ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿಗಳ ಬದುಕು ಕಟ್ಟಿಕೊಡುವ ಆದರ್ಶ ಶಿಕ್ಷಕರು ಹೆಚ್ಚಾಗಲಿ: ಶಶೀಲ್ ನಮೋಶಿ

ಕಲಬುರಗಿ: : ಶಿಕ್ಷಕರು ತಮ್ಮ ಸ್ವಂತ ಮಕ್ಕಳಿಗೆ ಯಾವ ರೀತಿ ಕಾಳಜಿ ಮಾಡುತ್ತಾರೆಯೋ, ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣಬೇಕು. ವಿದ್ಯಾರ್ಥಿಗಳಿಗೆ ಜ್ಞಾನ, ಬುದ್ಧಿ, ಕೌಶಲಗಳನ್ನು ನೀಡಿ, ಅವರ ಬದುಕು ಕಟ್ಟಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಿಕೊಟ್ಟು, ತಮ್ಮ ವಿದ್ಯಾರ್ಥಿಗಳನ್ನು ಉನ್ನತ ವ್ಯಕ್ತಿಗಳನ್ನಾಗಿಸುವ ಆದರ್ಶ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಸದಾಶಯ ವ್ಯಕ್ತಪಡಿಸಿದರು.

ನಗರದ ಆನಂದ ನಗರದಲ್ಲಿ ಹಣಮಂತರಾವ ದಿಂಡೂರೆ ಪ್ರಕಾಶನದ, ಹಿರಿಯ ಇಂಗ್ಲಿಷ್ ಶಿಕ್ಷಕ ಚಂದ್ರಕಾಂತ ಬಿರಾದಾರ
ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸಂಪಾದಿಸಿದ ’ಸಿ.ಬೀಸ್ ಸಕ್ಸೆಸ್’ : ಎ ಪೋಸ್ಟ್ ಪೆಂಡೆಮಿಕ ಫ್ರೆಂಡ್ ಟು ಸ್ಟೂಡೆಂಟ್ಸ್’ ಎಂಬ ಪುಸ್ತಕದ ಹನ್ನೊಂದನೇ ಆವೃತ್ತಿಯನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದು ಪ್ರತಿಭೆ ಇರುತ್ತದೆ. ಶಿಕ್ಷಕರು ಅದನ್ನು ಗುರ್ತಿಸಿ ಬೆಳೆಸುವ ಕಾರ್ಯ ಮಾಡಬೇಕು. ನಮ್ಮ ಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಂದ್ರಕಾಂತ ಬಿರಾದಾರ ನೇತೃತ್ವದ ಜಿಲ್ಲೆಯ ನುರಿತ ಇಂಗೀಷ್ ಶಿಕ್ಷಕರ ತಂಡ ರಚಿಸಿರುವ ಈ ಪುಸ್ತಕ ವಿದ್ಯಾಥಿಗಳಿಗೆ ಒಂದು ವರದಾನವಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಂಡು ಉತ್ತಮವಾದ
ಫಲಿತಾಂಶ ಪಡೆಯಬೇಕು. ನನ್ನ ಸ್ಥಿರ ನಿಧಿಯಿಂದ ಈ ಪುಸ್ತಕಗಳನ್ನು ಖರೀದಿಸಲು ಅವಕಾಶವಿದ್ದರೆ, ಖಂಡಿತವಾಗಿಯೂ ಪುಸ್ತಕಗಳನ್ನು ಪಡೆದು ಕಕ ಭಾಗದ ಪ್ರತಿಯೊಂದು ಸರ್ಕಾರಿ ಪ್ರೌಢಶಾಲೆಗೆ ಕನಿಷ್ಠ ೫ ಪುಸ್ತಕಗಳನ್ನು ನೀಡಬೇಕೆನ್ನುವ ವಿಚಾರ ನನ್ನದಾಗಿದೆ ಎಂದರು.

ಪುಸ್ತಕದ ಸಂಪಾದಕ ಚಂದ್ರಕಾಂತ ಬಿರಾದಾರ ಮಾತನಾಡಿ, ಈ ಪುಸ್ತಕವು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿರುವ ಇಂಗ್ಲೀಷ
ಭಯವನ್ನು ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯದಲ್ಲಿಯೇ, ಸರಳವಾಗಿ ಅರ್ಥವಾಗುವ ರೀತಿಯಲ್ಲಿ, ನೀಲನಕ್ಷೆಯೊಂದಿಗೆ, ಮಾದರಿ ಹಾಗೂ ಹಳೆಯ ಪ್ರಶ್ನೆಪತ್ರಿಕೆಗಳು ಹಾಗೂ ಕಳೆದ ವರ್ಷ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಬಗ್ಗೆ ಅಳವಡಿಸಿ ರಚಿಸಲಾಗಿದೆ. ಪುಸ್ತಕದ ಅಧ್ಯನದಿಂದ ಸರಳವಾಗಿ ಉತ್ತೀರ್ಣರಾಗುವದರ ಜೊತೆಗೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಉತ್ತರ ವಲಯ ಬಿಇಓ ಚವ್ಹಾಣಶೆಟ್ಟಿ, ಕಮಲಾಪುರ ಡಯಟ್ ಪ್ರಾಂಶುಪಾಲ ಮಜರ್ ಹುಸೇನ್, ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ,
ಉಪನ್ಯಾಸಕ ಎಚ್.ಬಿ.ಪಾಟೀಲ ವೇದಿಕೆ ಮೇಲಿದ್ದರು. ಪ್ರಮುಖರಾದ ಕೆ.ಬಸವರಾಜ, ಚಂದ್ರಶೇಖರ ಪಾಟೀಲ, ಗಿರೀಶ ಕಡ್ಲೆವಾಡ, ವಿಶ್ವನಾಥ ಕಟ್ಟಿಮನಿ, ಸುನೀಲಕುಮಾರ ವಂಟಿ, ಸುರೇಶ ಬಡಿಗೇರ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ದಿಲೀಪ ಚವ್ಹಾಣ, ಮಹೇಶ ಹೂಗಾರ, ವಿಲಾಸರಾವ ಸಿನ್ನೂರಕರ್, ಸಂಜೀವಕುಮಾರ ಪಾಟೀಲ, ನಾಗೇಂದ್ರಪ್ಪ ಮಾಡ್ಯಾಳ್, ಗುಂಡೇರಾವ ಮುಡಬಿ, ಪ್ರಭುಲಿಂಗ
ಮೂಲಗೆ, ದೇವೇಂದ್ರಪ್ಪ ಗಣಮುಖಿ, ಹಣಮಂತರಾಯ ದಿಂಡೂರೆ, ರವಿ ಬಿರಾಜಾದಾರ, ಚಿದಾನಂದ ಮೇತ್ರಿ, ರಾಜೇಶ ನೀಲಳ್ಳಿ, ನಾಗೇಂದ್ರಪ್ಪ ಬಡದಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago