹಳೆಯ ಕೆರೆಗಳ ಪುನರ ನಿರ್ಮಾಣಕ್ಕೆ ಸುಮಾರು ೫೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಜನ ಜಾನುವಾರುಗಳುಗಳಿಗೆ ಬೇಸಿಗೆಯಲ್ಲಿ ನೀರಿನ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.
ತಾಲೂಕಿನ ಮಂಟಕಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ೨ ಕೋಟಿ ರೂಪಾಯಿ ಅನುದಾನದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಳೆಯ ಕೆರೆಯ ಪುನರ ನಿರ್ಮಾಣ ಕಾಮಗರಿಗೆ ಭೂಮಿ ಪೂಜೆ ಕೈಗೊಂಡು ಅವರು ಮಾತನಾಡಿದರು.
ತಾಲೂಕಿನಲ್ಲಿ ಎಲ್ಲಡೆ ಕೆರೆಗಳ ನಿರ್ಮಾಣಕ್ಕೆ ಪೂರಕ ವಾತಾವರಣವಿದೆ. ಆದರೆ ಸರ್ಕಾರದ ಅನುದಾನ ಬಂದಂತೆ ಕಾಮಗಾರಿಗೆ ಒತ್ತು ನೀಡಲಾಗುವುದು. ಕೆರೆ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ ಕೃಷಿಗೆ ವರವಾಗುವ ಜೋತೆಗೆ ಕುಡಿಯುವ ನೀರಿನ ಮೂಲಗಳಿಗೆ ಅನುಕೂಲವಾಗಲಿದೆ. ಭೂಮಿ ನೀಡಲು ಮುಂದಾಗುವ ಗ್ರಾಮಗಳಲ್ಲಿ ಕೆರೆಗಳಿಗೆ ಒತ್ತು ನೀಡಲಾಗುವುದು ಎಂದರು.
ಮಂಟಕಿ ಕೆರೆ ಎರಡು ಬಾರಿ ಒಡೆದು ರೈತರ ಜಮೀನು, ಬೆಳೆ ನಷ್ಟವಾಗಿದೆ. ಈ ಬಾರಿ ಕಾಮಗಾರಿ ಗುಣಮಟ್ಟದಿಂದ ಕೈಗೊಳ್ಳಬೇಕು. ಕೆರೆಯ ಹೂಳೆತ್ತುವುದು ಸೇರಿ ಒಡ್ಡಿನ ಇನಷ್ಟು ಎತ್ತರಕ್ಕೆ ಅನುಮದಾನ ಬೇಕಾದರೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ನಿಂಬರಗಾದಲ್ಲಿ ೨.೫೦ ಕೋಟಿ, ತಡಕಲ್ ೩.೫೦ ಕೋಟಿ, ಕಲವಗಾ, ಒಳವಂಡವಾಡಿ, ಕಡಗಂಚಿ ಹೊಸದಾಗಿ ಖೇಡ ಉಮರಗಾ ಕೆರೆಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಈಗಾಗಲೇ ೪ ಕೆರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ೨.೫೦ ಕೋಟಿ ವೆಚ್ಚದಲ್ಲಿ ನಿರಗುಡಿ ಗ್ರಾಮಕ್ಕೆ ಬ್ರೀಜ್ ಕಂ- ಬ್ಯಾರೇಜ್ ಕಾಮಗಾರಿ ಶೀಘ್ರವೇ ಪ್ರಾರಂಭಿಸಲು ಸೂಚಿಸಲಾಗಿದೆ. ತೀರ್ಥ ಹಾಗೂ ಸಾಲೇಗಾಂವ ಮಧ್ಯದಲ್ಲಿ ಬ್ಯಾರೇಜ್ ನಿರ್ಮಾಣ ಹೀಗೆ ಪೂರಕವಿರುವ ಸ್ಥಳಗಳಲ್ಲಿ ನೀರಿಟ್ಟುಕೊಳ್ಳಲು ಶ್ರಮಿಸಲಾಗುತ್ತಿದೆ. ಹಲವು ದೇವಸ್ಥಾನ ಜೀರ್ಣೋಧಾರ ಹಾಗೂ ಸಮುದಾಯ ಭವನಗಳು ಗ್ರಾಮ ಸಂಪರ್ಕ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಿಂದಿನಂತೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮವಾಗಿ ಜಲ ಜೀವನ ಯೋಜನೆ ಸೇರಿ ಇನ್ನಿತರ ಅನುದಾನಗಳಲ್ಲಿ ಕೊಳವೆ ಬಾವಿ, ತೆರೆದ ಬಾವಿ ಪೈಪಲೈನ್ ಕಾಮಗಾರಿ ಕೈಗೊಂಡ ಜನರ ಮನೆಬಾಗಿಲಿಗೆ ನೀರೊದಗಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಇಲಾಖೆಯ ಎಇಇ ಶಾಂತಪ್ಪ ಜಾಧವ ಅವರು ಮಾತನಾಡಿ ಕಾಮಗಾರಿಯ ವಿವರಣೆ ನೀಡಿದರು. ಮುಖಂಡ ಮಲ್ಲಣ್ಣಾ ನಾಗೂರೆ, ಸಿದ್ಧಣ್ಣಾ ಹಳ್ಳೆ ತೀರ್ಥ ಅವರು ಮಾತನಾಡಿ, ಶಾಸಕರು ಜನರ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಅನುದಾನ ತರುವ ಮೂಲಕ ಕಾಮಗಾರಿ ಕೈಗೊಂಡು ಅನುಕೂಲ ಒದಗಿಸುತ್ತಿದ್ದಾರೆ. ರೈತ ರಾಮಲಿಂಗ ಮೂಲಗೆ ಮಾತನಾಡಿ, ಹೆಬಳಿ ಮಂಟಕಿ ರಸ್ತೆ ಕೈಗೊಳ್ಳಬೇಕು. ಪ್ರಹವಾಕ್ಕೆ ಕೊಚ್ಚಿದ ಹೊಲಗಳ ಮಣ್ಣು ಬೆಳೆಯ ಹಾನಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಯಶ್ವಂತರಾವ್ ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಶರಣಬಸಪ್ಪ ಬಿರಾದಾರ, ಅಬ್ದುಲ್ ಹದರೆ, ಮದುಕರ್ ಪಾಟೀಲ, ನಂದು ಪಾಟೀಲ, ಮಲ್ಲಯ್ಯಾಅ ಗುತ್ತೇದಾರ, ಗುಂಡಪ್ಪ ಅಣೂರೆ, ಮಂಜುನಾಥ ಮೂಲಗೆ, ಮಲ್ಲಿನಾಥ ಮೂಲಗೆ, ಶೇಖರ ವಾಡೆ, ಸಾಯಬಣ್ಣ ಬಿರಾದಾರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು. ಲಾಯಕಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…