ಬಿಸಿ ಬಿಸಿ ಸುದ್ದಿ

ನಾಡು ನುಡಿಗಾಗಿ ಕರವೇ ಕಾರ್ಯ ಶ್ಲಾಘನೀಯ: ಶಾಸಕ ರಾಜುಗೌಡ

ಸುರಪುರ: ನಾಡು ನುಡಿ ನೆಲ ಜಲ ಭಾಷೆಯ ವಿಷಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಾಕಾರ ಮುಂಚುಣಿಯಲ್ಲಿ ನಿಲ್ಲುತ್ತದೆ.ಕರವೇ ಕಾರ್ಯ ಶ್ಲಾಘನೀಯವಾದುದಾಗಿದೆ ಎಂದು ಶಾಸಕ ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ಕರವೇ ವತಿಯಿಂದ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ೧೭ನೇ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನಾಡು ಕಂಡ ಮಹಾನ್ ನಟ ಮತ್ತು ಅತ್ಯೂತ್ತಮ ಸಮಾಜ ಸೇವಕ ಹಾಗು ನನ್ನ ಸಹೋದರನಂತಿದ್ದ ನಟ ಪುನೀತ್ ರಾಜಕುಮಾರ ಅವರ ನಿಧನ ನಾಡಿಗೆ ಆದ ದೊಡ್ಡ ಆಘಾತವಾಗಿದೆ,ಅಂತಹ ಮೇರು ನಟನ ಹೆಸರನ್ನು ಈ ವೇದಿಕೆಗೆ ಇಟ್ಟಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದು ಭಾವುಕರಾಗಿ ನುಡಿದರು.ಅಲ್ಲದೆ ಇದೇ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಬ್ಬರು ನಟ ಪುನೀತ್ ಕುರಿತು ಸ್ವರಚಿತ ಕವನವೊಂದನ್ನು ವಾಚಿಸಿ ಎಲ್ಲರಲ್ಲಿ ಪುನೀತ್ ಅವರ ಕುರಿತಾದ ಅಭಿಮಾನ ಇಮ್ಮಡಿಗೊಳಿಸಿದರು.

ನಂತರ ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ,ರಾಜ್ಯದಲ್ಲಿ ಕಳೆದ ೨೨ ವರ್ಷಗಳಿಂದ ಕರವೇ ನಾಡು ನುಡಿ ಸೇವೆ ಮಾಡಿಕೊಂಡು ಬರುತ್ತಿದೆ,ಅದರಂತೆ ತಾಲೂಕಿನಲ್ಲಿ ೧೭ ವರ್ಷದಿಂದ ಸಂಘಟನೆ ನಾಡು ಜನ ಸೇವೆ ಮಾಡುತ್ತಾ ಬರುತ್ತಿದೆ.ಅಲ್ಲದೆ ಈಬಾರಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುವೆಂಪು ಪ್ರಶಸ್ತಿ ನೀಡುತ್ತಿದೆ,ಜೊತೆಗೆ ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ವಿಶೇಷ ಸನ್ಮಾನವನ್ನು ನೆರವೇರಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅಕ್ಷರದಾಸೋಹ ಇಲಾಖೆ ಎಡಿ ಮೌನೇಶ ಕಂಬಾರ,ಪಿಎಸ್‌ಐ ಕೃಷ್ಣಾ ಸುಬೇದಾರ್,ಪೊಲೀಸ್ ಪೇದೆ ದಯಾನಂದ ಜಮಾದಾರ,ಪತ್ರಕರ್ತರಾದ ರಾಜು ಕುಂಬಾರ,ಶ್ರೀಕರ ಭಟ್ ಜೋಷಿ,ಡಾ: ಎಸ್.ಎಸ್.ಗುಬ್ಬಿ,ಶಿಕ್ಷಕ ಈಶ್ವರ ಗೋನಾಲ,ಪ್ರಗತಿಪರ ರೈತ ಹನುಮೇಶ ಗೌಡ,ನರ್ಸಿಂಗ್ ಆಫಿಸರ್ ಪರಶುರಾಮ,ಪಿಡಿಓ ಜಯಚಾರ್ಯ ಪುರೋಹಿತ್ ಇವರುಗಳಿಗೆ ಕುವೆಂಪು ಪ್ರಶಸ್ತಿ ಪ್ರದಾನ ಹಾಗು ಗೌಡಾ ಪಡೆದ ಡಾ:ಚೆನ್ನಮಲ್ಲಿಕಾರ್ಜು ಶಿವಾಚಾರ್ಯ,ಶ್ರೇಷ್ಠ ವರ್ತಕ ಪ್ರಶಸ್ತಿ ಪಡೆದ ಕಿಶೋರಚಂದ್ ಜೈನ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಅಶೋಕ ಸಾಲವಾಡಗಿ ಸೇರಿದಂತೆ ಅನೇಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ನಂತರ ಸರಿಗಮಪ ಕಲಾವಿದರಾದ ಸುನೀಲ್ ಗಜಗೊಂಡ,ಸಾಕ್ಷಿ ಕಲ್ಲೂರ ಮತ್ತು ಜ್ಞಾನೇಶ್ ಇವರಿಂದ ಗಾಯನ ಮತ್ತು ಜ್ಯೂ ಉಪೇಂದ್ರ ತಂಡದಿಂದ ಸರಮಂಜರಿ ಮತ್ತು ಸ್ಥಳಿಯ ಕಲಾವಿದರಿಂದ ಗಾಯನ ಕಾರ್ಯಕ್ರಮ ಜರುಗಿತು.ಶಿವಮೂರ್ತಿ ಶಿವಾಚಾರ್ಯರು ದೇವಾಪುರ,ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಲಕ್ಷ್ಮೀಪುರ,ಸಿದ್ದರಾಮಾನಂದ ಮಹಾಸ್ವಾಮಿ ಕನಕ ಗುರುಪೀಠ ತಿಂಥಣಿ ಬ್ರೀಜ್,ಸಯ್ಯದ್ ರಜಾಕ್ ಪಾಷಾ ಖಾದ್ರಿ ಸುರಪುರ,ತೀರ್ಥ ಗುರೂಜಿ ಜೈನ್ ಮಂದಿರ,ಫಾಸ್ಟರ್ ಮೆಥೋಡಿಸ್ಟ್ ಚರ್ಚ್ ಸಾನಿಧ್ಯವಹಿಸಿದ್ದರು.

ರಾಜಾ ಹನುಮಪ್ಪ ನಾಯಕ (ತಾತಾ) ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು,ವೇದಿಕೆ ಮೇಲೆ ರಾಜಾ ಮುಕುಂದನಾಯಕ, ವೇಣುಮಾಧವ ನಾಯಕ,ಮಹೇಶ ಪಾಟೀಲ್,ನರಸಿಂಹಕಾಂತ ಪಂಚಮಗಿರಿ,ಬಲಭೀಮನಾಯಕ ಬೈರಿಮಡ್ಡಿ,ಟಿ.ಎನ್.ಭೀಮುನಾಯಕ ಇದ್ದರು.ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಅಧ್ಯಕ್ಷತೆ ವಹಿಸಿದ್ದರು.ಕರವೇ ಜಿಲ್ಲಾ ಮತ್ತು ಎರಡು ತಾಲೂಕಿನ ಪದಾಧಿಕಾರಿಗಳು ಹಾಗು ಸಾವಿರಾರು ಜನ ಭಾಗವಹಿಸಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

6 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

6 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago