ಬಿಸಿ ಬಿಸಿ ಸುದ್ದಿ

ಐತಿಹಾಸಿಕ ರೈತಾಂದೋಲನ- ಕಲಿಸುವ ಪಾಠ, ತೋರುವ ಹಾದಿ’: ಮಂಥನಾ ಸಮಾವೇಶ

ಬೆಂಗಳೂರು: “ಇಂದಿನ ಸಂದರ್ಭದಲ್ಲಿ ಮೂರ್ಖರು ಮಾತ್ರ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ, ಬುದ್ಧಿಯುಳ್ಳವರು ಸುಮ್ಮನಿರಲಾರರು. ಕೃಷಿ ಕಾಯ್ದೆಗಳನ್ನು ವಿರೋಧಿಸದಿರುವವರು ಮೂರ್ಖರ ಪಟ್ಟಿಗೆ ಬರುತ್ತಾರೆ”- ಹರನೇಕ್ ಸಿಂಗ್, ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಕರ್ನಾಟಕ ಜನಶಕ್ತಿ ಸಂಘಟನೆಯಿAದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಐತಿಹಾಸಿಕ ರೈತಾಂದೋಲನ ಕಲಿಸುವ ಪಾಠ- ತೋರುವ ಹಾದಿ: ಮಂಥನ ಸಮಾವೇಶ’ದಲ್ಲಿ ಭಾಷಣ ಮಾಡುತ್ತಾ ದೆಹಲಿಯ ರೈತ ಆಂದೋಲನದ ನಾಯಕರೂ, ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕರಲ್ಲೊಬ್ಬರೂ ಆದ ಹರನೇಕ್ ಸಿಂಗ್‌ರವರು ಹೀಗೆ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹರನೇಕ್ ಸಿಂಗ್‌ರವರು “ಇಂದಿನ ದಿನದಲ್ಲಿ ಬುದ್ಧಿಯುಳ್ಳ, ಎಚ್ಚರಗೊಂಡಿರುವ ಎಲ್ಲರೂ ಕೇಂದ್ರ ತರಲು ಹೊರಟಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ಸುಮ್ಮನಿರುವವರು ಮೂರ್ಖರು ಮಾತ್ರ. ಏಕೆಂದರೆ, ಇಡೀ ದೇಶವನ್ನು ಬೆಳೆ ಬೆಳೆದು ಸಾಕುವ ರೈತರ ತಲೆಮಾರುಗಳನ್ನೇ ಮುಗಿಸಲು ಹೊರಟಿರುವ ಕೇಂದ್ರದ ನೀತಿಗಳು ಈ ದೇಶದ ಸಾರ್ವಭೌಮತೆಗೇ ಮಾರಕ. ಇದರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯ. ಈ ಹೋರಾಟದಲ್ಲಿ ದಕ್ಷಿಣದ ರಾಜ್ಯಗಳ್ನು ಒಗ್ಗೂಡಿಸುವುದು ಕರ್ನಾಟಕಕ್ಕೆ ಮಾತ್ರ ಸಾಧ್ಯ, ನಿಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ” ಎಂದರು.

“ಎಲ್ಲರ ಮನಸ್ಸಿನಲ್ಲಿ ರೈತರ ಚಳವಳಿ ಇಷ್ಟು ದೀರ್ಘವಾಗಿ ನಡೆದದ್ದು ಹೇಗೆ ಎಂಬ ಪ್ರಶ್ನೆ ಇದೆ. ಇದು ಒಂದು ವರ್ಷದ ಕೆಲಸವಲ್ಲ. 28 ವರ್ಷಗಳ ಹೋರಾಟದ ಫಲವಿದು. ಜಂಟಿ ವಿಚಾರಧಾರೆಯುಳ್ಳವರು ಒಂದು ವೇದಿಕೆ ಬರಬೇಕೆಂಬ ಪ್ರಯೋಗವನ್ನು ಬೇರೆ ವಿಚಾರಗಳಿಗೆ ನಾವು ಪ್ರಯೋಗಿಸಲು ಮುಂದಾದೆವು. ಅದು ಈಗ ಸಂಯುಕ್ತ ಕಿಸಾನ್ ಮೋರ್ಚಾದ ರೂಪದಲ್ಲಿ ಮುಂದೆ ಬಂದಿದೆ. ಎಸ್‌ಕೆಎಂ ಹೋರಾಟ ತಾವು ಏನು ಮಾಡಿದರೂ ನಡೆಯುತ್ತದೆಂದು ಭಾವಿಸಿದ್ದ ಬಿಜೆಪಿಯ ಕಪಾಳಕ್ಕೆ ಭಾರಿಸಿದೆೆ್ದಂದು ತೀಕ್ಷ÷್ಣವಾಗಿ ನುಡಿದರು.

“ದೆಹಲಿಗೆ ಹೊರಡುವ ಮುಂಚೆ ರೈಲು ತಡೆ ಆರಂಭಿಸಿದೆವು. ಎರಡು ತಿಂಗಳ ನಂತರ ದೆಹಲಿಗೆ ಹೊರಟೆವು. ಕಿಂಟ್ವಾಲ್‌ಗಟ್ಟಲೆ ತೂಕದ ಬಂಡೆಗಳನ್ನು ಕ್ರೇನ್‌ಗಳಲ್ಲಿ ತಂದು ಹರಿಯಾಣ ಸರ್ಕಾರ ರಸ್ತೆಯಲ್ಲಿ ಇರಿಸಿತು.

ಆ ಬಂಡೆ ಕಲ್ಲುಗಳನ್ನು ರೈತರು ತಮ್ಮ ತೋಳ್ಬಲದಲ್ಲೇ ಬದಿಗೆ ಸರಿಸಿ ಮುನ್ನೆದರು. ಇದು ಉತ್ಪೆçÃಕ್ಷೆಯ ಮಾತಲ್ಲ. ರೈತರಿಗೆ ಒಂದು ವಿಚಾರ ಮನವರಿಕೆಯಾಗಿದೆ-ಚುನಾವಣೆಗಳ ಸಮಯದಲ್ಲಿ ಬಂದು ನಿಮಗೆ ಅದುಕೊಡುತ್ತೇವೆ ಇದು ಕೊಡುತ್ತೇವೆಂದು ದಾತರ ಹಾಗೆ ಮಾತನಾಡುವವರು ನಮ್ಮ ನಿಜವಾದ ಬೇಡಿಕೆಗಳನ್ನು ಮುಟ್ಟುವುದಿಲ್ಲ, ನಾವು ಯಾರಿಂದಲೂ ಏನನ್ನೂ ಬೇಡಬೇಕಿಲ್ಲ, ನಮ್ಮ ಹಕ್ಕೊತ್ತಾಯಗಳನ್ನು ಆಗ್ರಹಿಸಿ ಪಡೆದುಕೊಳ್ಳಬೇಕು ಎಂಬುದು” ಎಂದು ರೈತ ಆಂದೋಲನಕ್ಕೆ ಸುದೀರ್ಘ ಒಂದು ವರ್ಷದಿಂದ ಮುಂದುವರೆದಿರುವ ರೈತರ ಬೆಂಬಲದ ಕುರಿತು ಹೇಳಿದರು.

ಹಾಗೆಯೇ ಸಿಂಘು ಗಡಿಯಲ್ಲಿ ನಡೆದ ದಲಿತ ವ್ಯಕ್ತಿಯ ಕೊಲೆಯ ಘಟನೆಯು ಸರ್ಕಾರದ ಹುನಾರವೇ ಆಗಿದ್ದರೂ ಅಂಥದ್ದನ್ನು ತಾವು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು. ಸಿಖ್ಖ್ ಧರ್ಮದಲ್ಲಾಗಲೀ ರೈತ ಆಂದೋಲನದಲ್ಲಾಗಲೀ ಇದಕ್ಕೆ ಅವಕಾಶ ಇಲ್ಲವೆಂದು ಹೇಳಿದರು. ದಕ್ಷಿಣ ಭಾರತವನ್ನು ಈ ಆಂದೋಲನದ ಜೊತೆಗೆ ಬೆಸೆಯುವ ಹೊಣೆ ಹೊತ್ತು ಕರ್ನಾಟಕದ ಸಂಘಟನೆಗಳು ಮುನ್ನಡೆಯಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ ಅಖಿಲ ಭಾರತ ರೈ ಸಂಘರ್ಷ ಸಮನ್ವಯ ಸಮಿತಿಯ ನಾಯಕಿ ಕವಿತಾ ಕುರಗಂಟಿಯವರು ಮಾತನಾಡುತ್ತಾ, “ಎಪಿಎಂಸಿಗಳು ನಿರುಪಯುಕ್ತಗೊಂಡರೆ ಏನಾಗುತ್ತದೆಂಬುದು ಈಗಾಗಲೇ ಕಣ್ಣೆದುರು ಕಾಣುತ್ತಿದೆ. ಎಪಿಎಂಸಿಗಳಲ್ಲಿರುವ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೂ, ಅದರಿಂದ ಭದ್ರತೆಗಳೂ ಇವೆ. ಖಾಸಗಿ ಬಂಡವಾಳಿಗರ ಜೊತೆ ಎಪಿಎಂಸಿಯಿAದ ಹೊರಗೆ ನಡೆಯುವ ವ್ಯವಹಾರ ರೈತರಿಗೆ ಮೋಸಮಾಡುತ್ತದೆ. ಅದಕ್ಕಾಗಿ ರೈತರು ನಮಗೆ ಈ ಕಾಯ್ದೆಗಳು ಬೇಡ, ಬದಲಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಕಾಯ್ದೆಯನ್ನು ರೂಪಿಸಿ ಜಾರಿಗೆ ತನ್ನಿ ಎಂದು ಆಗ್ರಹಿಸುತ್ತಿದ್ದಾರೆ.

ಈ ಕಾಯ್ದೆಗಳಿಂದ ಹಾನಿಯೇನು ಎಂಬುದಕ್ಕೆ ರೈತ ಸಂಘಟನೆಗಳ ಬಳಿ ಸಾಕ್ಷಾö್ಯಧಾರ ಸಮೇತ ಪೂರ್ಣ ಮಾಹಿತಿ ಇದೆ, ಆದರೆ ಈ ಕಾಯ್ದೆಗಳಿಂದ ರೈತರಿಗೆ ಏನು ಉಪಯೋಗವಿದೆ ಎಂಬುದನ್ನು ತೋರಿಸುವ ಒಂದೇ ಒಂದು ಉದಾಹರಣೆಯೂ ಕೇಂದ್ರ ಸರ್ಕಾರದ ಬಳಿ ಇಲ್ಲ” ಎಂದು ಟೀಕಿಸಿದರು.

ಅದೇ ರೀತಿ “ಸಂಯುಕ್ತ ಕಿಸಾನ್ ಮೋರ್ಚಾದಲ್ಲಿ ಸುಮಾರು 80 ಸಂಘಟನೆಗಳ ಪ್ರತಿನಿಧಿಗಳು ಸೇರಿ ಪ್ರಜಾತಂತ್ರಿಕವಾಗಿ ಕಾರ್ಯನಿರ್ವಹಿಸುತ್ತಾರೆ, ಯುವಜನರು, ಮಹಿಳೆಯರು ಎಲ್ಲರಿಗೂ ಪ್ರಾತಿನಿಧ್ಯ ಇದೆ. ಆದ್ದರಿಂದ ಆಂದೋಲನದ ವಿರುದ್ಧದ ಅಪಪ್ರಚಾರಗಳನ್ನು ಪರಿಹರಿಸಲು ಕರ್ನಾಟಕದ ಯುವಜನರು, ಕಾರ್ಯಕರ್ತರು ಜನರರ ಬಳಿ ಹೋಗಿ ಸತ್ಯಾಂಶಗಳನ್ನು ತಿಳಿಸಬೇಕು” ಎಂದು ಕರೆ ನೀಡಿದರು.

‘ನಮ್ಮ ಊರು ನಮ್ಮ ಭೂಮಿ’ ಆಂದೋಲನ ಮತ್ತು ಐಕ್ಯ ಹೋರಾಟದ ನಾಯಕಿಯಾದ ವಿ.ಗಾಯತ್ರಿಯವರು, ‘ಕೃಷಿ ಕಾಯ್ದೆಗಳ ಹಂದಿರುವ ಅಂತರಾಷ್ಟಿçÃಯ ಹುನ್ನಾರ’ ದ ಕುರಿತು ಮಾತನಾಡಿದರು.

“ಆರಂಭದಲ್ಲಿ ಗ್ಯಾಟ್ ಎಂಬ ಹೆಸರಿನಲ್ಲಿ ಈ ಅಂತರಾಷ್ಟಿçÃಯ ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ದಿಗ್ಭಂಧನ ಹೇರುವ ಪ್ರಯತ್ನ ನಡೆಯಿತು. ಆಗ ಪ್ರೊ.ನಂಜುAಡಸ್ವಾಮಿಯವರು ಮೊಟ್ಟಮೊದಲಿಗೆ ಅದರ ವಿರುದ್ಧ ದನಿಯೆತ್ತಿದರು.

ನಂತರದಲ್ಲಿ ನಡೆಯುತ್ತಾ ಬಂದಿರುವ ಡಂಕೆಲ್, ಡಬ್ಲುಟಿಓ ಮುಂತಾದ ಅಂತರಾಷ್ಟಿçÃಯ ಒಪ್ಪಂದಗಳು, ಸರ್ಕಾರ ಭಾರತದ ಕೃಷಿಗೆ ಕೊಡುತ್ತಿದ್ದ ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸಿದವು. ಸರ್ಕಾರವೇ ಮುಂದಾಗಿ ಮಾನ್ಸಾಂಟೋದAತಹ ಕಂಪೆನಿಗಳ ಬಿ.ಟಿ ಬೀಜಗಳನ್ನು ಪ್ರಚುರಪಡಿಸುತ್ತಾ ನಮ್ಮ ನೆಲದ ಬೀಜ ಸಾರ್ವಭೌಮತೆಯನ್ನು ಕೊನೆಗೊಳಿಸಿದೆ. ಕರ್ನಾಟಕದ ಕಳೆದ ದಶಕಗಳಲ್ಲಿ ಏಕೆ ಒಂದಾದರೂ ವಿಶ್ವವಿದ್ಯಾಲಯ ಅಥವಾ ಬೀಜ ನಿಗಮ ಹೊಸ ದೇಸೀ ತಳಿಯ ಬೀಜಗಳ ಮೇಲೆ ಸಂಶೋಧನೆ ನಡೆಸಿಲ್ಲ, ರೈತರಿಗೆ ದೊರಕಿಸುತ್ತಿಲ್ಲ?” ಎಂದು ಪ್ರಶ್ನಿಸಿದರು.

ಪ್ರಾಧ್ಯಾಪಕರಾದ ಡಾ.ಬಿ.ಸಿ ಬಸವರಾಜ್ ಅವರು ‘ಕೃಷಿ ಕಾಯ್ದೆಗಳು ಮತ್ತು ಕಾರ್ಪೊರೇಟ್ ಹಿತಾಸಕ್ತಿ’ಯ ಬಗ್ಗೆ ಮಾತನಾಡುತ್ತಾ, “2019ರ ಅಂಕಿ ಅಂಶದ ಪ್ರಕಾರ ಶೇ.80ರಷ್ಟು ದೇಶದ ಸಂಪತ್ತು ಶೇ.1ರಷ್ಟು ಶ್ರೀಮಂತರ ಕೈ ಸೇರಿದೆ. ಕೊರೊನಾ ಸಮಯದಲ್ಲಿ ಲಕ್ಷಾಂತರ ಜನ ಕೆಲಸ ಕಳೆದುಕೊಂಡರು. ಕೊರೊನಾ ಸಮಯದಲ್ಲಿ ಕೋಟಿ ಕೋಟಿ ಜನ ಕೆಲಸ ಕಳೆದುಕೊಂಡಿದ್ದಾಗ, ದೇಶದ ಜಿಡಿಪಿ ಕುಸಿದಿದ್ದಾಗ ಬಿಲೆನಿಯರ್‌ಗಳ ಸಂಪತ್ತು ಹೆಚ್ಚಾಗಿದೆ. ಮೋದಿಯವರು ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎಂಎಸ್‌ಪಿ ಕಾನೂನುಬದ್ಧಗೊಳಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದರು. ಆದರೆ ತಾವೇ ಅಧಿಕಾರಕ್ಕೆ ಬಂದಾಗ ಅದನ್ನು ಮರೆತರು” ಎಂದು ಟೀಕಿಸಿದರು.

“ಮುಂದಿನ ದಿನಗಳಲ್ಲಿ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುವ ಮತ್ತು ಬಿಲಿಯನ್ಗಟ್ಟಲೆ ಲಾಭ ತರುವ ಕ್ಷೇತ್ರವಾಗಿ ಭಾರತದ ಆಹಾರ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರ ಬೆಳೆಯಲಿದೆ, ಅದಕ್ಕಾಗಿ ಅದನ್ನು ಸಂಪೂರ್ಣವಾಗಿ ಅದಾನಿ, ಅಂಬಾನಿ ಮತ್ತು ಇತರ ದೊಡ್ಡ ಕಾರ್ಪೊರೇಟ್‌ಗಳ ಏಕಸ್ವಾಮ್ಯವಾಗಿಸಲು ಈ ಕಾಯ್ದೆಗಳನ್ನು ತರಲಾಗಿದೆ” ಎಂದು ವಿವರಿಸಿದರು.

ಹಿರಿಯ ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು, “ಕರ್ನಾಟಕ ಸರ್ಕಾರವು ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ಇಲ್ಲಿನ ರೈತ ಸಮುದಾಯವನ್ನು ಇಡಿಯಾಗಿ ಅಳಿಸಿ ಹಾಕುವ ಕೆಲಸ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಹಾದಿಯಲ್ಲಿ ನಡೆದಿದ್ದೇ ಆದರೆ ರೈತರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಅದೇ ರೀತಿ ಕರ್ನಾಟಕ ಸರ್ಕಾರ ತಂದಿರುವ ಕಾಯ್ದೆಗಳ ಬಗ್ಗೆ ಮಾತನಾಡುತ್ತಾ ಕರ್ನಾಟಕ ಪ್ರಾಂತ ರೈತ ಸಂಘದ ಯುವನಾಯಕ ಟಿ.ಯಶವಂತ್‌ರವರು, “ಕರ್ನಾಟಕ ಸರ್ಕಾರವು ‘ಎಪಿಎಂಸಿ ತಿದ್ದುಪಡಿ ಕಾಯ್ದೆ’, ‘ಭೂಸುಧಾರಣೆ ತಿದ್ದುಪಡಿ ಕಾಯ್ದೆ’ ಮತ್ತು ‘ಜಾನುವಾರು ಹತ್ಯೆ ನಿಷೇಧ ಕಾಯ್ದೆ’ಗಳನ್ನು ಜಾರಿಗೆ ತಂದಿರುವುದು ಕೇಂದ್ರದ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಮಾಡುವಾಗ ಬರಬಹುದಾದ ಅಡ್ಡಿಗಳನ್ನು ಮುಂಚೆಯೇ ನಿವಾರಿಸಿಕೊಳ್ಳಲು ತಂದAತಹವುಗಳು. ಇದೆಲ್ಲದರಿಂದ ಆಗುವ ಅನಾಹುತಗಳನ್ನು ಮುಂದಾಗಿಯೇ ತಡೆಯಲು ರಾಜ್ಯದ ರೈತರು ಮತ್ತು ಜನಸಾಮಾನ್ಯರೂ ಕೂಡಾ ಹೋರಾಟದಲ್ಲಿ ದೊಡ್ಡಮಟ್ಟದಲ್ಲಿ ತೊಡಗಿಕೊಳ್ಳಬೇಕಿದೆ” ಎಂದು ಕರೆ ನೀಡಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಮಲ್ಲಿಗೆಯವರು ಅಧ್ಯಕ್ಷತೆ ವಹಿಸಿದ್ದರು.

ಮಧ್ಯಾಹ್ನದ ಗೋಷ್ಟಿಯಲ್ಲಿ ‘ಐತಿಹಾಸಿಕ ರೈತ ಆಂದೋಲನದಿಂದ ಕರ್ನಾಟಕ ಕಲಿಯಬೇಕಾದ ಪಾಠಗಳೇನು?’ ಎಂಬ ವಿಚಾರದ ಕುರಿತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ದ ಮುಖಂಡರಾದ ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್ ಮಾತನಾಡಿದರು.

ಮಾವಳ್ಳಿ ಶಂಕರ್‌ರವರು ಮಾತನಾಡುತ್ತಾ
“ಭಾರತದಲ್ಲಿ ನಮಗೆ ಇಂದು ಈ ಸ್ಥಿತಿ‌ಬರೋದಕ್ಕೆ ಜಾತಿ ಮತ್ತು ವರ್ಗ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ಕಾರಣ. ಅಂಬೇಡ್ಕರ್ ಅವರು ಸ್ಟೇಟ್ಸ್ ಅಂಡ್ ಮೈನಾರಿಟೀಸ್ ಲ್ಲೂ ಅದನ್ನೇ ಹೇಳುತ್ತಾರೆ. ಅದೆಲ್ಲದರ ವಿರುದ್ಧ ನಾವಿಂದು ಚಳವಳಿ ಕಟ್ಟಬೇಕು, ಭೂಸುಧಾರಣೆಯಿಂದ ದಮನಿತರ ಎಲ್ಲ ಸಮಸ್ಯೆ ಬಗೆಹರಿಯದಿದ್ದರೂ ಒಂದಷ್ಟು ಭೂಮಿಯಂತೂ ಸಿಕ್ಕಿತ್ತು. ಈಗ ವಾಪಾಸ್ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ, ಅದರ ವಿರುದ್ದ ದಲಿತರು, ರೈತರು, ಯುವಜನರು ಎಲ್ಲರೂ ಒಗ್ಗೂಡಿ ಹೋರಾಡಿ ಗೆಲ್ಲಬೇಕು” ಎಂದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್‌ರವರು ಸಮಾರೋಪ ನುಡಿಗಳನ್ನಾಡುತ್ತಾ “ಇದೊಂದು ಐತಿಹಾಸಿಕ ಸಂದರ್ಭ, ಇದರಲ್ಲಿ ರೈತ ಸಮುದಾಯ ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕಿಳಿದಿದೆ.

ಈ ಸಂದರ್ಭದಲ್ಲಿ ಅನ್ನದ ರುಣ ಹೊಂದಿರುವ ನಾವೆಲ್ಲರೂ ಅವರೊಂದಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ, ನಮ್ಮ ದೇಶ ಮತ್ತು ಅನ್ನದಾತರ ಉಳಿವಿಗಾಗಿ ಒಗ್ಗೂಡೋಣ” ಎಂದು ಕರೆ ನೀಡಿದರು.

ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ನವೆಂಬರ್ 10ರಿಂದ 20ರವೆಗೆ ಕರ್ನಾಟಕ ಜನಶಕ್ತಿ ‘ಹಳ್ಳಿ ಉಳಿಸಿ’ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago