ಫರತಾಬಾದ; ಸಮೀಪದ ಹೊನ್ನಕೀರಣಗಿ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರ್ಕಾರಿ ಫ್ರೌಢಶಾಲೆಯಲ್ಲಿ ಅದ್ದೂರಿಯಿಂದ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮದಿನದ ಸವಿ ನೆನಪಿಗಾಗಿ ಶಿಕ್ಷಕರಿಂದ ಮಕ್ಕಳ ದಿನಾಚರಣೆಯನ್ನು ನಡೆಸಿಕೊಟ್ಟರು.
ವೇದಿಕೆಯ ಮೇಲೆ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಸತ್ ಮುಖ್ಯಮಂತ್ರಿ ಭೀಮಶಂಕರ್ ಅವರು ವಹಿಸಿ ಮಾತನಾಡಿದರು. ವಿದ್ಯಾರ್ಥಿನಿ ಕುಮಾರಿ. ರಾಧಿಕಾ ಗುತ್ತೇದಾರ ಮಾತನಾಡಿ ನಮ್ಮ ಏಳಿಗೆಗಾಗಿ ತಂದೆ ತಾಯಿಯರು ಹಗಲಿರುಳು ದುಡಿಯುತ್ತಿದ್ದಾರೆ. ಅವರ ಕನಸನ್ನು ನನಸಾಗಿಸೋಣ ಇಂತಹ ಪೋಷಕರನ್ನು ಪಡೆದ ನಾವೇ ಧನ್ಯರು ಎಂಬ ಕಿವಿ ಮಾತನ್ನು ಶಾಲಾ ವಿದ್ಯಾರ್ಥಿಗಳಿಗೆ ಭಾಷಣದಲ್ಲಿ ತಿಳಿಸಿದರು. ಮತ್ತೋರ್ವ ವಿದ್ಯಾರ್ಥಿನಿ ಕುಮಾರಿ. ನೀಲಮ್ಮ ವೀರಣ್ಣ ಸಿನ್ನೂರ ನೆಹರುರವರ ಮಕ್ಕಳ ಪ್ರೀತಿಯನ್ನು ನೆನೆದು, ಗುರು ಹಿರಿಯರಿಗೆ ಗೌರವಿಸುವುದು ನಮ್ಮಲ್ಲೆರ ಕರ್ತವ್ಯವೆಂದು ತನ್ನ ಸಹಪಾಠಿಗಳಿಗೆ ಭಾಷಣದಲ್ಲಿ ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ವಾಲಿಬಾಲ್, ಕ್ರಿಕೆಟ್, ಗೋಣಿಚೀಲದ ಆಟ,ಕಾಂಗರೂ ಓಟ, ನಿಂಬೆಹಣ್ಣು ಆಟ, ಕಬ್ಬಡಿ ಮುಂತಾದ ಸ್ಪರ್ಧೆಗಳು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಸಂಸತ್ ಮಂತ್ರಿಗಳು ಹಾಗೂ ತರಗತಿ ನಾಯಕರು ವೇದಿಕೆಯನ್ನು ಅಲಂಕರಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ಶಾಲೆಯ ಮುಖ್ಯಗುರುಗಳಾದ ಬಸಪ್ಪ ಬಿರಾದಾರ, ಶಿಕ್ಷಕರಾದ ರಘುನಾಥ ಹಾಗರಗುಂಡಗಿ, ಚಂದ್ರಕಾಂತ್ ದೇಶಮುಖ, ವಿಜಯಲಕ್ಷ್ಮೀ ಸಜ್ಜನ, ಮಮತಾ, ಮಧುಮತಿ,ಸಾಗರ್, ವಿಜಯಲಕ್ಷ್ಮೀ, ನೀಲಮ್ಮ, ಹಾಗೂ ವಿದ್ಯಾರ್ಥಿಗಳ ಪೋಷಕರು ಇತರರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಶಿಕ್ಷಕಿ ಸಹಜನ ಬೇಗಂ, ನಿರೂಪಣೆಯನ್ನು ಚಿತ್ರಕಲಾ ಶಿಕ್ಷಕರಾದ ಶಿವಪುತ್ರಪ್ಪ ವಿಶ್ವಕರ್ಮ ಮತ್ತು ವಂದನಾರ್ಪಣೆಯನ್ನು ಶಿಕ್ಷಕ ಮಹಮ್ಮದ್ ಅಬ್ದುಲ್ ನಿರ್ವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…