ಬಿಸಿ ಬಿಸಿ ಸುದ್ದಿ

ಬೇಡ ಜಂಗಮ ಮೀಸಲಾತಿಗಾಗಿ ವಿಧಾನಸೌಧ ಮುತ್ತಿಗೆಗೂ ಸಿದ್ಧರಾಗಿ: ಸುಜಾತಾ ಮಠ

ಶಹಾಪುರ: ಸರಕಾರ ಬೇಡ ಜಂಗಮ ಮೀಸಲಾತಿ ಪ್ರಮಾಣ ನೀಡಬೇಕು ಪ್ರಮಾಣ ಪತ್ರ ನೀಡಲು ಮೀನ ಮೇಷ ಎಣಿಸಿದಲ್ಲಿ ಮೀಸಲಾತಿ ಪಡೆಯಲು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಿದ್ಧರಾಗೋಣ, ಈ ಹೋರಾಟದಲ್ಲಿ ಸಮುದಾಯದ ಬಾಂಧವರೆಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು, ೧೯೮೮-೮೯ರಲ್ಲಿ ಸೂರ್ಯನಾಥ ಕಾಮತ್ ಆಯೋಗವು ಕುಲ ಕಸುಬು ಆಧಾರದ ಮೇಲೆ ನೀಡಿರುವ ಶಿಫಾರಸ್ಸಿನಂತೆ ಪ್ರಮಾಣ ಪತ್ರ ನೀಡುವಂತೆ ಕರ್ನಾಟಕ ರಾಜ್ಯ ಬೇಡ ಜಂಗಮ ಮಹಾಸಾಭಾ ರಾಜ್ಯ ಸಂಚಾಲಕಿ ಸುಜಾತಾ ಮಠದ ಆಗ್ರಹಿಸಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಮಹಾಸಭಾ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬೇಡ ಜಂಗಮ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ, ಬೇಡ ಎಂದರೆ ಬೇಡಿಕೊಂಡು ತಿನ್ನುವ ಕಾಯಕ ಎಂದರ್ಥ ಬೇಡ ಜಂಗಮ ಜನಾಂಗದಲ್ಲಿ ಅಯ್ಯಾಚಾರ ದೀಕ್ಷೆ ಪಡೆಯುವ ಮೂಲಕ ಭಿಕ್ಷಾಟನೆ ಕೈಗೊಳ್ಳುತ್ತಾ ಧಾರ್ಮಿಕ ಕಾರ್ಯಗಳ ಕೈಗೊಳ್ಳುತ್ತಾ ಬಂದಿದ್ದು ನಮ್ಮ ಹಿರಿಯರು ಇದೇ ವೃತ್ತಿಯನ್ನು ಮಾಡಿಕೊಂಡು ಜೀವನ ನಡೆಸಿದ್ದಾರೆ.

ಆದರೆ ಈಗ ಭಿಕ್ಷಾಟನೆ ಎಂಬುವುದು ಅಪರಾಧವಾಗಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ಬರೆದ ಸಂವಿಧಾನದಲ್ಲಿ ಹೇಳಿರುವಂತೆ ಪ್ರತಿಯೊಬ್ಬರಿಗೂ ಗೌರವದಿಂದ ಬದುಕಲು ಮೀಸಲಾತಿ ಕೊಟ್ಟಿದಾರೆ ಆದರೆ ಬೇಡ ಜಂಗಮ ಮೀಸಲಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದು ಜಾಣ ಕುರಡುತನ ಹಾಗೂ ಕಿವುಡುತನದಿಂದ ಪ್ರದರ್ಶಿಸುತ್ತಿರುವುದು ಖೆದನೀಯ ಎಂದ ಅವರು ಬೇಡ ಜಂಗಮ ಪ್ರಮಾಣ ಪತ್ರ ನೀಡದೇ ಲಿಂಗಾಯತ ಎಂದು ಪ್ರಮಾಣ ಪತ್ರ ನೀಡುವ ಮೂಲಕ ನಮ್ಮ ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ ನಾವು ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದೇವೆ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ ಎಂದು ಕರೆ ನೀಡಿದ ಅವರು ಈ ಬಗ್ಗೆ ಬೇಡ ಜಂಗಮ ಜನಾಂಗದವರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಸಾನಿಧ್ಯ ವಹಿಸಿದ್ದ ದೇವಾಪುರ ಜಡೆಶಾಂತಲಿಂಗೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಶಿವಾಚಾರ್ಯರು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗದ್ದುಗೆ ಶಹಾಪುರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿದರು.

ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು, ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮಿಗಳು, ನಗನೂರ ಸೂಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮುದನೂರು ಹಿರೇಮಠದ ಗಿರಿಧರ ಪಂಡಿತರಾಧ್ಯ ಶಿವಾಚಾರ್ಯರು, ಕರಡಕಲ್‌ನ ಶಾಂತರುದ್ರ ಮುನಿ ಸ್ವಾಮಿಗಳು, ಮಹೇಶ್ವರ ಶರಣರು ತಾವರಗೇರಾ ಹಾಗೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಮಠದ ವೇದಿಕೆಯಲ್ಲಿ ಉಪಸ್ಥಿತಿದ್ದರು. ಬೇಡ ಜಂಗಮ ಮಹಾಸಭಾ ಜಿಲ್ಲಾಧ್ಯಕ್ಷ ಶರಣಬಸವಸ್ವಾಮಿ ಬದ್ದೆಪಲ್ಲಿ, ಯುವ ಘಟಕದ ಅಧ್ಯಕ್ಷ ನಾಗಯ್ಯಸ್ವಾಮಿ,ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಪಂಚಾಂಗಮಠ, ಶಂಕ್ರಯ್ಯಸ್ವಾಮಿ ಮದರಿ, ಸಿದ್ದಯ್ಯ ಶಾಸ್ತ್ರಿಗಳು ಬಲರಾಮ ಚೌಕವಾಡಿ, ಮಲ್ಲಿಕಾರ್ಜುನ ಸ್ವಾಮಿ ಗುರುಮಿಠಕಲ್, ವೈಜನಾಥ ಹಿರೇಮಠ ಯಾದಗಿರಿ, ಗೌರಿಶಂಕರಸ್ವಾಮಿ ವಡಗೇರಿ,ರೇವಣಸಿದ್ದಯ್ಯ ಶಹಾಪುರ, ಸಿದ್ದಯ್ಯಸ್ವಾಮಿ ಬಳ್ಳುಂಡಗಿಮಠ, ಶರಣಯ್ಯಸ್ವಾಮಿ ಮಠಪತಿ, ಚಂದ್ರಕಾಂತಸ್ವಾಮಿ ಬಳ್ಳುಂಡಗಿಮಠ, ಶಿವುಕುಮಾರ ಪಂಚಾಂಗಮಠ, ಸಿದ್ದು ಕಡ್ಲಪ್ಪಮಠ, ವಿರೇಶ ಪಂಚಾಂಗಮಠ, ಅಮರಯ್ಯಸ್ವಾಮಿ ಗೆಜ್ಜೆಯ್ಯನಮಠ ಹಾಗೂ ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜದ ಜನರು ಭಾಗವಹಿಸಿದ್ದರು.

ಬೂದಯ್ಯ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು ಶಿವುಕುಮಾರ ಮಸ್ಕಿ ಸ್ವಾಗತಿಸಿದರು ಅಮರಯ್ಯಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago