ಕಲಬುರಗಿ: ನಗರದ ಡಿ.ಎಮ್.ಎಸ್.ಎಸ್. ಕೇಂದ್ರ ಕಚೇರಿಯಲ್ಲಿ ಭಾರತ ದೇಶದ ಸಾಮಾಜಿಕ ನ್ಯಾಯದ ಹರಿಕಾರರಾದ ಡಾ.ಭೀಮರಾವ ರಾಮ್‌ಜಿ ಅಂಬೇಡ್ಕರ ರವರ ೬೫ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಬಾಬಾ ಸಾಹೇಬ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಲಿಂಗರಾಜ ತಾರಫೈಲ್ ಸಮಾನತೆ ಮತ್ತು ಭ್ರಾತೃತ್ವದ ನೆಲೆಗಟ್ಟಿನ ಮೇಲೆ ಆದರ್ಶ ಸಮಾಜ ನಿರ್ಮಾಣ ಸಾಧ್ಯವೆಂದು ನಂಬಿ ಶೋಷಿತರ ಸರ್ವಾಂಗೀಣ ಪ್ರಗತಿಗಾಗಿ ಕ್ರಾಂತಿಕಾರಕ ಚಳುವಳಿಯನ್ನು ಹುಟ್ಟು ಹಾಕಿದ ಕೀರ್ತಿ ಡಾ.ಅಂಬೇಡ್ಕರ ಅವರದು.
ಶೋಷಿತ ವರ್ಗದಲ್ಲಿ ಆತ್ಮವಿಶ್ವಾಸ ಮೂಡಿಸಲು ವಿದ್ಯೆ ಹಾಗೂ ಸ್ವಾವಲಂಬನೆಯ ಅಗತ್ಯತೆಯನ್ನು ಪ್ರತಿಪಾದಿಸಿದ ಡಾ:ಅಂಬೇಡ್ಕರವರು ಸಾಮಾಜಿಕ ಸಮಸ್ಯೆಗಳ ವೈಜ್ಞಾನಿಕ ಅಧ್ಯಯನದ ಪ್ರತಿ ವಿಚಾರವನ್ನು ವಿಶ್ಲೇಷಿಸಿ ಶೋಷಿತ ವರ್ಗದಲ್ಲಿ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಸೆಣಿಸುವ ಮನೋಭೂಮಿಕೆಯನ್ನು ಸಿದ್ಧಪಡಿಸಿದರು.
ಅಷ್ಟೆ ಅಲ್ಲದೆ ಬುದ್ಧ ಬಸವ ಡಾ.ಅಂಬೇಡ್ಕರ ರವರು ಭಾರತದಲ್ಲಿ ಇರುವಂತ ಮೌಡ್ಯತೆಯಿಂದ ಎಲ್ಲಾ ವರ್ಗದ ಜನರು ಹೊರಗೆ ಬಂದು ವೈಜ್ಞಾನಿಕವಾದ ನವ ಸಮಾಜ ನಿರ್ಮಾಣವಾಗಬೇಕೆಂಬ ಕನಸ್ಸು ಕಂಡಿದ್ದರು. ಆ ಮಹಾನ ಪುರುಷನ ಮಹಾಪರಿನಿರ್ವಾಣವಾದ ದಿನವಾದ ಇಂದು ಅವರ ಆಸೆಯಂತೆ ಇಂದಿನಿಂದ ಮೌಡ್ಯತೆ ತೋಲಗಲಿ ವಿಜ್ಞಾನ ಬೆಳಗಲಿ ಎಂಬುವಂತಹ ಸಂಕಲ್ಪದೊಂದಿಗೆ ಪ್ರತಿ ಹಳ್ಳಿಗಳಿಗೆ ಈ ಸಂದೇಶವನ್ನು ಡಿ.ಎಮ್.ಎಸ್.ಎಸ್. ಸಂಘಟನೆಯ ಎಲ್ಲಾ ಹೋರಾಟಗಾರರು ಮುಟ್ಟಿಸುವಂತಹ ಕಾರ್ಯವಾಗಬೇಕು ಎಂದು ಲಿಂಗರಾಜ ತಾರಫೈಲ್ ಹೋರಾಟಗಾರರಿಗೆ ಕರೆ ನೀಡಿದರು.
ಈ ಸಂರ್ಬದಲ್ಲಿ ರಾ.ಪ್ರ.ಕಾರ್ಯದರ್ಶಿ ಬಸವರಾಜ ಜವಳಿ, ರಾ.ಸ.ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ, ರಾ.ಸ.ಸದಸ್ಯ ಶಿವಕುಮಾರ ದೊಡ್ಮನಿ, ನಗರ ಅಧ್ಯಕ್ಷ ನಂದಕುಮಾರ, ಸೋಶಿಯಲ್ ಮೆಡಿಯಾ ಶಾಂತಕುಮಾರ, ಮುಖಂಡ ಶರಣಪ್ಪ ಕಟ್ಟಿಮನಿ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…