ಶ್ರೀಹರ್ಷ ಸಾಲಿಮಠರನ್ನು ಪರಿಚಯ

  • # ಕೆ.ಶಿವು.ಲಕ್ಕಣ್ಣವರ

ಯ್ಯಾರೀ ಶ್ರೀಹರ್ಷ ಸಾಲಿಮಠರೂ ಮತ್ತು ಎಲೆಮರೆಯ ಕಾಯಿಯಂತೆ ಇದ್ದ ಶ್ರೀಹರ್ಷ ಸಾಲಿಮಠರನ್ನು ಪರಿಚಯಿಸಿದ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರೂ..!–

ಇತ್ತೀಚೆಗೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಪ್ರೀತಿಯಿಂದ ಕಳಸಿದ ಒಂದು ಪುಸ್ತಕಗಳ ಪಟ್ಟಿ‌ ಅಂಚೆಗೆ ಬಂದಿತು.‌ ಆ ಪಟ್ಟಿಯಲ್ಲಿ ಎರಡು ಪುಸ್ತಕಗಳು ಇದ್ದವು. ಒಂದು ಶೀಹರ್ಷ ಸಾಲಿಮಠರ ‘ಉದಕ ಉರಿದು’ ಮತ್ತು ಹನುಮಂತ ಹಾಲಿಗೇರಿಯವರ ‘ಆಲೈದೇವ್ರು’ ಮತ್ತು ಮತ್ತಿತರ ನಾಟಕಗಳು. ಆ ಪೈಕಿ ಈಗ ನಾನು ಮೊದಲು ಶ್ರೀಹರ್ಷ ಸಾಲಿಮಠರ ಪುಸ್ತಕ ‘ಉದಕ ಉರಿದು’ ಎಂಬುದರ ಬಗೆಗೆ ಬರೆಯಬೇಕಾಗಿತ್ತು. ಆದರೆ ಮೊದಲು ಈ ನಮ್ಮ ಶ್ರೀಹರ್ಷ ಸಾಲಿಮಠರು ಯಾರು ಎಂಬುದರ ಕುರಿತು, ಅವರನ್ನು ಪರಿಚಯಿಸುವ ಲೇಖನ ಮಾಡುತ್ತೇನೆ, ಮೊದಲು. ಆನಂತರ ಈ ಹರ್ಷ ಸಾಲಿಮಠರ ಈ ‘ಉದಕ ಉರಿದು’ ಪುಸ್ತಕದ ಕುರಿತು ಒಂದು ಪರಿಚಯಾತ್ಮಕ ಲೇಖನ ಮಾಡುತ್ತೇನೆ.

# ಯ್ಯಾರೀ ಶ್ರೀಹರ್ಷ ಸಾಲಿಮಠರು.?!: ಈ ಶ್ರೀಹರ್ಷ ಸಾಲಿಮಠರು ಎಂಬ ಅನಿವಾಸಿ ಭಾರತೀಯ ಲೇಖಕರು. ಮೂಲತಃ ಕಥೆಗಾರರು. ಈ ಶ್ರೀಹರ್ಷ ಸಾಲಿಮಠರು ಕನ್ನಡದ ಜನಪ್ರಿಯ ಕಥೆಗಾರರಲೊಬ್ಬರು ಎಂಬುದೇ ನಮಗೀಗ ಸೋಜಿಗವಾಗಿದ ವಿಷಯವಾಗಿದೆ. ಏಕೆಂದರೆ ಈ ಲೇಖಕ ಶ್ರೀಹರ್ಷ ಸಾಲಿಮಠರು, ತಾವೊಬ್ಬ ಲೇಖಕರು ಎಂಬ ಗುರುತರವಾದ ಜವಾಬ್ದಾರಿಯನ್ನು ಹೊರಲು ಬಹು ಸಂಕೋಚ ಪಟ್ಟವರು. ಇಂತಹ ಲೇಖಕ ಶ್ರೀಹರ್ಷ ಸಾಲಿಮಠರನ್ನು ಹುರುದುಮ್ಮಿಸಿ, ನೀವೊಬ್ಬ ಲೇಖಕರು ಅಲ್ಲದೇ ಕಥೆಗಾರರು ಎಂಬುದನ್ನು ಗುರುತಿಸಿ ಮತ್ತು ಸಾಹಿತ್ಯ ರಚನೆಗೆ ಹಚ್ವಿದವರು ಮತ್ತು ಒಂದು ಪುಸ್ತಕ ರೂಪದಲ್ಲಿ ಈ ‘ಉದಕ ಉರಿದು’ ಎಂಬ ಕಥೆಗಳ ಸಂಗ್ರಹ ತರಲು ಹಚ್ಚಿದ್ದು ನಮ್ಮ ನಿಮಗೆಲ್ಲರಿಗೂ ಗೊತ್ತಿರುವಂತೆ ಸಾಹಿತಿ ಹನುಮಂತ ಹಾಲಿಗೇರಿಯವರು.

ಏಕೆಂದರೆ ಅಲ್ಲಿಯ ವರಗೆ ಶ್ರೀಹರ್ಷ ಸಾಲಿಮಠ ಈ ‘ಉದಕ ಉರಿದು’ ಎಂಬ ಪುಸ್ತಕವನ್ನು ಹೊರತಂದಿರಲೇ ಇಲ್ಲ. ತಮ್ಮೊಳಗೆ ಒಬ್ಬ ಸಾಹಿತಿ ಇದ್ದಾನೆ ಎಂದು ಹೇಳಿಕೊಳ್ಳಲೂ ಸಂಕೋಚ ಪಟ್ಟ ಮತ್ತು ಪಡುತ್ತಿದ್ದ ಶ್ರೀಹರ್ಷ ಸಾಲಿಮಠರನ್ನು ಗುರುತಿಸಿ ನೀನೂ ಒಬ್ಬ ಸಾಹಿತಿ ಎನ್ನುಸುವಷ್ಟರ ಮಟ್ಟಿಗೆ ಈ ಶ್ರೀಹರ್ಷ ಸಾಲಿಮಠರನ್ನು ಪುಸಲಾಯಿಸಿ ಇಂತಹದೊಂದು ಅಂದರೆ ‘ಉದಕ ಉರಿದು’ ಎಂಬ ಸಾಹಿತ್ಯ ರಚನೆಗೆ ಆ ಮತ್ತು ಪುಸ್ತಕ ಹೊರಬರಲು ಕಾರಣರಾದವರೊಬ್ಬರಲ್ಲಿ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯೂ ಎಂಬುದಂತು ನಿಜವಾದ ಸತ್ಯವೂ ಆಗಿದೆ. ಈ ಸಾಹಿತ್ಯದ ಗೀಳಿಗೆಗೆ ಹಚ್ಚಿದವರು ಇದೇ ಸಾಹಿತಿ ಹನುಮಂತ ಹಾಲಿಗೇರಿಯವರು ಎಂಬುದೂ ನನಗಂತೂ ಸ್ಪಷ್ಟವಾಗಿದೆ.

ಇಂತಹ ಈ ಶ್ರೀಹರ್ಷ ಸಾಲಿಮಠ ಬಾಲ್ಯ ಕಳೆದದ್ದು ದಾವಣಗೆರೆಯಲ್ಲಿ. ಅಲ್ಲದೇ ಅಲ್ಲಿಯೇ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು. ಮೈಸೂರಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು. ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಮೇಲೆ ಕೆಲಸದ ನಿಮಿತ್ತವಾಗಿ ಎರಡು ವರ್ಷಗಳ ವರೆಗೂ ಚೆನೈನಲ್ಲಿ ಇದ್ದರು ಸಾಹಿತಿ ಶ್ರೀಹರ್ಷ ಸಾಲಿಮಠರು. ಅಲ್ಲಿಂದ ಮುಂದೆ ಟ್ರಿವೆಂಡ್ರಮ್ ನಲ್ಲಿ ಕೆಲಸಕ್ಕೆ ಸೇರಿದರು ಸಾಹಿತಿ ಶ್ರೀಹರ್ಷ ಸಾಲಿಮಠರು. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದರು ಮತ್ತು ಅಲ್ಲಿಯೇ ಕೆಲಸವನ್ನೂ ಮಾಡಿದರು. ಈಗ ಸದ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ಜೀವನ ನಡೆಸುತ್ತಿದ್ದತ್ತಿದ್ದಾರೆ ಸಾಹಿತಿ ಶ್ರೀಹರ್ಷ ಸಾಲಿಮಠರು.

ಇಂತಹ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಅನೇಕಾನೇಕ ತಾಂತ್ರಿಕ ಸಾಧನಗಳಿಗೆ ಕೊಡುಗೆಯನ್ನು ನೀಡಿದ್ದಾರೆ. ಇವರಿಗೆ ಬಾಲ್ಯದಿಂದಲೂ ಓದು ಮತ್ತು ಬರಹದ ಕಡೆಗೆ ಆಸಕ್ತಿ ಇದ್ದದ್ದು ಈ ಶ್ರೀಹರ್ಷ ಸಾಲಿಮಠರನ್ನು ಒಬ್ಬ ಬರಹಗಾರರನ್ನಾಗಿಸಿತು. ಇವರ ವೈಯಕ್ತಿಕ ಲೈಬ್ರರಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಾಕಿದ್ದಾರೆ ಎಂಬುದೇ ಒಂದು ವಿಶೇಷವಾಗಿದೆ. ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದವರು ಇಷ್ಟೊಂದು ಸಾಹಿತ್ಯಕ ಪುಸ ಸಾಕಿರುವುದಿಲ್ಲ. ಆದರೆ ಈ ಶ್ರೀಹರ್ಷ ಸಾಲಿಮಠರಿಗೆ ಮೊದಲಿಂದಲೂ ಸಾಹಿತ್ಯದ ಗೀಳು ಇತ್ತೆಂಬುದಕ್ಕೆ ಇವರ ಸಾಹಿತ್ಯಿ ಆಚಾರ ವಿಚಾರ ಮತ್ತು ಆ ಸಾಹಿತ್ಯದ ವಿನಿಮಯದ ರೂಢಿ ಇತ್ತೆಂಬುದಕ್ಕೆ ಸಾಕ್ಷಿ ಆಗಿದೆ.

ಮುಖ್ಯವಾಗಿ ಈ ಶ್ರೀಹರ್ಷ ಸಾಲಿಮಠರು ಬರೆದ ಅನೇಕಾನೇಕ ಬರಹಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ‘ಕನ್ನಡ ಪ್ರಭಾ’ವದಲ್ಲಿ ಒಂದು ವಿಜ್ಞಾನ ಅಂಕಣವನ್ನು ಬರೆದವರು. ನೂರಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಬರೆದವರು ಶ್ರೀಹರ್ಷ ಸಾಲಿಮಠರು. ಅಲ್ಲದೇ ಸಾಹಿತ್ಯದ ಬರಹಗಳ ‘ಕೆಂಡಸಂಪಿಗೆ’ಯಲ್ಲಿ ಒಂದು ಅಂಕಣವನ್ನೂ ಬರೆದವರು ಈ ಶ್ರೀಹರ್ಷ ಸಾಲಿಮಠರು. ಇವರ ತಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೊರೆಯುತ್ತಿದ್ದ ಅನೇಕಾನೇಕ ಕಥೆಗಳಲ್ಲಿ ಒಂದಿಷ್ಟು ಪ್ರಮುಖವಾದವುಗಳನ್ನು ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರ ಮತ್ತು ಕೆಲ ಗೆಳೆಯರ ಒತ್ತಾಯಕ್ಕೆ ಇಳಿದು, ಆ ಕಥೆಗಳೆಲ್ಲಾ ಒಂದು ಪುಸ್ತಕದ ರೂಪಕ್ಕಿಳಿದಿವೆ ಈಗ. ಇದುವೇ ಶ್ರೀಹರ್ಷ ಸಾಲಿಮಠರ ಕಥೆಗಳ ಮೊದಲ ಪುಸ್ತಕ ಪ್ರಯತ್ನವೂ ಆಗಿದೆ.

ಆ ಕಥೆಗಳ ಸಂಗ್ರಹವೇ ‘ಉದಕ ಉರಿದು’ ಎಂಬ ಕಥೆಗಳ ಸಂಕಲನವಾಗಿದೆ ಕೂಡ. ಆ ಕಥೆಗಳ ಸಂಕಲನವನ್ನು ಹೊರತಂದವರು ಅದೇ ಸಾಹಿತಿ ಹನುಮಂತ ಹಾಲಿಗೇರಿಯವರು..! ಇಲ್ಲಿಯ ವರೆಗೆ ಸುಮಾರು ಅಧಿಕೃತವಾಗಿ ಶ್ರೀಹರ್ಷ ಸಾಲಿಮಠರು ಬೇರೆ ಬೇರೆ ಆನ್ ಲೈನ್ ಪತ್ರಿಕೆಗಳಲ್ಲಿ ಬರೆದದ್ದು ಸಾವಿರ ಪುಟಗಳಷ್ಟು ಆಗಬಹುದು. ಇವುಗಳಲ್ಲಿ ಸೃಜನಶೀಲ ಬರೆವಣಿಗೆ ಅಂತ ಬರೆದದ್ದು ತುಸು ಕಮ್ಮಿಯೇ ಅನ್ನುತ್ತಾರೆ ಸಾಹಿತಿ ಶ್ರೀಹರ್ಷ ಸಾಲಿಮಠರು. ಆದರೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಹೇಳುತ್ತಾರೆ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಒಬ್ಬ ಸೃಜನಶೀಲ ಬರಹಗಾರರು ಎಂದು. ಅದಕ್ಕಾಗಿಯೇ ಈ ಶ್ರೀಹರ್ಷ ಸಾಲಿಮಠರ ಈ ಒಂದು ಕಥೆಗಳ ಸಂಕಲನವನ್ನು ಹೊರತರುತ್ತಿದ್ದೇವೆ ಎಂದು.

ಹೀಗೆಯೇ ಹೇಳುವ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಏನೇಯಾಗಲಿ ಕನ್ನಡಕ್ಕೊಬ್ಬ ನವನವೀನ ಸಾಹಿತಿಯನ್ನಂತೂ ತರುತ್ತಿರುವುದು ಸ್ವಾಗತಾರ್ಹವಾಗಿದೆ. ಮುಂದೆ ಈ ಕಥೆಗಳ ಸಂಕಲನದ ಕುರಿತು ಒಂದು ವಿಮರ್ಶೆಯನ್ನು ಮಾಡೋಣ. ಈಗ ಬರೀ ಈ ಶ್ರೀಹರ್ಷ ಸಾಲಿಮಠರು ಯಾರು ಎಂಬುದಕ್ಕೆ ಪುರಾವೆಗೆ ಈ ಲೇಖನವೂ..!

emedialine

Recent Posts

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

1 hour ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

6 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

6 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

8 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

20 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420