ಬಿಸಿ ಬಿಸಿ ಸುದ್ದಿ

ಕಸಾಪ ಚುನಾವಣೆ: ಗಮನ ಸೆಳೆಯುವ ಡಾ. ಸರಸ್ವತಿ ಚಿಮ್ಮಲಗಿ

  • ಕೆ. ಶಿವು ಲಕ್ಕಣ್ಣವರ

ಬೆಂಗಳೂರು: ಕಸಾಪಕ್ಕೆ ಈಗ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ರಾಜ್ಯ ಕಸಾಪದ ಚುನಾವಣೆಯಲ್ಲಿ ಗಮನಾರ್ಹ ಅಭ್ಯರ್ಥಿಯಾಗಿ ಗಮನ ಸೆಳೆತ್ತಾರೆ ಡಾ.ಸರಸ್ವತಿ ಚಿಮ್ಮಲಗಿಯವರು.

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಮೊಲನೇ ಮಹಿಳಾ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿಯೂ ಈ ಬಾರಿ ರಾಜ್ಯ ಕಸಾಪದ ಗಮನ ಸೆಳಿದ್ದಾರೆ, ಅಷ್ಟೇ ಅಲ್ಲ ಈ ಕಸಾಪದಲ್ಲಿ ಆಗುಂತಕಳಾಗಿಯೇ ಕಾಣಿಸುತ್ತಿದ್ದಾರೆ ಡಾ.ಸರಸ್ವತಿ. ಚಿಮ್ಮಲಗಿಯವರು. ಅಂದರೆ ಈ ಮಹಿಳೆಯೂ ಈ ಬಾರಿ ಸಾಕಷ್ಟು ಪೈಪೋಟಿಯಲ್ಲಿ ಇರುವಂತೆ ಕಾಣುತ್ತಿದ್ದಾರೆ. ಹೌದು ಈ ಚುನಾವಣೆಯ ಕೊನೆಯ ಘಳಿಗೆಯಲ್ಲಿ ಎಂಬುದು ಎಲ್ಲರಿಗೂ ಮೊದಲ ಬಾರಿ ಹೌದಪ್ಪ ಹೌದು ಶತಮಾನದ ರಾಜ್ಯ ಕಸಾಪದ ಅಧ್ಯಕ್ಷರಾದರೆ, ಅದು ಪುರುಷ ಪ್ರಧಾನ ರಾಜ್ಯ ಕಸಾಪದಲ್ಲಿ ನಿಜವಾಗಿಯೂ ಸರಿಯಾದ ರೀತಿಯ ಆಯ್ಕೆಯಾದಂತೆ ಆಗುತ್ತದೆ ಎಂಬುದೇ ಈ ಬಾರಿ ಎಲ್ಲಾ ಕಸಾಪದ ಸದಸ್ಯರ ಅಂಬೋಣವಾಗಿದೆಯೂ ಕೂಡ..!

105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೂ 25 ಜನ ಪುರುಷರೇ ಅಧ್ಯಕ್ಷರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಒಬ್ಬೇ ಒಬ್ಬ ಮಹಿಳಾ ಅಭ್ಯರ್ಥಿಯ ಆಯ್ಕೆ ನಡೆದಿಲ್ಲ. ಅಲ್ಲದೇ ಮಹಿಳೆಯನ್ನು ಕಸಾಪದಿಂದ ಹೊರಗಿಡಲಾಗಿದೆ. ಅದರಿಂದ ಈ ಬಾರಿ ಕಸಾಪಕ್ಕೆ ಈ ಮಹಿಳೆ ಆಗುಂತಕಳಾಗಿದ್ದಾಳೆ.

ಅದ್ದರಿಂದ ಶತಮಾನದ ಇತಿಹಾಸ ಹೊಂದಿರುವ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಮಹಿಳಾ ಅಭ್ಯರ್ಥಿಯನ್ನು ಬೆಂಬಲಿಸುವುದೂ ಎಲ್ಲಾ ಪುರುಷ ಮತ್ತು ಸ್ತ್ರೀಯರನ್ನು ಸಮಾನವಾಗಿ ಕಾಣುವ ಪ್ರತಿಯೊಬ್ಬ ಕಸಾಪದ ಸದಸ್ಯರ ಕರ್ತವ್ಯವೂ ಆಗಿದೆ.

ಮಹಿಳಾ ಆಸ್ಮಿತೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಮಹಿಳಾ ಮೀಸಲು ಕೇಳುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳು ನನ್ನಲ್ಲಿವೆ. ನಾಡಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಸಾಪದಲ್ಲಿ ಇರುವ ಲಿಂಗಬೇಧವನ್ನು ಅಳಿಸಿ ಹಾಕಲು ಮತದಾರರು ಈ ಭಾರೀ ನನ್ನನ್ನು ಬೆಂಬಲಿಸಬೇಕು ಎಂದೂ ಮೊದಲ ಮಹಿಳಾ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿಯವರೂ ಕೋರುತ್ತಾರೆ. ಅವರ ಈ ಕೋರಿಕೆಯಲ್ಲಿ ನ್ಯಾಯವೂ ಅಡಗಿದೆ ಎಂಬುದಲ್ಲಿ ಎರಡು ಮಾತಿಲ್ಲ..!

ಅಧ್ಯಕ್ಷೆಯಾಗಿ ಆಯ್ಕೆಯಾದರೆ ಕನ್ನಡ ನಾಡು, ನುಡಿ, ನೆಲ,ಜಲ, ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುವುದು. ಸಾಹಿತ್ಯಿಕ ಸಂದರ್ಭದ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡಲಾಗುವುದು. ತಾಲ್ಲೂಕು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ಸಂಬಂಧ ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ತರಲಾಗುವುದೂ ಡಾ.ಸರಸ್ವತಿ ಚಿಮ್ಮಲಗಿ ಅವರ ಮೊದಲ ಘೋಷಣೆಯಾಗಿದೆ.

ಐದು ವರ್ಷದ ಆಡಳಿತಾವಧಿಯಲ್ಲಿ ಎರಡು ಸಾಮಾನ್ಯ, ಎರಡು ಮಹಿಳಾ ಮತ್ತು ಒಂದು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ನಾಲ್ಕು ವಿಭಾಗಗಳಲ್ಲಿ ಮಹಿಳಾ ಮತ್ತು ದಲಿತ ವಿಶೇಷ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದೂ ಎಂಬುದು ಅವರ ಕಳಕಳಿಯಾಗಿದೆ. ಈ ಕಳಕಳಿ ಇಂದು ಮತ್ತು ನಿನ್ನೆಯದಲ್ಲ ಬಹು ದಿನದ ಬೇಡಿಕೆಯೂ ಆಗಿದೆ. ಇದನ್ನು ಮೊದಲ ಬಾರಿಗೆ ಡಾ.ಸರಸ್ವತಿ ಚಿಮ್ಮಲಗಿ ಹೇಳುತ್ತಿಲ್ಲ. ಈ ಮೊದಲೇ ಮಹಿಳಾ ಸಾಹಿತಿಗಳ ಕೋರಿಕೆಯೂ ಆಗಿದೆ.

# ಪರಿಷತ್ತಿಗೂ ಹಾಗೂ ವಿವಿಧ ಅಕಾಡೆಮಿಗಳು, ಸಾಂಸ್ಕೃತಿಕ ಸಂಸ್ಥೆಗಳ ಆತಂಕರಿಕ ಸಂಬಂಧ ಬೆಸೆಯಲು ಆದ್ಯತೆ ನೀಡಲಾಗುವುದು ಎಂಬುದೂ ಅವರ ಪ್ರಮುಖ ಕೊರಿಕೆಯಾಗಿದೆ.

# ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಇಷ್ಟೇ ಅಲ್ಲದೇ ಇನ್ನಿತರ ಕಾರ್ಯ — ಕಲಾಪಗಳೂ ಡಾ.ಸರಸ್ವತಿ ಚಿಮ್ಮಲಗಿಯವರ ಇಂಗಿತದಲ್ಲಿವೆ.

# ರಾಜ್ಯ ಮಟ್ಟದಿಂದ ಹಳ್ಳಿಯವರೆಗೆ ಸಾಹಿತ್ಯ ಸರಸ್ವತಿಯನ್ನು ಕೊಂಡೊಯ್ಯಲಾಗುವುದು, ಗಡಿ ನಾಡು ಸಮ್ಮೇಳನಗಳನ್ನು ಆಯೋಜಿಸಲಾಗುವುದು ಹಾಗೂ ಸದಸ್ಯರ ಮತದಾನದ ಹಕ್ಕು ಬೈಲಾ ತಿದ್ದುಪಡಿ ಮಾಡಲಾಗುವುದು.

# ಕಸಾಪದಲ್ಲಿ 80 ಸಾವಿರ ಮಹಿಳಾ ಮತದಾರರು ಇದ್ದಾರೆ. ಎಲ್ಲರೂ ಬೆಂಬಲಿಸುವ ವಿಶ್ವಾಸವಿದೆ ಡಾ.ಸರಸ್ವತಿ ಚಿಮ್ಮಲಗಿಯವರಿಗಿದೆ.

# ಬಹುಮುಖದ ಡಾ.ಸರಸ್ವತಿ ಚಿಮ್ಮಲಗಿಯವರಿಗೆ ಕನ್ನಡ ಪ್ರಶಸ್ತಿ ಗರಿಯೂ..!

ಸಾಹಿತ್ಯಕ್ಕೂ ಸೈ, ಅಭಿನಯಕ್ಕೂ ಸೈ, ಹೋರಾಟಕ್ಕಂತೂ ಸೈಯೋ ಸೈ ಈ ಎಂದೆಂದಿಗೂ ಜೈ ಎನ್ನುತ್ತಿದ್ದ ಡಾ.ಸರಸ್ವತಿ ಚಿಮ್ಮಲಗಿಗೆ ಬಂದಿದೆಯೂ ರಾಜ್ಯೋತ್ಸವ ಪ್ರಶಸ್ತಿಯೂ..!

ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ಬರಹದ ಮೂಲಕ ಹೋರಾಟ ಮಾತ್ರವಲ್ಲದೇ, ರಂಗಭೂಮಿ, ರಾಜಕೀಯ, ಕೃಷಿ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ ರಾಜ್ಯ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.

ವಿಜಯಪುರ ಜಿಲ್ಲೆಯ ಚಿಮ್ಮಲಗಿ ಗ್ರಾಮದ (ಈಗ ಮುಳುಗಡೆಯಾಗಿದ್ದು , ಬುದ್ನಿ ಗ್ರಾಮಕ್ಕೆ ಸ್ಥಳಾಂತರ) ಡಾ.ಸರಸ್ವತಿ ಚಿಮ್ಮಲಗಿ ಅವರು ಕಾವ್ಯ, ಪ್ರಬಂಧ, ವಿಮರ್ಶೆ ಸೇರಿದಂತೆ 22 ಕೃತಿಗಳನ್ನು ಬರೆದಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಮಹಿಳೆಯರ ಮೇಲಿನ ಘೋಷಣೆಗಳ ವಿರುದ್ಧ ಬರಹದ ಮೂಲಕ ಹೋರಾಟ ಮಾಡಿದರು ಆಗಿದ್ದಾರೆ.

ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಆಕರ್ಷಿತಳಾದ ಡಾ.ಸರಸ್ವತಿ ಚಿಮ್ಮಲಗಿ, ಗುರುವಿನ ಬಗ್ಗೆ ಮೊದಲ ಕವನ ಬರೆದವರು, ಇವರು ಪದವಿ ಕಲಿಯುವಾಗ ಸಾಹಿತ್ಯದ ಗಮನ ಸೆಳೆದವರು. ಹಾಗೆಯೇ ಪದವಿ ಕಲಿಯುವಾಗ ಸಾಹಿತ್ಯ ಕೃಷಿಗೆ ಹೆಚ್ಚು ತೊಡಗಿಸಿಕೊಂಡವರು, ಆಗಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಸರಸ್ವತಿ ಚಿಮ್ಮಲಗಿ, ಕಲಬುರ್ಗಿಯ ಶ್ರೀಮತಿ.ವೀರಮ್ಮ.ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.

ನಾವೂ ನಿಮ್ಮವರೇ ಸ್ವಾಮಿ (ಕವನ ಸಂಕಲನ), ಕೋಡಿಲ್ಲದ ಕೊಡಗ, ಮುಳ್ಳು ಬೇಲಿ, ಎಡಬಿಡಂಗಿದೇವನ ವಚನಗಳು, ಹಳೇ ನೆನಪು ಹಸಿರಾದಾಗ, ಕಾವ್ಯ ಕುಂಜ, ಕವಿತೆ, ಹಡೆದವ್ವ,ಆಯ್ದ ಎಡಬಿಡಂಗಿದೇವನ ವಚನಗಳು, ಮಹಿಳೆ-ಮದುವೆ-ವಿಚ್ಛೇದನ-ಸಂಶೋಧನೆ, ಅಂತರಂಗ, ಬಾಳು ಕೊಡವ್ವ, ನೋವಾವಿ ಇವರ ಪ್ರಮುಖ ಕವನ ಸಂಕಲನಗಳಾಗಿವೆ.

‘ಸೋಡ ಚೀಟಿ — ಒಂದು ಜಾನಪದ ಅಧ್ಯಯನ’, ಡಾ.ಕಮಲಾ ಹಂಪನ ಕೃತಿಗಳು — ಒಂದು ಅಧ್ಯಯನ, ಸಾಂಗತ್ಯ– ಒಂದು ಪಕ್ಷಿನೋಟ, ಬಸವಪೂರ್ವ ಕಾಲದ ವಚನಕಾರರು, ಅನುಪಮಾ ಅವರ ಮಕ್ಕಳ ಸಾಹಿತ್ಯ, ರಾಜಪುರುಹೋತರ ಜೀವನ ಚರಿತ್ರೆಗಳು, ಜೀವನ ವಿಕಾಸ, ಸಾಕ್ಷರತಾ ಕಿರಣ, ಯುಗದರ್ಶಿನಿ ಸಂಶೋಧನಾ ಕೃತಿಗಳನ್ನು ಹೊರತಂದವರು ಇವರು.

ದಿಲ್ಲಿಯ ಅಖಿಲ ಭಾರತ ಕವಯತ್ರಿಯರ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಡಾ.ಸರಸ್ವತಿ ಚಿಮ್ಮಲಗಿಯವರು.

ರಂಗಭೂಮಿಯಲ್ಲೂ ಸೇವೆ — ಸಾಹಿತ್ಯ ಮಾತ್ರವಲ್ಲದೇ ರಂಗಭೂಮಿಯಲ್ಲೂ ಆಸಕ್ತಿ ಮೂಡಿಸಿಕೊಂಡಿರುವ ಡಾ.ಸರಸ್ವತಿ ಚಿಮ್ಮಲಗಿ ಅವರು ಹವ್ಯಾಸಿ ಕಲಾವಿದೆ. ಜೋಗಿಬಾವಿ, ಜೋಕುಮಾರಸ್ವಾಮಿ, ಕಾಡುಕುದುರೆ, ನಾಯಕ, ಶಾಂತಲಾ, ಕತ್ತಲೆ-ಬೆಳಕು, ತಾಳಿ ಕಟ್ಟೋಕ ತಯಾರ, ಧ್ವನಿ-ಬೆಳಕು, ಚಿಂಗಾರಿ ನಾಟಕ, ದೂರದರ್ಶನದಲ್ಲಿ ಪ್ರದರ್ಶನಗೊಂಡ ‘ಅಕ್ಕಮ್ಮನ ಶಾಲೆ, ಹೊಸ ಹಾದಿ, ನೆರೆಹೊರೆಯವರು, ಅವ್ವನ ಜಡ್ಡು, ಜೀವನ ಜೋಕಾಲಿ ನಾಟಕದಲ್ಲಿ ಅಭಿನಯಿಸಿದ್ದಾರೆ. ಇವರ ಮನೋಜ್ಞ ಅಭಿನಯಕ್ಕೆ ರಂಗಾಸಕ್ತರಿಂದ ಶಹಬ್ಬಾಸ್‌ ಗಿರಿ ಗಿಟ್ಟಿಸಿಕೊಂಡವರು.

# ಈಗ ರಾಜ್ಯೋತ್ಸವ ಗರಿಯೂ — ಶಾಲಾ, ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿರುವ ಡಾ.ಸರಸ್ವತಿ ಚಿಮ್ಮಲಗಿ, ಜಾವೆಲಿನ್‌, ಡಿಸ್ಕಸ್‌ ಥ್ರೋ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಬಹುಮುಖ ಪ್ರತಿಭೆಯ ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ದಾನಾ ಚಿಂತಾಮಣಿ ಅತ್ತಿಮಬ್ಬೆ , ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡ ಮಾಡುವ ನವರತ್ನ ಪ್ರಶಸ್ತಿ, ಮಹಾಂತಜ್ಯೋತಿ ಪ್ರತಿಷ್ಠಾನದ ಕಲಾ ಜ್ಯೋತಿ ಪ್ರಶಸ್ತಿ, ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸಿಗಳೂ ದಕ್ಕಿವೆ.

ಅಷ್ಟೇಯಲ್ಲದೇ ಇಂಗ್ಲೆಂಡ್‌ ದೇಶದ ‘ಟೆಂಟ್ವಿಯತ್‌ ಸೆಂಚೂರಿ ಅವಾರ್ಡ್‌ ಫಾರ್‌ ಅಚೀವಮೆಂಟ್ಸ್‌’, ಈಜಿಪ್ಟ್‌ ದೇಶದಿಂದ ಡಾಟರ್‌ ಆಫ್‌ ನೈಲ್‌, ದುಬೈನ ‘ಯೂ ಆಫ್‌ ದಿ ಎರಾ’, ಟರ್ಕಿ ದೇಶದ ‘ಫಸ್ಟ್‌ ಮಿಸ್‌ ಎಐಪಿಸಿ ವರ್ಲ್ಡ್’ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯೂ ಲಭಿಸಿದೆ.

ಈಗ ಸಾಹಿತ್ಯ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. 2008 ರಲ್ಲಿ ಬಬಲೇಶ್ವರ ಮತ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದೇ ಬಿಎಸ್ಪಿಯಿಂದ ಚುನಾವಣೆಗೂ ಸ್ಪರ್ಧಿಸಿ ಸೋತವರು ಡಾ.ಸರಸ್ವತಿ ಚಿಮ್ಮಲಗಿಯವರು.

# ಅಲ್ಲದೇ ಡಾ.ಸರಸ್ವತಿ ಚಿಮ್ಮಲಗಿ ಉವಾಚ–

ನನಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದಕ್ಕೆ ಖುಷಿಯಾಗಿದೆ. ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನನಗೆ ಪ್ರಶಸ್ತಿ ಬಂದಿದ್ದು , ಜಿಲ್ಲೆಯ ಎಲ್ಲಸಾಹಿತಿಗಳಿಗೂ, ಸಾಹಿತ್ಯಾಭಿಮಾನಿಗಳಿಗೆ ಸಂದ ಗೌರವವೇ ಆಗಿದೆ ಎಂದು ಡಾ.ಸರಸ್ವತಿ ಚಿಮ್ಮಲಗಿ ಹೇಳುತ್ತಾರೆ.

# ಹೀಗೆಯೇ ಮತ್ತೊಬ್ಬ ಕಸಾಪದ ಅಧ್ಯಕ್ಷೀಯ ಆಶಾದಾಯಕದಲ್ಲಿರುವ ಸಂಗಮೇಶ ಬಾದವಾಡಗಿಯವರು ತಮ್ಮದೇ ಉವಾಚವನ್ನು ಹೀಗೆ ಹೇಳುತ್ತಾರೆ.

ನಾನು ಕಸಾಪದ ಅಧ್ಯಕ್ಷನಾದರೆ ‘ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಅಭಿಪ್ರಾಯವನ್ನು ಅಳಿಸಿ ಹಾಕುವ ದಿಶೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಉದ್ಯೋಗ ಆಧಾರಿತವಾದ ಭಾಷೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ. ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುತ್ತೇನೆ’ ಹೇಳುತ್ತಿದ್ದಾರೆ.

‘ಪರಿಷತ್ತು-ಹಳ್ಳಿಗಳ ಸುತ್ತು’ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಟ್ಟಕ್ಕೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ರಿಯಾ ಚಟುವಟಿಕೆಗಳನ್ನು ವಿಸ್ತರಿಸುತ್ತೇನೆ ಹಾಗೂ ತಾಲ್ಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತೇನೆ ಎಂದೂ ಹೇಳುತ್ತಾರೆ ಸಂಗಮೇಶ ಬಾದವಾಡಗಿ.

‘ಪರಿಷತ್ತಿನ ಕೇಂದ್ರೀಕೃತ ಆಡಳಿತ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಸಂಘಟನೆಯನ್ನು ವಿಭಾಗೀಯ ಮಟ್ಟಕ್ಕೆ ವಿಸ್ತರಿಸಿ, ವಿಕೇಂದ್ರೀಕರಣದ ನಾಂದಿಯೊಂದಿಗೆ ಪ್ರಾದೇಶಿಕ ನ್ಯಾಯ, ಪ್ರತಿಭಾ ನ್ಯಾಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು. ಗಡಿಭಾಗದಲ್ಲಿ ಕನ್ನಡಮಯ ವಾತಾವರಣವನ್ನು ಸೃಜನಗೊಳಿಸುವುದು, ಗಡಿ ಉತ್ಸವದಂತೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ ಅನ್ನುತ್ತಾರೆ ಸಂಗಮೇಶ ಬಾದವಾಡಗಿಯವರೂ..!

emedialine

Recent Posts

ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…

5 hours ago

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

7 hours ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

7 hours ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

7 hours ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

8 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

11 hours ago