ಶಹಾಬಾದ:ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶಿವಾನಂದ ಪಾಟೀಲ ಮರತೂರ ಅವರು ಎಲ್ಲರಿಗೂ ಸ್ಪಂದಿಸುವ ವ್ಯಕ್ತಯಾಗಿರುವುದರಿಂದ ಅವರಿಗೆ ಮತದಾರರು ತಮ್ಮ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.
ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಾನಂದ ಪಾಟೀಲ ಅವರು ಎಲ್ಲರೊಂದಿಗೆ ಬೆರೆಯುವ ಉತ್ತಮ, ಸರಳ ವ್ಯಕ್ತಿತ್ವದವರು.ಅವರು ಹಿಡಿದ ಕೆಲಸವನ್ನು ಆಗುವವರೆಗೂ ಬಿಡುವುದಿಲ್ಲ.ಅಲ್ಲದೇ ಜನರ ಸಮಸ್ಯೆಗೆ ಸ್ಪಂದಿಸುವ ಹಾಗೂ ಕ್ಷೇತ್ರದ ಜನತೆಯ ಕಷ್ಟ, ಸುಖಕ್ಕೆ ಮಿಡಿಯುವ ಹೃದಯವಂತರು ಎಂಬುದು ಸ್ಥಳೀಯ ಜನರಿಗೂ ಗೊತ್ತಿದೆ.ಆದರೆ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಈಗಾಗಲೇ ವಿಧಾನಪರಿಷತ್ ಸದಸ್ಯರಾಗಿ ಏನು ಮಾಡಿದ್ದಾರೆ.
ಗೆದ್ದ ನಂತರ ಇಲ್ಲಿಯವರೆಗೆ ಗೆಲ್ಲಿಸಿದ ಮತದಾರರಿಗೆ ಎಷ್ಟು ಬಾರಿ ಬೇಟಿಯಾಗಿದ್ದಾರೆ.ಅವರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂಬುದನ್ನು ಮತದಾರರೇ ತಿಳಿದುಕೊಳ್ಳಬೇಕು.ಅಭಿವೃದ್ಧಿ ಮಾಡಿದ್ದೆನೆಂದು ಹೇಳುವ ಅವರು ಅಭ್ಯರ್ಥಿ ಅಭಿವೃದ್ಧಿ ಮಾಡಿದ್ದಾರೆಯೇ ಎಂಬುದನ್ನು ಮತದಾರರೇ ಎಂದು ಯೋಚಿಸಿ.
ಮತದಾರರು ಒಮ್ಮೆ ಶಿವಾನಂದ ಪಾಟೀಲ ಅವರ ವ್ಯಕ್ತಿತ್ವ ಅರಿತು ಮತ್ತು ತಿಳಿದುಕೊಂಡು ಮತ ನೀಡಿ ಗೆಲ್ಲಿಸಿ. ಯಾವುದೇ ಕಾರಣಕ್ಕೂ ಹಣದ ಪೆಟ್ಟಿಗೆಗೆ ಬೆಲೆ ಕೊಡದೇ, ಮತಪಟ್ಟಿಗೆಗೆ ಹೆಚ್ಚಿನ ಬೆಲೆ ನೀಡಿ.ಪ್ರಜ್ಞಾವಂತರಾದ ಮತದಾರರು ಒಮ್ಮೆ ಯೋಚಿಸಿ ಮತ ನೀಡಿ.ಅಲ್ಲದೇ ನಮ್ಮ ನಾಯಕರಾದ ಪ್ರಿಯಾಂಕ್ ಖರ್ಗೆ ಅವರು ಒಬ್ಬ ಉತ್ತಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದಾರೆ.ಅವರಿಗೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಮತದಾರರು ಮುಂದಾಗಿ ಎಂದು ಮನವಿ ಮಾಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…