ಬಿಸಿ ಬಿಸಿ ಸುದ್ದಿ

ವಿಧಾನ ಪರಿಷತ್‌ಗೆ ಟಿಕೆಟ್ ಪೈಪೋಟಿವೂ..! ಬಿಜೆಪಿಯಲ್ಲಿ ಬೆಂಕಿಯೂ?

  • ಕೆ.ಶಿವು.ಲಕ್ಕಣ್ಣವರ

ಉತ್ತರ ಕನ್ನಡದಲ್ಲಿ ವಿಧಾನ ಪರಿಷತ್ತಿಗೆ ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ಚುನಾವಣೆ ಆಖಾಡಕ್ಕೀಗ ರಂಗೇರಿದೆ..!

ಆಡಳಿತಾರೂಢ ಬಿಜೆಪಿಯಲ್ಲಿ ತಿಂಗಳಾನುಗಟ್ಟಳೇ ನಡೆದ ಟಿಕೆಟ್‌ಗೆ ಪೈಪೋಟಿಗೆ ಬ್ರೇಕ್ ಬಿದ್ದಿದೆ.

ಕಾರವಾರದ ಮೀನುಗಾರರ ಸಮುದಾಯದ ಗಣಪತಿ ದುಮ್ಮಾ ಉಳ್ವೇಕರ್‌ರನ್ನು ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಅಭ್ಯರ್ಥಿ ಹೆಸರು ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಬಿಜೆಪಿಯಲ್ಲಿ ಬೆಂಕಿ ಬಿದ್ದಂತಾಗಿದೆ, ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆಯೂ..!

ಬಿಜೆಪಿ ತನ್ನ ಭಾರಕ್ಕೇ ತಾನೆ ಕುಸಿಯುತ್ತಿದೆಯು. ಹಾದಿ — ಬೀದಿಯಲ್ಲಿ ಹೋಗುವವರನ್ನೆಲ್ಲ ಕಾಂಗ್ರೆಸ್ಸಿಂದ ಬಂದವರೆಂದು ಹೇಳಿ ತಂದು ತುಂಬಿಕೊಂಡಿದ್ದರ ಫಲವಿದು ಎಂದು ಎರಡ್ಮೂರು ದಶಕದಿಂದ ಪಕ್ಷಕ್ಕಾಗಿ ಬೆವರಿಳಿಸಿದ ಹಿರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಯು.

ಬಿಜೆಪಿಯ ಕಷ್ಟದ ದಿನಗಳಿಂದಲೂ ಆ ಪಾರ್ಟಿಯಲ್ಲಿದ್ದವರೂ ಸೇರಿದಂತೆ ಸುಮಾರು ಒಂದೂ ಮುಕ್ಕಾಲು ಡಜನ್ ಮಂದಿ ಟಿಕೆಟ್‌ಗಾಗಿ ಲಾಭಿ ನಡೆಸಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂತ್ರಿ ಹೆಬ್ಬಾರ್, ಸಂಸದ ಅನಂತಕುಮಾರ್ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕ್ ಒಂದಾಗಿ ಉಳ್ವೇಕರ್ ರನ್ನು ಕ್ಯಾಂಡಿಡೇಟ್ ಮಾಡಿದ್ದಾರೆನ್ನಲಾಗಿದೆ.

ಕಳೆದ ಬಾರಿ ಸೋಲುತ್ತಾರೆಂದು ಗೊತ್ತಿದ್ದೂ ಉಳ್ವೇಕರ್‌ರನ್ನು ನಿಲ್ಲಿಸಲಾಗಿತ್ತು. ಈಗ ಗೆಲ್ಲುವ ಅವಕಾಶವಿರುವಾಗ ಅಂದು ಪಟ್ಟ ಕಷ್ಟಕ್ಕೆ ಇನಾಮು ಕೊಡಬೇಕಾದುದು ಧರ್ಮವೆಂದು ಪಕ್ಷದ ಹಿರಿಯರು ಹೇಳುತ್ತಿದ್ದಾರಾದರೂ, ಇದೆಲ್ಲ ಮುನಿಸಿಕೊಂಡಿರುವ ಮೀನುಗಾರರ ಸಮುದಾಯವನ್ನು ಸಮಾಧಾನಿಸುವ ನಾಟಕವೆಂದು ಟಿಕೆಟ್ ವಂಚಿತರ ಬೆಂಬಲಿಗರ ಅಭಿಪ್ರಾಯವಾಗಿದೆ.

ಉಳ್ವೇಕರ್ ನಿಷ್ಟಾವಂತ ಬಿಜೆಪಿಗರಲ್ಲ, ಅವರು ಆನಂದ ಅಸ್ನೋಟಿಕರ್ ಮತ್ತವರ ತಂದೆಯ ಹಿಂಬಾಲಕರಾಗಿದ್ದವರು. ಆನಂದ ಬಿಜೆಪಿಗೆ ಬಂದಾಗ ಅವರೊಂದಿಗೆ ಉಳ್ವೇಕರ್ ಬಂದಿದ್ದರು. ಆದರೆ ಆನಂದ್ ಜೊತೆಗಿನ ಬಂದರು ವ್ಯವಹಾರದ ವೈಮನಸ್ಸಿನಿಂದ ಉಳ್ವೇಕರ್ ಬಿಜೆಪಿಯಲ್ಲೇ ಉಳಿದರೆಂಬುದು ಕಟ್ಟರ್ ಬಿಜೆಪಿಗರು ಹೇಳುತ್ತಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆ ಹೊತ್ತಲ್ಲಿ ನಿಗೂಢವಾಗಿ ಸಾವಗೀಡಾಗಿದ್ದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಇಡೀ ಕರಾವಳಿಯ ಮೀನುಗಾರರ ಮತ ಪಡೆದಿದ್ದ ಬಿಜೆಪಿಯವರು ಆ ಬಳಿಕ ಉದಾಸೀನ ಮಾಡಿದ್ದರೆಂಬ ಬೇಸರ ಬೆಸ್ತರಲ್ಲಿತ್ತು.

ಅಲ್ಲದೇ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಯಿಂದ ತೊಂದರೆಗೆ ಈಡಾಗುವ ಮೀನುಗಾರರು ಬಿಜೆಪಿ ಮೇಲೆ ಸಿಟ್ಟಾಗಿದ್ದಾರೆ. ಇದೆಲ್ಲ ಸರಿ ತೂಗಿಸಲು ಮೀನುಗಾರ ಪಂಗಡದ ಉಳ್ವೇಕರ್‌ ರಗೆ ಟಿಕೆಟ್ ಕೊಟ್ಟು ಅರ್ಹರಿಗೆ ಮೋಸ ಮಾಡಲಾಗಿದೆ ಎಂದು ಬಿಜೆಪಿ ಬಂಡಯಗಾರರು ಹೇಳುತ್ತಿದ್ದಾರೆ.

ಭಟ್ಕಳದ ಬಿಜೆಪಿ ಕಾರ್ಯರ್ಕರು ಸಾಮಾಜಿಕ ಜಾಲತಾಣದಲ್ಲಿ ”ನಿಷ್ಟಾವಂತರಾಗಿ, ಪ್ರಾಮಾಣಿಕರಾಗಿ ದುಡಿದವರಿಗೆ ಬಿಜೆಪಿಯಲ್ಲಿ ಅಧಿಕಾರ ಪಡೆಯಲು ಅವಕಾಶವಿಲ್ಲ. ಪೊಲೀಸ್ ಕೇಸ್ ಹಾಕಿಸಿಕೊಳ್ಳಲು, ಜೈಲಿಗೆ ಹೋಗಲು ಮಾತ್ರ ನಿಷ್ಟಾವಂತರು ಬೇಕೆ..?” ಎಂಬ ಅಭಿಯಾನ ಶುರು ಹಚ್ಚಿಕೊಂಡಿದ್ದಾರೆ.

ಬಹುಸಂಖ್ಯಾತ ನಾಮಧಾರಿ ಜಾತಿಯ ಭಟ್ಕಳದ ಗೋವಿಂದ ನಾಯ್ಕ್‌ ರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಲಾಗಿತ್ತು. ಕೊನೆ ದಿನದವರೆಗೂ ಹಿಂದೂ ಸಂಘಟನೆಯ ಗೋವಿಂದ ನಾಯ್ಕರ್ ರಿಗೆ ಟಿಕೆಟ್ ಎಂಬ ವಾತಾವರಣವೂ ಇತ್ತು. ಅಂತಿಮವಾಗಿ ಗೋವಿಂದ ನಾಯ್ಕರಿಗೆ ಟಿಕೆಟ್ ಕೊಡದಿರುವುದು ಹಿಂದುತ್ವ ಕಾರ್ಯಕರ್ತರನ್ನು ಕೆರಳಿಸಿದೆ.

ಸಾಮಾಜಿಕ ಜಾಲ ತಾಣದಲ್ಲಿ ದೀವರು (ನಾಮಧಾರಿ) ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಚರ್ಚೆ ಜೋರಾಗಿದೆ. 32 ವರ್ಷದಿಂದ ನಾನು ಬಿಜೆಪಿಯ ವಿವಿಧ ಸಂಘಟನೆಯಲ್ಲಿ ಸಕ್ರಿಯನಾಗಿದ್ದೇನೆ. ಜಿಲ್ಲಾಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಟಿಕೆಟ್ ಕೇಳಿದವರಲ್ಲಿ ನಾನೇ ಹಿರಿಯ. ಒಮ್ಮೆ ಅವಕಾಶ ಕೊಡದಿದ್ದರೆ ಪಕ್ಷದ ಸಂಘಟನೆಯಲ್ಲಿ ಮುಂದುವರಿಯಲಾರೆ. ಕಳೆದ ಮೂರು ಬಾರಿ ಕರಾವಳಿ ಕಡೆಯವರಿಗೆ ಅವಕಾಶ ಕೊಟ್ಟರೂ ಗೆಲ್ಲಲಾಗಲಿಲ್ಲ.

ಈ ಬಾರಿ ಘಟ್ಟದ ಮೇಲಿನ ನನಗೆ ಟಿಕೆಟ್ ಕೊಡಿಯೆಂದು ಸಿದ್ದಾಪುರದ ಕೆ.ಜಿ.ನಾಯ್ಕ್ ರು ಬೇಡಿಕೆ ಇಟ್ಟಿದ್ದರು. ಅವರೀಗ ಒಳಗೊಳಗೆ ಬುಸುಗುಡುತ್ತಿದ್ದಾರೆಂಬ ಮಾತೂ ಬಿಜೆಪಿ ವಲಯಲ್ಲಿ ಕೇಳಿಬರುತ್ತಿದೆ. ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯ್ಕ್, ಗೋಕರ್ಣದ ನಾಗರಾಜ್ ನಾಯ್ಕ್ ತೊರ್ಕೆ ಹತಾಶೆಲ್ಲಿದ್ದಾರೆ.

ಈ ಗೊಣಗಾಟದ ನಡುವೆಯೇ ಅಂಕೋಲಾದ ಪಕ್ಕಾ ಸಂಘಪರಿವಾರಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ್ ಮತ್ತು ಭಟ್ಕಳ ಮೂಲದ ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ್ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಿದ್ದರಾಗಿದ್ದಾರೆ..!

ಹಣವಿರುವವರಿಗೆ ಟಿಕೆಟ್ ಎಂತಾದರೆ ಹೋರಾಟದಲ್ಲಿ, ಸಂಘಟನೆಯಲ್ಲಿ ಕೇಸ್ ಹಾಕಿಸಿಕೊಳ್ಳುವ ನಿಷ್ಟಾವಂತರ ಪಾಡೇನು..? ಎಂದು ನಾಯ್ಕ್ ಪ್ರಶ್ನಿಸುತ್ತಿದ್ದಾರೆ. ಸಂಘ ಮೂಲದಿಂದ ಬಂದು 33 ವರ್ಷದಿಂದ ಪಾರ್ಟಿ ಕೆಲಸ ಮಾಡುತ್ತಿರವ ನನಗೆ ಟಿಕೆಟ್ ಕೊಡಿಸಿಯೆಂದು ಕಾಗೇರಿ, ಹೆಬ್ಬಾರ್, ಅನಂತ್ ಹೆಗಡೆ ಮನೆ ಬಾಗಿಲಿಗೆ ಅಲೆದಿದ್ದೇನೆ..! ಅವರ‍್ಯಾರೂ ಪ್ರಯತ್ನ ಮಾಡಿಲ್ಲ. ನಿಷ್ಟಾವಂತರಿಗೆ ನೋವಾಗಿದೆ. ಅದಕ್ಕಾಗಿ ಬಂಡಾಯ ಸ್ಪರ್ಧೆಯೆಂದು ನಾರ್ವೇಕರ್ ಸಂಧಾನಕ್ಕೆ ಬಂದಿದ್ದ ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗೆ ಹೇಳಿ ಕಳಿಸಿದ್ದರೆ ಎನ್ನಲಾಗಿದೆ.

ಒಟ್ಟಿನಲ್ಲಿ ಈ ಬಂಡಾಯದಿಂದ ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬರುವುದು ಕಷ್ಟವಾಗಿದೆಯೆಂಬ ಚರ್ಚೆ ಜಿಲ್ಲೆಯಲ್ಲಿಯೆಲ್ಲೆಲ್ಲ ನಡೆದಿದೆಯೂ..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago