ಬಿಸಿ ಬಿಸಿ ಸುದ್ದಿ

ಕಲಬುರಗಿ ಜಿಲ್ಲಾ ಕಸಾಪ ಸಾರಥ್ಯ ಸಾಹಿತಿಗೆ ದಕ್ಕಲಿ

ಸಂಪನ್ಮೂಲಗಳ ಸದ್ಬಳಕೆಯಾಗದಿದ್ದರೆ ಯಾವ ಪ್ರಗತಿಯೂ ಆಗದು. ಒಂದು ಬೌಗೋಳಿಕ ವಲಯ ಹಿಂದುಳಿಯುವಿಕೆಗೆ ಇದೂ ಒಂದು ಕಾರಣ. ಶರಣರು, ಸೂಫಿ ಸಂತರು ನಡೆದಾಡಿದ ನೆಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲರವ ಕಡಿಮೆಯೇ. ಕಲಬುರಗಿ ಭಾಗದ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆಗಾರಿಕೆಯನ್ನು ನ್ಯಾಯಬದ್ಧವಾಗಿ ನಿಭಾಯಿಸಿಲ್ಲ. ಹೀಗಾಗಿಯೇ ನಾವು ಕಲಾವಿದರೆಂದರೆ ಮತೊಂದಡೆ ಇಣುಕಿ ನೋಡುವಂತಾಗಿದೆ. ಸಾಹಿತಿಗಳೆಂದರೆ ದಕ್ಷಿಣದ ಕಡೆ ಮುಖಮಾಡುವಂತಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸರಕಾರದ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಕಾಟಾಚಾರದ ಕಾರ್ಯಕ್ರಮಗಳ ಹೊರತಾಗಿ ನಮ್ಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಆಸಕ್ತಿವಹಿಸಿ ಶ್ರಮಿಸಬೇಕಾಗಿದೆ. ಈ ಭಾಗದ ತೆರೆಮರೆಯ ಪ್ರತಿಭೆಗಳು ಹೊರಬರಲು ದಾರಿ ಬೇಕಾಗಿದೆ. ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಅಂತೇನಿಲ್ಲ. ಆಪೇಕ್ಷಿತ ಪ್ರಗತಿ ಮಾತ್ರ ಸಾಧ್ಯವಾಗಿಲ್ಲ. ಕಲಬುರಗಿ ನಗರದಲ್ಲಿನ ಬೆರಳೆಣಿಕೆಯ ಸಾಹಿತಿಗಳು ತಮ್ಮ ಒಂದಿಷ್ಟು ಕಥೆ ಕಾವ್ಯಗಳನ್ನು ಪ್ರಕಟಿಸುವ ಹೊರತಾಗಿ ಮತ್ತು ಜಿಲ್ಲಾ ಕನ್ನಡ ಭವನದ ಒಂದಿಷ್ಟು ಕಾರ್ಯಕ್ರಮಗಳ ಹೊರತಾಗಿ ತಾಲೂಕು ಮತ್ತು ಹೋಬಳಿ ವ್ಯಾಪ್ತಿಯ ಬರಹಗಾರರು ಸಾಹಿತ್ಯ ವಲಯಕ್ಕೆ ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ.

ನಾಡಿನ ಗಮನ ಸೆಳೆಯಬಹುದಾದ ಹಳ್ಳಿಗಾಡಿನ ಸಾಹಿತ್ಯದ ಕುಡಿಗಳಿಗೆ ನೀರೆರೆದು ಪೋಷಿಸುವ ಜರೂರತ್ತು ಇದೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಬೇರುಬಿಡುವ ಪರಿಷತ್ತು ಜನಸಾಮಾನ್ಯರಿಗೆ ತಲುಪುವ ಮಟ್ಟದಲ್ಲಿ ತನ್ನ ಕೊಂಬೆಗಳನ್ನು ಚಾಚಿಲ್ಲ. ಸಾಹಿತ್ಯಾಸಕ್ತರು ತಮ್ಮದೇ ವೇದಿಕೆಯೊಂದನ್ನು ರಚಿಸಿಕೊಂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಿದ್ದು ಇದಕ್ಕೆ ನದರ್ಶನ. ಸರಕಾರ ಪೋಷಿತ ಸಂಸ್ಥೆಯಾಗಿ ಪರಿಷತ್ತು ಉದಯೋನ್ಮುಖ ಬೆಹಗಾರರ ಸಾಹಿತ್ಯ ಹಸಿವು ನೀಗಿಸಲು ಮುಂದಾಗಬೇಕು.

ಇದೇ ನವೆಂಬರ್ ತಿಂಗಳ ೨೧ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ ನಮ್ಮೆಲ್ಲರಿಗೆ ಒಂದು ಸದಾವಕಾಶ ಒದಗಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅಭ್ಯರ್ಥಿ ಸಾಹಿತಿಯೂ, ಸಾಹಿತ್ಯಾಸಕ್ತರೂ ಆಗಿರಬೇಕು. ಅಲ್ಲದೆ ಜಿಲ್ಲೆಯ ಎಲ್ಲ ಯುವ ಬರಹಗಾರರನ್ನು ಗುರುತಿಸುವ ಒಳಗಣ್ಣು ಹೊಂದಿರಬೇಕು. ಪುಸ್ತಕ ಸಂತೆಗಳನ್ನು ಹಮ್ಮಿಕೊಂಡು ಮನೆಮನೆಗೂ ಸಾಹಿತ್ಯದ ಗಂಧ ಲೇಪಿಸುವವರಾಗಿರಬೇಕು. ಜಿಲ್ಲಾ ಕೇಂದ್ರದಿಂದ ಗಡಿಭಾಗದ ಹಳ್ಳಿಯ ವರೆಗೂ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಕೊಂಡೊಯ್ಯುವ ಮಹದಾಸೆ ಹೊಣೆಗಾರಿಕೆ ಹೊಂದಿರಬೇಕು.

ಚುನಾವಣಾ ಸ್ಪರ್ಧೆಯ ಕಣದಲ್ಲಿರುವ ಫ್ರೋ.ಬಿ.ಎಚ್.ನಿರುಗುಡಿ ಅವರು ಈ ಎಲ್ಲ ಸಾಹಿತ್ಯಿಕ ಅಗತ್ಯತೆಗಳನ್ನು ಈಡೇರಿಸಲು ಪರಿಷತ್ತಿನ ಸಾರಥ್ಯ ವಹಿಸುವುದು ಇಂದಿನ ಅವಶ್ಯಕತೆಯಾಗಿದೆ. ವೃತ್ತಿಯಲ್ಲಿ ಉಪನ್ಯಾಸಕರು ಮತ್ತು ಹಲವು ಕೃತಿಗಳನ್ನು ಪ್ರಕಟಿಸಿ ಸಾಹಿತಿಯೂ ಆಗಿರುವ ಇವರು ಉತ್ಸಾಹಿ ಯುವಕರಾಗಿದ್ದಾರೆ. ಈ ಭಾಗದ ಬಹುತೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳ ಜತೆಗೂಡಿ ಕಲಬುರಗಿ ನೆಲದ ಪರಂಪರೆ ಬಿಂಬಿಸುವ ಕಾರ್ಯಕ್ಕೆ ಹೆಗಲು ನೀಡಿದ್ದಾರೆ. ಯುವ ಬರಹಗಾರರಾಗಿಯೇ ಸಾಹಿತ್ಯ ಸಾರಥಿ ಮಾಸಪತ್ರಿಕೆ ಆರಂಭಿಸಿ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದಾರೆ.

ನಲವತ್ತಾರರ ಯುವಕ ಬಿ.ಎಚ್.ನಿರುಗುಡಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕ ಬರೆದ ಹುಮ್ಮಸ್ಸಿನ ಸಾರಥಿಯಾಗಿದ್ದಾರೆ. ಎಲ್ಲರಂತೆ ಇವರದ್ದೂ ಒಂದು ಪ್ರಣಾಳಿಕೆ ಎನ್ನುವಂತಿಲ್ಲ. ಅವರ ಕರಪತ್ರದಲ್ಲಿನ ವಾಗ್ದಾನಗಳು ಅವರ ಕನಸುಗಳಾಗಿವೆ. ಕನಸು ನನಸಾಗಿಸಲು ಈ ಸಲ ಕಸಾಪ ಸಾರಥ್ಯ ನಿರುಗುಡಿಗೆ ವಹಿಸುವುದು ಸಾಹಿತ್ಯ ಪ್ರೇಮಿಗಳ ಒತ್ತಾಸೆಯೂ ಆಗಿದೆ. ಪ್ರಗತಿಪರ ಮನಸ್ಸುಗಳು ನಿರುಗುಡಿಗೆ ಮತ ಹಾಕಿ ಜಯದ ಮಾಲೆ ತೊಡಿಸುತ್ತಾರೆ ಎಂಬ ಭರವಸೆ ನನಗಿದೆ.

– ಕಾಶೀನಾಥ ಹಿಂದಿನಕೇರಿ
ಅಧ್ಯಕ್ಷರು, ಸಂಚಲನ ಸಾಹಿತ್ಯ ವೇದಿಕೆ ವಾಡಿ.
ಮು: ಇಂಗಳಗಿ, ತಾ: ಚಿತ್ತಾಪುರ
ಮೋ: ೯೯೦೦೫೩೬೨೦೬
emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

34 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago