ಬಿಸಿ ಬಿಸಿ ಸುದ್ದಿ

ಕರಕುಶಲ ತರಬೇತಿ, ಉದ್ಯೋಗಕ್ಕಾಗಿ ಚಿರಂತನ ಟ್ರಸ್ಟ್‍ನಿಂದ ವಿಕಲಾಂಗ/ದಿವ್ಯಾಂಗ ವ್ಯಕ್ತಿಗಳ ಅರ್ಜಿ ಆಹ್ವಾನ

ಬೆಂಗಳೂರು: ವಿಶ್ವ ಅಂಗವಿಕಲ ದಿನಾಚರಣೆಯ ಅಂಗವಾಗಿ ಚಿರಂತನ ಟ್ರಸ್ಟ್ ವತಿಯಿಂದ ವಿಶೇಷ ಅಗತ್ಯಗಳಿರುವ ಅಂಗವಿಕಲ/ದಿವ್ಯಾಂಗ ವ್ಯಕ್ತಿಗಳಿಂದ ಕರಕುಶಲ ತರಬೇತಿ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ಸಾರ್ವಜನಿಕ ಸೇವಾ ಸಂಸ್ಥೆಯಾಗಿರುವ ಒಎನ್‍ಜಿಸಿ ಜೊತೆ ಜಂಟಿಯಾಗಿ ಸೇರಿ ಚಿರಂತನ ಟ್ರಸ್ಟ್ (ನೋಂ.) ಈ ತರಬೇತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಕರಕುಶಲ ತರಬೇತಿ ಹಾಗೂ ಉದ್ಯೋಗ ಕೇಂದ್ರದ ಲಾಭ ಪಡೆಯಲು 17.6ಕ್ಕಿಂತ ಹೆಚ್ಚು ವರ್ಷದ ಅಂಗವಿಕಲ/ದಿವ್ಯಾಂಗ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಿದೆ.

ಡೌನ್ ಸಿಂಡ್ರೋಮ್, ಆಟಿಸಂ, ಡಿಸ್ಲೆಕ್ಸಿಯಾ, ಕಲಿಕೆಯಲ್ಲಿ ತೊಂದರೆಯಿರುವವರು, ಶ್ರವಣ ದೋಷವುಳ್ಳವರು, ಸೆರೆಬ್ರಲ್ ಪಾಲ್ಸಿ ಮುಂತಾದ ವಿಶೇಷ ಸಮಸ್ಯೆಗಳುಳ್ಳವರಿಗೆ ಚಿರಂತನ ಟ್ರಸ್ಟ್ ತರಬೇತಿ ನೀಡಲಿದೆ. ತರಬೇತಿಯ ನಂತರ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದಲೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಅವಧಿಯಲ್ಲಿ ಅವರು ಪ್ರತಿದಿನ 3 ಗಂಟೆ ಕೆಲಸ ಮಾಡಬೇಕು. ಅದಕ್ಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ನೀಡಲಾಗುತ್ತದೆ.

ಡಿ.1,2021ರಂದು ಬಸವನಗುಡಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿಈ ತರಬೇತಿ ಯೋಜನೆಯನ್ನು ಉದ್ಘಾಟಿಸಲಾಯಿತು. ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಶ್ರೀ ಬಿ.ಸಿ.ನಾಗೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಒಎನ್‍ಜಿಸಿ ಫೌಂಡೇಶನ್ನ ಸಿಇಒ ಶ್ರೀ ಕಿರಣ್ ಡಿ.ಎಂ. ಹಾಗೂ ಚಿರಂತನದ ಸಂಸ್ಥಾಪಕಿ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ರಚನಾ ಪ್ರಸಾದ್ ಉಪಸ್ಥಿತರಿದ್ದರು.

ಅಭ್ಯರ್ಥಿಗಳ ಅರ್ಹತೆ ಹಾಗೂ ಉದ್ಯೋಗ ವಿವರ: ವಯಸ್ಸು: 17.6 ವರ್ಷಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ: ಬೌದ್ಧಿಕ ಅಂಗವೈಕಲ್ಯ (ಅಲ್ಪ ಪ್ರಮಾಣದಿಂದ ಮಧ್ಯಮ), ಆಟಿಸಂ (ಅಲ್ಪ ಪ್ರಮಾಣದಿಂದ ಮಧ್ಯಮ), ಸೆರೆಬ್ರಲ್ ಪಾಲ್ಸಿ (ಅಲ್ಪ), ಡೌನ್ ಸಿಂಡ್ರೋಮ್ ಹಾಗೂ ಇನ್ನಿತರ ಜೆನೆಟಿಕ್ ಸಮಸ್ಯೆಗಳು (ಅಲ್ಪ ಪ್ರಮಾಣದಿಂದ ಮಧ್ಯಮ). ದೈನಂದಿನ ಬದುಕು ನಡೆಸಲು ಅಗತ್ಯವಿರುವ ಸಾಮಾಜಿಕ ಹಾಗೂ ಪ್ರಾಯೋಗಿಕ ಕೌಶಲಗಳು ಮತ್ತು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಬೇಕು.(ಬಣ್ಣಗಳನ್ನು ಸಮರ್ಥವಾಗಿ ಬಳಸಲು ಹಾಗೂ ಇಕ್ಕಳವನ್ನು ಚೆನ್ನಾಗಿ ಹಿಡಿದುಕೊಳ್ಳಲು ಬರಬೇಕು. ಕಣ್ಣು ಮತ್ತು ಕೈ ನಡುವೆ ಸಮನ್ವಯ ಇರಬೇಕು. ಆಕಾರ, ಬಣ್ಣ, ಗಾತ್ರದ ಮೂಲಭೂತ ತಿಳಿವಳಿಕೆ ಇರಬೇಕು. ಸಂಖ್ಯೆಗಳು ಮತ್ತು ಸಾಮಾನ್ಯ ಗಣಿತದ ಜ್ಞಾನ ಇರಬೇಕು.)

ಹೇಳಿದ್ದನ್ನು ಅರ್ಥ ಮಾಡಿಕೊಂಡು ಮಾಡುವ ಶಕ್ತಿ ಅಭ್ಯರ್ಥಿಗೆ ಇರಬೇಕು. ಜೊತೆಗೆ, ಕನ್ನಡ ಮತ್ತು ಇಂಗ್ಲಿಷ್ನ ಪ್ರಾಥಮಿಕ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಇದ್ದರೆ ಉತ್ತಮ. ಓದಲು, ಬರೆಯಲು ಹಾಗೂ ಅಂಕಿಗಳನ್ನು ತಿಳಿದುಕೊಳ್ಳುವ ಜ್ಞಾನವಿದ್ದರೆ ಒಳ್ಳೆಯದು. ನಿಯೋಸ್ (10 ಮತ್ತು 12ನೇ ತರಗತಿ ಪಾಸಾದ) ಅಭ್ಯರ್ಥಿಗಳಿಗೆ ಆದ್ಯತೆ. ಮೋಟರ್ ಕುರಿತ ತಿಳಿವಳಿಕೆ, ಕುಳಿತುಕೊಳ್ಳುವ ತಾಳ್ಮೆ, ಸೃಜನಶೀಲ ಹಾಗೂ ಸಾಮಾಜಿಕವಾಗಿ ಬೆರೆಯುವ ಗುಣ ಇರಬೇಕು. ಆರೋಗ್ಯ ಉತ್ತಮವಾಗಿರಬೇಕು ಮತ್ತು ತಂಡದ ಜೊತೆ ಬೆರೆತು ಕೆಲಸ ಮಾಡುವ ಸಾಮಥ್ರ್ಯ ಹಾಗೂ ಮನಸ್ಥಿತಿ ಇರುವುದು ಬಹಳ ಮುಖ್ಯ.

ಯೋಜನೆಯ ವಿವರಗಳು: -ಭಾರತ ಸರ್ಕಾರದ ಸಂಸ್ಥೆಯೊಂದಿಗೆ ಸೇರಿ ಚಿರಂತನ ಟ್ರಸ್ಟ್ ರೂಪಿಸಿರುವ ಕಾರ್ಯಕ್ರಮ. -20 ಮಂದಿ ಅಂಗವಿಕಲ/ ದಿವ್ಯಾಂಗ ವ್ಯಕ್ತಿಗಳಿಗೆ ತರಬೇತಿ ಮತ್ತು ಕೆಲಸ ನೀಡುವುದು. -ವಿದ್ಯಾರ್ಥಿಗಳಿಗೆ 3 ತಿಂಗಳು ತರಬೇತಿ. ನಂತರ ಅವರಿಗೆ ನಮ್ಮಲ್ಲೇ ಸ್ಟೈಪೆಂಡ್ ಜೊತೆ ಉದ್ಯೋಗ. -ಸ್ಥಳ: ಚಿರಂತನ, ಸುಂದರನಗರ, ಬೆಂಗಳೂರು -ಸಮಯ: ತರಬೇತಿಯ ನಂತರ ಅಭ್ಯರ್ಥಿಗಳು ನಿತ್ಯ 3 ಗಂಟೆ ಕಾಲ ಶಿಫ್ಟ್‍ಗಳಲ್ಲಿ ಕೆಲಸ ಮಾಡಬೇಕು. ಶಿಫ್ಟ್ ಬದಲಾಗುತ್ತದೆ. -ಶುಲ್ಕ: ಉಚಿತವಾಗಿ ತರಬೇತಿ ನೀಡಲಾಗುವುದು.

-ಸಾರಿಗೆ: ಸದ್ಯಕ್ಕೆ ಸಂಸ್ಥೆಯಿಂದ ಸಾರಿಗೆ-ಪ್ರಯಾಣ ವ್ಯವಸ್ಥೆ ಇರುವುದಿಲ್ಲ.
-ಸ್ಟೈಪೆಂಡ್: ಅಭ್ಯರ್ಥಿಯ ಸಾಮಥ್ರ್ಯ ಹಾಗೂ ಕೆಲಸ ಮಾಡುವ ಗಂಟೆಗಳ ಆಧಾರದ ಮೇಲೆ ತರಬೇತಿಯ ನಂತರ ನಿರ್ಧಾರ.
-ಬ್ಲಾಕ್ ಪ್ರಿಂಟಿಂಗ್ ಹಾಗೂ ಕೈಮಗ್ಗದ ಬಟ್ಟೆ, ಪೇಪರ್ ಮ್ಯಾಶ್ ಉತ್ಪನ್ನಗಳು, ಟೆರ್ರೇರಿಯಮ್ ತಯಾರಿಕೆ ಹಾಗೂ ಜೋಡಿಸುವುದು, ಗುಣಮಟ್ಟದ ಬಾಳೆ ಎಲೆಯ ಎನ್ವೆಲಪ್ ಮತ್ತು ಕೋಸ್ಟರ್‍ಗಳನ್ನು ತಯಾರಿಸುವ ಬಗ್ಗೆ ತರಬೇತಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8105564884, info@chiranthana.in.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago