ಬಂಕಾಪುರ: ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನುಬಿತ್ತಿ ಬೆಳೆಯುವದರ ಜೊತೆಗೆ, ಸರ್ವಜನಾಂಗದವರಲ್ಲಿ ಸಾಮರಸ್ಯ ಮೂಡಿಸುವ ಸಂಕೇತಗಳಾಗಿವೆ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಕೆ.ಎಸ್.ಕೌಜಲಗಿ ಹೇಳಿದರು.
ಪಟ್ಟಣದ ಶ್ರೀ ದೇಸಾಯಿ ಮಠದ ಆವರಣದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನಡೆದ ಎಣ್ಣೆದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಋತುಮಾನಗಳಲ್ಲಿ ನಡೆಯುವಹಬ್ಬ ಹರಿದಿನಗಳಲ್ಲಿ ನಾವು ಮಾಡುವ ಅಡುಗೆ, ಆಹಾರ ಸೇವನೆಯ ಸಂಪ್ರದಾಯಗಳುಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ. ಸರ್ವಜನಾಂಗದವರು ಒಂದೆಡೆ ಸೇರಿ ಸಾಮರಸ್ಯದಿಂದಬದುಕಲು ಪೂರಕ ವಾತಾವರಣ ಸೃಷ್ಟಿಸುತ್ತಲಿವೆ ಎಂದು ಹೇಳಿದರು.
ಡಾ|ಆರ್.ಎಸ್.ಅರಳೆಲೆಮಠ ಮಾತನಾಡಿ, ಎಂ.ಎ. ಪದವೀಧರರಾದ ಶ್ರೀ ಮಹಾಂತಸ್ವಾಮಿಗಳು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣನೀಡಲು ಶಿಕ್ಷಣ ಸಂಸ್ಥೆ ತೆರೆದು ವಿದ್ಯಾದಾನಮಾಡುವುದರ ಮೂಲಕ ಇತರರಿಗೆಪ್ರೇರಣಾದಾಯಕರಾಗಿದ್ದಾರೆ. ಸೃಷ್ಟಿ, ಪ್ರಕೃತಿಬಗ್ಗೆ ಅಪಾರ ಕಾಳಜಿ ಹೊಂದಿದ ಶ್ರೀಗಳುದೇಸಾಯಿ ಮಠದ ಆವರಣವನ್ನು ಸುಂದರಉದ್ಯಾನವನವನ್ನಾಗಿ ಮಾಡಿರುವುದು ಎಲ್ಲರ ಕಣ್ಮನಸೆಳೆಯುತ್ತವೆ ಎಂದರು.
ಇಳಿಯ ವಯಸ್ಸಿನಲ್ಲಿಯೂಎಳೆಯರಾಗಿ ಭಕ್ತರೇ ತಮ್ಮ ಸರ್ವಸ್ವವೆಂದು ಬಡ ಕುಟುಂಬಗಳು ಮಂಗಲ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಉಚಿತವಾಗಿ ಶ್ರೀಮಠದಕಲ್ಯಾಣ ಮಂಟಪ ಧಾರೆ ಎರೆಯುತ್ತಿರುವುದುಶ್ರೀ ಮಠದ ಸ್ವಾಮೀಜಿಯವರ ನಿಸ್ವಾರ್ಥ ಸೇವಾಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಸದಾಶಿವಪೇಟೆ ವಿರಕ್ತಮಠದ ಶ್ರೀ ಗದಿಗೇಶ್ವರಸ್ವಾಮಿಗಳು, ಶ್ರೀ ಮಠದ ಮಹಾಂತಸ್ವಾಮಿಗಳು ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದವರಾಗಿದ್ದಾರೆ. ಅವರ ತತ್ವ, ಸಿದ್ಧಾಂತಗಳಡಿ ಯಾವುದೇ ವಸ್ತುವನ್ನು ದುಂದು ವೆಚ್ಚ ಮಾಡಬಾರದೆಂಬ ಉದ್ದೇಶದಿಂದ ಕಾರ್ತಿಕೋತ್ಸವವನ್ನುಸಾಂಕೇತಿಕವಾಗಿ ದೀಪಾರಾಧನೆ ಮೂಲಕಆಚರಿಸಿ, ಇದರ ಅಂಗವಾಗಿ ಬಡವರಿಗೆ ಎಣ್ಣೆದಾನ ಮಾಡುತ್ತಿರುವುದು ಶ್ರೀಗಳವರ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು. ಪರಶುರಾಮನರೇಗಲ್ ಅವರಿಂದ ಸಂಗೀತ ಸೇವೆ ನಡೆಯಿತು. ಮಕ್ಕಳ ಭರತನಾಟ್ಯ ಪ್ರದರ್ಶನಕಣ್ಮನ ಸೆಳೆಯಿತು. ಸವಣೂರ ಅಕ್ಕನ ಬಳಗದಅಧ್ಯಕ್ಷೆ ಲಲಿತಾ ಮೆಣಸಿನಕಾಯಿ, ಅನ್ನಪೂರ್ಣಅಡವಿಸ್ವಾಮಿಮಠ, ಬಸವಂತರಾವ್‌ಮಾಮ್ಲೆದೇಸಾಯಿ, ಶೇಖಪ್ಪ ಅಂಕಲಕೋಟಿ,ಅನೀಲ್ ಕುಮಾರ ಮಾಮ್ಲೆ ದೇಸಾಯಿ, ಸಿದ್ದಪ್ಪಹರವಿ, ಬಿ.ಎಸ್.ಗಿಡ್ಡಣ್ಣವರ, ಸುರೇಶ ದೇಸಾಯಿ,ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಸಿ.ಆರ್.ದೇಸಾಯಿ ಇತರರಿದ್ದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.
ಅಣ್ಣ ಬಸವಣ್ಣನವರು ಸರ್ವ ಜನಾಂಗದವರನ್ನು ಅನುಭವ ಮಂಟಪಕ್ಕೆ ಕರೆತಂದು ಸರ್ವ ಜನಾಂಗದರಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಆದರೆ, ಈಗ ಜಾತಿಗೊಂದು ಪೀಠ ಉದಯಿಸಿ ಅವರವರ ಸಮುದಾಯಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದದ ಸಂಗತಿ. –ಶ್ರೀ ಮಹಾಂತಸ್ವಾಮಿಗಳು, ಪೀಠಾಧಿಪತಿ, ದೇಸಾಯಿ ಮಠ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…