ಕಲಬುರಗಿ: ರೂಪೇಶ್ ರಾಜ್ ನಿರ್ದೇಶನ ಮಾಡಿರುವ ವಿನೂತನ ಕಥಾ ಹಂದರ ಇರುವ ಕಾಲಜ್ಞಾನ ಚಿತ್ರದ ಆಡಿಯೋ ಶನಿವಾರ ಕಲಬುರಗಿಯಲ್ಲಿ ಬಿಡುಗಡೆ ಮಾಡಿದರು.
ಸೋಷಿಯಲ್ ಮೀಡಿಯಾ ಮೂಲಕ ಆಗುವ ಅನಾಹುತಗಳನ್ನು ಮತ್ತು ಈ ಕಾಲಕ್ಕೆ ಅದರ ಪರಿಜ್ಞಾನ ಇರುವಂತಹ ನಿಟ್ಟಿನಲ್ಲಿ ವಿಶಿಷ್ಟ ಕಥೆಯನ್ನು ಬರೆದಿರುವ ವಿನಾಯಕ ಕೋಡ್ಲಾ, ಈ ಸಿನಿಮಾವನ್ನು ವಿ.ವಿ.ಎಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮೂಲಕ ಸಿದ್ಧಗೊಂಡಿದೆ.
ಕಲಬುರಗಿಯ ಪತ್ರಿಕಾ ಭವನದಲ್ಲಿ ಚಿತ್ರತಂಡವು ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚಿತ್ರದ ನಿರ್ಮಾಪಕರಾದ ವಿನಾಯಕ ಕೋಡ್ಲಾ ವಿ.ವಿ.ಎಸ್. ಮೀಡಿಯಾದ ಶಂಕರ ಕೋಡ್ಲಾ, ನಾಯಕ ನಟ ಮತ್ತು ನಿರ್ದೇಶಕ ರೂಪೇಶ್ ಜಿ. ರಾಜ್, ನಟ ಮತ್ತು ಲೇಖಕ ಮಹಿಪಾಲ್ ರೆಡ್ಡಿ, ನಟರಾದ ಕುರಿಬಾಂಡ್ ರಂಗ, ಸಂಗೀತ ನಿರ್ದೇಶಕರಾದ ಅತಿಶಯ ಜೈನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಈ ಸಂದರ್ಭದಲ್ಲಿ ಸಂದೇಶ್ ಕಮಕನೂರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಲೇಖಕ ಮಹಿಪಾಲ್ ರೆಡ್ಡಿ ಮುನ್ನೂರ ಅವರು ಆಡಿಯೋ ರಿಲೀಸ್ ಮಾಡಿದರು. ಸಂಗೀತ ನಿರ್ದೇಶಕ ಅತಿಶಯ ಜೈನ್ ಮಾತನಾಡಿ, ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ನಾಗರಾಜ್ ಬಿ.ಹುಣಸೂರು ಹಾಡುಗಳನ್ನು ಬರೆದಿದ್ದಾರೆ ಎಂದರು.
ಹೆಸರಾಂತ ಆಡಿಯೋ ಸಂಸ್ಥೆಯಾಗಿರುವ ಆಲ್ಫಾ ಡಿಜಿಟೆಕ್ ಸಂಸ್ಥೆಯು ಈ ಚಿತ್ರದ ಆಡಿಯೋ ಹಕ್ಕನ್ನು ಅತೀ ಹೆಚ್ಚು ಸಂಭಾವನೆ ನೀಡಿ ಖರೀದಿಸಿದ್ದಾರೆ.
ಕಾಲಜ್ಞಾನ ಸಿನಿಮಾದಲ್ಲಿ ಮಹೇಶ್ ಕಾಚೂರ್, ಮಲ್ಲಿಕಾರ್ಜುನ ಪಲ್ಲೇದ್ ಬಾಗಲಕೋಟೆ, ಶರಣ್ ಶೆಟ್ಟಿ, ವಿಜಯಕುಮಾರ ಗೋತಗಿ, ರೇಖಾ ಪಾಟೀಲ್, ವೀಣಾ ಪಾಟೀಲ್, ವಿಚಿತ್ರಸೇನ್ ಗೋಲ್ಡಸ್ಮಿತ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಸಂಗೀತಾ ಎನ್.ಎಮ್ ಸಾಗರ, ಸಾಯಬಣ್ಣ ದೊಡ್ಡಮನಿ, ಕಾರ್ತಿಕ್ ಕುಲಕರ್ಣಿ, ಪವಿತ್ರಾ ಪಾಟೀಲ್, ನಾಗರಾಜ್ ಹರಸೂರ, ಸಿದ್ದಾರ್ಥ ಸೇಡಂ, ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.
ಆಪಲ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಹಂಗಾಮಾ ಮ್ಯೂಸಿಕ್, ಗಾನಾ, ಅಮೇಜಾನ್ ಮ್ಯೂಸಿಕ್, ಯೂ ಟ್ಯೂಬ್ ಮ್ಯೂಸಿಕ್, ಜಿಯೋ ಸಾವನ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಕಾಲಜ್ಞಾನ ಚಿತ್ರದ ಆಡಿಯೋ ಲಭ್ಯವಿದ್ದು, ಕೇಳಿ ಆನಂದಿಸಿ.
ಕಾಲಜ್ಞಾನ ಚಲನಚಿತ್ರವು ಜನೇವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರು ಹಾಗೂ ನಾಯಕ ನಟರಾದ ರೂಪೇಶ್ ಜಿ. ರಾಜ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸುಮಾರು 60 ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆಮಾಡಿಕೊಂಡು ಈ ಸಿನಿಮಾದಲ್ಲಿ ನಟನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನರಿಂದ ಮೋಸ ಹೋಗಬಾರದು ಹಾಗೂ ಜನರಿಗೆ ಯಾವುದೇ ರೀತಿ ಮೋಸ ಮಾಡಬಾರದೆಂಬುದು ಚಿತ್ರದ ಸಂದೇಶವಾಗಿದೆ ಎಂದು ಅವರು ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…