ನವೆಂಬರ್ 21 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಹಿರಂಗ ಚುನಾವಣೆ ನಡೆಯಿತು. ಈ ಚುನಾವಣೆಗಳಲ್ಲಿ ಕಂಡುಬಂದಿರುವ ಕೆಲವು ಹೊಸ ಬೆಳವಣಿಗೆಗಳನ್ನು ಕುರಿತು ಕನ್ನಡಿಗರಾದ ನಾವುಗಳು ಸಾಹಿತ್ಯ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವೂ ಎದುರಾಗಿತು.
ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಅಲ್ಲದೇ ನೂರು ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆ ಒಂದು ಸಾಹಿತ್ಯದ ಪರಿಚಾರಕ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ ಇಲ್ಲಿಯ ವರೆಗೂ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡ ಜನತೆ ಎದುರಿಸುವ ಭಾಷಿಕ, ಪ್ರಾದೇಶಿಕ ಮತ್ತು ಇತರ ಸಾಂಸ್ಕೃತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ.
ಆದರೆ ಈ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸುವ ಮತ್ತು ಬೆಳೆಯಿಸುವ ಆ ಕೆಲಸವನ್ನು ಮಾಡಿದೆಯೋ ಇಲ್ಲವೋ, ಆದರೂ ನಾವುಗಳು ಹಾಗೆಯೇ ಅಂದುಕೊಳ್ಳೋಣ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳೂ ಸಮಾನ ಅವಕಾಶದೊಂದಿಗೆ ಸಮಸ್ತ ಜನಸಮುದಾಯಗಳನ್ನೊಳಗೊಂಡಂತಂಯೇ ಪ್ರಗತಿ ಸಾಧಿಸುತ್ತಾ ಬಂದಿದೆ ಎಂದೂ ಅಂದುಕೊಳ್ಳೋಣ.
ಒಂದು ಸಮಾಜಮುಖಿ ಸಂವೇದನಾಶೀಲ ಕನ್ನಡ ಸಾಹಿತ್ಯ ಪರಂಪರೆಯನ್ನು ಪೋಷಿಸುವ ಸಲುವಾಗಿ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದೂ ಅಂದುಕೊಳ್ಳೋಣ.
ಆದರೆ ದುರದೃಷ್ಟವಶಾತ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕ.ಸಾ.ಪ. ಚುನಾವಣೆಗಳಲ್ಲಿ ಜಾತಿ ಪ್ರಭಾವ, ಭ್ರಷ್ಟ ಹಣ ಹಂಚುವಿಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಸಾಂಸ್ಕೃತಿಕ ಲೋಕಕ್ಕೇ ದೊಡ್ಡ ಆಘಾತಕಾರಿ ಸಮಸ್ಯೆಯಾಗಿ ಎದುರಾಗಿದೆ.
ಇದರ ಜೊತೆಗೇ ಈ ವರ್ಷದ ಕ.ಸಾ.ಪ. ಚುನಾವಣೆಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ನೇರ ಪ್ರವೇಶ ದಿಗ್ಭ್ರಮೆ ಹುಟ್ಟಿಸಿದೆ. ಅಷ್ಟೇ ಅಲ್ಲ, ಇದು ಒಂದು ದುಷ್ಟ ಬೆಳವಣಿಗೆಯೂ ಆಗಿದೆ.
ಇದುವರೆಗೂ ನಡೆದ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷವು ಈ ರೀತಿಯಾಗಿ ನೇರ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಭಾಜಪವು ಸಾಂಸ್ಕೃತಿಕ ಕ್ಷೇತ್ರಕ್ಕೂ ತನ್ನ ಹಸ್ತಕ್ಷೇಪವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿ ಎಲ್ಲವನ್ನೂ ಹಾಳುಗೆಡಹಲು ಹೊರಟಿದೆ. ಮಹೇಶ್ ಜೋಶಿಯವರು ಒಬ್ಬ ಸಾಂಸ್ಕೃತಿಕ ಮನಸ್ಸಿನ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಎಲ್ಲರಂತೆ ಭಾಗವಹಿಸಿದ್ದರೆ ನಾವು ಯಾರೂ ವಿರೋಧಿಸುತ್ತಿರಲಿಲ್ಲ.
ಈ ಚುನಾವಣೆಯ ಪ್ರಾರಂಭದಲ್ಲಿ ಅವರು ಹಾಗೆಯೇ ನಡೆದುಕೊಂಡಿದ್ದರಿಂದ ನಾವು ಯಾರೂ ಚಕಾರವೆತ್ತಿರಲಿಲ್ಲ. ಆದರೆ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಕ.ಸಾ.ಪ.ಕ್ಕೆ ಆಳುವ ಪಕ್ಷದ ಬೆಂಬಲವನ್ನು ನೇರವಾಗಿ ಘೋಷಿಸಿಕೊಂಡು ಚುನಾವಣೆಗೆ ಹೊರಟರು ಮಹೇಶ್ ಜೋಶಿಯವರು. ಇದು ಖಂಡನೀಯವಾಗಿದೆ ಕೂಡ.
ಕ.ಸಾ.ಪ.ದ ಮೂಲ ಆಶಯಕ್ಕೆ ವಿರುದ್ಧವಾದ ನಡೆ ಇದಾಗಿರುವುದರಿಂದ ಅವರು ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದೇ ನಮ್ಮ ಸುದ್ದಿಯಾದ ಮೀಡಿಯಾದದ ಅಂಬೋಣ.
ಪಕ್ಷವೊಂದರ ಈ ಪರಿಯ ಬೆಂಬಲವನ್ನು ಸಾಂಸ್ಕೃತಿಕ ಮನಸ್ಸಿನ ವ್ಯಕ್ತಿಯಾಗಿ ಅವರು ನಿರಾಕರಿಸಬೇಕಿತ್ತು. ಇದುವರೆಗೂ ತಾವು ಮಾಡಿದ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳೇ ತಮ್ಮ ಚುನಾವಣೆಯ ನೈತಿಕ ಬಲಗಳಾಗಿ ಘೋಷಿಸಿಕೊಳ್ಳಬೇಕಿತ್ತು. ಅದು ಬಿಟ್ಟು ಮಹೇಶ್ ಜೋಶಿಯವರು ರಾಜಕೀಯ ಪುಢಾರಿಯಂತೆ ಈ ಚುನಾವಣೆಯನ್ನು ಕಲುಷಿತಗೊಳಿಸುತ್ತಿರುವುದು ಖಂಡನೀಯ.
ಆಡಳಿತಾರೂಢ ಬಿಜೆಪಿ ಮತ್ತು ಆರೆಸ್ಸೆಸ್ ಮತ್ತದರ ಅಂಗ ಸಂಸ್ಥೆಗಳ ಕಾರ್ಯಕರ್ತರಿಗೆ ತಮ್ಮನ್ನು ಆಯ್ಕೆ ಮಾಡುವಂತೆ ವಿನಂತಿಸುತಿಸಿದರು ಅವರು. ಇದು ಖಂಡನೀಯ.
ಅಲ್ಲದೇ ಇದು ಕ.ಸಾ.ಪ.ದ ಇತಿಹಾಸದಲ್ಲೇ ಮೊದಲ ಬಾರಿ ಹೀಗಾಗಿದೆ. ರಾಜಕೀಯ ಪಕ್ಷಗಳ ಅಥವಾ ಗುಂಪುಗಳ ನೇರ ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ಕ.ಸಾ.ಪ.ದಲ್ಲಿ ಅವಕಾಶ ನೀಡುವುದು ತರವಲ್ಲ.
ಆದರೆ ಮಹೇಶ್ ಜೋಶಿಯವರು ಅಷ್ಟೇ ಅಲ್ಲ ಬಹಳಷ್ಟು ಜನರು ಇದೇ ರೀತಿಯಲ್ಲಿ ನಡೆದುಕೊಂಡರು. ಈ ಹಿನ್ನೆಲೆಯಲ್ಲಿಯೇ ಕನ್ನಡ ಸಾಹಿತ್ಯಕ ಮನಸ್ಸುಗಳು ಮಹೇಶ್ ಜೋಶಿಯವರು ಕೋಮುವಾದಿ ಪಕ್ಷ ಸಂಘಟನೆಗಳ ನೇರ ಬೆಂಬಲ ಪಡೆಯಲು ಮುಂದಾಗಿರುವುದನ್ನು ಖಂಡಿಸುವುದೇ ಅಲ್ಲದೇ, ಅವರಿಗೆ ಚುನಾವಣೆಯಲ್ಲಿ ಮತ ನೀಡದಿರುವಂತೆ ಎಲ್ಲ ಸಾಹಿತ್ಯಕ ಮನಸ್ಸುಗಳಲ್ಲಿ ವಿನಂತಿಸಿಕೊಂಡೆವು.
ಈ ರೀತಿಯ ಧೋರಣೆಯನ್ನು ಅನುಸರಿಸುವ ಯಾವುದೇ ಇತರ ಅಭ್ಯರ್ಥಿಯನ್ನೂ ತಿರಸ್ಕರಿಸುವಂತೆಯೂ ಮತದಾರರಲ್ಲಿ ವಿನಂತಿಸುತ್ತಿದೇವು. ಆದರೆ ಕೆಲವು ಈ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೀಗೆಯೇ ಮಾಡಿದರು.
ಹಾಗಾಗಿಯೇ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಡಾ.ವಿಜಯಾ, ಡಾ.ವಸುಂಧರಾ ಭೂಪತಿ, ಡಾ.ಕೆ.ಷರೀಫಾ, ನಾ.ದಿವಾಕರ, ಡಾ.ಬಂಜಗೆರೆ ಜಯಪ್ರಕಾಶ್, ಅಚ್ಯುತ, ವಿಮಲಾ.ಕೆ.ಎಸ್, ನೀಲಾ.ಕೆ., ಎಲ್. ಜಗನ್ನಾಥ್, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಪಿ.ಆರ್.ವೆಂಕಟೇಶ್ ಬಳ್ಳಾರಿ, ವೀರಹನುಮಾನ್ ರಾಯಚೂರು, ಡಾ.ವಿ.ಎನ್.ಲಕ್ಷ್ಮೀನಾರಾಯಣ್, ಡಾ.ಲೀಲಾ ಸಂಪಿಗೆ, ಬಿ.ಶ್ರೀಪಾದ ಭಟ್, ಎನ್.ಕೆ.ವಸಂತ ರಾಜ್, ಬಿ.ಐ.ಇಳಿಗೇರ್, ಜೆ.ಸಿ.ಶಶಿಧರ್. ಎಲ್ಲರೂ ಇಂತಹ ರಾಜಕೀಯ ಪಕ್ಷಗಳ ಒಲವು ಪಡೆದ ಅಭ್ಯರ್ಥಿಗಳನ್ನು ತಿರಸ್ಕರಿಸಿ ಎಂದು ಬೇಡಿಕೊಂಡರು. ಆದರೂ ಆಗಿದ್ದು ಏನು? ಈ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ವ್ಯಕ್ತಿಗಳು ಭಾಗವಹಿಸಿದರು.
ಅಷ್ಟೇ ಅಲ್ಲ ರಾಜಕಾರಣ ಮಾಡಿದರು. ಹೀಗಾದರೇ ಈ ಕನ್ನಡ ಸಾಹಿತ್ಯ ಪರಿಷತ್ತು ಏಕೆ ಬೇಕು ಅನ್ನಿಸಿದ್ದು ಸುಳ್ಳಲ್ಲ.
ಒಟ್ಟಾರೆ ಈ ಕನ್ನಡ ಸಾಹಿತ್ಯ ಪರಿಷತ್ತು ಒಂದು ರಾಜಕೀಯ ಪಕ್ಷಗಳ ಸಂಸ್ಥೆಯಾಗಿತು. ಇದು ದುರ್ದೈವವೂ ಆಗಿದೆ. ಇಂತಹ ಸಾಹಿತ್ಯ ಪರಿಷತ್ತು ನಮಗೆ ಬೇಕೇ..?! ನೀವೇ ಹೇಳಿ..?
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…