ಬಳ್ಳಾರಿ ವಿಧಾನ ಪರಿಷತ್ ಚುನಾವಣೆ: ಬಿಜೆಪಿಯ ವೈ.ಎಂ.ಸತೀಶ್, ಕಾಂಗ್ರೆಸ್ ಕೆ.ಸಿ.ಕೊಂಡಯ್ಯ

  • ಕೆ.ಶಿವು.ಲಕ್ಕಣ್ಣವರ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಬಳ್ಳಾರಿ ಮತ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವೈ.ಎಂ.ಸತೀಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಭ್ಯರ್ಥಿ ವೈ.ಎಂ.ಸತೀಶ್ ಅವರು ಅಲ್ಲಿಂದ ನೇರವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿ ಹಲವರೊಂದಿಗೆ ಡಿಸಿ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿ,ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟು ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಬಿಜೆಪಿಯ ವೈ.ಎಂ.ಸತೀಶ್ ಅವರು ನಾಮಪತ್ರ ಸಲ್ಲಿಸಿದರು. ಅವರು ಮೊದಲಿಂದಲೂ ಬಿಜೆಪಿ ಪಕ್ಷದ ಸೇವಕರಾಗಿ ಕೆಲಸ ಮಾಡುತ್ತಾ ಬಂದವರು. ಅವರು ದಾನಿಗಳಾದ ವೈ.ಮಹಾಬಲೇಶ್ವರಪ್ಪ ಅವರ ಕುಟುಂಬದಿಂದ ಬಂದವರಾಗಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸೇರಿ ಅವರನ್ನು ಗೆಲ್ಲಿಸಲಿದ್ದಾರೆ ಎಂಬ ನಿರೀಕ್ಷೆಯನ್ನೂ ಹೊಂದಿದ್ದಾರೆ ವೈ.ಎಂ.ಸತೀಶ್ ಅವರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ‌ ಸದಸ್ಯತ್ವಕ್ಕೆ ಡಿಸೆಂಬರ್ 10 ರಂದು ನಡೆಯುವ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವೈ.ಎಂ ಸತೀಶ್ (ಏಚರೆಡ್ಡಿ ಸತೀಶ್) ಅವರನ್ನು ತನ್ನ ಅಭ್ಯರ್ಥಿಯನ್ಮಾಗಿ ಭಾರತೀಯ ಜನತಾ ಪಾರ್ಟಿ ಘೋಷಣೆ ಮಾಡಿದೆ.

ಈ ವರೆಗೆ ಎಂ.ಎಲ್.ಸಿ ಚುನಾವಣೆಯ ಅಭ್ಯರ್ಥಿ ಇವರೆಂದು ಎಲ್ಲೂ ಚರ್ಚೆ ಆಗಿರಲಿಲ್ಲ. ಆದರೆ ಪಕ್ಷದ ವರಿಷ್ಟ ನಾಯಕರಲ್ಲಿ ಒಬ್ಬರಾಗಿರುವ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಂತೋಷ್ ಅವರ ಮಾರ್ಗದರ್ಶನದಂತೆ ವೈ.ಎಂ. ಸತೀಶ್ ಅವರು ಟಿಕೆಟ್ ಕೇಳಿ ನೇರವಾಗಿ  ಪಕ್ಷದ ರಾಜ್ಯ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು.

ಈ‌ ಬಗ್ಗೆ ನವೆಂಬರ್ 11 ರಂದು ಮೊದಲ ಬಾರಿಗೆ ಸತೀಶ್ ಅವರು ಸ್ಪರ್ಧೆಗೆ ಮುಂದಾಗಿದ್ದಾರೆಂದು. ನವೆಂಬರ್ 13 ರಂದು ವೈ.ಎಂ. ಸತೀಶ್ ಅವರಿಗೆ ಟಿಕೆಟ್ ಖಚಿತವಾಗಿದೆ. ಈ ಬಾರಿ ಕಾಂಗ್ರೆಸ್ ನ ಕೆ.ಸಿ.ಕೊಂಡಯ್ಯ ಮತ್ತು ಇವರ ನಡುವೆ ಸ್ಪರ್ಧೆ ಎಂದು ಪತ್ರಿಕೆಗಳು ಪ್ರಕಟಿಸಿದ್ದವು.

ಗಣಿ ಉದ್ಯಮಿ, ವ್ಯವಹಾರಸ್ಥ, ಸಮಾಜ ಸೇವಕರೂ ಆಗಿರುವ  ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ಏಚರೆಡ್ಡಿ ಸತೀಶ್ ಅಂದರೆ ವೈ.ಎಂ.ಸತೀಶ್ ಅವರ ಮನೆತನದ ಹಿರಿಯರು ಸಹ ಬಿಜೆಪಿಯಲ್ಲಿದ್ದವರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಡ ಜನತೆಗೆ ಶಿಕ್ಷಣ ದೊರೆಯಬೇಕೆಂದು ಜಿಲ್ಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲಿ ಪ್ರಮುಖರಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇವರ ತಾತಾನವರು.

ಸತೀಶ್ ಅವರು ವೈ.ಮಹಾಬಲೇಶ್ವರಪ್ಪ ಅವರ ಮೂರು ಜನ‌ ಗಂಡು ಮಕ್ಕಳಲ್ಲಿ ಒಬ್ಬರಾದ ಬಸವರಾಜಪ್ಪ‌ ಅವರ ಪುತ್ರರಾಗಿದ್ದಾರೆ ವೈ.ಎಂ.ಸತೀಶ್ ಅವರು. ಮಹಾಬಲೇಶ್ವರಪ್ಪ ಅವರು ಯಾವಾಗಲೂ  ಕಾಂಗ್ರೆಸ್ ಪಕ್ಷದ ವಿರೋಧಿಗಳಾಗಿದ್ದವರು. ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದರು. ಅಲ್ಲದೇ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ‌ಯೂ ಬಳ್ಳಾರಿ ನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದವರು.
ಅವರ ಮಗ ವೈ.ಚಂಗಳಪ್ಪ ಅವರು ಸಹ ಬಿಜೆಪಿಯಲ್ಲಿದ್ದು ಈ ಪಕ್ಷದಿಂದಲೇ ಬಳ್ಳಾರಿ ಕ್ಷೇತ್ರದಿಂದ ವಿಧಾನಸಭೆಗೆ  ಸ್ಪರ್ಧೆ ಮಾಡಿದ್ದವರು.

ಈ ವರೆಗೆ ಬಿಜೆಪಿ ಪಕ್ಷದ ನೇರ ಕಾರ್ಯ ಚಟುವಟಿಕೆಗಳಿಂದ ದೂರ ಇದ್ದರೂ ಪಕ್ಷದ ಹಿತಚಿಂತಕರಾಗಿದ್ದವರು. ಆರ್.ಎಸ್.ಎಸ್ ನ ಉನ್ನತ ನಾಯಕರ ಸಂಪರ್ಕ,‌ಪಕ್ಷ ನಿಷ್ಠೆ, ಸಮಾಜ ಸೇವೆ ಅವರನ್ನು ಟಿಕೆಟ್ ಹುಡಿಕಿಕೊಂಡು ಬಂದಿದೆ ಎನ್ನಬಹುದು. ಮೊನ್ನೆ ಮಂಗಳವಾರ ಅಂದರೆ ನವೆಂಬರ್ 23 ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಅದರ ಪ್ರಕಾರ ವೈ.ಎಂ.ಸತೀಶ್ ಅವರು ಈಗ ಬಿಜೆಪಿಯ ಬಳ್ಳಾರಿ ವಿಧಾನ ಪರಿಷತ್ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆ ಕಾಂಗ್ರೆಸ್ ಪಕ್ಷದ ಕೆ.ಸಿ.ಕೊಂಡಯ್ಯ ಮತ್ತು ಬಿಜೆಪಿಯ ವೈ.ಎಂ.ಸತೀಶ್ ಅವರ ನಡುವೆಯೇ ಇದ್ದಂತೆ ಇದೆ.

# ಉಪಸಭಾಪತಿ ಚುನಾವಣೆಯೂ..! ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ಕಣಕ್ಕೆಯೂ.!!– ವಿಧಾನ ಪರಿಷತ್ ಚುನಾವಣೆಗೆ ಕೆ.ಸಿ.ಕೊಂಡಯ್ಯ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರನ್ನು ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರಷ್ಟೇ ಅಲ್ಲ ಕೆ.ಸಿ.ಕೊಂಡಯ್ಯನವರು ಕಾಂಗ್ರೆಸ್ ನ ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ.

ಸೋಲು ಗೆಲುವು ಸಹಜ, ಆದರೆ ಸ್ಪರ್ಧೆ ಮುಖ್ಯ, ನಾವು ಸ್ಪರ್ಧೆ ಮಾಡುತ್ತೇವೆ, ಸಭಾಪತಿ ಆಯ್ಕೆ ವಿಚಾರದ ಬಗ್ಗೆ ನಂತರ ತೀರ್ಮಾನಿಸುತ್ತೇವೆ ಎಂದಿದ್ದಾರೆ ಡಿ.ಕೆ.ಶಿವಕುಮಾರ್ ಅವರು. ಕಳೆದ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಸಲಹಾ ಸಮಿತಿ ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ದವಾಗಿ ಸ್ಪೀಕರ್ ಹಾಗೂ ಸರ್ಕಾರ ನಡೆದುಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ ಡಿ.ಕೆ.ಶಿವಕುಮಾರ್ ಅವರು.ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಪ್ರಾಣೇಶ್ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕೋನರೆಡ್ಡಿವೂ ಉಪಸ್ಥಿತರಿದ್ದವರು.

ಜೆಡಿಎಸ್ ಮುಖಂಡ ಎಸ್.ಎಲ್.ಧರ್ಮೇಗೌಡರ ನಿಧನದಿಂದ ಉಪ ಸಭಾಪತಿ ಸ್ಥಾನ ತೆರವಾಗಿತ್ತು. ಸಭಾಪತಿ ಸ್ಥಾನ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರಿಗೆ ದೊರಕುವುದು ಖಚಿತವಾಗಿದೆ. ಹಾಗೆಯೇ ಆಗಿದೆ ಕೂಡ ಈಗ..! ಕಾಂಗ್ರೆಸ್ ನ ಕೆ.ಸಿ.ಕೊಂಡಯ್ಯ ಮತ್ತು ಬಿಜೆಪಿಯ ವೈ.ಎಂ.ಸತೀಶ್ ನಡುವೆಯೇ ಈ ಚುನಾವಣೆ ಇದ್ದಂತೆ ಇದೆಯೂ..! ಇಲ್ಲಿ ಜೆಡಿಎಸ್ ಮುಂಖಂಡ ಎಸ್.ಎಲ್.ಧರ್ಮೇಗೌಡರು ನಿಧನದಿಂದ ತೆರವಾದ ಉಪ ಸಭಾಪತಿ ಸ್ಥಾನದ ಪೈಪೋಟಿಯೂ ಆಗಿದೆ ಕೂಡ..!

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420