ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಬಿಜೆಪಿ ಪಕ್ಷದ ಅಭ್ಯಾರ್ಥಿ ಬಿ.ಜಿ ಪಾಟೀಲ್ ಪರವಾಗಿ ಪ್ರಚಾರ ಸಭೆ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಕಾಂಗ್ರೆಸ್ ಪಕ್ಷ ಖಾಲಿ ಡಬ್ಬಾ ಇದ್ದಂತೆ ಬರೀ ಸೌಂಡ್ ಮಾಡಲಿದೆ,ಆದರೆ ಬಿಜೆಪಿ ಇಂದ ಅಭಿವೃಧ್ಧಿ ಸಾಧ್ಯ,ನರೇಂದ್ರ ಮೋದಿಜಿಯವರ ಸರಕಾರ ಮಾಡಿರುವ ಅಭಿವೃಧ್ಧಿ ಕಾರ್ಯಗಳು ಕಣ್ಮುಂದಿವೆ ಎಂದರು.ಪ್ರತಿ ಗ್ರಾಮಕ್ಕೆ ಕುಡಿಯುವ ನೀರು,ಅಲ್ಲದೆ ನಮ್ಮ ತಾಲೂಕಿನಲ್ಲಿನ ಕುಡಿಯುವ ನೀರಿಗಾಗಿ ೧೨೦೦ ಕೋಟಿ ಅನುದಾನ ಬಂದಿದೆ ಎಂದರು.
ಇನ್ನು ಕೆಲ ಕಾಂಗ್ರೆಸಿಗರು ರೈತರಿಗೆ ಹಿಂಗಾರು ಬೆಳೆಗೆ ನೀರು ಬರುವುದಿಲ್ಲ ಎಂದು ಸುದ್ದಿ ಹಬ್ಬಿಸಿದರು.ಆದರೆ ಈಗ ಮಾರ್ಚ್ ೧೭ರ ವರೆಗೆ ನೀರು ಬರುತ್ತಿವೆ ಎನ್ನುವುದು ತಿಳಿದು ಮಾತು ಬಂದಾಗಿವೆ.ನನಗೆ ಅಧಿಕಾರ ಇರಲಿ ಇಲ್ಲದಿರಲಿ ನಾನು ರೈತರಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಇನ್ನು ರಾಜುಗೌಡ ಶಾಸಕನಾದರೆ ಉಚಿತ ಮರಳು ಕೊಡಿಸುವುದಾಗಿ ಹೇಳಿದ್ದರು ಕೊಡಿಸಿದರಾ ಎಂದು ಕೇಳುತ್ತಿದ್ದಾರೆ.ಆದರೆ ಕಾಂಗ್ರೆಸ್ ಮುಖಂಡರ ಮನೆಯವರೆ ಎಲ್ಲಾ ಮರಳು ಮಾರುತ್ತಿದ್ದಾರೆ ಅದನ್ನು ನಿಲ್ಲಿಸಲಿ ಆಗ ಜನರಿಗೆ ಉಚಿತವಾಗಿ ಮರಳು ಕೊಡದಿದ್ದರೆ ಜನರೆ ಬಂದು ನನ್ನ ಮೀಸೆ ಬೋಳಿಸಲಿ ಎಂದರು.
ಮೊನ್ನೆ ಕೊಡೇಕಲ್‌ನಲ್ಲಿ ಮೆರವಣಿಗೆ ನಡೆಸಿ ಮೋದಿಯದು ೫೬ ಇಂಚಿನ ಎದೆ ಬಗ್ಗೆ ಮಾತನಾಡಿದ್ದಾರೆ.ಆದರೆ ಮೋದಿಯವರು ಬೇಡ ನನ್ನದು ೪೪ ಇಂಚಿನ ಎದೆಯನ್ನು ದಾಟಿ ಹೋಗಿ ಎಂದರು,ಕಾಂಗ್ರೆಸ್ ಕಾಂಗ್ರೆಸ್ ಕಾರ್ಯರ್ತರು ಜಗಳವಾಡಿದರೆ ಅದನ್ನು ನಮ್ಮ ಮೇಲೆ ಹಾಕುತ್ತಾರೆ.ರಾಜುಗೌಡ ಬಬ್ಲುಗೌಡ ಯಾವುತ್ತೂ ಜನರೊಂದಿಗೆ ಇರುತ್ತಾರೆ,ಯಾರು ಕ್ಷೇತ್ರದಲ್ಲಿ ಜಗಳವಾಡುತ್ತಾರೆ ಎಂದು ಜನರಿಗೆ ಗೊತ್ತಿದೆ,ಜನರ ಮನೆಯ ಮಗನಾಗಿ ನಾನು ಇರುವೆನು ಎಂದರು.
ನೀವೆಲ್ಲ ಜನರು ಕೊಟ್ಟ ಅಧಿಕಾರದಿಂದ ಇಂದು ನಿಮ್ಮ ರಾಜುಗೌಡನನ್ನು ರಾಜ್ಯದ ನಮ್ಮ ನಾಯಕರು ಗುರುತಿಸಿ ಜವಬ್ದಾರಿ ನೀಡುತ್ತಾರೆ ಅದಕ್ಕಾಗಿ ನಾನು ಹೋಗುವೆ,ಅಲ್ಲದೆ ಬೆಂಗಳೂರಿಗೆ ಹೋಗುವ ಬಗ್ಗೆ ಮಾತನಾಡುತ್ತಾರೆ,ಆದರೆ ಕ್ಷೇತ್ರದ ಅಭಿವೃಧ್ಧಿಗೆ ಅನುದಾನ ತರಲು ಹೋಗುವೆ,ನನ್ನ ಅವಧಿಯಲ್ಲಿ ಆಗಿರುವ ಅಭಿವೃಧ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲ್ ಹಾಕಿದರು,ಅಲ್ಲದೆ ನಾನು ಮಾಡಿದ್ದರಲ್ಲಿ ಕಾಂಗ್ರೆಸ್ ೨೦% ಅಭಿವೃಧ್ದಿ ಮಾಡಿದ್ದರೆ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದರು. ಬಿ.ಜಿ ಪಾಟೀಲ್ ಅವರೆ ನಿಮಗೆ ನಮ್ಮ ಕ್ಷೇತ್ರದಲ್ಲಿ ೫೦೦ಕ್ಕಿಂತ ಹೆಚ್ಚಿನ ಮತಗಳನ್ನು ಹಾಕಿಸುವೆ ಬರೆದಿಟ್ಟುಕೊಳ್ಳಿ ಎಂದು ಭರವಸೆ ನೀಡಿದರು.
ಅಭ್ಯಾರ್ಥಿ ಬಿ.ಜಿ.ಪಾಟೀಲ್ ಮಾತನಾಡಿ, ಕಳೆದ ಬಾರಿ ತಾವೆಲ್ಲರು ಬೆಂಬಲಿಸಿ ಆರಿಸಿ ತಂದಿದ್ದೀರಿ ಅದಂತೆ ಸಾಧ್ಯವಾದಷ್ಟು ಅಭಿವೃಧ್ಧಿ ಕೆಲಸ ಮಾಡಿದ್ದೇನೆ,ಆದರೆ ಸದನದಲ್ಲಿ ನಮ್ಮ ಹಿರಿಯರು ಮಾತನಾಡುವುದರಿಂದ ನಾನು ಮಾತನಾಡಿಲ್ಲ,ಆದರೆ ಬಂದಿರುವ ಅನುದಾನದಲ್ಲಿ ಅಭಿವೃಧ್ಧಿ ಮಾಡಿರುವೆ,ಇನ್ನಷ್ಟು ಕೆಲಸ ಮಾಡಲು ಮತ್ತೊಮ್ಮೆ ತಾವೆಲ್ಲರು ಬೆಂಬಲಿಸಿ ಮತ ನೀಡುವಂತೆ ವಿನಂತಿಸಿದರು.ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಾ:ಶರಣಭೂಪಾಲರಡ್ಡಿ ನಾಯ್ಕಲ್,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ಮುಖಂಡರಾದ ಬಸನಗೌಡ ಯಡಿಯಾಪುರ,ಯಲ್ಲಪ್ಪ ಕುರಕುಂದಿ,ಮರಿಲಿಂಗಪ್ಪ ಕರ್ನಾಳ,ಹೆಚ್.ಸಿ ಪಾಟೀಲ್, ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಸಿದ್ದನಗೌಡ ಕರಿಬಾವಿ,ರಂಗನಗೌಡ ಪಾಟೀಲ್ ಮಾತನಾಡಿದರು.
ವೇದಿಕೆ ಮೇಲೆ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್,ಮುಖಂಡರಾದ ಕಿಶೋರಚಂದ್ ಜೈನ್,ದೊಡ್ಡ ದೇಸಾಯಿ ದೇವರಗೋನಾಲ,ಭೀಮಾಶಂಕರ ಬಿಲ್ಲವ್,ಪ್ರಕಾಶ ಸಜ್ಜನ್,ಎಪಿಎಮ್‌ಸಿ ಅಧ್ಯಕ್ಷ ದುರಗಪ್ಪ ಗೇಗೊಕೇರಾ,ದೇವಿಂದ್ರನಾಥ ನಾದ್,ಗುರು ಕಾಮಾ,ಭೀಮಾಶಂಕರ ಬಿಲ್ಲವ್,ಕುಮಾರಸ್ವಾಮಿ ಗುಡ್ಡಡಗಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಹಾಗು ಪುರಸಭೆ ಮತ್ತು ನಗರಸಭೆ ಸದಸ್ಯರು ಸೇರಿದಂತೆ ಅನೇಕರಿದ್ದರು.ಜಾನಪದ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು,ಮೇಲಪ್ಪ ಗುಳಗಿ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…