ಬಿಸಿ ಬಿಸಿ ಸುದ್ದಿ

ಮೌಢ್ಯ ಆಚರಣೆ ತಿರಸ್ಕರಿಸುವ ಮೂಲಕ ಸಶಕ್ತ ಭಾರತ ಕಟ್ಟಲು ಸಾಧ್ಯ: ಮೆಂಗನ್

ಶಹಾಬಾದ:ಮೌಢ್ಯ ಆಚರಣೆಗಳನ್ನು ತಿರಸ್ಕರಿಸುವ ಮೂಲಕ ಸಶಕ್ತ ಭಾರತವನ್ನು ಕಟ್ಟಲು ಸಾಧ್ಯ ಎಂದು ಭೌದ್ಧ ಮಹಾಸಭಾದ ತಾಲೂಕಾಧ್ಯಕ್ಷ ಸುರೇಶ ಮೆಂಗನ ಹೇಳಿದರು.

ಅವರು ರವಿವಾರ ಹಳೆಶಹಾಬಾದನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ ವತಿಯಿಂದ ಆಯೋಜಿಸಲಾದ ಮೌಢ್ಯ ವಿರೋಧಿ ದಿನವನ್ನು ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಮಶಾನದಲ್ಲಿ ಮೌಢ್ಯ ವಿರೋಧಿ ದಿನ ಆಚರಿಸುವ ಮೂಲಕ ವೈಚಾರಿಕ, ವೈಜ್ಞಾನಿಕ ಭದ್ರ ಬುನಾದಿ ಹಾಕುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮ ಕೇವಲ ಪ್ರಚಾರಗೋಸ್ಕರ ಮತ್ತು ಒಂದು ದಿನಗೋಸ್ಕರ್ ಕಾರ್ಯಕ್ರಮವಾಗದೇ ನಿರಂತರ ಕಾರ್ಯಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು ಅಪಾರ ಪ್ರಮಾಣದಲ್ಲಿ ಹರಡಿದರೂ ಇನ್ನೂ ಮೌಡ್ಯತೆ ಎನ್ನುವುದು ನಮ್ಮನ್ನು ಬಿಟ್ಟಿಲ್ಲ.ಇಂತಹ ಅನಿಷ್ಠ ಆಚರಣೆಗಳಿಂದ ಸಶಕ್ತ ಭಾರತ ಕಟ್ಟಲು ಸಾಧ್ಯನಾ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ ಎಂದರು.

ಮೌಢ್ಯದಿಂದ ಹೊರಬಂದು ಆರೋಗ್ಯರ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ನಾವೆಲ್ಲರೂ ವೈಜ್ಞಾನಿಕ ಹಾಗೂ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಗಾಕಿದೆ. ಅಲ್ಲದೇ .ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಪಾಲನೆ ಮಾಡಬೇಕೆಂದು ಹೇಳಿದರಲ್ಲದೇ, ಸ್ಮಶಾನ ಎಂದರೆ ನಮ್ಮೆಲ್ಲರ ಶಾಶ್ವತ ಮನೆ.ಆದರೆ ಆ ಬಗ್ಗೆಯೂ ಭಯ ಹುಟ್ಟಿಸುವುದು,ಮನೆಯಲ್ಲಿ ಸತ್ತರೇ ಮನೆ ಬಿಡುವುದು ಹಾಗೂ ಮುಳ್ಳನ್ನು ಹಚ್ಚುವುದು, ಹುಟ್ಟಿದರು ಹಾಗೂ ಸತ್ತರೂ ಪುರೋಹಿತಶಾಹಿಗಳ ಮನೆಗೆ ಹೋಗುವುದು, ನಮ್ಮ ಮಕ್ಕಳ ಮದುವೆಗೆ ಬೇರೆಯವರ ಅನುಮತಿ ಪಡೆಯುವುದು, ಎಲ್ಲಾ ದಿನಗಳು ಒಂದೇ ಆದರೂ ಅದರಲ್ಲೂ ಭೀನ್ನತೆ ಉಂಟು ಮಾಡುವುದರ ಬಗ್ಗೆ ಹತ್ತು ಹಲವಾರು ಇಂತಹ ಅನೇಕ ಅವೈಜ್ಞಾನಿಕ ಆಚರಣೆಗಳ ಕುರಿತ ದೃಷ್ಟಾಂತಗಳನ್ನು ಬಿಚ್ಚಿಟ್ಟರು.

ಹೋರಾಟಗಾರರಾದ ಬಸವರಾಜ ಮಯೂರ ಮತ್ತು ಸಂಗೊಳಿ ರಾಯಣ್ಣ ಯುವ ಘರ್ಜನೆಯ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಮಾತನಾಡಿ, ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಢ್ಯದ ಆಚರಣೆ ನಡೆಯುತ್ತಿದೆ.ಇಂತಹ ಆಚರಣೆಗಳಿಗೆ ಒಳಗಾಗಿ ನಾವು ಅನಾಗರಿಕರಾಗಿ ಬದುಕುತ್ತಿದ್ದೆವೆ. ಸುಮಾರು ೫ ಸಾವಿರ ವ?ಗಳಿಂದಲೂ ಇದು ಗೊತ್ತು, ಗುರಿಯಿಲ್ಲದೇ ನಡೆದುಕೊಂಡು ಬಂದಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರು ಜನರಲ್ಲಿನ ಮೌಢ್ಯಗಳನ್ನು ಹೊಡೆದೋಡಿಸಲು ಅನೇಕ ರೀತಿಯಲ್ಲಿ ಶ್ರಮಿಸಿದ್ದಾರೆ. ಜನರು ಈಗಲಾದರು ಎಚ್ಚೆತ್ತು ಮೌಢ್ಯಗಳಿಂದ ಹೊರಬರಬೇಕು.ಅಲ್ಲದೇ ಇಂತಹ ಕಾರ್ಯಕ್ರಮಗಳ ಮೂಲಕ ಶಾಲಾ-ಕಾಲೇಜಿನ ಮಕ್ಕಳಿಗೆ ವೈಜ್ಞಾನಿಕತೆಯ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ಅತಿಥಿಗಳಾಗಿ ನಿವೃತ್ತ ಎಪಿಎಮ್‌ಸಿ ಅಧಿಕಾರಿ ಬಸವರಾಜ ಪಾಟೀಲ ನರಿಬೋಳಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತನ ಅಧ್ಯಕ್ಷ ಗಿರಿಮಲ್ಲಪ್ಪ ವಳಸಂಗ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದಿ ಪ್ರಮಾಣ ವಚನ ಪಡೆಯುವುದರ ಮೂಲಕ ಉದ್ಘಾಟಿಸಲಾಯಿತು. ಮಲ್ಲಿನಾಥ ಪಾಟೀಲ ನಿರೂಪಿಸಿದರು, ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಪ್ರಾಸ್ತಾವಿಕ ನುಡಿದರು, ಶರಣಗೌಡ ಪಾಟೀಲ ಸ್ವಾಗತಿಸಿದರು, ರಮೇಶ ಜೋಗದನಕರ್ ವಂದಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಬೆಳ್ಳಪ್ಪ ಕಣದಾಳ, ಬಸವರಾಜ ದಂಡಗುಲಕರ್, ವಿಜಯಕುಮಾರ ಕಂಠಿಕಾರ, ಚನ್ನಬಸಪ್ಪ ಸಿನ್ನೂರ್,ಗಿರಿರಾಜ ಪವಾರ,ಗಣೇಶ ಜಾಯಿ, ಶಿವಶಾಲಕುಮಾರ ಪಟ್ಟಣಕರ್, ಕುಪೇಂದ್ರ ತುಪ್ಪದ್, ರಮೇಶ ಮೀರಜಕರ್, ಲಾಲ ಅಹ್ಮದ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago