ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯು ‘ಮ್ಯಾಕ್ಸ್ ಲೈಫ್ ಸ್ಮಾರ್ಟ್ ವೆಲ್ತ್ ಇನ್‌ಕಮ್ ಪ್ಲಾನ್‘ ಆರಂಭಿಸುತ್ತಿದೆ. ಇದು ಸಮಗ್ರವಾದ ಜೀವ ವಿಮೆ, ಉಳಿತಾಯ ಯೋಜನೆ. ಜೀವಿತಾವಧಿವರೆಗೆ ಆದಾಯ ಸೇರಿದಂತೆ ದೀರ್ಘಾವಧಿಗೆ ಆದಾಯ ಪಡೆಯುವ ಆಯ್ಕೆ ಇದರಲ್ಲಿದೆ.
· ಹಲವು ಪ್ರಯೋಜನಗಳ ಜೊತೆಯಲ್ಲಿ, ಜೀವನಪರ್ಯಂತ ಆದಾಯ ತಂದುಕೊಡುವ ಜೀವ ವಿಮೆ ಮತ್ತು ಉಳಿತಾಯ ಯೋಜನೆ ಇದು.
· ವ್ಯಕ್ತಿಗೆ ಎರಡನೆಯ ಆದಾಯ ಮೂಲವೊಂದನ್ನು ಸೃಷ್ಟಿಸಿಕೊಳ್ಳಲು ಇದರಲ್ಲಿ ಮೂರು ಆಯ್ಕೆಗಳು ಇರಲಿವೆ
· ವಿಮೆಯ ಅವಧಿ ಪೂರ್ಣಗೊಂಡ ನಂತರದಲ್ಲಿ ಮೊತ್ತವನ್ನು ಪಡೆಯುವ ಅವಕಾಶ ಮತ್ತು ಅದನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಪಡೆದುಕೊಳ್ಳುವ ಅವಕಾಶ
· ಜೀವಿತಾವಧಿವರೆಗೆ ಆದಾಯ ಯೋಜನೆ ಸೇರಿದಂತೆ ಆದಾಯದ ಅವಧಿ ಎಷ್ಟಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ
ಬೆಂಗಳೂರು, ನವೆಂಬರ್ 15, 2021: ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿ. (ಮ್ಯಾಕ್ಸ್ ಲೈಫ್/ಕಂಪನಿ), ‘ಮ್ಯಾಕ್ಸ್ ಲೈಫ್ ಸ್ಮಾರ್ಟ್ ವೆಲ್ತ್ ಇನ್‌ಕಮ್ ಪ್ಲಾನ್’ ಯೋಜನೆಯನ್ನು ಆರಂಭಿಸಿರುವುದಾಗಿ ಇಂದು ಪ್ರಕಟಿಸಿದೆ.
ಇದು ಸಮಗ್ರವಾದ, ಮಾರುಕಟ್ಟೆಯ ಏರಿಳಿತಗಳ ಜೊತೆ ತಳುಕು ಹಾಕಿಕೊಂಡಿರದ ಹಾಗೂ ವಿಮೆ ಪಡೆದವರಿಗೆ ಕಾಲಕಾಲಕ್ಕೆ ಬೋನಸ್ ಅಥವಾ ಲಾಭಾಂಶ ತಂದುಕೊಡುವ ವೈಯಕ್ತಿಕ ಜೀವ ವಿಮೆ ಉಳಿತಾಯ ಯೋಜನೆ. ಮ್ಯಾಕ್ಸ್ ಲೈಫ್ ಕಂಪನಿಯ ಈ ಹಣಕಾಸು ಉತ್ಪನ್ನವು, ವಿಮೆ ಖರೀದಿಸಿದವರಿಗೆ ತಮ್ಮ ಕುಟುಂಬದ ಹಾಗೂ ತಮ್ಮ ಪ್ರೀತಿಪಾತ್ರರ ಹಣಕಾಸಿನ ಅಗತ್ಯಗಳನ್ನು ಈಡೇರಿಸಲು ಪರಿಪೂರ್ಣವಾಗಿದೆ. ಇದರಲ್ಲಿ ಹೆಚ್ಚುವರಿ ಆದಾಯ ಪಡೆಯುವ ಆಯ್ಕೆಯೂ ಅಡಕವಾಗಿದೆ. ಈ ಯೋಜನೆಯು ಹಣಕಾಸಿನ ವಿಚಾರದಲ್ಲಿ ಸುರಕ್ಷಿತವಾದ ಭವಿಷ್ಯವನ್ನು ಹೊಂದಲು ಬೇರೆ ಬೇರೆ ಬಗೆಯ ವಿಮೆ ಸೌಲಭ್ಯ ಹಾಗೂ ಆದಾಯ ಪಡೆಯುವ ಆಯ್ಕೆಗಳನ್ನು ನೀಡುತ್ತದೆ.
‘ಜೀವನ ಅಂದರೆ ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ಕನಸುಗಳನ್ನು ಈಡೇರಿಸಿಕೊಳ್ಳುವುದು. ಭವಿಷ್ಯವು ಚೆನ್ನಾಗಿ ಇರಬೇಕು ಎಂಬ ಬಯಕೆಯೊಂದಿಗೆ ಕೆಲಸ ಮಾಡುತ್ತ, ಪ್ರೀತಿಪಾತ್ರರಿಗೆ ವರ್ತಮಾನದಲ್ಲಿ ಸಂತಸ ತಂದುಕೊಡುವ ಇಂಥ ಮೈಲಿಗಲ್ಲುಗಳ ಮಹತ್ವ ಏನು ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ಹೊಸದಾಗಿ ಆರಂಭಿಸಿರುವ ಮ್ಯಾಕ್ಸ್ ಲೈಫ್ ಸ್ಮಾರ್ಟ್ ವೆಲ್ತ್ ಇನ್‌ಕಮ್ ಪ್ಲಾನ್, ವ್ಯಕ್ತಿಗೆ ಅತ್ಯಂತ ಅಗತ್ಯವಾದ ಕಾಲಘಟ್ಟದಲ್ಲಿ ಹೆಚ್ಚುವರಿ ಆದಾಯ ಮೂಲವನ್ನು ಸೃಷ್ಟಿಸಿಕೊಡುವ ಮೂಲಕ ಜೀವನದ ಉದ್ದಕ್ಕೂ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ.
ಆರ್ಥಿಕ ರಕ್ಷಣೆ ಮತ್ತು ವಿಶ್ವಾಸಾರ್ಹತೆಯ ಶಕ್ತಿಯನ್ನು ಒಗ್ಗೂಡಿಸಿ ಈ ಹಣಕಾಸಿನ ಉತ್ಪನ್ನವು ಎಲ್ಲ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ, ಬಹುಕಾಲದವರೆಗೆ ವಿಮಾ ರಕ್ಷಣೆಯನ್ನೂ ನೀಡುತ್ತದೆ‘ ಎಂದು ಮ್ಯಾಕ್ಸ್ ಲೈಫ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ತ್ರಿಪಾಠಿ ಹೇಳಿದ್ದಾರೆ.
ಮ್ಯಾಕ್ಸ್ ಲೈಫ್ ಸ್ಮಾರ್ಟ್ ವೆಲ್ತ್ ಇನ್‌ಕಮ್ ಯೋಜನೆಯ ಪ್ರಮುಖ ಅಂಶಗಳು
ವ್ಯಕ್ತಿಗೆ ಬಹಳ ಬೇಗ ಇನ್ನೊಂದು ಆದಾಯ ಬೇಕೋ ಅಥವಾ ತುಸು ವರ್ಷಗಳ ನಂತರದಲ್ಲಿ ಬೇಕೋ ಎಂಬುದನ್ನು ಆಧರಿಸಿ ಈ ಯೋಜನೆಯ ಅಡಿಯಲ್ಲಿ ಪ್ರತ್ಯೇಕ ಆಯ್ಕೆಗಳನ್ನು ಹೊಂದುವ ಅವಕಾಶ ಇದೆ.
1) ಮತ್ತೊಂದು ಆದಾಯ ಮೂಲವನ್ನು ಹೊಂದಲು ಮೂರು ಆಯ್ಕೆಗಳು
ಬಹುಬೇಗ ಆದಾಯ, ಬಹುಬೇಗ ಆದಾಯ ಪಡೆಯುವುದರ ಜೊತೆಗೆ ನಿಶ್ಚಿತವಾದ ಮನಿ ಬ್ಯಾಕ್ ಅಥವಾ ತಡವಾಗಿ ಆದಾಯ ಪಡೆಯುವ ಆಯ್ಕೆಗಳನ್ನು ತೆಗೆದುಕೊಳ್ಳಬಹುದು. ಈ ಎಲ್ಲ ಆಯ್ಕೆಗಳು ಆದಾಯದ ಭರವಸೆ, ಮನಿ ಬ್ಯಾಕ್‌ನ ಭರವಸೆ ನೀಡುತ್ತವೆ. ಕಂಪನಿಯ ಕಡೆಯಿಂದ ಘೋಷಣೆ ಆದಾಗ ಬೋನಸ್ ರೂಪದಲ್ಲಿ ನಗದನ್ನು ಕೂಡ ನೀಡಲಾಗುತ್ತದೆ.
ಬಹುಬೇಗ ಆದಾಯ ಪಡೆಯುವ ಹಾಗೂ ತಡವಾಗಿ ಆದಾಯ ಪಡೆಯುವ ಆಯ್ಕೆಗಳನ್ನು ತೆಗೆದುಕೊಂಡವರಿಗೆ 25 ವರ್ಷಗಳವರೆಗೆ ಅಥವಾ ವಿಮೆಯ ಅವಧಿ ಪೂರ್ಣವಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ನಿಶ್ಚಿತ ಆದಾಯವನ್ನು ನೀಡಲಾಗುತ್ತದೆ. ‘ಬಹುಬೇಗ ಆದಾಯದ ಜೊತೆ ನಿಶ್ಚಿತವಾದ ಮನಿ ಬ್ಯಾಕ್‘ ಆಯ್ಕೆಯನ್ನು ಪಡೆದವರಿಗೆ ನಿಗದಿತ ಅವಧಿಗಳಲ್ಲಿ ಮನಿ ಬ್ಯಾಕ್ ರೂಪದಲ್ಲಿ ಹಣ ನೀಡಲಾಗುತ್ತದೆ.
2) ವಿಮೆಯ ಅವಧಿ ಪೂರ್ಣಗೊಂಡ ನಂತರ ಪಡೆಯುವ ಮೊತ್ತವನ್ನು ಅಗತ್ಯಕ್ಕೆ ಅನುಗುಣವಾಗಿ ಪಡೆಯುವ ಅವಕಾಶ
ವಿಮೆಯ ಅವಧಿಯು ಪೂರ್ಣಗೊಂಡ ನಂತರದಲ್ಲಿ ನೀಡುವ (ನಗದು ಬೋನಸ್ ಮತ್ತು ನಿಶ್ಚಿತ ಆದಾಯ) ಮೊತ್ತವನ್ನು ವಿಮೆಯ ಅವಧಿಯಲ್ಲಿ ವ್ಯಕ್ತಿಯು ತನ್ನ ಅಗತ್ಯಕ್ಕೆ ಅನುಗುಣವಾಗಿ ಪಡೆದುಕೊಳ್ಳಲು ಅವಕಾಶ ಇದೆ. ವಿಮೆ ಚಾಲ್ತಿಯಲ್ಲಿ ಇರುವ ಯಾವುದೇ ಸಂದರ್ಭದಲ್ಲಿ ವ್ಯಕ್ತಿಯು, ಈ ಮೊತ್ತವನ್ನು ಪೂರ್ತಿಯಾಗಿ ಅಥವಾ ಆಂಶಿಕವಾಗಿ ಹಿಂದಕ್ಕೆ ಪಡೆಯಬಹುದು.
ವ್ಯಕ್ತಿಯು ಈ ಮೊತ್ತವನ್ನು ಪಡೆದುಕೊಂಡಿರಲಿಲ್ಲ ಎಂದಾದರೆ, ವಿಮೆಯ ಅವಧಿ ಪೂರ್ಣಗೊಂಡ ನಂತರ ಅಥವಾ ವ್ಯಕ್ತಿಯು ಮರಣ ಹೊಂದಿದಲ್ಲಿ ಅಥವಾ ವ್ಯಕ್ತಿಯು ವಿಮಾ ಪಾಲಿಸಿಯನ್ನು ಹಿಂದಿರುಗಿಸಿದಲ್ಲಿ ಆ ಮೊತ್ತ ಮತ್ತು ಯೋಜನೆಗೆ ಸಂಬಂಧೀಸಿದ ಇತರ ಹಣಕಾಸಿನ ಲಾಭಗಳನ್ನು ಒಗ್ಗೂಡಿಸಿ ನೀಡಲಾಗುತ್ತದೆ. ವಿಮಾ ಅವಧಿ ಪೂರ್ಣಗೊಂಡ ನಂತರದಲ್ಲಿ ಕೊಡುವ ಮೊತ್ತಕ್ಕೆ ಆರ್‌ಬಿಐ ನಿಗದಿ ಮಾಡಿರುವ ರಿವರ್ಸ್ ರೆಪೊ ದರಕ್ಕೆ ಸಮನಾದ ಬಡ್ಡಿಯನ್ನು ನೀಡಲಾಗುತ್ತದೆ. ಬಡ್ಡಿಯ ಮೊತ್ತವನ್ನು ಪ್ರತಿ ವರ್ಷ ಪುನರ್ ಪರಿಶೀಲನೆ ನಡೆಸಲಾಗುತ್ತದೆ.
3) ಎರಡನೆಯ ವರ್ಷದಿಂದ ಆರಂಭಿಸಿ ಜೀವಿತಾವಧಿವರೆಗೆ ಆದಾಯ ಸೇರಿದಂತೆ ಆದಾಯದ ಅವಧಿಯ ಆಯ್ಕೆ
100 ವರ್ಷ, 85 ವರ್ಷ ಅಥವಾ 75 ವರ್ಷ ವಯಸ್ಸಿನವರೆಗೆ ಆದಾಯನ್ನು ಪಡೆಯುವ ಹಾಗೂ ಜೀವ ವಿಮೆಯ ರಕ್ಷೆಯನ್ನು ಪಡೆಯುವ ಆಯ್ಕೆಯನ್ನು ಇದು ನೀಡುತ್ತದೆ.
4) ತುಸು ಹೆಚ್ಚಿನ ಪ್ರೀಮಿಯಂ ಪಾವತಿಸಿದರೆ ಹೆಚ್ಚುವರಿ ರಕ್ಷಣೆ
ವ್ಯಕ್ತಿಗಳು ತಮಗೆ ಅಗತ್ಯವಿರುವ ರೀತಿಯಲ್ಲಿ ವಿಮೆ ರಕ್ಷೆಯನ್ನು ಬದಲಿಸಿಕೊಳ್ಳಲು ಕೆಲವು ಅವಕಾಶಗಳು ಇವೆ. ತುಸು ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸಿದರೆ ಈ ಸೌಲಭ್ಯ ಸಿಗುತ್ತದೆ. ವಿಮೆಯನ್ನು ಮುಂದುವರಿಸುವ ಆಯ್ಕೆಯನ್ನು ಪಡೆದುಕೊಂಡರೆ, ವಿಮೆಯ ಅವಧಿ ಪೂರ್ಣಗೊಂಡ ನಂತರದಲ್ಲಿ ಸಿಗುವ ಸೌಲಭ್ಯಗಳು, ವಿಮಾ ಸೌಲಭ್ಯ ಪಡೆದವರ ಮರಣದ ನಂತರದಲ್ಲಿ ಕೂಡ ಹೆಚ್ಚುವರಿ ಪ್ರೀಮಿಯಂ ಇಲ್ಲದೆಯೇ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಮರಣದ ನಂತರದಲ್ಲಿ ಸಿಗುವ ಮೊತ್ತವು ಪಾಲಿಸಿ ಮುಂದುವರಿಸುವ ಆಯ್ಕೆಯು ಯಾವ ರೀತಿಯದ್ದು ಎಂಬುದನ್ನು ಆಧರಿಸಿದೆ.
5) ಯೋಜನೆಯ ಅಡಿಯಲ್ಲಿ ಮೂರು ಬಗೆಯ ವಿನಾಯಿತಿಗಳು ಲಭ್ಯ ಮ್ಯಾಕ್ಸ್ ಲೈಫ್ ಕಂಪನಿಯ ಹಾಲಿ ಗ್ರಾಹಕರಿಗೆ (ಮೊದಲ ವರ್ಷಕ್ಕೆ), ಮಹಿಳೆಯರಿಗೆ (ಎಲ್ಲ ಪ್ರೀಮಿಯಂಗಳ ಮೇಲೆ) ಮತ್ತು ಹೆಚ್ಚಿನ ಮೊತ್ತದ ಸಮ್ ಅಶ್ಯೂರ್ಡ್ ಪಡೆದವರಿಗೆ ಮೆಚ್ಯುರಿಟಿ ರಿಯಾಯಿತಿ ಸೌಲಭ್ಯ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…