ಕಲಬುರಗಿ: ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆ ಮೂಡಿಸುವುದು ಇಂದಿನ ಅಗತ್ಯವಾಗಿದ್ದು, ಮನಸ್ಸುಗಳನ್ನು ಬೆಸೆಯುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಪದ್ಮವಿಭೂಷಣ ಶ್ರೀ ಡಾ. ವೀರೇಂದ್ರ ಹೆಗಡೆಯವರು ನುಡಿದರು.
ಸಂಶೋಧಕರಾದ ಡಾ: ಅಜೀತ ಮುರಗುಂಡೆಯವರ ಸಂಪಾದಕತ್ವದಲ್ಲಿ ಹೊರಬಂದಿರುವ ನಾಡಿನ ಸಮಗ್ರ ಬಾಹುಬಲಿ ಸ್ವಾಮಿಯ ಚಿತ್ರ ಸಹಿತ ಪರಿಚಯದ ಶ್ರೀ ಬಾಹುಬಲಿ ಸ್ವಾಮಿಯ ಸಚಿತ್ರ ದರ್ಶನ ಕೃತಿ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಪ್ರೇಮದಿಂದ, ವಾತ್ಸಲ್ಯದಿಂದ ಪ್ರಪಂಚವನ್ನೇ ಗೆಲ್ಲಬಹುದು, ನಿಶ್ಕಲ್ಮಶವಾದ ಪ್ರೀತಿಯನ್ನು ಹಂಚುವುದರ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸುವುದರ ಜೊತೆಗೆ ಪರಿಪೂರ್ಣ ಪಕ್ವತೆಯ ಸಮಾಜ ಕಾಣಬಹುದೆಂದು ಆಶಯ ವ್ಯಕ್ತಪಡಿಸಿದ ಪೂಜ್ಯರು ಇಂದಿನ ಕಲುಷಿತ ವಾತಾವರಣ ಮರೆಯಾಗಿ ಸಾಮರಸ್ಯದ ತಂಗಾಳಿ ಬೀಸಬೇಕಾಗಿದ್ದು ಭಯ, ಆತಂಕ ನಿವಾರಣೆಯಾಗಿ ನೆಮ್ಮದಿ ಜೀವನಕ್ಕಾಗಿ ಸುಂದರ ಸಮಾಜಕ್ಕಾಗಿ ಒಂದಿಷ್ಟೊತ್ತು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಡಾ. ಹೆಗಡೆಯವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ದಕ್ಷಿಣ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ದತ್ತಾತ್ರೇಯ ಸಿ. ಪಾಟೀಲ ರೇವೂರ ರವರು ಮಾತನಾಡಿ ಧರ್ಮ ಕಾರ್ಯದ ಜೊತೆಗೆ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುತ್ತಿರುವ ಕಾರ್ಯ ನಮಗೆಲ್ಲ ಮಾದರಿಯಾಗಿದ್ದು ಶ್ರೀ ಬಾಹುಬಲಿ ಸ್ವಾಮಿಯ ತ್ಯಾಗ, ಅಹಿಂಸೆ, ವೈರಾಗ್ಯ ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವುದು ಅಗತ್ಯವಾಗಿದ್ದು ಈ ಕೃತಿ ಅಧ್ಯಯನಶೀಲರಿಗೆ ಮತ್ತು ಯುವ ಜನತೆಗೆ ತಲುಪಿಸುವ ಕಾರ್ಯ ಆಗಬೇಕಾಗಿದ್ದು ಇದಕ್ಕೆ ಸಹಕಾರ ಸಂಪೂರ್ಣ ಅಗತ್ಯವಾಗಿದೆ ಎಂದು ಭರವಸೆ ನೀಡಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಯಾಘನ ಧಾರವಾಡಕರ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ ತಂಗಾ, ಜೈನ ಸಮಾಜದ ಹಿರಿಯ ಮುಖಂಡರಾದ ದೀಪಕ ಪಂಡಿತ, ಅರಿಹಂತ ಪಾಟೀಲ, ರಾಜಕುಮಾರ ಕಿವಡೆ ಉಪಸ್ಥಿತರಿದ್ದರು. ಭಾರತೀಯ ಜೈನ್ ಮಿಲನ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಣಚಗಿ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರಮೇಶ ಬೆಳಕೇರಿ ವಂದಿಸಿದರು.
ಈ ಸಂದರ್ಭದಲ್ಲಿ ಅನೀಲ ಭಸ್ಮೆ, ಮಹಾದೇವ ಗಂವಾರ, ಅಂಬಾರಾಯ ಬೆಳಕೋಟಿ, ಗುರುರಾಜ ಕುಲಕರ್ಣಿ ನಾಗೂರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…