ಬಿಸಿ ಬಿಸಿ ಸುದ್ದಿ

ಯರ್ರಾಬಿರ್ರಿ ಸಿನೆಮಾ ನಟ ಆಗಮನ:ನೋಡಲು ಕಿಕ್ಕಿರಿದ ಜನಸ್ತೋಮ

ಸುರಪುರ: ನಗರಕ್ಕೆ ಯರ್ರಾಬಿರ್ರಿ ಸಿನೆಮಾದ ನಾಯಕ ನಟ ರೂರಲ್ ಅಂಜನ್ ಆಗಮಿಸಿದ್ದರು.ನೆಚ್ಚಿನ ನಟನನ್ನು ನೋಡಲು ಸುರಪುರ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದ ಅನೇಕ ಜನ ಸಿನಿರಸಿಕರು ಆಗಮಿಸಿ ನಟನನ್ನು ಕಂಡು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.

ಬುಧವಾರ ಮದ್ಹ್ಯಾನ ನಗರದ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು.ಅನೇಕು ನಟನಿಗೆ ಹಸ್ತಲಾಘವ ಮಾಡಲು ಮತ್ತು ಸೆಲ್ಫಿಗಾಗಿ ಮುಗಿಬಿದ್ದಿದ್ದು ಕಂಡುಬಂತು.ಮೊದಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಎಲ್ಲರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ರೂರಲ್ ಅಂಜನ್,ನಮ್ಮ ಭಾಗದ ಜನರು ತುಂಬಾ ಸಿನಿಪ್ರಿಯರು ತಾವೆಲ್ಲರು ಬೆಂಗಳೂರು ಮೈಸೂರು ಭಾಗದ ಜನತೆಯ ಅನೇಕ ಸಿನೆಮಾಗಳನ್ನು ಗೆಲ್ಲಿಸಿರುವಿರಿ ಅದರಂತೆ ನಮ್ಮ ಯರ್ರಾಬಿರ್ರಿ ಸಿನೆಮಾವು ಇದೇ ತಿಂಗಳು ೧೨ನೇ ತಾರೀಖಿನಂದು ಬಿಡುಗಡೆಯಾಗಲಿದ್ದು ತಾವೆಲ್ಲರು ನೋಡಿ ನಮಗೆ ಹರಸುವಂತೆ ವಿನಂತಿಸಿದರು.ಅಲ್ಲದೆ ಉತ್ತರ ಕರ್ನಾಟಕ,ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಬೆಳೆಸುವ ಕೆಲಸವನ್ನು ತಾವೆಲ್ಲರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,ಈ ಭಾಗದಲ್ಲಿ ಒಳ್ಳೆ ಪ್ರತಿಭಾವಂತರಿದ್ದು ಅವಕಾಶಗಳು ಕಡಿಮೆಯಿವೆ,ತಾವೆಲ್ಲರು ಬೆಳೆಸುವ ಮೂಲಕ ಈ ಭಾಗದ ಪ್ರತಿಭೆಗಳನ್ನು ಮೇಲಕ್ಕೆತ್ತುವಂತೆ ಮನವಿ ಮಾಡಿದರು.

ನಟನ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಜನರು ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಅರ್ಧಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಗಿತ್ತು.ಈ ಸಂದರ್ಭದಲ್ಲಿ ಮುಖಂಡರಾದ ಬಲಭೀಮ ನಾಯಕ ಬೈರಿಮಡ್ಡಿ,ವೆಂಕಟೇಶ ನಾಯಕ ಬೈರಿಮಡ್ಡಿ,ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರಾ, ಅಂಬ್ರೇಶ ನಾಯಕ ಡೊಣ್ಣಿಗೇರಾ,ರಾಮಣಗೌಡ ಬೈಲಾಪುರ,ವಾಸು ನಾಯಕ ಬೈರಿಮಡ್ಡಿ,ಶಿವರಾಜ ಕಲಕೇರಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago