ಬಿಸಿ ಬಿಸಿ ಸುದ್ದಿ

ಎಲ್ಲೆಡೆಯೂ ಶಿಕ್ಷಣದ ಜ್ಯೋತಿ ಬೆಳಗಿಸಿ ಅಜ್ಞಾನದ ಅಂಧಕಾರ ತೊಲಗಿಸಿ

ಹೌದು ಈ ಮಾತು ತುಂಬಾ ಧಿಟ್ಟವದ ಹೆಜ್ಜೆಯ ಕಡೆಗೆ ಕರೆದುಕೊಂಡು ಹೋಗುತ್ತದೆ ಶಿಕ್ಷಣ ಜ್ಞಾನದ ಒಂದು ಸುಂದರ ಲಕ್ಷಣ ಇಡೀ ಪ್ರಪಂಚದಲ್ಲಿರುವ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವುದಲ್ಲದೆ ಒಳ್ಳೆಯ ವ್ಯಕ್ತಿತ್ವ ರೂಪಿಸುತ್ತದೆ. ಅದರಲ್ಲಿರುವ ಗತ್ತು ಗಮತ್ತು ತಾಕತ್ತು ಒಂದು ವಿಶೇಷವಾದುದು. ಅದಕ್ಕಾಗಿಯೇ ಈ ಮಾತು ಹೇಳುವರು ಅದೇನೆಂದರೆ.

ಖಡ್ಗಕ್ಕಿಂತ ಲೇಖನಿ ಹರಿತ” ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ ಇಂದು ಶಿಕ್ಷಣದ ಮಹತ್ವ ಸಾರುವ “ರಾಷ್ಟ್ರೀಯ ಶಿಕ್ಷಣ ದಿನ”.

ಹಾಗಾದ್ರೆ ಈ ದಿನದ ಮಹತ್ವ ಏನೆಂದರೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು “ರಾಷ್ಟ್ರೀಯ ಶಿಕ್ಷಣ ದಿನವಾಗಿ” ಆಚರಣೆ ಮಾಡಲಾಗುತ್ತದೆ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆಜಾದ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ 2008 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲು ಘೋಷಿಸಿತು.

ಇನ್ನು ಅವರ್ ಬಗ್ಗೆ ಹೇಳುವುದಾದರೆ ಮೌಲಾನಾ ಅಬುಲ್ ಕಲಾಂ ಆಜಾದ್ ಕುರಿತು ಆಜಾದ್ ಅವರ ಸಂಪೂರ್ಣ ಹೆಸರು – ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್.ಚಿಕ್ಕ ವಯಸ್ಸಲ್ಲೇ ತಂದೆಯಿಂದಲೇ ಶಿಕ್ಷಣ ಪಡೆದ ಆಜಾದ್, ನಂತರ ಅಲ್ಲಿನ ಪ್ರಸಿದ್ಧ ಶಿಕ್ಷಕರಿಂದ ಶಿಕ್ಷಣವನ್ನು ಪಡೆದರು.

ಆಜಾದ್ ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯನ್ನು ಸಹ ಕಲಿತಿದ್ದರು. ತತ್ವಶಾಸ್ತ್ರ, ಗಣಿತ ಮತ್ತು ಬೀಜಗಣಿತವನ್ನು ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿದರು. ನಂತರ ಸ್ವತಃ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಭಾಷೆ, ವಿಶ್ವದ ಇತಿಹಾಸ ಮತ್ತು ರಾಜಕೀಯವನ್ನು ಅರಿತರು.

ಬಂಗಾಳದ ಇಬ್ಬರು ಪ್ರಮುಖ ಕ್ರಾಂತಿಕಾರಿಗಳಾದ ಅರವಿಂದ ಘೋಷ್ ಮತ್ತು ಶ್ಯಾಮ್ ಸುಂದರ್ ಚಕ್ರವರ್ತಿ ಅವರನ್ನು ಭೇಟಿಯಾದ ನಂತರ, ಬ್ರಿಟಿಷ್ ಆಡಳಿತದ ವಿರುದ್ಧ ಕ್ರಾಂತಿಕಾರಿ ಚಳವಳಿಗೆ ಧುಮುಕಿದರು.

ಆಜಾದ್ ಅವರು ಎರಡೇ ವರ್ಷಗಳಲ್ಲಿ ಉತ್ತರ ಭಾರತ ಮತ್ತು ಬಾಂಬೆಯಾದ್ಯಂತ ರಹಸ್ಯ ಕ್ರಾಂತಿಕಾರಿ ಕೇಂದ್ರಗಳನ್ನು ಸ್ಥಾಪಿಸಿದರು.1912ರಲ್ಲಿ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಲು ‘ಅಲ್-ಹಿಲಾಲ್’ ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು.

ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ 1947ರಿಂದ 1958ರವರೆಗೆ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು. 22ರ ಫೆಬ್ರವರಿ 1958ರಂದು ಹೃದಯಾಘಾತದಿಂದ ಅವರು ನಿಧನರಾದರು.ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಜಾದ್ ಅವರು ಹೆಸರು ವಾಸಿಯಾದರೂ.

1888ರ ನವೆಂಬರ್ 11ರಂದು ಜನಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು. ಆಗಸ್ಟ್ 15ರ 1947 ರಿಂದ ಫೆಬ್ರವರಿ 2ರ 1958 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದು.
ದೇಶಕ್ಕೆ ಸ್ವಾತಂತ್ರ ದೊರೆತ ನಂತರ ರಾಷ್ಟ್ರದ ಇಡೀ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಮೌಲಾನಾ ಅವರ ಕೊಡುಗೆ ಇಂದು ನಾವು ತಿಳಿದುಕೊಳ್ಳಲೇಬೇಕು.

ಶಿಕ್ಷಣ ಸಚಿವರಾಗಿ ಆಜಾದ್ ಮುಕ್ತ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಕೈಗೊಂಡರು. 1951ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯನ್ನು ಪ್ರಾರಂಭಿಸಿದವರು ಆಜಾದ್.

ಇಂದು ದೆಹಲಿ ವಿಶ್ವವಿದ್ಯಾಲಯವಾಗಿ ರೂಪಿಸಿದರು.ಅಂದಿನ ದೆಹಲಿಯ ದಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಅನ್ನು ಸ್ಥಾಪಿಸಿದ ಕೀರ್ತಿ ಸಹ ಆಜಾದ್ ಗೆ ಸಲ್ಲುತ್ತದೆ. ಅಲ್ಲದೇ, 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವನ್ನು ಸ್ಥಾಪಿಸಿ ದೇಶದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳ ಹುಟ್ಟು ಹಾಗೂ ಇಂದಿನ ಉಳಿವಿಗೆ ಕಾರಣರಾಗಿದ್ದಾರೆ ಆಜಾದ್.

ಶಾಲೆ ಮತ್ತು ಜೀವನದ ನಡುವಿನ ವ್ಯತ್ಯಾಸವೆಂದರೆ, ಶಾಲೆಯಲ್ಲಿ ಮೊದಲು ನಮಗೆ ಪಾಠ ಕಲಿಸುತ್ತಾರೆ ನಂತರ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ . ಆದರೆ ಜೀವನದಲ್ಲಿ ನಮಗೆ ಮೊದಲು ಪರೀಕ್ಷೆಗಳು ಎದುರಾಗುತ್ತದೆ, ನಂತರ ಅದರಿಂದ ನಾವು ಪಾಠ ಕಲಿಯುತ್ತೇವೆ ಈ ಶಿಕ್ಷಣ ನೀತಿ ತೋರಿಸುತ್ತದೆ ಎಂದು ಹೇಳುತ್ತಾ ಎಲ್ಲರಿಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಶುಭಾಶಯಗಳು

ಕಾಶಿಬಾಯಿ ಗುತ್ತೇದಾರ
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago