ಬಿಸಿ ಬಿಸಿ ಸುದ್ದಿ

ಸ್ಕೂಪ್ ಸಂಘದ ಪದಗ್ರಹಣ ಸಮಾರಂಭ- ಶಿಕ್ಷಕರು ದೇಶದ ನಿಜವಾದ ನಿಮಾತೃಗಳು: ವಿಜಯಾ

ಕಲಬುರಗಿ: ವಿವಿಧ ಹಂತದಲ್ಲಿ ಶಿಕ್ಷಣ ಸಂಸ್ಕಾರ ಕೊಟ್ಟ ಶಿಕ್ಷಕರು ಇಂದು ದೇಶದ ನಿಜವಾದ ನಿಮಾತೃಗಳು ಎಂದು ಓಂ ಶಾಂತಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬಿ ಕೆ ವಿಜಯಾ ಹೇಳಿದರು.

ಮಹಾನಗರದ ಆದರ್ಶ ನಗರದ ಓಂ ಶಾಂತಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಉಜ್ವಲ ಭವಿಷ್ಯದ ಶಿಲ್ಪಿಗಳು. ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸಿ ರಾಷ್ಟ್ರ ಕಟ್ಟುವ ಕೆಲಸ ಶಿಕ್ಷಕರ ಮೇಲಿದೆ. ಜವಾಬ್ದಾರಿಯಿಂದ ಎಲ್ಲವೂ ನಿಭಾಯಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಧೈರ್ಯ, ಆತ್ಮ ವಿಶ್ವಾಸ, ಪ್ರಮಾಣಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಬೇಕು ಎಂದು ನುಡಿದರು.

ಮುಖ್ಯ ಅಥಿತಿ ತಹಸೀಲ್ದಾರ ಪ್ರಕಾಶ ಕುದರಿ ಅವರು, ಒಬ್ಬ ವ್ಯಕ್ತಿ ಏನಾದರೂ ಸಾಧನೆ ಮತ್ತು ವ್ಯಕ್ತಿತ್ವ ಬೆಳೆಸಿ ಕೊಳ್ಳಬೇಕಾದರೆ ಶಿಕ್ಷಕರ ಪಾತ್ರ ದೊಡ್ಡದು. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಬೋಧಿಸುವ ಶಿಕ್ಷಕರು ನಮ್ಮೇಲ್ಲರ ಏಳಿಗೆಗೆ ಕಾರಣರು. ಅನುದಿನವೂ ಶಿಕ್ಷಕರ ಸ್ಮರಣೆ ಮಾಡಬೇಕು. ಉನ್ನತ ಮೌಲ್ಯಗಳು ಹೊಂದಿದ ಸ್ಕೂಪ್ ಸಂಘ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞೆ ಡಾ ಶಾಂತಿ ದೇಸಾಯಿ ಅವರು ಮಾತನಾಡಿ, ಜೀವನ ಮೌಲ್ಯಗಳೊಂದಿಗೆ ಉನ್ನತ ಗುರಿ ಸಾಧನೆಗೆ ಮುಂದಾಗಬೇಕು. ಶಿಕ್ಷಣ ಬದುಕು ಕಟ್ಟಿ ಕೊಟ್ಟರೆ ಶಿಕ್ಷಕರು ಭವಿಷ್ಯ ರೂಪಿಸುತ್ತಾರೆ. ಈ ನಿಟ್ಟಿನಲ್ಲಿ ಸ್ಕೂಪ್ ಸಂಘ ಜಿಲ್ಲೆಯಲ್ಲಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಖುಷಿಯ ವಿಚಾರ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ವಿಭಾಗದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಅವರು ಮಾತನಾಡಿ, ಸಮಾಜ ಸೇವೆ ಎಂಬುದು ಆತ್ಮ ತೃಪ್ತಿಯ ಕಾರ್ಯ. ಪಾಠ ಬೋಧನೆಯ ಜೊತೆಗೆ ಇತರ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದು ಮುಖ್ಯ. ಈ ಸ್ಕೂಪ್ ಸಂಘಕ್ಕೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸ್ಕೂಪ್ ಸಂಘದ ರಾಜ್ಯಧ್ಯಕ್ಷ ಗುರುಪಾದ ಕೋಗನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಚಿದಂಬರರಾವ ಪಾಟೀಲ, ರಾಜೇಶ ಕಡೇಚೂರ, ರಮೇಶ ಕುಳಗೇರಿ, ಓಂ ಪ್ರಕಾಶ ಟೆಂಗಳಿಕರ್, ರಾಜ್ಯ ಉಪಾಧ್ಯಕ್ಷರಾದ ಧರ್ಮಣ್ಣ ಎಚ್ ಧನ್ನಿ, ಭಾಗ್ಯಲಕ್ಷ್ಮೀ ಎನ್ ರೆಡ್ಡಿ, ಸೇವಂತಾ ಚವ್ಹಾಣ, ಕೋಶಾಧ್ಯಕ್ಷೆ ಸಾವಿತ್ರಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ವಾಗ್ದರಿ, ಸಹ ಕಾರ್ಯದರ್ಶಿಗಳಾದ ವೆಂಕಟರೆಡ್ಡಿ, ಝಾಕೀರ ಹುಸೇನ ಕುಪನೂರ, ಧೇನು ಚವ್ಹಾಣ ಬೆಳಮಗಿ, ವಿಶಾಲಾಕ್ಷಿ ಮಾಯಣ್ಣವರ, ಮೀನಾಕ್ಷಿ ಬನಸೋಡೆ, ಸಲಹೆಗಾರ ಬಾಬುರಾವ ಕುಲಕರ್ಣಿ ಸೇರಿ ಮತ್ತಿತರರು ಭಾಗವಹಿಸಿದರು. ಸರೋಜನಿ ಝಳಕಿ ಪ್ರಾರ್ಥನಾ ಗೀತೆ ಹಾಡಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago