ಬಿಸಿ ಬಿಸಿ ಸುದ್ದಿ

ಲಕ್ಮೀಪುರ ಶ್ರೀಗಿರಿ ಮಠದಲ್ಲಿ ಜನಗಣತಿ ಜಾಗೃತಿ ಅಭಿಯಾನ

ಸುರಪುರ: ತಾಲೂಕಿನ ಶ್ರೀಗಿರಿ ಮರಡಿ ಮಲ್ಲಿಕಾರ್ಜುನ ಮಠ ಲಕ್ಷ್ಮಿಪುರ ದಲ್ಲಿ ಜನಗಣತಿ ಜಾಗೃತಿ ಅಭಿಯಾನ 2021 ಯಾದಗಿರಿ ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ವರ್ಗ ಆಯೋಜನೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಪೂಜ್ಯ ಶ್ರೀ ಶ.ಬ್ರ.ಶಿವಯೋಗಿ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವನವಾಸಿ ಕಲ್ಯಾಣದ ಯಾವುದೇ ಕಾರ್ಯಕ್ರಮ ಮಾಡಿದರೂ ಅದಕ್ಕೆ ನನ್ನ ಬೆಂಬಲವಿರುತ್ತದೆ, ಸಹಾಯ, ಸಹಕಾರ ಶ್ರೀಮಠದಿಂದ ಮಾಡುತ್ತೇವೆ ಎಂದು ಹೇಳಿದರು ವನವಾಸಿ ಕಲ್ಯಾಣ ಸಂಸ್ಥೆಯು ಅಖಿಲಭಾರತೀಯ ಮಟ್ಟದ ಸಂಸ್ಥೆಯಾಗಿದ್ದು ಹಿರಿಯರು ಹಾಗೂ ಅನುಭಾವಿಗಳು ಪ್ರಾಮಾಣಿಕತೆಯಿಂದ ಸತ್ಯನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಅಲ್ಲದೆ ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಧನ್ಯ ವಂತರು ಎಂದು ಹೇಳಿದರು.

ವಕ್ತಾರರಾಗಿ ಗಂಗಾಧರ ನಾಯಕ ತಿಂಥಣಿ ವನವಾಸಿ ಕಲ್ಯಾಣ ಕರ್ನಾಟಕ ಸಹ ಕಾರ್ಯದರ್ಶಿಗಳು ಗಂಗಾಧರ ನಾಯಕ ತಿಂಥಣಿ ಮಾತನಾಡಿ, ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತದೆ ಈ ಜನಗಣತಿ ಬಗ್ಗೆ ಜಾಗೃತಿ ಆಗಬೇಕಾಗಿದೆ ಜನಗಣತಿಯಲ್ಲಿ ಹಿಂದೂ ,ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿಗಳು ಎಂದು ಬರೆಯಿಸುವುದಲ್ಲದೆ ಅನ್ಯಧರ್ಮ ಮತಾವಲಂಬಿ ಅಂದರೆ ಓ ಆರ್ ಪಿ ಎಂಬ ಕಾಲಂ ಮಾಡಿ ಇದರಲ್ಲಿ ಬರಿಸುವುದು ಸೂಕ್ತವಲ್ಲವೆಂದು ಜಾಗೃತಿ ಮೂಡಿಸುವುದಕ್ಕಾಗಿ ಈ ಜನಜಾತಿ ಸುರಕ್ಷಾ ವೇದಿಕೆ ವತಿಯಿಂದ ತರಬೇತಿ ವರ್ಗವನ್ನು ಆಯೋಜನೆ ಮಾಡಿದ್ದೇವೆ,2021ನೇ ವರ್ಷದಲ್ಲಿ ದೇಶಮಟ್ಟದಲ್ಲಿ ಜನ ಗಣತಿ ನಡೆಯುತ್ತದೆ.

ಈ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಜನರನ್ನು ಪ್ರಚೋದಿಸಿ ಜನರನ್ನು ಬೇರೆ ಕಡೆಗೆ ಗಮನ ಹರಿಸಿ ಅನ್ಯಧರ್ಮೀಯರು ಎಂದು ಬರೆಯಿಸುತ್ತಿರುವುದು ಇದೊಂದು ಷಡ್ಯಂತ್ರವಾಗಿದೆ ಇದನ್ನು ತಪ್ಪಿಸಿ ಆದಿವಾಸಿಗಳು ಹಾಗೂ ವನವಾಸಿಗಳು ಬುಡಕಟ್ಟು ಜನಾಂಗದವರು ಪ್ರಕೃತಿ ಪೂಜಕರಿದ್ದದರೂ ಅವರು ಹಿಂದೂಗಳೇ ಎಂಬ ಭಾವನೆಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ ಕೆಲವೊಂದು ಅನ್ಯಧರ್ಮೀಯರು ಪ್ರಕೃತಿ ಆರಾಧಕರು.

ಹೆಸರಿನಲ್ಲಿ ಓ ಆರ್ ಪಿ ಎಂದು ನಮೂದಿಸಿ ಅವರನ್ನು ನಿರರ್ಗಳವಾಗಿ ಮತಾಂತರ ಮಾಡುವ ಷಡ್ಯಂತ್ರವಿದೆ ಅದಕ್ಕಾಗಿ ಪರಿಶಿಷ್ಟ ಪಂಗಡದ ಜನಾಂಗದವರು ಯಾವುದೇ ಕಾರಣಕ್ಕೂ ಓ ಆರ್ ಪಿ ಎಂದು ನಮೂದಿಸಬಾರದು ಎಂದು ಹೇಳಿ ಜನಗಣತಿ ಜಾಗೃತಿ ಅಭಿಯಾನದ ಬಗ್ಗೆ ಹಾಗೂ ಯಾವ ರೀತಿ ಜನಜಾಗೃತಿ ಮಾಡಬೇಕು ಹಾಗೂ ಸಂಪರ್ಕ ಅಭಿಯಾನ ಯಾವ ರೀತಿ ಮಾಡಬೇಕು ಎಂಬುದನ್ನು ಸವಿವರವಾಗಿ ಮಾತನಾಡಿದರು.

ಜನಜಾಗೃತಿ ಅಭಿಯಾನದ ಕಾರ್ಯಗಾರ ತರಬೇತಿಯನ್ನು ಮೂರು ಅವಧಿಗಳಲ್ಲಿ ಮಾಡಲಾಯಿತು ,ಮೊದಲನೇ ಅವಧಿಯಲ್ಲಿ ಓ ಆರ್ ಪಿ (other religion person) ಪ್ರಸ್ತಾವನೆ ಅವಧಿಯನ್ನು ಗಂಗಾಧರ ನಾಯಕ ತಿಂಥಣಿ ತರಬೇತಿಯನ್ನು ನೀಡಿದರು.ಎರಡನೇ ಅವಧಿಯನ್ನು ಸಮೀಕ್ಷೆ ಪತ್ರಕ ಮತ್ತು ಸಮೀಕ್ಷೆಯ ವಿಧಾನಗಳು ಎಂಬ ಅವಧಿಯನ್ನು ವೆಂಕಟೇಶ್ ನಾಯಕ್ ದೇವದುರ್ಗ ನಡೆಸಿಕೊಟ್ಟರು. ಮೂರನೇ ಅವಧಿಯನ್ನು ಜಿಲ್ಲಾ ಸಮ್ಮೇಳನ ಹಾಗೂ ಜಿಲ್ಲಾ ಸಮ್ಮೇಳನದ ತಯಾರಿ ಬಗ್ಗೆ ಬಸವರಾಜ್ ಬಡಿಗೇರ್ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ರಮೇಶ್ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ ತಾಲೂಕ ಸಮಿತಿ ಕಾರ್ಯದರ್ಶಿ, ರಂಗನಾಥ ನಾಯಕ ಲಕ್ಷ್ಮೀಪುರ,ಗುರುನಾಥ ರೆಡ್ಡಿ ಸುರಪುರ ನಗರ ಸಮಿತಿ ಕಾರ್ಯದರ್ಶಿ, ಶಿವರಾಜ್ ನಾಯಕ್ ದೊರೆ, ಪರಮಣ್ಣ ವಡಿಕೇರಿ ಕಕ್ಕೇರ,ನಾಗರಾಜ್ ಕಲ್ಗುಡಿ ಸುರಪುರ, ಭೀಮಾಶಂಕರ ಲಿಂಗದಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಬಸವರಾಜ್ ಬಡಿಗೇರ್ ಕಾರ್ಯಕ್ರಮವನ್ನು ನಿರೂಪಿಸಿದರು, ವೆಂಕಟೇಶ ನಾಯಕ ದೇವದುರ್ಗ ಸ್ವಾಗತ ಪರಿಚಯ ಮಾಡಿಕೊಟ್ಟರು, ಅನ್ನಪೂರ್ಣ ಪೂರ್ಣಾವಧಿ ಕಾರ್ಯಕರ್ತೆ ರಾಮಸಮುದ್ರ ಪ್ರಾರ್ಥನ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶರಣು ಚೌಡೇಶ್ವರಿಹಾಳ ಮಾಡಿದರು.

ಜನಗಣತಿ ಜಾಗೃತಿ ಅಭಿಯಾನದ ತರಬೇತಿ ಕಾರ್ಯಗಾರದಲ್ಲಿ ಸುರುಪುರ, ಹುಣಸಗಿ, ಯಾದಗಿರಿ, ಗುರುಮಿಟ್ಕಲ್, ಶಾಹಪುರ ತಾಲೂಕುಗಳ ವನವಾಸಿ ಕಲ್ಯಾಣದ ಕಾರ್ಯಕರ್ತರು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago