ಬಿಸಿ ಬಿಸಿ ಸುದ್ದಿ

ಅತ್ಯಂತ ಸರಳ, ಸುಲಲಿತ ಶ್ರೀಮಂತ ಭಾಷೆ ಕನ್ನಡ: ಮರಿಯಪ್ಪ ಹಳ್ಳಿ

ಶಹಾಬಾದ :ಅತ್ಯಂತ ಸರಳ, ಸುಲಲಿತ ಶ್ರೀಮಂತ ಭಾಷೆಯಾದ ಕನ್ನಡವನ್ನು ಬಳಸುವ ಮೂಲಕ ಉಳಿಸುವ ಕೆಲಸ ಪ್ರತಿಯೊಬ್ಬ ನಾಗರಿಕರಿಂದಾಗಬೇಕಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ಹೊನಗುಂಟಾ ಕನ್ನಡ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಅಂದು ಕನ್ನಡದ ಜಾಗೃತಿ, ಅಸ್ಮಿತೆಯನ್ನು ಮೂಡಿಸಿದ ೧೯೮೨ ರ ಗೋಕಾಕ್ ಚಳವಳಿಯ ಸ್ಮರಣೆ ನಾವು ಮಾಡಿಕೊಳ್ಳಬೇಕಿದೆ. ಕಾರಣ ಸಾಮಾನ್ಯ ಜನತೆಯಲ್ಲೂ ಕನ್ನಡ ಜಾಗೃತಿ ಮೂಡಿಸಿದ್ದ ಗೋಕಾಕ್ ಚಳುವಳಿ, ಡಾ. ರಾಜ್ ಕುಮಾರ್ ರವರ ಮುಂದಾಳತ್ವದ ಪಾಲ್ಗೊಳ್ಳುವಿಕೆಯಿಂದ ಮನೆ ಮನೆಗೂ ತಲುಪುವಂತಾಗಿತ್ತು. ಈ ಯಶಸ್ವಿ ಚಳುವಳಿಯನ್ನು ಮೆಲುಕು ಹಾಕಿ,ಕನ್ನಡವನ್ನು ರಕ್ಷಣೆ ಮಾಡುವಲ್ಲಿ ಕನ್ನಡಪರ ಸಂಘಟನೆಗಳು ಮುಂದಾಗಬೇಕೆಂದು ಹೇಳಿದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ನಮ್ಮ ನಾಡಿನ ಭಾ?, ನೆಲ ಮತ್ತು ಜಲ ವಿ?ಯಕ್ಕೆ ಧಕ್ಕೆಯುಂಟಾದರೆ ಕರವೇ ಅದರ ರಕ್ಷಣೆ ಮಾಡುವುದಲ್ಲದೇ ಅದಕ್ಕಾಗಿ ಯಾವ ತ್ಯಾಗಕ್ಕಾದರೂ ಕರವೇ ಕಾರ್ಯಕರ್ತರು ಸಿದ್ದ ಎಂದರಲ್ಲದೇ.ಇಂದು ಕನ್ನಡ ಭಾಷೆ ಉಳಿದಿದೆ ಎಂದರೆ ಅದು ಗ್ರಾಮೀಣ ಪ್ರದೇಶಗಳಲ್ಲಿ.ಆದ್ದರಿಂದ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಮೂಲಕ
ಕನ್ನಡದ ಉಳಿವಿಗಾಗಿ ನೆಲ-ಜಲದ ರಕ್ಷಣೆಗಾಗಿ ಕರವೇ ಕಂಕಣಬದ್ದವಾಗಿದೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ಕನ್ನಡ ನೆಲ ಹೆಸರಾಗದೇ ನಮ್ಮೆಲ್ಲರ ಉಸಿರಾಗಬೇಕು ಎಂದು ಹೇಳಿದರು.

ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫೀರೋಜಬಾದ, ಹೊನಗುಂಟಾ ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಮಲ್ಲಪ್ಪ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಶಿಕ್ಷಕ ಸಿದ್ಧಲಿಂಗ ಬಾಳಿ, ಸೋಮಶೇಖರ ನಂದಿಧ್ವಜ, ಬಿಜೆಪಿ ಮುಖಂಡ ರವಿ ವಿಠ್ಠಲ ನಾಯಕ, ದೇವೆಂದ್ರ ಕಾರೊಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಕರವೇ ಜಿಲ್ಲಾಧ್ಯಕ್ಷ ಸಂತೋಷ ಚೌಧರಿ,ಗೌರವಾಧ್ಯಕ್ಷ ಮಂಜು ಕುಸನೂರ, ಚಿತ್ತಾಪೂರ ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ, ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಎಎಸ್‌ಐ ಸಾತಲಿಂಗಪ್ಪ, ವಾಡಿ ಕರವೇ ಅಧ್ಯಕ್ಷ ಸಿದ್ದು ಪೂಜಾರಿ, ವಿವಿಧ ವಲಯದ ಅಧ್ಯಕ್ಷರಾದ ಶ್ರೀನಿವಾಸ ವಗ್ಗರ್, ನಾಗೇಂದ್ರ ಜಡಿ, ಗ್ರಾಪಂ ಸದಸ್ಯ ಸಂಗಣ್ಣ ಇಜೇರಿ,ಸಿದ್ದು ವಾರಕರ್, ಪೂಜಪ್ಪ ಮೇತ್ರೆ, ಮರೆಪ್ಪ ಮೇತ್ರೆ,ಮಲ್ಲೇಶಿ ಭಜಂತ್ರಿ, ರಾಯಪ್ಪ ಹುರಮುಂಜಿ ಸೇರಿದಂತೆ ಅನೇಕರು ಇದ್ದರು.
ಹೊನಗುಂಟಾ ಗ್ರಾಮದ ಮುಖಂಡ ಭೀಮಾಶಂಕರ ಖೇಣಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಹೆಚ್.ವಾಯ್.ರಡ್ಡೇರ್,ಲಿಯಾಕತ ಅಲಿಖಾನ್, ಪಿಡಿಓ ನಿಂಗಣ್ಣ ಇಂಗಳಗಿ, ರಾಜ್ಯಮಟ್ಟದ ಕ್ರೀಡಾಪಟು ಸಾಯಬಣ್ಣ ಇಜೇರಿ, ಪ್ರತಿಭಾವಂತ ವಿದ್ಯಾರ್ಥಿಯಾದ ಮೌನೇಶ ನಿಂಗಣ್ಣ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಶರಣು.ಎಮ್.ಗೋಳಾ ನಿರೂಪಿಸಿದರು, ಉಪನ್ಯಾಸಕ ಪೀರಪಾಶಾ ಸ್ವಾಗತಿಸಿದರು, ಮಲ್ಲೇಶಿ ಭಜಂತ್ರಿ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago