ಬಿಸಿ ಬಿಸಿ ಸುದ್ದಿ

ಗ್ರಾಮಸ್ವರಾಜ್ ಕನಸು‌ ನನಸಾಗಲು ಕಾಂಗ್ರೆಸ್ ಗೆ ಮತ ನೀಡಿ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಮಹಾತ್ಮಾಗಾಂಧಿ ಯವರು ಗ್ರಾಮ್ ಸ್ವರಾಜ್ ಕನಸು‌ ನನಸಾಗಬೇಕಾದರೆ ಚಿತ್ತಾಪುರ ತಾಲೂಕಿನ ಪ್ರತಿಯೊಬ್ಬ ಮತದಾರರು ನಿಷ್ಠೆಯಿಂದ ಕಾಂಗ್ರೆಸ್ ಪಕವನ್ನು ಗೆಲ್ಲಿಸಬೇಕು ಎಂದು ಮಾಜಿ‌ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ‌ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಚಿತ್ತಾಪುರ ಪಟ್ಟಣದಲ್ಲಿ ನಡೆದ ಕಲಬುರಗಿ ಯಾದಗಿರಿ‌ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತಮಾಡುತ್ತಿದ್ದರು.

ಈ‌ ಚುನಾವಣೆ ಕೇವಲ‌ ಶಿವಾನಂದ್ ಪಾಟೀಲ್‌ ಅವರ ಹಾಗೂ ಬಿ.ಜಿ ಪಾಟೀಲ್ ನಡುವಿನ ಹೋರಾಟವಲ್ಲ. ಈ ಚುನಾವಣೆಯ ಫಲಿತಾಂಶ ಪಂಚಾಯತರಾಜ್‌ ವ್ಯವಸ್ಥೆಯನ್ನು‌ ಬಲಿಷ್ಠಗೊಳಿಸುತ್ತದೆ. ನಮ್ಮ ಪಕ್ಷದ ಅಭ್ಯರ್ಥಿ ಪಂಚಾಯತ ಮಟ್ಟದ ಎಲ್ಲ ಹಂತದ ಅನುಭವ ಹೊಂದಿದಾರೆ ಅವರಿಂದ ಮಾತ್ರ ಪಂಚಾಯತ ರಾಜ್ ವ್ಯವಸ್ಥೆ ಬಲಗೊಳ್ಳಲಿದೆ. ಯಾಕೆಂದರೆ ಈ ಹಿಂದೆ ಗೆದ್ದು ಬಂದಿದ್ದ‌ ಬಿ.ಜಿ‌.‌ಪಾಟೀಲ್‌ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ರೈತರ‌ ಬಡವರ ಕೂಲಿ ಕಾರ್ಮಿಕರ ಹಿತ ಕಾಪಾಡಲು ವಿಫಲವಾಗಿವೆ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ರೈತರ 72000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿ ಪ್ರಧಾನಿಯಾದ ಮೇಲೆ ಉದ್ದೆಮಿದಾರರ 6 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದು ಅವರ ಬಡವರ ವಿರೋಧಿ ಹಾಗೂ ಉದ್ದಿಮೆದಾರರ ಪರ ಕಾಳಜಿ ತೋರಿಸುತ್ತದೆ ಎಂದರು.

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ದಲ್ಲಿ ಮುಳುಗಿದೆ. ಸಚಿವರು ಲೂಟಿಯಲ್ಲಿ ಮಗ್ನರಾಗಿದ್ದಾರೆ. ಪ್ರತಿಯೊಂದು ಬಿಲ್‌ ಪಾಸ್ ಮಾಡಲು‌ 40% ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರು‌ ಪ್ರಧಾನಿಗೆ ಪತ್ರ ಬರೆದು ನೀವು ನ ಖಾವೂಂಗಾ ಖಾನೆದುಂಗಾ ಎನ್ನುತ್ತೀರಿ ಆದರೆ‌ ಬೊಮ್ಮಾಯಿ‌ ಸರ್ಕಾರದಲ್ಲಿ ಮೈ ಭೀ ಖಾವೂಂಗಾ ಸಬ್‌ಕೋ‌ ಖಿಲಾದುಂಗಾ ಎನ್ನುವಂತಾಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.

ಗೃಹ ಸಚಿವರು ಪೊಲೀಸರ ಲಂಚಬಾಕತನದ ವಿರುದ್ದ‌ ಹರಿಹಾಯ್ದಿರುವ ಘಟನೆಯನ್ನು ನೆನಪಿಸಿದ‌ ಖರ್ಗೆ ಅವರು ಗೃಹ ಸಚಿವರಿಗೆ ತಮ್ಮ ಇಲಾಖೆಯನ್ನೇ ನಿಯಂತ್ರಿಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ‌ ನಾವು ನಿರ್ವಹಿಸುತ್ತೇವೆ. ಪೊಲೀಸರಲ್ಲಿ ಎಲ್ಲರೂ ಕೆಟ್ಟವರಿಲ್ಲ ಅವರಲ್ಲೂ ಒಳ್ಳೆಯವರಿದ್ದಾರೆ. ಆದರೆ ಗೃಹ ಸಚಿವರು ಪೊಲೀಸರ ಬಗ್ಗೆ ತುಚ್ಛವಾಗಿ ಮಾತನಾಡುವ ಮೂಲಕ ಎಲ್ಲರನ್ನೂ ಅವಮಾನಿಸಿದ್ದಾರೆ. ಹಾಗಾಗಿ, ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಅಸಮರ್ಥರಿದ್ದಾರೆ. ಅವರಿಗೆ ಅವರ ಪಕ್ಷದಲ್ಲಿ ಗೌರವವಿಲ್ಲ. ಇಡೀ ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿ ಹೊರತುಪಡಿಸಿದರೆ ಬೀದರ್ ನ ಪ್ರಭು ಚವ್ಹಾಣ್ ಅವರಿಗೆ ಮಂತ್ರಿ ಮಾಡಿದ್ದಾರೆ. ನಮ್ಮ ಭಾಗದಿಂದ ಯಾರೇ ಆರಿಸಿ ಹೋದರು ಅವರಿಗೆ ಪಶುಸಂಗೋಪನೆ ಖಾತೆ ಖಾಯಂ ಆಗಿದೆ. ಪ್ರಭು ಚವ್ಹಾಣ್ ಗೆ ಕನ್ನಡವೂ ಚೆನ್ನಾಗಿ ಬರಲ್ಲ ಇಂಗ್ಲಿಷ್ ಬರಲ್ಲ ಹಿಂದಿಯೂ ಬರಲ್ಲ. ಹಾಗಾದರೆ‌ ಜನರ ಕಷ್ಟ ಹೇಗೆ ಆಲಿಸುತ್ತಾರೆ? ಎಂದು ಕುಟುಕಿದರು.

ತಮ್ಮ ನೂರು‌ದಿನದ ಅಧಿಕಾರದ ಅವಧಿಯ ಬಗ್ಗೆ ಸಿಎಂ ಬೊಮ್ಮಾಯಿ ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ಕೊಟ್ಟಿದ್ದಾರೆ. ಆದರೆ ಜಿಲ್ಲೆಗೊಬ್ಬ ಉಸ್ತುವಾರಿ‌ ಸಚಿವರನ್ನ ನೇಮಿಸಿಲ್ಲ. ಮಳೆಯಿಂದ ಬೆಳೆ ಮನೆ ಹಾನಿಮಾಡಿಕೊಂಡವರ‌ ಕಷ್ಟ ಯಾರು ಕೇಳುತ್ತಾರೆ? ಜನ ಯಾರ ಬಳಿ ಹೋಗಬೇಕು? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಲು ನೀವು ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಗೆ ಮತ ನೀಡಿ ಎಂದು ಕರೆ ನೀಡಿ, ವ್ಯಾಪಾರಸ್ಥ ಬಿ.ಜಿ.ಪಾಟೀಲ್‌ ಅವರು ವ್ಯಾಪಾರಕ್ಕೆ ಬರುತ್ತಿದ್ದಾರೆ ಅವರನ್ನು ತಿರಸ್ಕರಿಸಿ. ಶಿವಾನಂದ್ ಪಾಟೀಲ್‌ ಗೆದ್ದುಬಂದರೆ ತಾಲೂಕಿಗೆ ಮತ್ತೊಬ್ಬ ಮನೆಮಗ ದೊರಕುತ್ತಾನೆ ನಿಮ್ಮ ಕಷ್ಟ ಸುಖಕ್ಕೆ‌ ಸ್ಪಂದಿಸುತ್ತಾನೆ ಎಂದು ಭರವಸೆ ನೀಡಿದರು.

ಅಭ್ಯರ್ಥಿ ಶಿವಾನಂದ‌‌ ಪಾಟೀಲ್‌ ಮಾತನಾಡಿ,‌ ಜನಪರ‌ ಕಾಳಜಿಯುಳ್ಳು ಕಾರ್ಯಕರ್ತರನ್ನ ಪಕ್ಷದ ಹಿರಿಯ ನಾಯಕರು ಗುರುತಿಸಿ ಜವಾಬ್ದಾರಿಯನ್ನು‌ ವಹಿಸಿದ ಉದಾಹರಣೆಗಳು‌ ಸಾಕಷ್ಟಿವೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ನಮ್ಮ ನಾಯಕರಾದ ಪ್ರಿಯಾಂಕ್ ಖರ್ಗೆ ಅವರು ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿ‌ ಜನರ ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ಸದಸ್ಯನಾಗಿ ಜಿಪಂ ವಿರೋಧ ಪಕ್ಷದ ನಾಯಕನಾಗಿ ಪಕ್ಷ ವಹಿಸಿದ ಜವಾಬ್ದಾರಿಯನ್ನು ವಿವಿಧ ಹಂತಗಳಲ್ಲಿ ನಿಭಾಯಿಸಿದ್ದೇನೆ. ಅದಕ್ಕೆ ಕಾರಣ‌ ಪಕ್ಷದ‌ ನಾಯಕರು ಕಾರಣರಾಗಿದ್ದಾರೆ. ನನ್ನ ಗೆಲುವಿನಿಂದ ಪಕ್ಷ ಮತ್ತಷ್ಟು ಬಲಗೊಳ್ಳುವುದರ ಜತೆಗೆ ನಿಮ್ಮೊಂದಿಗೆ ಕೈಜೋಡಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.

ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರು ಮಾತನಾಡಿ ಬಿಜೆಪಿಯ ಬಿ.ಜಿ.ಪಾಟೀಲ್ ಯಾವುದೇ ಸ್ಥಳೀಯ ಸಂಸ್ಥೆಯ ಸದಸ್ಯನಲ್ಲ. ಹಣ ಹಂಚಿದ್ದರಿಂದ ಈ‌ ಹಿಂದಿನ ಕ್ರಿಯಾಶೀಲ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್ ಸೋಲಬೇಕಾಯಿತು. ಈ ಹಣದ ವ್ಯಾಪಾರಿ ಮತ್ತೊಮ್ಮೆ ಮತ ಕೇಳಲು ಬರುತ್ತಿದ್ದಾರೆ ನೀವೆಲ್ಲ ಜಾಗೃತರಾಗಿ ಮತ ಚಲಾಯಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ಮಾಡಿಕೊಡಿ ಎಂದರು.

ಅಧಿವೇಶನದಲ್ಲಿ ಒಂದೇ ಒಂದು ಮಾತನಾಡದ ಬಿ.ಜಿ.ಪಾಟೀಲ್ ರಂತ ಜನಪ್ರತಿನಿಧಿ ಯಾಕೆ ಬೇಕು? ಮತ ಕೇಳಲು ಅವರಿಗೆ ಯಾವ ನೈತಿಕತೆ ಇದೆ. ಯಾವ ಮುಖ ಇಟ್ಟುಕೊಂಡು ಅವರು ಓಟು ಕೇಳುತ್ತಾರೆ? ಅವರಿಗೆ ತಮ್ಮ ಬಳಿ ಇರುವ ದುಡ್ಡಿನಿಂದ ಎಲ್ಲರನ್ನೂ ಕೊಂಡುಕೊಳ್ಳುವ ಹಮ್ಮು ಅವರಿಗೆ. ಆದರೆ, ನಮ್ಮ ಸದಸ್ಯರಿಗೆ ಸ್ವಾಭಿಮಾನವಿಲ್ಲವೇ? ಅವರು ಖಂಡಿತ ಹಣದ ಮೂಲಕ ನಿಮ್ಮನ್ನು ಖರೀದಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲೆಯ ರೈತರು ರೂ 220 ಕೋಟಿ ವಿಮಾ‌ಹಣ‌ ಕಟ್ಟಿದ್ದಾರೆ. ಬೆಳೆ ಹಾನಿಯಾದಾಗ ಅವರಿಗೆ ಬಿಡುಗಡೆ ಮಾಡಿದ ಹಣ ಕೇವಲ 14 ಕೋಟಿ ಮಾತ್ರ. ಇದು ಬಿಜೆಪಿಯ ಕೇಂದ್ರ ಸರ್ಕಾರ ರೈತರ ಪರ ಹೊಂದಿರುವ ಆಘಾತಕಾರಿ ಧೋರಣೆಯಾಗಿದೆ. ಮೋದಿಯವರ ಪಾಲಸಿಯಿಂದಾಗಿ ರೈತರಿಗೆ ಕೂಲಿ ಕಾರ್ಮಿಕರಿಗೆ ಬಡವರಿಗೆ ಅನುಕೂಲವಾಗದೇ ಬರೀ ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ ಎಂದರು.

ಶಾಸಕರಾದ ಪ್ರಿಯಾಂಕ್ ಖರ್ಗೆಯವರ ಆಡಳಿತ ವೈಖರಿಯನ್ನು ಕೊಂಡಾಡಿದ ಶರಣಪ್ರಕಾಶ್ ಪಾಟೀಲ್, ಅವರೊಬ್ಬ ನಿಷ್ಠಾವಂತ ಶಾಸಕ ಎಂದು ಎದೆತಟ್ಟಿ ಹೇಳುತ್ತೇನೆ. ಅವರಲ್ಲಿ ಒಬ್ಬ ಜನನಾಯಕ ಇದ್ದಾರೆ. ತುಂಬಾ ಸರಳವಾದ ಬಡವರ ಬಗ್ಗೆ ಕಾಳಜಿ ಹೊಂದಿದ ನಾಯಕರಾಗಿದ್ದು ಮುಂದೊಂದು ದಿನ ಭವಿಷ್ಯದಲ್ಲಿ ರಾಜ್ಯ ಮಟ್ಟದಲ್ಲಿ ಮಹಾನ್ ನಾಯಕರಾಗಲಿದ್ದಾರೆ ಎಂದು ಹೇಳಿದು.

ಶಾಸಕರಾದ ಕನೀಜ್ ಫಾತೀಮಾ ಮಾತನಾಡಿ, ಜನರ ನಾಯಕ‌ ಶಿವಾನಂದ್ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಆರಿಸಿ ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಕೇವಲ ತಾಲೂಕಿನ, ಜಿಲ್ಲೆಯ ನಾಯಕರಲ್ಲ‌ ಅವರೊಬ್ಬ ರಾಜ್ಯ ನಾಯಕರು. ಅವರ ಆಸೆಯಂತೆ ಇಂದು ಶಿವಾನಂದ್ ಪಾಟೀಲ್ ಅಭ್ಯರ್ಥಿಯಾಗಿ ನಿಮ್ಮ ಮುಂದೆ ನಿಂತಿದ್ದಾರೆ‌. ನೀವು ಅವರನ್ನ ಗೆಲ್ಲಿಸಿ ಕಳಿಸಿದರೆ ಅವರ ಬಳಿ ನೀವು ಹೋಗುವ ಅವಶ್ಯಕತೆ ಇಲ್ಲ ಅವರೇ ನಿಮ್ಮ‌ ಬಳಿ ಜನರ‌ ಕೆಲಸ ಮಾಡಿಕೊಡುತ್ತಾರೆ ಅಂತಹ ಜನಪರ ಕಾಳಜಿಯುಳ್ಳ ನಾಯಕನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿಯೇ ಚಿತ್ತಾಪುರ ಮಾದರಿ ಕ್ಷೇತ್ರವಾಗಲು ಪ್ರಿಯಾಂಕ್ ಖರ್ಗೆ ಅವರೇ ಕಾರಣ. ಅವರ ತಂದೆಯವರಂತೆ ಯಾವಾಗಲು ಕ್ಷೇತ್ರದ ಅಭಿವೃದ್ದಿ ಕುರಿತು ಯೋಚಿಸುತ್ತಾರೆ. ರಾಜ್ಯದ ಜನರೇ ಇಲ್ಲಿಗೆ ಬಂದು ನೋಡಿಕೊಂಡು‌ ಹೋಗಬೇಕಾಗಿದೆ ಎಂದರು.

ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಅವರು‌ ಮಾತನಾಡಿ, ಬಿಜೆಪಿ ಅಭ್ಯರ್ಥಿ ತಮ್ಮ ವ್ಯಾಪಾರ ಉದ್ದೆಮಗಳ ರಕ್ಷಣೆಗೆ ಚುನಾವಣೆಗೆ ನಿಂತಿದ್ದಾರೆ ಹೊರತು ಜನರ ಹಿತ ಕಾಪಾಡುವ ಉದ್ದೇಶ ಹೊಂದಿಲ್ಲ ಎಂದರು.

ಭೀಮಣ್ಣ ಸಾಲಿ ಮಾತನಾಡಿ, ಚಿತ್ತಾಪುರ ಮತಕ್ಷೇತ್ರದ ಸ್ಥಳೀಯ ಸಂಸ್ಥೆ ಸದಸ್ಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ ನೀಡುವ ಮೂಲಕ ಶಾಸಕರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್ , ಶಾಸಕರಾದ ಕನೀಜ್ ಫಾತೀಮಾ, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ್,‌ ಮಾಜಿ ಎಂ ಎಲ್ ಸಿ ತಿಪ್ಪಣಪ್ಪ ಕಮಕನೂರು,ನೀಲಕಂಠ ಮುಲಗೆ, ನಾಗರೆಡ್ಡಿ ಪಾಟೀಲ್ ಕರದಳ್ಳಿ, ಅಜೀಜ್ ಸೇಠ್, ಶ್ರೀನಿವಾಸ ಸಗರ, ಮಹೇಬೂಬ್ ಸಾಬ್, ರಮೇಶ್ ಮರಗೋಳ, ಸುನೀಲ್‌ ದೊಡ್ಡಮನಿ, ಶಿವರುದ್ರ ಭೇಣಿ ಬಸವರಾಜ ಪಾಟೀಲ್ ಹೇರೂರು, ಮಲ್ಲಿಕಾರ್ಜುನ ಪೂಜಾರಿ, ಸ್ಥಳೀಯ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago