ಅಂಕಣ ಬರಹ

ಅರಸನ ಚಿನ್ನದ ಕಿರೀಟಕ್ಕಿಂತ ಕಾಯಕದ ಕಟ್ಟಿಗೆ ಕಿರೀಟ ಶ್ರೇಷ್ಠವೆಂದ ಮೋಳಿಗೆ ಮಾರಯ್ಯ

ಈ ದೇಹ ಆ ಭಗವಂತನು ಕೊಟ್ಟ ಅಮೂಲ್ಯವಾದ ಕೊಡುಗೆ. ಬಾಲ್ಯದ ದಿನಗಳು ಸರಿದು ಹೋಗಿವೆ. ಯೌವನದ ಅಮೂಲ್ಯ ಕ್ಷಣಗಳು ಕರಿಗಿ ಹೋಗಿವೆ. ವಾರ್ಧಕ್ಯದ, ಸಾವಿನ ಗೆರೆಯ ಮಧ್ಯದಲ್ಲಿ ನಿಂತುಕೊಂಡು ಕಬ್ಬಡ್ಡಿ ಯಾಡುತ್ತಿರುವ ನಮಗೆಲ್ಲ ಶರಣರು ಎಚ್ಚರಿಸಿದ್ದಾರೆ. ಬಸವಣ್ಣನವರನ್ನು ಕಂಡು ಅನೇಕ ಕಾವ್ಯ ಕೃತಿಗಳು ಕನ್ನಡದಲ್ಲಿ ರಚನೆಯಾಗಿವೆ. ಇಷ್ಟೆಲ್ಲ ಬರೆದರೂ ಬಸವಣ್ಣ ಇನ್ನೂ ಪರಿಪೂರ್ಣನಾಗಿ ನಮ್ಮ ಕೈಗೆ ಸಿಕ್ಕಿಲ್ಲ. ಅಷ್ಟು ಬೇಗ ಸುಲಭವಾಗಿಯೂ ಅವರು ನಮಗೆ ಸಿಕ್ಕುವುದಿಲ್ಲ. ಧಕ್ಕುವುದಿಲ್ಲ.

ಬಸವಣ್ಣನವರು ಹಾಗೂ ಅವರ ವಚನಾಂದೋಲನದ ಪರಿಚಯ, ಪಚನ ಮಾಡಿಕೊಳ್ಳಬೇಕಾದರೆ ಜಪ, ತಪ ಏನಾದರೂ ಮಾಡಬೇಕೆನ್ನುವ ಕಟ್ಟಳೆಗಳೂ ನಮ್ಮಲ್ಲಿ ಇಲ್ಲ. ಸ್ವಚ್ಛವಾದ ಮನಸ್ಸಿನಿಂದ ಆ ತತ್ವವನ್ನು ಹೆಜ್ಜೆ ಹೆಜ್ಜೆಗೂ ಪಾಲಿಸಿಕೊಂಡು, ಅವುಗಳೇ ನಮ್ಮ ಉಸಿರು- ಪ್ರಾಣ ಬೆನ್ನೆಲುಬಾದರೆ ಬಸವಣ್ಣ ಹಾಗೂ ಅವರ ತತ್ವ,ಸಿದ್ಧಾಂತ ನಮಗೆ ಪ್ರನ್ನನಾಗುತ್ತಾನೆ.

ಬಸವಣ್ಣನವರ ನೇರ್ತರಥ್ವದಲ್ಲಿ ೧೨ನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಕ್ರಾಂತಿ ಸರ್ವರಲ್ಲೂ ಮಿಂಚಿನ ಸಂಚಾರ ಮಾಡಿತ್ತು. ಬಸವಣ್ಣ ವ್ಯಕ್ತಿಯಾಗಿರಲಿಲ್ಲ. ಯುಗ, ಯುಗದ ಉತ್ಸಾಹ ಆಗಿದ್ದ. ಜಗದ ಶಕ್ತಿಯಾಗಿದ್ದ. ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಅನೇಕರು ದೂರ ದೂರದಿಂದ ಕಲ್ಯಾಣದ ಕಡೆಗೆ ಮುಖ ಮಾಡಿದರು. ಉಡುತಡಿಯಿಂದ ಅಕ್ಕ, ಸೋಮೇಶ್ವರದಿಂದ ಆದಯ್ಯ, ಕಾಶ್ಮೀರದ ಮಾಂಡವ್ಯದ ರಾಜಕುಮಾರಿ ಬೋಂತಾದೇವಿ ಮುಂತಾದವರಂತೆ ಕಾಶ್ಮೀರದ “ಸವಾಲಾಕ್ಷ”ದ ಅರಸ ಮಹಾದೇವ ಭೂಪಾಲರೂ (ಮೋಳಿಗೆಯ ಮಾರಯ್ಯ) ಒಬ್ಬರು. ರಾಜ್ಯವನ್ನು ಮಗನಾದ ಲಿಂಗಾರತಿಗೆ ಪಟ್ಟಕಟ್ಟಿ ಪತ್ನಿ ಗಂಗಾದೇವಿ (ಮಹಾದೇವಿ) ಯೊಡನೆ ಕಲ್ಯಾಣಕ್ಕೆ ಬಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ೧೨ ಕಿ.ಮೀ. ದೂರದಲ್ಲಿರುವ ಮೋಳಕೇರಿ ಗ್ರಾಮದಲ್ಲಿ ಬಂದು ಅವರು ನೆಲೆಸಿದ್ದರು ಎಂದು ಹೇಳಲಾಗುತ್ತಿದೆ.

ಶರಣರ ಕಾಯಕ-ದಾಸೋಹ ತತ್ವದಂತೆ ಕಟ್ಟಿಗೆ ಕಾಯಕವ ಮಾಡಿ, ಅಂಬಲಿ ಉಣಬಡಿಸುತ್ತಿದ್ದ ಈ ದಂಪತಿ ಕಾಶ್ಮೀರದಿಂದ ಕಾಲ್ನಡಿಗೆಯಲ್ಲಿಯೇ ಬಂದವರು. ಮೋಳಿಗೆ ಮಾರಯ್ಯ, “ನಿಃಕಳಂಕಮಲ್ಲಿಕಾರ್ಜುನ” ಅಂಕಿತದಲ್ಲಿ ಬರೆದ ೮೧೯ ವಚನಗಳು ದೊರೆತಿವೆ. ಮೋಳಿಗೆ ಮಹಾದೇವಿಯೂ “ಎನ್ನಪ್ರಿಯ ನಿಕಃಳಂಕ ಮಲ್ಲಿಕಾರ್ಜುನ” ಅಂಕಿತದಲ್ಲಿ ಬರೆದ ೭೦ ವಚನಗಳು ಲಭ್ಯ. ವೈವಿದ್ಯಮಯ, ತಾತ್ವಿಕ, ಅನುಭಾವಿಕ ವಸ್ತು, ವಿಷಯಗಳನ್ನೊಳಗೊಂಡ ಅವು ಮಾರಯ್ಯ ದಂಪತಿಯ ವಿದ್ವತ್ತು, ಆಧ್ಯಾತ್ಮಿಕ ನಿಲುವು, ಅನುಭಾವದ ಎತ್ತರ, ಸಾಮಾಜಿಕ ಕಳಕಳಿ, ಸಾಹಿತ್ಯ ಸಿರಿವಂತಿಕೆಯನ್ನು ಎತ್ತಿ ತೋರುತ್ತವೆ.

ಆನೆ ಕುದುರೆ ಬಂಡಿ ಬಂಡಾರವಿರ್ದಡೇನು
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು
ಮಲಗುವುದರ್ದಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೋ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ
ಮಲ್ಲಿಕಾರ್ಜುನ

ನಿಜದ ಸಿರಿ ಮರೆತು ಆನೆ, ಕುದುರೆ ಸಂಪತ್ತು ಇರುವುದೇ ನಿಜ ಶ್ರೀಮಂತಿಕೆ ಎಂದು ಭಾವಿಸಿರುವ ನಮಗೆ ಹೃದಯ ಶ್ರೀಮಂತಿಕೆಯ ಬಗೆಯನ್ನು ತೋರಿಸಿಕೊಟ್ಟರು. ಕಾಯಕವೇ ಭಗವಂತನ ನಿವಾಸ. ಅವನಿರುವ ನಿಜದರಿವು ಯಾರಿಗೆ ಧಕ್ಕುತ್ತದೋ ಅವರು ಘನಮನ ಸಂಪನ್ನರಾಗಬಹುದು ಎಂಬುದನ್ನು ತೋರಿಸಿಕೊಟ್ಟವರು ನಮ್ಮ ಶರಣರು. ಅಂತೆಯೇ ಕಲ್ಯಾಣಕ್ಕೆ ಬಂದು ಗುಡಿಸಲು ಹಾಕಿಕೊಂಡು ಗಿಡದಿಂದ ಬಿದ್ದು ಒಣಗಿದ ಕಟ್ಟಿಗೆ ಮಾರಿ ಬದುಕಿದ ಮಾರಯ್ಯನವರ ಬದುಕು ಹಾಗೂ ಬೋಧನೆ ನಮಗೆ ಅನುಕರಣಿಯ ಅನ್ನಿಸುತ್ತದೆ.

ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ
ಎಂಬುದನರಿದಾಗವೆ ಭಕ್ತಸ್ಥಲ
ಮುತ್ತು ಜಲವ ನುಂಗಿತ್ತೋ, ಜಲವು ಮುತ್ತ ನುಂಗಿತ್ತೋ
ಎಂಬುದನರಿದಾಗವೆ ಮಾಹೇಶ್ವರಸ್ಥಲ
ಪ್ರಭೆ ಪಾಷಾಣವ ನುಂಗಿತ್ತೋ, ಪಾಷಾಣ ಪ್ರಭೆಯ ನುಂಗಿತ್ತೋ
ಎಂಬುದನರಿದಾಗವೆ ಪ್ರಸಾದಿಸ್ಥಲ
ವಹ್ನಿ ಕಾಷವ ನುಂಗಿತ್ತೋ, ಕಾಷ ವಹ್ನಿಯ ನುಂಗಿತ್ತೂ
ಎಂಬುದನರಿದಾಗವೆ ಪ್ರಾಣಲಿಂಗಿಸ್ಥಲ
ಸಾರ ಬಲಿದು ಶರಧಿಯ ಕೂಡಿದಾಗವೆ ಶರಣಸ್ಥಲ
ವಾರಿ ಬಲಿದು ವಾರಿಧಿಯಂತಾಗುವುದೆ ಐಕ್ಯಸ್ಥಲ

ಲಿಂಗಾಯತ ಧರ್ಮದ ಷಟಸ್ಥಲ ಸಿದ್ಧಾಂತವನ್ನು ಅತ್ಯಂತ ಮಾರ್ಮಿಕವಾಗಿ ಹೇಳುವ ಅವರ ಈ ವಚನ ಬದುಕಿನ ಅತ್ಯಂತ ಕಠಿಣ ಹೆಜ್ಜೆಗಳನ್ನು ತಿಳಿದು ಚಿರವಾಗಿ ಉಳಿಯುವ ಬಗೆಯನ್ನು ಆರು ರೀತಿಯಲ್ಲಿ ಹೇಳುತ್ತಾರೆ. ಪ್ರತಿ ಸ್ಥಲದಲ್ಲಿಯೂ ಅದಕ್ಕೆ ಸಂಬಂಧಿಸಿದ ಜ್ಞಾನವನ್ನು ತಿಳಿಯುತ್ತ ಹೋದಾಗಲೇ ಶರಣಸ್ಥಳ, ಐಕ್ಯಸ್ಥಲ ಮುಟ್ಟಲು ಸಾಧ್ಯ ಎಂದು ತಿಳಿಸುತ್ತಾರೆ. ಮನುಷ್ಯನಿಗೆ ಏನೆಲ್ಲವೂ ಇದೆ. ಆದರೆ ಶಾಂತಿ-ಸಮಾಧಾನವಿಲ್ಲ. ಶಾಂತಿ-ಸಮಾಧಾನದ ಕೊರೆತೆಯುಂಟಾದರೆ ಬಸವದರ್ಶನಕ್ಕೆ ಅಣಿಯಾಗಬೇಕು. ಬಸವಾದಿ ಶರಣರು ಜೀವನವೇ ಒಂದು ಯೋಗ. ಎಂದು ಹೇಳಿದ್ದಾರೆ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

13 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

13 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

15 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

15 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago