ಬಿಸಿ ಬಿಸಿ ಸುದ್ದಿ

ಸ್ನೇಹ ಗಂಗಾ ವಾಹಿನಿಯ ಸಮಾಜದ ಆಸ್ತಿ: ಡಾ:ಬಿ.ಪಿ.ಬುಳ್ಳಾ

ಕಲಬುರಗಿ: ನಗರದ ಶ್ರೀಮತಿ ಕಸ್ತೂರಬಾಯಿ.ಪಿ ಬುಳ್ಳಾ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಕಲಬುರಗಿಯ ಗೌರವಾಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಾ:ಬಿ.ಪಿ.ಬುಳ್ಳಾ ಅವರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದ ವರೆಗೆ ಬೆಳೆದು ಬಂದಿದೆ.ಈ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯುವಂತೆ ಮಾಡುವ ಜವಾಬ್ದಾರಿ ಸಮಾಜದ ಮೇಲೆ ಇದೆ.
ನಮ್ಮ ಅವಧಿಯಲ್ಲಿ ಸಂಸ್ಥೆ ಪ್ರಗತಿ ಸಾಧಿಸಿದೆ ಎಂದು ತಾವುಗಳು ನಮಗೆ ಎರಡನೆಯ ಭಾರಿಗೆ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಿರಿ ಎಲ್ಲಾ ಗೌರವಾನ್ವಿತ ಪದವಿದರ ಮತಭಾಂದವರಿಗೆ ಅನಂತ್ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಸಮಾಜದ ಆಸ್ತಿ ಎಂದು ಮಾತನಾಡಿದರು.

ಈಗಾಗಲೆ ಕಾರ್ಯಕಾರಿ ಮಂಡಳಿಯಲ್ಲಿ ಕೈಗೊಂಡ ನಿರ್ದಾರದ್ದಂತೆ ಪ್ರಾಥಮಿಕ ಶಾಲೆಗೆ ಸಂಸ್ಥೆಯ ಸಂಸ್ಥಾಪಕರಾದ ಪ್ರೊ,: ಎಸ್.ಎಸ್.ಆಲಗೂರ ಅವರ ಹೆಸರನ್ನು, ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಕ್ಕೆ ದಿ.ವಿಠಲ ಹೇರೂರು ಅವರ ಹೆಸರನ್ನು ಮತ್ತು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕ್ಕೆ ದಾನಿಗಳಾದ ಶ್ರೀ ಎಸ್.ಎಂ. ಚಾಂದಕವಠೆ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ:ಬಿ.ಜಿ.ನಾಟೀಕಾರ ಸಂಸ್ಥಾಪಕ ಕಾರ್ಯಾಧ್ಯಕ್ಷರು ಮಾತನಾಡುತ್ತಾ ಈ ಸಂಸ್ಥೆ ೧೯೭೯ ರಲ್ಲಿ ತ್ರಿಮೂರ್ತಿಗಳಾದ ಪ್ರೊ: ಎಸ್.ಎಸ್.ಆಲಗೂರ,ಪ್ರೊ:ಬಿ.ಜಿ.ನಾಟೀಕಾರ,ಪ್ರೊ:ಎಲ್.ಬಿ.ಹಿಟ್ಟಿನ ರವರ ಕನಸ್ಸಿನ ಕುಸಾಗಿದ್ದು.ತನ್ನದೆಯಾದ ಮೌಲ್ಯ ಮತ್ತು ಸಿದ್ಧಾಂತಗಳಿಂದ ಬೆಳೆದು ಬಂದ ಸಂಸ್ಥೆ ಆಗಿದೆ.೨೦೧೬ ರಲ್ಲಿ ಡಾ.ಬಿ.ಪಿ.ಬುಳ್ಳಾ ಅವರು ಗೌರವಾಧ್ಯಕ್ಷರಾದ ನಂತರ ಸಂಸ್ಥೆ ಹೆಚ್ಚಿನ ಬೆಳವಣಿಗೆ ಪಡೆಯಿತು.ಅವರಿಗೆ ಸ್ನೇಹ ಗಂಗಾ ವಾಹಿನಿಯ ಅಭಿವೃದ್ಧಿ ಹರಿಕಾರರು ಎಂದರೆ ತಪ್ಪಾಗಲಾರದು.ಸಮಾಜ ನಮಗೇನು ಮಾಡಿದೆ ಎಂಬುವುದು ಮುಖ್ಯವಲ್ಲಾ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂಬುವುದು ಮುಖ್ಯ.ಎಂದು ಮಾತನಾಡಿದರು.

ಶರಣಪ್ಪಾ ಕುಮಸಗಿ, ನೀಲಕಂಠ ಎಮ್ ಜಮಾದಾರ,ಸಿದ್ದು ಬಾನರ,ಪ್ರಕಾಶ ಜಮಾದಾರ, ಶಿವಾನಂದ ಹೊನಗುಂಟಿ,ವೈಭವ ರಾಜಗೋಪಾಲ್ ರೆಡ್ಡಿ, ಬಸವರಾಜ ಹೇರೂರು, ಮಲ್ಲಿಕಾರ್ಜುನ ಜೋಕೆ,ಅನೀಲಕುಮಾರ ನಾಟೀಕಾರ,ವೀರೂಪಾಕ್ಷಪ್ಪಾ ಚಾಂದಕವಠೆ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಬಣ್ಣಾ ವಡಗೇರಿ ವಹಿಸಿದ್ದು.ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಸಮಾಜದ ಬಂಧುಗಳಿಗೆ ಸನ್ಮಾನಿಸಲಾಯಿತು.ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಡಾ:ಬಿ.ಪಿ.ಬುಳ್ಳಾ ಮತ್ತು ಡಾ:ನಾಗಾಬಾಯಿ ಬಿ.ಬುಳ್ಳಾ ದಂಪತಿಗಳಿಗೆ ಸನ್ಮಾನಿಸಿದರು.

ಸಮಾಜದ ಪ್ರಮುಖರಾದ ಶರಣಪ್ಪಾ ಹೊಸೂರು, ಶಿಪುತ್ರಪ್ಪಾ ನಾಟೀಕಾರ,ಅರ್ಜುನ ಜಮಾದಾರ, ಜಗನ್ನಾಥ ಭೀಮಳ್ಳಿಕರ,ಡಾ:ನಾಗಾಬಾಯಿ ಬಿ ಬುಳ್ಳಾ,ಅರುಣಾ ಸದಾಶಂಕರ,ಚೆನ್ನಪ್ಪಾ ಮುನ್ನಳ್ಳಿ, ಸೋಮಶೇಖರ ಹಂಚನಾಳ,ಮಹಾದೇವಪ್ಪಾ ಮಣ್ಣೂರ,ದಶರಥ ಗೋಳಸರ, ಸಿದ್ದಪ್ಪಾ ಮಹಾಗಾಂವ, ರವೀಂದ್ರಕುಮಾರ ಬುಳ್ಳಾ,ರಾಮಲಿಂಗ ನಾಟೀಕಾರ, ಚಂದ್ರಕಾಂತ ತಳವಾರ,ಸೈಬಣ್ಣಾ ಮಹಾಂತಗೋಳ, ಅಮೃತ ಪಾಟೀಲ,ದೆವೇಂದ್ರ ಆನೆಗುಂದಿ, ರಾಜೇಂದ್ರ ಝಳಕಿ, ಚಂದ್ರಕಾಂತ ಖಾನಾಪುರ,ಅವ್ವಣ್ಣಾ ತಳವಾರ, ರಾಜು ಸೊನ್ನ,ಶ್ರೀ ಕಾಂತ ಆಲೂರು ಹಾಜರಿದ್ದರು.ಪ್ರಾರಂಭದಲ್ಲಿ ಶ್ರಿ ಮತಿ ಸುಜಾತ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು.ಪ್ರಮೋದ ಕಟ್ಟಿ ಸ್ವಾಗತಿಸಿದರು.ಧರ್ಮರಾಜ ಜವಳಿ ಕಾರ್ಯಕ್ರಮ ನಿರೂಪಿಸಿದರು.,ಅನೀಲಕುಮಾರ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಾಲಿಂಗ ಕೋಬಾಳ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

10 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago