ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ನಿರ್ಧಾರ

ಬೀದರ: ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಪಕ್ಷಾತೀತವಾಗಿ ಕಲ್ಯಾಣ ಕರ್ನಾಟಕದಿಂದ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಉಪಸ್ಥಿತಿರಿದ್ದ ಎಲ್ಲರೂ ಮಾತನಾಡಿ ಒಕ್ಕೂರಲಿಂದ ತಮ್ಮ ವಿಚಾರವನ್ನು ಮಂಡಿಸಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು.

ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಈ ಹಿಂದೆ ನಿರ್ಧಾರ ಕೈಗೊಂಡಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರನ್ನು ಪಕ್ಷಾತೀತವಾಗಿ ಒಂದೇ ವೇದಿಕೆಗೆ ಕರೆದು ಸಭೆಗಳನ್ನು ನಡೆಸಿ ಸಂಘಟಿತ ರಾಜಕೀಯ ಒಕ್ಕಟ್ಟು ಪ್ರದರ್ಶಿಸಿ ನಮ್ಮ ಕಲ್ಯಾಣ ಕರ್ನಾಟಕದ ಅಸಮತೋಲನೆ ನಿವಾರಣೆಗೆ ಸಕಾರಾತ್ಮಕವಾಗಿ ಒತ್ತಡ ತರಲು ನಿರ್ಧರಿಸಿರುವಂತೆ ಇಂದು ಮೊದಲನೇ ಹಂತವಾಗಿ ಬೀದರ ಜಿಲ್ಲೆಯ ಮಾಜಿ ಸಂಸದರ ಮತ್ತು ಮಾಜಿ ಶಾಸಕರ ಸಭೆಯನ್ನು ಬೀದರ ನಗರದ ಅತಿಥಿ ಗೃಹದಲ್ಲಿ ನಿಯೋಜಿಸಲಾಗಿತ್ತು.

ಈ ಸಭೆಯಲ್ಲಿ ಮಾಜಿ ಸಂಸದರಾದ ನರಸಿಂಗರಾವ ಸೂರ್ಯವಂಶಿ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಪುಂಡಲಿಕರಾವ, ಕಾಜಿ ಅರಷದ ಅಲಿ, ಅಮರನಾಥ ಪಾಟೀಲ, ಮುಖಂಡರಾದ ಚನ್ನಬಸಪ್ಪಾ ಹಾಲಹಳ್ಳಿ, ಶಾಮರಾವ ಪ್ಯಾಟಿ, ಶಾಮ ನಾಟೀಕರ, ಜ್ಞಾನಮಿತ್ರ ಸ್ಯಾಮುವೆಲ್, ಅನಂತರೆಡ್ಡಿ ರವರು ಹಾಜರಾಗಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ರವರು ವಹಿಸಿದರು.

ಈ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಪ್ರಗತಿಗೆ ಮತ್ತು ೩೭೧(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಒಂದೇ ವೇದಿಕೆ ಅಡಿ ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತರಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮನ್ವಯ ಸಮಿತಿ ರಚನೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಸಮನ್ವಯ ಸಮಿತಿಗೆ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ ಸಂಘ ಸಂಸ್ಥೆ, ಸಂಘಟನೆಗಳ ಪ್ರಮುಖರನ್ನು ಸೇರಿಸಲು ನಿರ್ಧರಿಸಲಾಯಿತು. ಸಮನ್ವಯ ಸಮಿತಿಯ ಪ್ರಧಾನ ಸಂಯೋಜಕರೆಂದು ಪಕ್ಷಾತೀತ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಯವರನ್ನು ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧೀ ಪರ ಹೋರಾಟಗಾರರು, ಚಿಂತಕರು ವಿನಯಕುಮಾರ, ಸಂಜಯ ಜಾಗಿರದಾರ, ವಿನಯ ಮಾಳಗೆ, ಬಕ್ಕಪ್ಪಾ ನಾಗೂರ, ಸಿ.ಎಲ್.ರೆಡ್ಡಿ, ರೊಹನಕುಮಾರ, ಸಂತೋಷ ಚಟ್ಟಿ, ಉದಯಕುಮಾರ, ವಿಜಯಕುಮಾರ, ಪಿಂಟು ಪಸ್ತಾಪುರೆ ಬಸವಕಲ್ಯಾಣ, ಶರಣಪ್ಪಾ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಒಕ್ಕೂರಲಿಂದ ಕೈಗೊಂಡ ನಿರ್ಣಯಗಳು:

  • ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಭವಿಷ್ಯದಲ್ಲಿ ಹಮ್ಮಿಕೊಳ್ಳಬೇಕಾದ ಯೋಜನೆಗಳು:
  • ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಲಮಿತಿಯ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರೂಪಿಸಿ ಅದಕ್ಕೆ ತಗಲುವ ವಎಚ್ಚದ ಬಗ್ಗೆ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರದಿಂದಲೂ ಸಹ ವಿಶೇಷ ಪ್ಯಾಕೇಜ ಪಡೆಯಲು ಒತ್ತಾಯಿಸಲು ನಿರ್ಣಯಿಸಲಾಯಿತು.
  • ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಡಾ. ನಂಜುಂಡಪ್ಪ ವರದಿಯ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ಪ್ರದೇಶದ ಒಂದು ಪಂಚಾಯತನ್ನು ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಹೊಸ ವರದಿಯನ್ನು ತಯ್ಯಾರಿಸಿ  ಅದರಂತೆ ಕಾಲಮಿತಿಯ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಯಿತು.
  • ೩೭೧(ಜೆ) ಕಲಂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಈ ಹಿಂದೆ ಮುಖ್ಯ ಮಂತ್ರಿ ಘೋಷಣೆ ಮಾಡಿರುವಂತೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆಗಾಗಿ ಒತ್ತಾಯಿಸಲು ನಿರ್ಣಯಿಸಲಾಯಿತು.
  • ೩೭೧(ಜೆ) ಕಲಂ ನಿಯಮಾವಳಿಗಳಲ್ಲಿ ಇರುವ ದೋಷಗಳನ್ನು ಪರಿಷ್ಕರಣೆ ಮಾಡಿ ಇದರ ಸವಲತ್ತುಗಳು ಸುಸೂತ್ರವಾಗಿ ನಮ್ಮ ಜನರಿಗೆ ತಲುಪುವಂತೆ ಕ್ರಮಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಯಿತು.
  • ಈಗಾಗಲೇ ಮುಖ್ಯ ಮಂತ್ರಿಗಳು ಘೋಷಿಸಿದಂತೆ ೩೭೧(ಜೆ) ನಿಯಮಗಳನ್ನ ಪರಿಷ್ಕರಣೆ ಮಾಡಲು ಅಧಿಕೃತ ಸಭೆ ನಡೆಸಲು ಘೋಷಿಸಿರುವಂತೆ ತಕ್ಷಣ ಕ್ರಮಕ್ಕಾಗಿ ಒತ್ತಡ ತರಲು ನಿರ್ಧರಿಸಲಾಯಿತು.
  • ೩೭೧(ಜೆ) ಕಲಂ ನಿಯಮಗಳಲ್ಲಿ ಉಲ್ಲೇಖಿಸಿರುವಂತ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಛೇರಿಗಳು ಬೆಂಗಳೂರಿನಿಂದ ವಿಭಾಗೀಯ ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಿಗೆ ಸ್ಥಳಾಂತರ ಮಾಡುವಂತೆ ಕ್ರಮ ವಹಿಸಲು ನಿರ್ಧರಿಸಲಾಯಿತು.
  • ಕಲ್ಯಾಣ ಕರ್ನಾಟಕ ಪ್ರದೇಶದ ಮೂರು ವಿಶೇಷ ಅನುದಾನದ ಜೊತೆಗೆ ರೂಟಿನ ಬಜೆಟ ಸಹ ಪ್ರತಿ ವರ್ಷ ಮಂಜೂರಾಗುತ್ತದೆ. ಈ ಕಾರಣದಿಂದ ಆಯಾ ಬಾಬತ್ತಿನ ಎಷ್ಟು ಬಜೆ ಮಂಜೂರು ಆಗಿರುವ ಬಗ್ಗೆ ಸ್ಪಷ್ಟತೆ ತಿಳಿಯಲು ಮತ್ತು ಕಲ್ಯಾಣ ಕರ್ನಾಟಕ ಸಮತೋಲನ ಅಭೀವೃದ್ಧಿಯಾಗುವವರೆಗೆ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಬಜೆ ಮಂಡಿಸಲು ಒತ್ತಾಯಿಸಲು ತೀರ್ಮಾನಿಸಲಾಯಿತು.
  • ಕಲ್ಯಾಣ ಕರ್ನಾಟಕ ಪ್ರದೇಶದ ಆಯಾ ಜಿಲ್ಲೆಗಳ ತಮ್ಮದೇ ಆದ ಜ್ವಲಂತ ಸಮಸ್ಯೆಗಳು ಮತ್ತು ನೆನೆಗುದಿಗೆ ಬಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಘೋಷಣೆಗಳ ಅನುಷ್ಠಾಣಕ್ಕೆ ಒತ್ತಡ ತರಲು ನಿರ್ಧರಿಸಲಾಯಿತು.
  • ೩೭೧(ಜೆ) ಕಲಂ ಮೀಸಲಾತಿಯಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಮತ್ತು ಕಲ್ಯಾಣ ಪ್ರದೇಶೇತರ ನಮ್ಮ ಪಾಲಿನ ಸುಮಾರು ೮೯ ಸಾವಿರ ಖಾಲಿ ಹುದ್ದೆಗಳು (ಸರಕಾರಿ, ಅನುದಾನಿತ, ನಿಗಮ ಮಂಡಳಿ, ವಿಶ್ವವಿದ್ಯಾಲಯಗಳು ಮುಂತಾದ) ಭರ್ತಿಗೆ ಒತ್ತಡ ತರಲು ತೀರ್ಮಾನಿಸಲಾಯಿತು.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago