ಬಿಸಿ ಬಿಸಿ ಸುದ್ದಿ

ಉಚಿತ ಕಾನೂನು ಸೇವಾ ಪ್ರಾಧಿಕಾರಿಗಳು ಲಾಭ ಪಡೆಯಲು ಕರೆ

ಆಳಂದ: ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ನ್ಯಾಯಾಧೀಶ ಎಂ.ಸಿ.ನಾಡಗೌಡ ಉದ್ಘಾಟಿಸಿ ಮಾತನಾಡಿದರು.

ಆಳಂದ: ಬಡವರಿಗೆ, ನೋಂದ ಬೆಂದವರಿಗೆ, ಶೋಷಿತರಿಗೆ ಮತ್ತು ಮಹಿಳೆಯರಿಗಾಗಿ ಇರುವ ಉಚಿತ ಕಾನೂನು ಸೇವಾ ಪ್ರಾಧಿಕಾರಿದ ಸಹಕಾರದ ಲಾಭವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಎಂ.ಸಿ. ನಾಡಗೌಡ ಅವರು ಹೇಳಿದರು.

ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿ ಸಂಘ ಆಶ್ರಯದಲ್ಲಿ ಭಾರತ ಅಮೃತ ಮಹೋತ್ಸವ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ೨೫ನೇ ವರ್ಷ ಆಚರಣೆಯ ಸಂಭ್ರಮದ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಚೌಕಟ್ಟಿನಲ್ಲಿ ಎಲ್ಲರಿಗೂ ಒಂದೇ ನ್ಯಾಯಧಾನ ಅಡಗಿದೆ. ಮಾನವ ಹಕ್ಕುಗಳನ್ನು ವಂಚಿತರು, ಸರ್ಕಾರಿ ಸೌಲಭ್ಯಗಳಿಂದ ವಂಚಿತರು ಮತ್ತು ದೌರ್ಜನ್ಯ ಹಾಗೂ ಬಲತ್ಕಾರಕ್ಕೆ ಒಳಗಾದ ಬಡವರಿಗೆ ಉಚಿತ ಕಾನೂನು ಸೇವೆಯಿಂದ ನ್ಯಾಯ ಒದಗಿಸುವ ಕೆಲಸವನ್ನು ನಡೆಯುತ್ತಿದೆ. ಜನ ಸಾಮಾನ್ಯರಲ್ಲಿ ಈ ಕುರಿತು ಕಾನೂನಿನ ಅರಿವು ಮತ್ತು ನೆರವಿನ ಜಾಗೃತಿ ಮೂಡಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಎಲ್ಲರೂ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ದೇವಾನಂದ ಹೋದಲೂರಕರ್ ಕಾನೂನು ಸೇವಾ ದಿನಗಳ ಕುರಿತು ಮಾತನಾಡಿ, ಬ್ರಿಟ್ರಿಷರ್ ಕೈಗೊಂಬೆಯಾಗಿದ್ದ ಭಾರತೀಯ ಪ್ರಜೆಗಳಿಗೆ ದೇಶ ಸ್ವಾತಂತ್ರ್ಯವಾದ ಮೇಲೆ ಜಾರಿಗೆ ಬಂದ ಸಂವಿಧಾನದಂತೆ ಎಲ್ಲರಿಗೂ ಒಂದೇ ಕಾನೂನು ಒಂದೆ ಮತದಾಧಿಕಾರ ಸಿಕ್ಕಿದ್ದು, ಕಾನೂನು ಅಡಿಯಲ್ಲಿ ಎಲ್ಲರೂ ಸಮನಾವಾಗಿದ್ದು, ಸಂವಿಧಾನ ಪೀಠಿಕೆಯಂತೆ ಪ್ರತಿಯೊಬ್ಬರಿಗೆ ಬದುಕುವ ಮಾತನಾಡುವ, ಸೌಲಭ್ಯಗಳನು ಪಡೆಯುವ ಹಕ್ಕು ನೀಡಿದೆ, ಅದರಂತೆ ನಮ್ಮ ಕರ್ತವ್ಯಗಳು ನಿರ್ವಹಿಸುವಂತೆ ಹೇಳಿದೆ.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾನೂನಿನ ತಿಳಿದುಕೊಂಡು ಜಾಗೃತಿ ಹೊಂದುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಕಾಂತ, ಸರ್ಕಾರಿ ವಕೀಲ ಶುಭಶ್ರೀ ಬಡಿಗೇರ್, ಜ್ಯೋತಿ ವಿ. ಬಂದಿ, ಉಪಸ್ಥಿತರಿದ್ದರು.

ಕಾನೂನು ಸೇವೆಗಳ ಉಪಯುಕ್ತ ಕುರಿತು ನ್ಯಾಯವಾದಿ ಎ.ಸಿ. ತೋಳೆ, ಅವರು ಉಪನ್ಯಾಸ ನೀಡಿದರು. ಹಿರಿಯ ನ್ಯಾಯವಾದಿ ಬಿ.ಎ. ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಬಿ.ಜಿ. ಬೀಳಗಿ, ದೀಪಾರಾಣಿ ಕುಲಕರ್ಣಿ, ಬಿ.ಟಿ. ಸಿಂಧೆ, ಕೆ. ಮಲ್ಲಿಕಾರ್ಜುನ, ಯು.ಕೆ. ಇನಾಮದಾರ, ಕಂದಾಯ ನಿರೀಕ್ಷಕ ಶರಣು ಹಕ್ಕಿ, ನಾಗೇಂದ್ರ ಮತ್ತು ಎಂ.ಕೆ. ಗೋವಿನ್ ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.

ನ್ಯಾಯವಾದಿ ಶಿವಶಂಕರ ಮುನ್ನೊಳ್ಳಿ ನಿರೂಪಿಸಿದರು. ಬಿ.ಎಸ್. ನಿಂಬರಗಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago