ಸುರಪುರ: ಜೀವನದಲ್ಲಿ ಯಾವುದೋ ತಪ್ಪನ್ನು ಮಾಡಿ ಬಂಧಿಖಾನೆಗೆ ಬರುವ ಕಾರಾಗೃಹದಲ್ಲಿರುವ ನಿವಾಸಿಗಬಂಧಿಖಾನೆಯಲ್ಲಿ ಬಂಧಿಯಾಗಿದ್ದೇವೆ ಎಂಬ ಒಂದು ರೀತಿಯ ತೊಳಲಾಟ ಇರುತ್ತದೆ ಈ ತೊಳಲಾಟವನ್ನು ಹೋಗಲಾಡಿಸಿ ಮನಸ್ಥಿತಿಯನ್ನು ಸುಭದ್ರಗೊಳಿಸುವ ಜೊತೆಗೆ ಇಲ್ಲಿಂದ ಹೊರಗಡೆ ಹೋದ ನಂತರ ಶೈಲಿಯುಕ್ತ ಬದುಕು ಬದುಕಲು ಅಳವಡಿಸಿಕೊಳ್ಳಬೇಕಾದ ನಿಯಮಗಳು ಹಾಗೂ ಕೌಶಲ್ಯಗಳು ತಿಳಿಯಲು ಇಂತಹ ಕಾರ್ಯಕ್ರಮಗಳು ತುಂಬಾ ಅಗತ್ಯ ಎಂದು ತಾಲೂಕು ಕಾನೂನು ನೆರವು ಸಮಿತಿ ಕಾರ್ಯದರ್ಶಿ ಹಾಗೂ ದಿವಾಣಿ ನ್ಯಾಯಾಧೀಶರಾದ ಚಿದಾನಂದ ಬಡಿಗೇರ ಹೇಳಿದರು.
ನಗರದ ಉಪ ಕಾರಾಗೃಹದಲ್ಲಿ ತಾಲೂಕು ಉಪ ಕಾರಾಗೃಹ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯಾದಗಿರಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸಹಯೋಗದಲ್ಲಿ ಉಪ ಕಾರಾಗೃಹ ಬಂಧಿ ನಿವಾಸಿಗಳಿಗೆ ಹಮ್ಮಿಕೊಂಡಿದ್ದ ಕೌಶಲಾಭಿವೃದ್ಧಿ ತರಬೇತಿ ಹಾಗೂ ಯೋಗ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಈಗಾಗಲೇ ಬಂಧಿಖಾನೆ ನಿವಾಸಿಗಳಿಗೆ ಮನ: ಪರಿವರ್ತನೆಗಾಗಿ ಓದು ಬರಹ ಕಲಿಕೆ ಕಾರ್ಯಕ್ರಮ ಕೈಗೊಳ್ಳಲಾಗಿದೆ ಮನುಷ್ಯ ಜೀವನವನ್ನು ಸುಧಾರಣೆ ಮಾಡಿಕೊಂಡು ಸಾಧನೆ ಮಾಡಿಕೊಳ್ಳಬೇಕು ಈಗ ಮನುಷ್ಯ ಜೀವನವನ್ನು ಹೇಗೆ ಸಾಧನೆ ಹಾಗೂ ಸುಧಾರಣೆ ಮಾಡಿಕೊಳ್ಳಬೇಕು ತಿಳಿಯಲು ಇಂತಹ ಶಿಬಿರಗಳು ತುಂಬಾ ಸಹಕಾರಿ ಎಂದು ಹೇಳಿದರು.
ಬದುಕುವುದು ಬೇರೆ ಶೈಲಿಯುಕ್ತವಾಗಿ ಬದುಕುವುದು ಬೇರೆ ಎಂದು ಹೇಳಿದ ಅವರು ಬದುಕಲಿಕ್ಕೆ ಆಹಾರ,ಬಟ್ಟೆ,ವಸತಿ ಇದ್ದರೆ ಸಾಕು ಆದರೆ ಶೈಲಿಯುಕ್ತ ಬದುಕನ್ನು ಬದುಕಲು ಕೆಲವು ನಿಯಮಗಳು ಹಾಗೂ ಕೆಲವು ಕೌಶಲ್ಯತೆಗಳು ಇವೆ ಈ ಶಿಬಿರದ ಮೂಲಕ ಅವುಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಹೇಳಿದರು.
ಯಾದಗಿರಿ ಜಿಲ್ಲಾ ಆರ್ಟ್ ಆಫ್ ಲೀವಿಂಗ್‌ನ ಜಿಲ್ಲಾ ಸಂಯೋಜಕ ಎಸ್.ಎಚ್.ರೆಡ್ಡಿರವರು ಮಾತನಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಅಳವಡಿಸಿಕೊಳ್ಳಬೇಕು ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಹಾಯಕ ಕೌಶಲ್ಯಾಧಿಕಾರಿ ಬಸಪ್ಪ ತಳವಾಡಿ ಕಾರಾಗೃಹ ಬಂಧಿನಿವಾಸಿಗಳಿಗೆ ಜೀವನೋಪಾಯಕ್ಕಾಗಿ ವಿದ್ಯಾವಂತ ಬಂಧಿ ನಿವಾಸಿಗಳಿಗೆ ಕಂಪ್ಯೂಟರ ಹಾಗೂ ಇನ್ನೂ ಕೆಲವರಿಗೆ ಪ್ಲಬಿಂಗ್ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಉಪ ಕಾರಾಗೃಹದ ಅಧೀಕ್ಷಕರಾದ ವಿಜಯಲಕ್ಷ್ಮೀ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಆರ್ಟ್ ಆಫ್ ಲೀವಿಂಗ್‌ನ ತಾಲೂಕು ಸಂಚಾಲಕ ಬಸವರಾಜ ಬೂದಿಹಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು, ವೀಕ್ಷಕರಾದ ಬಸವರಾಜ ಸಜ್ಜಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು ಪ್ರವೀಣ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…