ಶಹಾಬಾದ: ಕೋವಿಡ-೧೯ಕ್ಕಿಂತ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಬುಧವಾರ ನಗರದ ಶಹಾಬಾದ್ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಈ ಕುರಿತು ರೈಲ್ವೆ ಮಂತ್ರಿಗಳಿಗೆ, ರೈಲ್ವೆ ಜನರಲ್ ಮ್ಯಾನೇಜರ್, ಸೋಲಾಪುರ ಡಿಆರ್‌ಎಂ ಅವರಿಗೆ ಬರೆದ ಮನವಿಯನ್ನು ನಿಲ್ದಾಣ ಪ್ರಬಂಧಕ ವಿಜಯಕುಮಾರ ಅವರಿಗೆ ಸಲ್ಲಿಸಲಾಯಿತು.
ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ರೈಲು ನಿಲ್ಲಿಸುವದು, ಟಿಕೇಟ್, ಸೀಸನ್ ಟಿಕೇಟ್ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸೋಲಾಪುರ ರೈಲ್ವೆ ವಿಭಾಗದ ಡಿಆರ್‌ಎಂ ಶಹಾಬಾದ ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸುವ ಕುರಿತು ಸಂಪೂರ್ಣ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಶೀಘ್ರದಲ್ಲಿಯೇ ಎಕ್ಸಪ್ರೆಸ್ ರೈಲು ನಿಲುಗಡೆ, ಟಿಕೇಟ್ ನೀಡುವದು ಸೇರಿದಂತೆ ಎಲ್ಲಾ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಎಚ್ಚರಿಕೆ ನೀಡಿದರು.
ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಕೆ.ರಮೇಶ ಭಟ್ಟ ಮಾತನಾಡಿ, ಕೋವಿಡ-೧೯ಕ್ಕಿಂತ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ಮಾತ್ರ ನಿಲ್ಲಿಸಲು ಕೇಳಿದ್ದರು, ಸೋಲಾಪುರ ವಿಭಾಗ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಇಂದು ರೈಲು ತಡೆ ನಡೆಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾಗ ರೈಲ್ವೆ ಇಲಾಖೆ, ಪೊಲೀಸರ ಮಧ್ಯಸ್ಥಿತಿಗೆಯಲ್ಲಿ ನ.೧೯, ೨೨ ರಂದು ಪ್ರತ್ಯೇಕ ಸಭೆ ನಡೆಸಿ ಯಾವುದೇ ನಿರ್ಧಾರಕ್ಕೆ ಬಾರದೆ, ನ.೨೩ ರಂದು ಮಧ್ಯಾಹ್ನ ೪ ಗಂಟೆಗೆ ಲಿಖಿತ ಉತ್ತರ ನೀಡಿ, ರೈಲು ತಡೆಗೆ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ .ರೈಲ್ವೆ ಇಲಾಖೆ ಈ ಕುಟಿಲ ನೀತಿಗೆ ಹೋರಾಟ ಸಮಿತಿ ಬಗ್ಗೆ ಇದ್ದು, ರೈಲ್ವೆ ಇಲಾಖೆ ಉತ್ತರಕ್ಕೆ ಪ್ರತಿಭಟಿಸಿ, ಇಂದು ಪತ್ರ ಸಲ್ಲಿಸಲಾಗುತ್ತಿದ್ದು, ಇನ್ನೂ ೧೫ ದಿನಗಳಲ್ಲಿಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ರೈಲು ತಡೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ ರಾಜಾ, ನಗರ ಸಭೆ ಅಧ್ಯಕ್ಷೆ ಅಂಜಲಿ ಕಂಬಾನೂರ, ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ,ಕರಾದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ, ಅರುಣಪಟ್ಟಣಕರ್, ಗಣಪತರಾವ ಮೇನೆ, ಜ್ಯೋತಿ ಶರ್ಮಾ, ಕುಮಾರ ಚವ್ಹಾಣ, ಮಹ್ಮದ ಜಲೀಲ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾತನಾಡಿದರು.
ಬೆಳಗ್ಗೆ ಶಹಾಬಾದ ವ್ಯಾಪರಿಗಳು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಿದರು. ಶ್ರೀರಾಮ ವೃತ್ತದಿಂದ ಬೃಹತ ಮೆರವಣಿಗೆ ಮೂಲಕ ಗಾಂಧಿ ಚೌಕ, ಮಿಲನ್ ಚೌಕ, ಮಜೀದ್ ಚೌಕ, ತ್ರಿಶೂಲ ಚೌಕ, ನೆಹರೂ ಚೌಕ ಮೂಲಕ ರೈಲು ನಿಲ್ದಾಣ ತಲುಪಲಾಯಿತು.
ಮುಖಂಡರಾದ ಕನಕಪ್ಪ ದಂಡಗುಲಕರ್, ಬಸವರಾಜ ಮಯೂರ, ಡಾ.ಅಹ್ಮದ ಪಟೇಲ, ಹಾಶಮ್ ಖಾನ್, ಫಜಲ್ ಪಟೇಲ, ಯಾಕೂಬ ಮರ್ಚಂಟ, ನಿಂಗಣ್ಣ ಹುಳಗೋಳಕರ್, ವಿಜಯಕುಮಾರ ಮುಟ್ಟತ್ತಿ, ಶಿವುಕುಮಾರ ಇಂಗಿನಶೆಟ್ಟಿ, ಸುಭಾಸ ಪಂಚಾಳ, ಶೇಖ ಬಾಬು ಉಸ್ಮಾನ, ಶಿವಶಾಲ ಪಟ್ಟಣಕರ್, ಭೀಮರಾವ ಮೇಟಿ, ಜಗನ್ನಾತ ಸುಬೇದಾರ, ಅವಿನಾಶ ಕಂಬಾನೂರ, ಉಮೇಶ ಪೋಚಟ್ಟಿ, ಶರಣು ಪಗಲಾಪುರ, ರವಿ ರಾಠೋಡ, ಕಿರಣ ಚವ್ಹಾಣ, ಶರಣು ವಸ್ತ್ರದ, ಡಾ.ಅಶೋಕ ಜಿಂಗಾಡೆ, ಮ.ಮಸ್ತಾನ, ಶರಣಗೌಡ ಪಾಟೀಲ ಗೋಳಾ, ಜಗನ್ನಾಥ ಎಸ್.ಎಚ್. ಸುಭಾಷ ಜಾಪೂರ,ಅಮರ ಕೋರೆ,ಸಂಜಯ ಕೋರೆ ಸೇರಿದಂತೆ ನಗರದ ಗಣ್ಯರು, ವ್ಯಾಪಾರಸ್ಥರು, ವಿವಿಧ ಪಕ್ಷ, ಸಂಘಟನೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ರೈಲ್ವೆ ಡಿವೈಎಸ್‌ಪಿ ವೆಂಕಣ್ಣಗೌಡ ಪಾಟೀಲ, ರೈಲ್ವೆ ಸಿಪಿಐ ರಮೇಶ ಕಾಂಬಳೆ, ಪಿಐ ಸಂತೋಷ ಹಳ್ಳೂರ, ಜಗದೇವಪ್ಪ ಪಾಳಾ, ವಾಡಿ ರೈಲ್ವೆ ಪಿಎಸ್‌ಐ ವೀರಭದ್ರಪ್ಪ, ಪಿಎಸ್‌ಐ ಗಂಗಮ್ಮಾ ಜೀನಕೇರಿ, ರೈಲ್ವೆ ಪಿಐ ಸಂದೀಪ ಪವಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಸುಮಾರು ೫೦೦ ಪೊಲೀಸ್ ಸಿಬ್ಬಂದಿ ಬಂದೋಬಸ್ತ ವ್ಯವಸ್ಥೆ ಕಲ್ಪಿಸಿದ್ದರು.
ನಗರದ ರೇಲ್ವೆ ನಿಲ್ದಾಣದಲ್ಲಿ ಪೊಲೀಸ್ ವಾಹನಗಳು, ಆರ್‌ಪಿಎಫ್,ಸಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ವಾಹನಗಳು ನಿಂತಿದನ್ನು ಕಂಡು ಒಂದು ಕ್ಷಣ ಜನರು ಆತಂಕಗೊಂಡರು. ನೂರಾರು ಸಂಖ್ಯೆಯಲ್ಲಿ ಸೇರಿದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಬಂದೋಬಸ್ತ್ ಕಂಡು ಇಷ್ಟೊಂದು ಪೊಲೀಸರು ಸೇರಿದ್ದು ನೋಡಿ ಸಾರ್ವಜನಿರು ದುಗುಡಗೊಂಡರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…