ಬೆಂಗಳೂರು: ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರನ್ನು ಜನಪ್ರಿಯ ಮೌಂಟೇನ್ ಡ್ಯೂ ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.
ಇದು ಮೌಂಟೇನ್ ಡ್ಯೂ ಮತ್ತು ಮಹೇಶ್ ಬಾಬು ನಡುವಿನ ಹೈವೋಲ್ಟೇಜ್ ಪಾಲುದಾರಿಕೆ ಎನಿಸಿದ್ದು, ಈ ಪಾಲುದಾರಿಕೆ ಮೂಲಕ ಬ್ರ್ಯಾಂಡ್ ಮತ್ತಷ್ಟು ವಿಸ್ತಾರ ಪ್ರದೇಶದ ಮಾರುಕಟ್ಟೆಯನ್ನು ತಲುಪಲಿದೆ ಮತ್ತು ಮೌಂಟೇನ್ ಡ್ಯೂನ ಜನಪ್ರಿಯ ಜಾಹೀರಾತು ಆಗಿರುವ `ಡರ್ ಕೆ ಆಗೆ ಜೀತ್ ಹೈ’(ಭಯದ ಮುಂದೆ ಜಯವಿದೆ) ಅನ್ನು ಇನ್ನಷ್ಟು ಜನಪ್ರಿಯಗೊಳಿಸಲಿದೆ.
ಕಳೆದ ಹಲವಾರು ವರ್ಷಗಳಿಂದ ಮೌಂಟೇನ್ ಡ್ಯೂ ಯುವ ಸಮುದಾಯವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಬ್ರ್ಯಾಂಡ್ ನ ತತ್ತ್ವವೆಂದರೆ ಭಯಗೊಳ್ಳುವವರಲ್ಲಿ ಸವಾಲನ್ನು ಎದುರಿಸುವ ಛಲವಿದ್ದರೆ ಅವರು ನಿಜಕ್ಕೂ ವಿಜಯಶಾಲಿಯಾಗುತ್ತಾರೆ ಎಂಬುದಾಗಿದೆ.
ಮತ್ತೊಂದೆಡೆ ಮಹೇಶ್ ಬಾಬು ತೆಲುಗು ಚಿತ್ರರಂಗದಲ್ಲಿ ಅವಿರತ ಶ್ರಮ ಮತ್ತು ಶ್ರದ್ಧೆಯಿಂದ ಯಶಸ್ಸಿನ ಉತ್ತುಂಗವೇರಿದ್ದಾರೆ. ಇದರ ಮೂಲಕ ಅವರು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.
ಮಹೇಶ್ ಬಾಬು ಅವರೊಂದಿಗಿನ ಈ ಒಪ್ಪಂದವು 2022 ರ ಬೇಸಿಗೆಯನ್ನು ಮತ್ತಷ್ಟು ಸಾಹಸಮಯ, ಮತ್ತಷ್ಟು ಕೌತುಕ ಹಾಗೂ ಛಲದಲ್ಲಿ ಎದುರಿಸುವಲ್ಲಿ ಗ್ರಾಹಕರನ್ನು ತೊಡಗಿಕೊಳ್ಳುವಂತೆ ಮಾಡಲಿದೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಮೌಂಟೇನ್ ಡ್ಯೂ & ಸ್ಟಿಂಗ್ ನ ಕೆಟಗರಿ ಡೈರೆಕ್ಟರ್ ವಿನೀತ್ ಶರ್ಮಾ ಅವರು, “ನಾವು ತೆಲುಗಿನ ಅತ್ಯಂತ ಜನಪ್ರಿಯ ನಟರಾಗಿರುವ ಮಹೇಶ್ ಬಾಬು ಅವರೊಂದಿಗೆ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ಹೆಮ್ಮೆ ಮತ್ತು ಸಂತೋಷವೆನಿಸುತ್ತಿದೆ. ಅವರು `ಡರ್ ಕೆ ಆಗೇ ಜೀತ್ ಹೈ’ ಎಂಬ ಬ್ರ್ಯಾಂಡ್ ನ ತತ್ತ್ವಶಾಸ್ತ್ರ ನಿಜವಾದ ಸಾಕಾರರಾಗಿದ್ದಾರೆ. ಇದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಇರುವ ಅವರ ಅಸಂಖ್ಯಾತ ಅಭಿಮಾನಿಗಳು ಇದನ್ನು ಆನಂದಿಸುತ್ತಾರೆ.
ನಾವು ನಮ್ಮ ಬ್ರ್ಯಾಂಡ್ ನ ಹೆಜ್ಜೆ ಗುರುತನ್ನು ವಿಸ್ತರಣೆ ಮಾಡಲು ಆಲೋಚನೆ ಮಾಡುತ್ತಿರುವ ಸಂದರ್ಭದಲ್ಲಿ ಈ ಭಾಗದಲ್ಲಿ ಗ್ರಾಹಕರ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹೇಶ್ ಬಾಬು ಅವರು ಪ್ರಮುಖ ಪಾತ್ರವಹಿಸಲಿದ್ದಾರೆ.
2022 ರಲ್ಲಿ ಮೌಂಟೇನ್ ಡ್ಯೂ ಅವರೊಂದಿಗೆ ಜರ್ನಿಯನ್ನು ಉತ್ತಮ ರೀತಿಯಲ್ಲಿ ನಡೆಸಲು ಉತ್ಸುಕರಾಗಿದ್ದೇವೆ. ಭಯವನ್ನು ಧಿಕ್ಕರಿಸುವ ಅವತಾರಗಳಲ್ಲಿ ನಟಿಸುವ ಜಾಹೀರಾತುಗಳಲ್ಲಿ ಮಹೇಶ್ ಬಾಬು ಅವರನ್ನು ನೋಡಲು ನಾವು ಸಜ್ಜಾಗಿದ್ದೇವೆ’’ ಎಂದರು.
ಈ ಬಗ್ಗೆ ಮಾತನಾಡಿದ ಬ್ರ್ಯಾಂಡ್ ಅಂಬಾಸಿಡರ್ ಮಹೇಶ್ ಬಾಬು ಅವರು, “ಪ್ರತಿಯೊಬ್ಬರೂ ಯಾವುದಾದರೊಂದು ರೂಪದಲ್ಲಿ ಭಯವನ್ನು ಎದುರಿಸುತ್ತಾರೆ ಎಂಬುದನ್ನು ನಾನು ನಂಬುತ್ತೇನೆ. ಚಲನಚಿತ್ರ ತಾರೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ನಾವೆಲ್ಲಾ ಧೈರ್ಯಶಾಲಿ ಮತ್ತು ಅಜೇಯರಾಗಿ ಇರಬೇಕೆಂಬುದನ್ನು ನಾವು ನಿರೀಕ್ಷಿಸುತ್ತೇವೆ.
ಆದಾಗ್ಯೂ ನಿಜವಾದ ನಾಯಕನು ಭಯ ಮತ್ತು ಸ್ವಯಂ ಅನುಮಾನವನ್ನು ಜಯಿಸಲು ಎಲ್ಲಾ ಗಡಿಗಳನ್ನು ದಾಟಿ ಮುಂದೆ ಸಾಗುತ್ತಾನೆ. ಇದೇ ಪರಿಕಲ್ಪನೆಯನ್ನು ಹೊಂದಿರುವ ಮೌಂಟೇನ್ ಡ್ಯೂನ ತತ್ತ್ವಶಾಸ್ತ್ರವಾಗಿರುವ `ಡರ್ ಕೆ ಆಗೇ ಜೀತ್ ಹೈ’ ನನ್ನ ಜೊತೆ ಯಾವಾಗಲೂ ಅನುರಣಿಸುತ್ತಿರುತ್ತದೆ.
ಏಕೆಂದರೆ, ಅದು ನನ್ನ ನಂಬಿಕೆಗೆ ಅನುಗುಣವಾಗಿದೆ. ನಾನು ಯಾವಾಗಲೂ ಸವಾಲುಗಳನ್ನು ಮೆಟ್ಟಿ ನಿಲ್ಲುವುದನ್ನು ಇಷ್ಟಪಡುತ್ತೇನೆ ಮತ್ತು ಶೀಘ್ರದಲ್ಲೇ ನಮ್ಮ ಪ್ರೇಕ್ಷಕರಿಗೆ ಮ್ಯಾಜಿಕ್ ಮಾಡಲು ಮೌಂಟೇನ್ ಡ್ಯೂ ಜೊತೆ ಕೈಜೋಡಿಸಲು ನಾನು ರೋಮಾಂಚನಗೊಂಡಿದ್ದೇನೆ’’ ಎಂದು ಹೇಳಿದರು.
ಈ ಸಹಭಾಗಿತ್ವದ ಭಾಗವಾಗಿ ಮಹೇಶ್ ಬಾಬು ಅವರು ಹೊಸ ಟಿವಿಸಿ ಕ್ಯಾಂಪೇನ್ ನಲ್ಲಿ ನಟಿಸಲಿದ್ದಾರೆ ಮತ್ತು ಅತಿ ಶೀಘ್ರದಲ್ಲಿಯೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೌಂಟೇನ್ ಡ್ಯೂ ಸಿಂಗಲ್/ಮಲ್ಟಿ ಸರ್ವ್ ಪ್ಯಾಕ್ ಗಳಲ್ಲಿ ಲಭ್ಯವಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…