ಕಲಬುರಗಿ : ನಗರ ವಸತಿ ಯೋಜನೆಯಡಿ ಸಬ್ಸಿಡಿಯನ್ನು ರಾಜ್ಯ ಸರ್ಕಾರ ೬ ಲಕ್ಷಕ್ಕೆ ಹೆಚ್ಚಿಸಬೇಕು. ಸಿಂಗಲ್ ವಿಂಡೋ ಯೋಜನೆಯನ್ನು ಜಾರಿಗೊಳಿಸಿ ಕನಿಷ್ಠ ೪ ತಿಂಗಳಲ್ಲಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಪ್ರಮುಖರು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಕೊಳಚೆ ಪ್ರದೇಶದ ವಾಸಿಗಳು ವಾಣಿಜ್ಯ ಬ್ಯಾಂಕ್‌ಗಳಿಂದ ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಸರ್ಕಾರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾರ್ಗಸೂಚಿಯನ್ನು ಹೊರಡಿಸಬೇಕು.
ಫಲಾನುಭವಿ ಶುಲ್ಕ ಪಾವತಿಸಲು ನಗರ ಸ್ಥಳೀಯ ಸಮಿತಿಗಳ ವಿಶೇಷ ನಿಧಿ ಉಪಯೋಗಿಸಲು ರಾಜ್ಯದ ಸರ್ಕಾರದ ಉನ್ನತ ಮಟ್ಟದ ಸಮಿತಿಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯ ವಸತಿ ಇಲಾಖೆ ಪ್ರಗತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶಿಸಬೇಕು.
ಕರ್ನಾಟಕ ಸ್ಲಂ ನೀತಿ ೨೦೧೬ ರ ಅನ್ವಯ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು ಇಬ್ಬರು ಸ್ಲಂ ಸಂಘಟನೆಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು. ತ್ವರಿತವಾಗಿಹಕ್ಕುಪತ್ರಗಳನ್ನು ನೀಡಬೇಕು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಲಂ ಮುಕ್ತ ನಗರಗಳ ಅಥವಾ ಸರ್ವರಿಗೂ ಸೂರುಘೋಷಣೆ ಖಾತ್ರಿಹೊಳ್ಳಬೇಕಾದರೆ ಸಮಗ್ರ ವಸತಿ ಹಕ್ಕು ಕಾಯಿದೆಜಾರಿಗೊಳಿಸಬೇಕು. ಈಗಾಗಲೇ ೨೦೧೮ರಲ್ಲಿ ರಾಷ್ಟ್ರೀಯಾ ಕಾನೂನು ಶಾಲೆಯಿಂದ ಕರ್ನಾಟಕ ಸ್ಲಂ ಅಭಿವೃದ್ಧಿ ಕಾಯಿದೆ ಕರಡನ್ನು ರಾಜ್ಯ ಸರ್ಕಾಟ ಸ್ವೀಕರಿಸಿದ್ದು, ಈ ಕರಡನ್ನು ಕಾಯಿದೆಯಾಗಿ ಜಾರಿಗೊಳಿಸಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ವಸತಿ ಇಲಾಖೆ ಕೈಗೊಳ್ಳಲು ನಿರ್ದೇಶಿಸಬೇಕು.
ರಾಜ್ಯಾದ್ಯಂತ ಅಘೋಷಿತ ಕೊಳಚೆ ನಿಗಧಿತ ಕಾಲಮಿತಿಯೊಳಗೆ ಘೋಷಿಸಲು ಆದೇಶಿಸಬೇಕು. ಅಂದರೆ ಪ್ರಸ್ತುತ ರಾಜ್ಯದಲ್ಲಿ ೨೭೮೦ ಕೊಳಚೆ ಪ್ರದೇಶಗಳು ಘೋಷಣೆಯಾಗಿದ್ದು, ನಗರೀಕರಣದ ಈ ಸಂದರ್ಭದಲ್ಲಿ ನಗರಜನಸಂಖ್ಯೆ ಹೆಚ್ಚಾಗುತ್ತಿದ್ದು ಕೊಳಚೆ ಪ್ರದೇಶಗಳು ಸಹ ಹೆಚ್ಚುತ್ತಿವೆ ಅಂದಾಜಿನ ಪ್ರಕಾರ ೧೫೦೦ ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳು ರಾಜ್ಯದಲ್ಲಿ ಘೋಷಣೆಯ ಗುಣಲಕ್ಷಣ ಹೊಂದಿದ್ದರು ೨೦೧೬ ರ ಸ್ಲಂ ನೀತಿ ಅನ್ವಯ ಘೋಷಣೆಗೆ ಸಂಬಂಧಿಸಿದ ಕಾರ್ಯ ಯೋಜನೆಯನ್ನು ಮಂಡಳಿ ಸಿದ್ಧಗೊಳಿಸಿರುವುದಿಲ್ಲ . ಹಾಗಾಗಿ ೨೦೧೬ ರಸ್ತ ೦ ನೀತಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಮಂಡಳಿಯಿಂದ ವಸತಿ ಇಲಾಖೆ ಮುಖೇನ ಎಲ್ಲಾ ಹೊರಡಿಸಲು ಆದೇಶಿಸಬೇಕು.
ಖಾಸಗಿ ಮಾಲೀಕತ್ವದಲ್ಲಿರುವ ೭೦೯ ಕೊಳಚೆ ಪ್ರದೇಶಗಳು ಘೋಷಣೆಯಾಗಿದ್ದು,ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಣ ನೀಡಬೇಕು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಖಾಸಗಿ ಮಾಲೀಕತ್ವದಲ್ಲಿರುವ ಸ್ಲಂ ನಿವಾಸಿಗಳಿಗೆ ಮಂಡಳಿಯಿಂದ ಗುರುತಿನ ಪತ್ರ ನೀಡಲು ಕ್ರಮ ವಹಿಸಬೇಕು ಎಂದು ಸ್ಲಂಜನಾಂದೋಲನ ಕರ್ನಾಟಕ ಸಂಘಟನೆಯ ಅಧ್ಯಕ್ಷೆ ಸುನಿತಾ ಎಮ್ ಕೊಲ್ಲೂರ, ಸ್ಲಂ ನಾಯಕಿ ಗೌರಮ್ಮ ಮಾಕಾ, ಸಚಾಲಕಿ ರೇಣುಕಾ ಸರಡಗಿ ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…