ಬಿಸಿ ಬಿಸಿ ಸುದ್ದಿ

ಕೂ ಅಪ್ಲಿಕೇಶನ್ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳ ಡಿಜಿಟಲ್ ಬ್ರಾಂಡ್‌ಗಳಲ್ಲಿ ಪ್ರಮುಖ ಸ್ಥಾನ

_US, EMEA ಮತ್ತು APAC, ರಾಷ್ಟ್ರಗಳಲ್ಲಿಆಂಪ್ಲಿಟ್ಯೂಡ್‌ನ ಮೊದಲ ಆವೃತ್ತಿಯಲ್ಲಿ ಉಲ್ಲೇಖಿಸಲ್ಪಟ್ಟ ಭವಿಷ್ಯದ ಜನಪ್ರಿಯ ಡಿಜಿಟಲ್ ಉತ್ಪನ್ನಗಳ ಪಟ್ಟಿಯ ಏಕೈಕ ಸಾಮಾಜಿಕ ಮಾಧ್ಯಮ ವಾಗಿದೆ_

*ರಾಷ್ಟ್ರೀಯ*: Koo(ಕೂ) ಅಪ್ಲಿಕೇಶನ್ – ಭಾರತದ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ವೇದಿಕೆ – ಆಂಪ್ಲಿಟ್ಯೂಡ್ ರಚಿಸಿದಂತಹ ಉತ್ಪನ್ನ ವರದಿ 2021 ರ ಅನ್ವಯ ಏಷ್ಯಾ ಪೆಸಿಫಿಕ್ (APAC) ಪ್ರದೇಶದ ಭವಿಷ್ಯದ ಜನಪ್ರಿಯ 5 ಉತ್ಪನ್ನಗಳಲ್ಲಿ ಸ್ಥಾನ ಪಡೆದಿದೆ.

ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿ ಮನದಾಳವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುವ ವಿಶಿಷ್ಟ ವೇದಿಕೆ Koo (ಕೂ), ಇದು APAC, US ಮತ್ತು EMEA ಪ್ರದೇಶದಾದ್ಯಂತ ಆಂಪ್ಲಿಟ್ಯೂಡ್‌ನ ಮೊದಲ ಆವೃತ್ತಿಯ ಪ್ರತಿಷ್ಠಿತ ವರದಿಯಲ್ಲಿ ಸ್ಥಾನ ಪಡೆದ ಏಕೈಕ ಸಾಮಾಜಿಕ ಮಾಧ್ಯಮವಾಗಿದೆ. ಭಾರತದಿಂದ ಉಲ್ಲೇಖಿಸಲ್ಪಟ್ಟ ಕೇವಲ ಎರಡು ಬ್ರಾಂಡ್‌ಗಳಲ್ಲಿ ಕೂ ಕೂಡ ಒಂದಾಗಿದೆ (CoinDCX ಇನ್ನೊಂದು).

ಆಂಪ್ಲಿಟ್ಯೂಡ್‌ನ ಬಿಹೇವಿಯರಲ್ ಗ್ರಾಫ್‌ ಮಾಹಿತಿಯು ನಮ್ಮ ಡಿಜಿಟಲ್ ಜೀವನವನ್ನು ರೂಪಿಸುವ ಪ್ರಪಂಚದ ಅತ್ಯಂತ ಉದಯೋನ್ಮುಖ ಡಿಜಿಟಲ್ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಈ ವರದಿಯು “ಸಾಮಾಜಿಕ ಮಾಧ್ಯಮ ವೇದಿಕೆಯ Koo(ಕೂ) ಆ್ಯಪ್ ತನ್ನ ಭಾರತೀಯ ಬಳಕೆದಾರರ ವಿಶಿಷ್ಟತೆಯನ್ನು ಗುರುತಿಸಿ ವಿವರಿಸಿದೆ. Koo(ಕೂ) “1 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಆಯ್ಕೆ ಮಾಡಿಕೊಂಡ ಆದ್ಯತೆಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಕೂ ಪ್ರಬಲವಾಗಿ ಬೆಳೆದಿದೆ.

ಜನರು ತಮ್ಮದೇ ಸ್ಥಳೀಯ ಭಾಷೆಗಳಲ್ಲಿಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ಮೇಡ್-ಇನ್-ಇಂಡಿಯಾ ಪ್ಲಾಟ್‌ಫಾರ್ಮ್‌ ಕೂ (Koo), ಅಪ್ಲಿಕೇಶನ್ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು.

ನಂತರದ 20 ತಿಂಗಳ ಅಲ್ಪಾವಧಿಯಲ್ಲಿ 15 ಮಿಲಿಯನ್ ಬಳಕೆದಾರರನ್ನು ಗಳಿಸಿಕೊಂಡಿದ್ದಲ್ಲದೇಮತ್ತು 9 ಭಾರತೀಯ ಭಾಷೆಗಳಲ್ಲಿ ಸೇವೆಯನ್ನು ಒದಗಿಸುತ್ತಿದೆ. ಬಲಿಷ್ಠ ತಂತ್ರಜ್ಞಾನ, ಅನುವಾದದ ಅವಕಾಶ ಮುಂತಾದ ವಿಶಿಷ್ಟ ಆಪ್ಶನ್‌ಗಳನ್ನು ಬಳಕೆದಾರರಿಗೆ ಒದಗಿಸಿದ್ದು, ಮುಂದಿನ ಒಂದು ವರ್ಷದಲ್ಲಿ Koo (ಕೂ) 100 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟುವ ನಿರೀಕ್ಷೆಯಿದೆ.

2021 ರ ಉತ್ಪನ್ನ ವರದಿಗೆ ಪ್ರತಿಕ್ರಿಯಿಸಿದ Koo(ಕೂ) ಸಹ-ಸಂಸ್ಥಾಪಕ ಮತ್ತು ಸಿಇಒ, ಅಪ್ರಮೇಯ ರಾಧಾಕೃಷ್ಣ: “ಈ ಗೌರವಾನ್ವಿತ ಜಾಗತಿಕ ವರದಿಯಲ್ಲಿ Koo(ಕೂ) ಅಪ್ಲಿಕೇಶನ್ ಗುರುತಿಸಲ್ಪಟ್ಟು APAC ನ ಟಾಪ್ 5 ರ ಹಾಟೆಸ್ಟ್ ಡಿಜಿಟಲ್ ಉತ್ಪನ್ನಗಳಲ್ಲಿ Koo(ಕೂ) ಒಂದಾಗಿರುವುದು ಹೆಮ್ಮೆಯ ವಿಷಯ.

ನಾವು ಭಾರತದಿಂದ ಮತ್ತು APAC, EMEA ಮತ್ತು US ನಾದ್ಯಂತ ಗುರುತಿಸಲ್ಪಟ್ಟ ಏಕೈಕ ಸಾಮಾಜಿಕ ಮಾಧ್ಯಮ ಆಗಿದ್ದೇವೆ. ಭಾರತದಿಂದ, ವಿಶ್ವಕ್ಕಾಗಿ ನಿರ್ಮಿಸಲಾಗುತ್ತಿರುವ ಬ್ರ್ಯಾಂಡ್‌ ಆದ ನಮಗೆ ಇದೊಂದು ಗಮನಾರ್ಹ ಸಾಧನೆಯಾಗಿದೆ. ಆಂಪ್ಲಿಟ್ಯೂಡ್‌ನ ಈ ವರದಿಯು ಡಿಜಿಟಲ್ ಜಗತ್ತಿನಲ್ಲಿ ಭಾಷಾ ಅಡೆತಡೆಗಳನ್ನು ಅಳಿಸಲು, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆಯ ನಡುವೆಯೂ ಜನರು ಪರಸ್ಪರ ಸಂಪರ್ಕಿಸಲು ಇನ್ನಷ್ಟು ಶ್ರಮಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

ಆಂಪ್ಲಿಟ್ಯೂಡ್ ಎಂಬುದು ಕ್ಯಾಲಿಫೋರ್ನಿಯಾ ಮೂಲದ ಉತ್ಪನ್ನ ವಿಶ್ಲೇಷಣೆ ಮತ್ತು ಡಿಜಿಟಲ್ ಆಪ್ಟಿಮೈಸೇಶನ್ ಸಂಸ್ಥೆಯಾಗಿದೆ. ಈ ವರದಿಯು ‘ಶೀಘ್ರವಾಗಿ ಬೆಳೆಯುತ್ತಿರುವ ಉತ್ಪನ್ನಗಳನ್ನು’ ಆಯ್ಕೆ ಮಾಡುತ್ತದೆ. ‘ಭವಿಷ್ಯದ ಜನಪ್ರಿಯ ಕಂಪನಿ’ಗಳನ್ನು ಗುರುತಿಸಲು ತಿಂಗಳ ಬಳಕೆದಾರರ ದತ್ತಾಂಶವನ್ನು ಇದು ವಿಶ್ಲೇಷಿಸುತ್ತದೆ.

ಅತ್ಯುತ್ತಮ ಡಿಜಿಟಲ್ ಅನುಭವವನ್ನು ಒದಗಿಸುವ ಕಂಪನಿಗಳ ತಿಂಗಳ ಬಳಕೆದಾರರ ಹೆಚ್ಚಳವನ್ನು ಪರಿಗಣಿಸಿ ಆಂಪ್ಲಿಟ್ಯೂಡ್ ವರದಿಗಳನ್ನು ನೀಡುತ್ತದೆ. ಜೂನ್ 2020 ರಿಂದ ಜೂನ್ 2021 ರವರೆಗಿನ ಒಟ್ಟು 13-ತಿಂಗಳ ಅವಧಿಯಲ್ಲಿ ಸಕ್ರಿಯ ಬಳಕೆದಾರರ ಒಟ್ಟು ಸಂಖ್ಯೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಗುರುತಿಸಿ Koo(ಕೂ) ಅಪ್ಲಿಕೇಶನ್ ಅನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

*ಕೂ ಬಗ್ಗೆ*: Koo(ಕೂ) ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು.

ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo(ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.

*ಆಂಪ್ಲಿಟ್ಯೂಡ್ ಬಗ್ಗೆ*: ಡಿಜಿಟಲ್ ಆಪ್ಟಿಮೈಸೇಶನ್‌ನ ಪ್ರವರ್ತಕರಾದ ಆಂಪ್ಲಿಟ್ಯೂಡ್‌ನ ಪರಂಪರೆಯು, ಡಿಜಿಟಲ್ ಉತ್ಪನ್ನಗಳು, ಡೇಟಾ-ಚಾಲಿತ ಉತ್ಪನ್ನಗಳ ವಿಶ್ಲೇಷಣೆ, ಡಿಜಿಟಲ್ ಉತ್ಪನ್ನದ ಅಳವಡಿಕೆ, ಉತ್ಪನ್ನದಲ್ಲಿನ ನಡವಳಿಕೆ ಮತ್ತು ಡಿಜಿಟಲೀಕರಣಕ್ಕೆ ಆದ್ಯತೆ ನೀಡುವ ಜಗತ್ತಿನಲ್ಲಿನ ಚಾಲನಾ ತಂತ್ರಗಳ ಕುರಿತು ಅಪ್ರತಿಮ ಅಭಿಪ್ರಾಯಗಳನ್ನು ನೀಡುತ್ತದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago