ಬಿಸಿ ಬಿಸಿ ಸುದ್ದಿ

ಗುರುವಿನ ಮಾರ್ಗದರ್ಶನದಲ್ಲಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಾರಕೂಡ ಶ್ರೀಗಳ ಕರೆ

ಸುರಪುರ: ಶರಣರು ಹಾಗೂ ಸಂತರ ಸಂಗ,ಪುರಾಣ ಪ್ರವಚನಗಳಲ್ಲಿ ಕಳೆಯುವ ಅಲ್ಪ ಸಮಯವು ಗಂಟೆಗಟ್ಟಲೇ ಕೈಗೊಳ್ಳುವ ಪ್ರಾರ್ಥನೆ ಪೂಜೆಗಳಿಗಿಂತಿ ಮಿಗಿಲು ಹೀಗಾಗಿ ನಮ್ಮ ಹಿಂದೆ ಗುರುವಿನ ಮಾರ್ಗದರ್ಶನ ಇಟ್ಟುಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಚೆನ್ನವೀರ ಶಿವಾಚಾರ್ಯರು ಹೇಳಿದರು.

ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀಗಳ ೫೯ನೇ ಜನ್ಮ ದಿನಾಚರಣೆ ಹಾಗೂ ರಜತ ಕಿರೀಟಧಾರಣೆಯೊಂದಿಗೆ ತುಲಾಭಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ದೇಹಕ್ಕೆ ಕಾಯಿಲೆ ಬಂದರೆ ರೋಗ ನಿವಾರಣೆಗೆ ವೈದ್ಯರು ಬೇಕು ಆದರೆ ಮನಸ್ಸಿಗೆ ನೋವಾದಾಗ ಭವರೋಗ ನಿವಾರಣೆಗೆ ಗುರುವಿನ ಆಶೀರ್ವಾದ ಹಾಗೂ ಮಾರ್ಗದರ್ಶನ ಬೇಕು ಎಂದು ಹೇಳಿದ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮಕ್ಕೂ ಹಾರಕೂಡಾ ಮಠಕ್ಕೂ ಅಧ್ಯಾತ್ಮದ ಸಂಬಂಧವಿದ್ದು ಹಾರಕೂಡದ ಚನ್ನಬಸವ ಶಿವಯೋಗಿಗಳು ಈ ನೆಲದಲ್ಲಿ ನೆಲೆಸಿ ಓಡಾಡಿದ್ದಾರೆ ಭಕ್ತರ ಚಿತ್ತವನ್ನು ಶುದ್ಧಿ ಮಾಡಿದ್ದಾರೆ ಹೀಗಾಗಿ ಇಲ್ಲಿನ ಭಕ್ತಿ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ ರುಕ್ಮಾಪುರ ಕೊಟ್ಟೂರು ಬಸವೇಶ್ವರರ ದರ್ಶನ ಮಾಡಿದಲ್ಲಿ ರೋಗ ನಿವಾರಣೆಯಾಗುತ್ತದೆ ವಿಶೇಷವಾಗಿ ಸಗರನಾಡು ಎಂದೇ ಖ್ಯಾತಿ ಪಡೆದಿರುವ ಈ ನೆಲವು ಇತಿಹಾಸ ಪುಟಗಳಲ್ಲಿ ಸಮಾಜ ಸೇವೆ,ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು ಜೀವನದಲ್ಲಿ ಒಳ್ಳೆಯವರಾಗಿ ನಡೆಯಿರಿ ಹಾಗೂ ಒಳ್ಳೆಯದನ್ನೇ ಮಾಡಿ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಲೋಕಸಭಾ ಸದಸ್ಯ ಉಮೇಶ ಜಾಧವ್ ಮಾತನಾಡಿ ಹಾರಕೂಡ ಮಠ ಹಾಗೂ ಮಠದ ಈಗಿನ ಶ್ರೀಗಳು ಮಾನವೀಯತೆಯ ಪ್ರತೀಕವಾಗಿದ್ದು ಯಾವುದೇ ತಾರತಮ್ಯವಿಲ್ಲದೇ ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಾ ಬಂದಿದ್ದಾರೆ ಮಾನವೀಯತೆಯ ಸಾಕಾರ ಮೂರ್ತಿಯಾಗಿರುವ ಹಾರಕೂಡ ಶ್ರೀಗಳಂತಹ ಗುರುಗಳು ಎಲ್ಲಿಯೂ ನಾನು ನೋಡಿಲ್ಲ ನನ್ನ ಸ್ವಕ್ಷೇತ್ರ ಚಿಂಚೋಳಿಯ ಜನತೆ ಮೇಲೆ ಶ್ರೀಗಳ ಆಶೀರ್ವಾದ ಬಹಳಷ್ಟು ಇದೆ ಎಂದು ಹೇಳಿದ ಅವರು ಮಹಾಮಾರಿ ಕೋರೋನಾ ಸೋಂಕನ್ನು ತಡೆಗಟ್ಟಲು ದೇಶದ ಜನರಿಗೆ ಉಚಿತ ವ್ಯಾಕ್ಸಿನ್ ನೀಡುವ ಮಹತ್ವ ಕಾರ್ಯವನ್ನು ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ಜಗತ್ತಿಗೆ ಆದರ್ಶಪ್ರಾಯ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದ ಅವರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಶಾಸಕ ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಮಾತನಾಡಿ ನಮ್ಮ ಪಾಪಗಳನ್ನು ಕಳೆದು ಬದುಕಿನಲ್ಲಿ ಮೋಕ್ಷ ಸಿಗಲು ಗುರುವಿನ ಆಶೀರ್ವಾದ ಮತ್ತು ಮಾರ್ಗದರ್ಶನ ಬೇಕೆ ಬೇಕು, ಗುರುಗಳ ಆಶೀರ್ವಾದ ಇಲ್ಲದಿದ್ದಲ್ಲಿ ದೇವರು ತನ್ನ ಹತ್ತಿರ ನಮ್ಮನ್ನು ಕರೆದುಕೊಳ್ಳುವದಿಲ್ಲ ಎಂದು ಹೇಳಿದರು,ಅಪಾರ ಭಕ್ತಾದಿಗಳನ್ನು ಪಡದಿರುವ ಹಾರಕೂಡಾ ಶ್ರೀಗಳು ಒಬ್ಬ ಮಹಾನ್ ಗುರುಗಳಾಗಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ,ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವಪ್ಪ ಚೆಟ್ಟಿ ಮಾತನಾಡಿದರು,ವೇದಿಕೆಯಲ್ಲಿ ಡಾಕುಳಗಿಯ ಚನ್ನಬಸವ ಸ್ವಾಮಿಗಳು,ಮಾಜಿ ಸಚಿವ ರೇವುನಾಯಕ ಬೆಳಮಗಿ,ಮಲ್ಲಿನಾಥಸ್ವಾಮಿ ಹಿರೇಮಠ,ಜಿ.ಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ,ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್,ಪ್ರಮುಖರಾದ ರಾಜಾ ಹನುಮಪ್ಪ ನಾಯಕ(ತಾತಾ),ಉದ್ದಿಮೆದಾರರಾದ ಗ್ಯಾನಚಂದ ಜೈನ್,ಚಂದ್ರಕಾಂತ ಪಾಟೀಲ ಸಿರಗಾಪುರ,ವೀರಸಂಗಪ್ಪ ಹಾವೇರಿ,ಅರುಣಕುಮಾರ ಪವಾರ ಉಪಸ್ಥಿತರಿದ್ದರು, ಡಾಶಿವಶಂಕರ ಬಿರಾದಾರ ಕೋಟನೂರ(ಡಿ) ಪ್ರಾರ್ಥನೆ ಗೀತೆ ಹಾಡಿದರು,ಅಂಬಾರಾಯ ಉಗಾಜಿ ಸ್ವಾಗತಿಸಿದರು,ನವಲಿಂಗ ಪಾಟೀಲ ನಿರೂಪಿಸಿ ವಂದಿಸಿದರು,ನಿವೃತ್ತ ಎಸ್.ಪಿ ಸಿ.ಎನ್.ಭಂಡಾರೆ,ನಿವೃತ್ತ ಪ್ರಾಂಶುಪಾಲ ಬಸವರಾಜ ನಿಷ್ಠಿ ದೇಶಮುಖ,ಗುರುಲಿಂಗಪ್ಪ ಮಿಣಜಗಿ,ಡಾ.ಮಲ್ಲೇಶಪ್ಪ ಮಿಣಜಗಿ,ಶಿವಶಂಕ್ರಪ್ಪ ಮಿಣಜಗಿ,ಬಸವರಾಜ ಮಿಣಜಗಿ,ಉಮಾಕಾಂತ ಮಿಣಜಗಿ,ಡಾ.ಬಸವರಾಜ ಬಾವಿ,ಗ್ರಾ.ಪಂ ಮಾಜಿ ಅಧ್ಯಕ್ಷ ಸಂಗಣ್ಣ ಮಿಣಜಗಿ ಇತರರು ಇದ್ದರು.

ರುಕ್ಮಾಪುರ ಗ್ರಾಮದಿಂದ ಕೊಟ್ಟೂರು ಬಸವೇಶ್ವರ ದೇವಸ್ಥಾನದವರೆಗೆ ಸಾರೋಟ ವಾಹನದಲ್ಲಿ ಡೊಳ್ಳು ಮತ್ತು ಹಲಗೆ ವಾದ್ಯಗಳ ಕಲಾವಿದರೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಹಾಗೂ ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ಶಿವಾಚಾರ್ಯರಿಗೆ ಭಕ್ತಾದಿಗಳಿಂದ ರಜತ ಕಿರೀಟ ಧಾರಣೆಯೊಂದಿಗೆ ತುಲಾಭಾರ ನೆರವೇರಿತು ನಂತರ ಕೇಕ್ ಕತ್ತರಿಸುವ ಮೂಲಕ ಹುಟ್ಟಹಬ್ಬವನ್ನು ಆಚರಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago