ಬಿಸಿ ಬಿಸಿ ಸುದ್ದಿ

ಚಿತ್ತಾರಿ ಆಗ್ರಿಕೇರ್‌ ನಿಂದ ಸಾವಯವ ಕಚ್ಚಾವಸ್ತುಗಳನ್ನ ಬಳಸಿಕೊಂಡು ತಯಾರಿಸಲಾದ ರಸಗೊಬ್ಬರಗಳ ಬಿಡುಗಡೆ

ಬೆಂಗಳೂರು: ನೈಸರ್ಗಿಕ ಹಾಗೂ ಸಾವಯವ ಕಚ್ಚಾವಸ್ತುಗಳನ್ನು ಬಳಸಿಕೊಂಡು ರಾಜ್ಯದಲ್ಲೇ ಪ್ರಪ್ರಥಮವಾಗಿ ಉತ್ಪಾದಿಸಲಾಗುತ್ತಿರುವ ಚಿತ್ತಾರಿ ಅಗ್ರಿಕೇರ್‌ ನ ನ್ಯೂಟ್ರಿಮೇಂಟ್‌ ರಸಗೊಬ್ಬರಗಳನ್ನು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಚಿತ್ತಾರಿ ಅಗ್ರಿಕೇರ್‌ ಹಾಗೂ ಬಯಾರ್ಡ್‌ ಅಗ್ರೋಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಪಿ. ವಿಜಯಕುಮಾರ್‌ ಶೆಟ್ಟಿ, ಕರೋನಾ ಸಾಂಕ್ರಾಮಿಕದ ಕಾರಣದಿಂದ ವಿಶ್ವದಾದ್ಯಂತ ರಸಗೊಬ್ಬರಗಳ ಉತ್ಪಾದನೆಗೆ ಬಳಸಲಾಗುವ ರಾಸಾಯನಿಕಗಳ ಕೊರತೆಯಿದೆ.

ಅದರಲ್ಲೂ ಪೆಟ್ರೋಯಲಿಂ ಉತ್ಪನ್ನಗಳ ಕೊರತೆಯೂ ಇದೆ. ಇದರಿಂದಾಗಿ ದೇಶದಲ್ಲಿ ರಸಗೊಬ್ಬರದ ಉತ್ಪಾದನೆ ಕಡಿಮೆಯಾಗಿದ್ದು, ರಸಗೊಬ್ಬರಗಳ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವಂತಹ ಮೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ಹಾಗೂ ಸೀವೀಡ್‌ ಮತ್ತು ಹ್ಯೂಮಿಕ್‌ ಬಾಲ್‌ಗಳನ್ನು ಬಳಸಿಕೊಂಡು ರಸಗೊಬ್ಬರಗಳನ್ನು ತಯಾರಿಸಿದ್ದೇವೆ. ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಯಾರಿಸುತ್ತಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದು.

ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು
-ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ” ಕಾನ್ಸೆಪ್ಟ್‌ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ
-ಮ್ಯೊಲ್ಯಾಸಿಸ್‌ ನಿಂದ ತಯಾರಿಸಲಾದ ಪೊಟ್ಯಾಶ್‌, ಪಾಸ್ಫೇಟ್‌ ರಿಚ್‌ ಆಗ್ಯಾರ್ನಿಕ್‌ ಮನ್ಯೂರ್‌, ನೀಮ್‌ ನಂತಹ ಪದಾರ್ಧಗಳ ಬಳಕೆ

ನಿರ್ದೇಶಕರಾದ ಗಣೇಶ್‌ ಹೆಗ್ಡೆ ಮಾತನಾಡಿ, ದೇಶದ ಹಾಗೂ ರಾಜ್ಯದ ರೈತರಿಗೆ ಸಾವಯವ ರಸಗೊಬ್ಬರಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ವತಿಯಿಂದ ನಾನ್‌ ಎಡಿಬಲ್‌ ಡಿ-ಆಯಿಲ್ಡ್‌ ನೀಮ್‌ ಕೇಕ್‌ ಆಗಿರುವ ನಂದಿ, ಸೀ ವೀಡ್‌ ಬಳಸಿಕೊಂಡು ತಯಾರಿಸಲಾಗಿರುವ ಸಮುದ್ರ, ಮ್ಯೋಲ್ಯಾಸಿಸ್‌ ನಿಂದ ತಯಾರಿಸಲಾಗಿರುವ ಪೊಟ್ಯಾಶ್‌ ಹೊಂದಿರುವ ವಜ್ರ, ಫಾಸ್ಪೇಟ್‌ ರಿಚ್‌ ಆಗ್ಯಾನಿಕ್‌ ಮನ್ಯೂರ್‌ ಹೊಂದಿರುವ ಭೂಮಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದೇವೆ. ರೈತರುಗಳು ರಾಸಾಯನಿಕ ಬಳಸದೇ ಇರುವ ಸಾವಯವ ರಸಗೊಬ್ಬರಗಳನ್ನು ಬಳಸಿರುವ ರಸಗೊಬ್ಬರಗಳನ್ನು ಬಳಸಬೇಕು ಎಂದರು.

ಕಾರ್ಯಕ್ರಮದಲ್ಲಿ, ರಾಯಚೂರಿನ ಸಾಗರ್‌ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ರೀನಿವಾಸ್‌, ಬಾಗೋಡಿ ಟ್ರೇಡಿಂಗ್‌ ನ ಮಾಲೀಕರಾದ ದೇವರಾಜ್‌, ರೀಜನಲ್‌ ಮ್ಯಾನೇಜರ್‌ ರಾಮಯ್ಯ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago