ಬಿಸಿ ಬಿಸಿ ಸುದ್ದಿ

ಜೇವರ್ಗಿ: ಆರಂಭಿಕ ಶೂರತನ ಮೆರೆದ ಪುರಸಭೆ ಕಾರ್ಯವೈಕರಿ

ಜೇವರ್ಗಿ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ರಸ್ತೆ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಕ್ರಮವನ್ನು ಜನರು ಸ್ವಾಗತಿಸಿದರು.

ಇಲ್ಲಿನ ಮುಖ್ಯರಸ್ತೆಯ ಅಖಂಡೇಶ್ವರ ವೃತ್ತದ ಬಳಿ ಇರುವ ಕೇವಲ ಅಂಗಡಿ-ಮುಗ್ಗಟ್ಟುಗಳ ಎದುರಿನ ಫುಟ್ಪಾತ್ ತೆರವುಗೊಳಿಸಿ ಅಲ್ಲಿಗೆ ತೆರವು ಕಾರ್ಯಕ್ಕೆ ಪೂರ್ಣವಿರಾಮ ನೀಡಿದ್ದಾರೆ.

ರಸ್ತೆ ಪಕ್ಕದ ವಾಣಿಜ್ಯ ವಹಿವಾಟು ನಡೆಸುವ ವಾಣಿಜ್ಯ ಮಳಿಗೆಗಳ ಮಾಲೀಕರ ಆತ್ಮೀಯ ಬಾಂಧವ್ಯ ಹೊಂದಿದ್ದ ಪುರಸಭೆ ಕೆಲ ಸಿಬ್ಬಂದಿಗಳು ತಮ್ಮ ಪೌರಕಾರ್ಮಿಕ ಸಿಬ್ಬಂದಿಗಳನ್ನು ಕೆಲಸಕ್ಕೆ ಹಚ್ಚಿ ಅವರ ಅಂಗಡಿ ಎದುರಿನ ಟೀನ್ ಸೆಡ್ಡಗಳನ್ನು ಬಿಚ್ಚಿ ಅವರಿಗೆ ಕೊಟ್ಟು ಸಹಾಯ ಮಾಡಿ ಪುರಸಭೆ ಪೌರ ಕಾರ್ಮಿಕರನ್ನು ಬಿಟ್ಟಿಯಾಗಿ ಬಳಸಿಕೊಂಡಿದ್ದು ಸರಿಯಾ? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇಲ್ಲಿನ ಬುಟ್ನಾಳ ರಸ್ತೆಯಲ್ಲಿರುವ ಕೆಲ ಬೀದಿ ವ್ಯಾಪಾರಿಗಳು ಹಾಗೂ ಮಾಂಸದ ಅಂಗಡಿಗಳ ಟೇಬಲ್ ಸೇರಿದಂತೆ ಇತರ ವಸ್ತುಗಳನ್ನು ಎತ್ತಿಕೊಂಡು ಪುರಸಭೆ ತಂದಿದ್ದಾರೆ .ಆದರೆ ಮುಖ್ಯರಸ್ತೆಯಲ್ಲಿಯೇ ಹಲವಾರು ಅಂಗಡಿಗಳು ನಡುರಸ್ತೆಯಲ್ಲಿ ಚಾಚಿಕೊಂಡಿದ್ದರು ಪುರಸಭೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ ! ಇದು ಒಂದು ಕಣ್ಣಿಗೆ ಸುಣ್ಣ ಹಾಗೂ ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಅಲ್ಲವೇ ? ಎನ್ನುವುದು ಸಾರ್ವಜನಿಕರ ಅಭಿಮತವಾಗಿದೆ.

ತೆರವು ಕಾರ್ಯಾಚರಣೆ ಆರಂಭಗೊಂಡ ನಂತರ ಜೇವರ್ಗಿ ಪಟ್ಟಣವು ರಸ್ತೆ ವಾಹನ ಸಂಚಾರ ಹಾಗೂ ಸಾರ್ವಜನಿಕ ಪಾದಾಚಾರಿಗಳಿಗೆ ಅನುಕೂಲಕರವಾಗುತ್ತದೆ ಎಂದು ಸಾರ್ವಜನಿಕರು ಭಾವಿಸಿದ್ದರು ,ಆದರೆ ಕೇವಲ ತೋರಿಕೆಗೆ ಒಂದೆರಡು ಅಂಗಡಿ ಮುಗ್ಗಟ್ಟುಗಳನ್ನು ತೆರುವು ಗೋಳಿಸಿದಂತೆ ಮಾಡಿ ನಂತರ ಬೇರೆ ಕಡೆಗೆ ಈ ಕಾರ್ಯಾಚರಣೆ ಮುಂದುವರೆಯದೆ ಅಲ್ಲಿಗೆ ಮೊಟಕುಗೊಳಿಸಲಾಗಿದೆ. ಇದರಿಂದಾಗಿ ಕಾರ್ಯಚರಣೆ ಕಾರ್ಯಕ್ಕೆ ಪುರಸಭೆಯ ಸಿಬ್ಬಂದಿಗಳು ಎಳ್ಳುನೀರು ಬಿಟ್ಟಂತಾಗಿದೆ.

ಎರಡು-ಮೂರು ದಿನಗಳವರೆಗೆ ಪುರಸಭೆಯ ವಾಹನದಲ್ಲಿ ರಸ್ತೆಯ ಪಕ್ಕದಲ್ಲಿ ಹಾಗೂ ಪುಟ್ಬಾತ್ ಮೇಲೆ ವ್ಯಾಪಾರ ಹಾಗೂ ಅಂಗಡಿ ಇಟ್ಟವರನ್ನು ತೆರವುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ ನಂತರದಲ್ಲಿ ಬೆರಳಣಿಕೆಯಷ್ಟು ಅಂಗಡಿಗಳನ್ನು ತೆರವುಗೊಳಿಸುವಂತೆ ನಾಟಕೀಯವಾಗಿ ವರ್ತಿಸಿ ಸುಮ್ಮನಾಗಿ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಉಂಟು ಮಾಡಿದೆ.

ಪುರಸಭೆಯ ಆಡಳಿತವರ್ಗ ಹಾಗೂ ಚುನಾಯಿತ ಪ್ರತಿನಿಧಿಗಳು ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕಾರ್ಯಾಚರಣೆ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತಾರಾ ? ಇಲ್ಲವೇ ಕೇವಲ ತೋರಿಕೆಗೆ ಮಾತ್ರ ಕಾರ್ಯಚರಣೆ ನಡೆಸಿ ಕೈತೊಳೆದುಕೊಳ್ಳುತ್ತಾರೆ ?ಎಂದು ವೀಕ್ಷಿಸುತ್ತಿರುವ ಜನರು ನಿರೀಕ್ಷೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಪುರಸಭೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ..

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago