ಬಿಸಿ ಬಿಸಿ ಸುದ್ದಿ

ಹದಗೆಟ್ಟ ಜೇವರ್ಗಿ ಮತಕ್ಷೇತ್ರದ ರಸ್ತೆಗಳಿಗೆ ಕಾಯಕಲ್ಪ ಯಾವಾಗ?: ಸದನದಲ್ಲಿ ಶಾಸಕ ಡಾ. ಅಜಯ್ ಸಿಂಗ್ ಖಡಕ್ ಪ್ರಶ್ನೆ

ಕಲಬುರಗಿ: ಮಳೆಯಿಂದಾಗಿ ಜೇವರ್ಗಿ ಮತಕ್ಷೇತ್ರದ ಹಳ್ಳಿಗಾಡಿನ ರಸ್ತೆಗಳು ಹರಿದು ಹೋಗಿದ್ದು ಅವುಗಳ ದುರಸ್ಥಿಗಾಗಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್‍ಸಿಂಗ್ ಪ್ರಶ್ನೆಗೆ ಬೆಳಗಾವಿ ಸುವರ್ಣ ಸೌಧದಲ್ಲಿನ ಚಳಿಗಾಲದ ಕಲಾಪದಲ್ಲಿ ಉತ್ತರ ನೀಡಿರುವ ಪಿಡಬ್ಲೂಡಿ ಸಚಿವರಾದ ಸಿಸಿ ಪಾಟೀಲರು ಜೇವರ್ಗಿ ಮತಕ್ಷೇತ್ರದ ಹಳ್ಳಿ ರಸ್ತೆಗಳ ಸುಧಾರಣೆಗೆ 25 ಕೋಟಿ ರು ಪ್ರಸ್ತಾವನೆ ಸಿದ್ಧವಾಗಿದ್ದು 2021- 21 ನೇ ಸಾಲಿಗಾಗಿ 3. 23 ಕೋಟಿ ರು ಅನುದಾನದ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಜೇವರ್ಗಿಯಿಂದ ಕಟ್ಟಿ ಸಂಗಾವಿ, ಗುಡೂರ, ನರಿಬೋಳ್, ಮದರಿ, ಹೊಸೂರ್ ಮಾರ್ಗ, ಆಂದೋಲಾ, ಬಿರಾಳ (ಬಿ) ಮತ್ತು (ಕೆ), ಜೇವರ್ಗಿಯಿಂದ ನೋಲೋಗಿ ಮಾರ್ಗದ ಗೊನಳ್ಳಿ, ಹರವಾಳ, ಚಿಗರಳ್ಳಿ ಕ್ರಾಸ್‍ನಿಂದ ಯಡ್ರಾಮಿ ವರೆಗಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇವೆಲ್ಲವೂ ಪಿಡಬ್ಲೂಡಿ ಇಲಾಖೆಯಡಿಲ್ಲಿಯೇ ಬರುತ್ತವೆ, ಇವುಗಳ ದುರಸ್ಥಿಗೆ ಕೈಗೊಂಡ ಕ್ರಮಗಳ ಬಗ್ಗೆ ಸದನದಲ್ಲಿ ಡಾ. ಅಜಯ್ ಸಿಂಗ್ ಎತ್ತಿದ್ದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಸಿಸಿ ಪಾಟೀಲ್ ಕ್ರಿಯಾ ಯೋಜನೆ ಸಿದ್ಧಗೊಂಡಿವೆ, ಅನುದಾನದ ಲಭ್ಯತೆ ನೋಡಿಕೊಂಡು ಹಣ ಬಿಡುಗಡೆ ಮಾಡಲಾಗುತ್ತದೆ. ಸದರಿ ಹಳ್ಳಿಗಳನ್ನೊಳಗೊಂಡಿರುವ ಎಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಎಸ್‍ಎಚ್‍ಡಿಪಿ ಯೋಜನೆ- 4 ರಲ್ಲಿ 9. 50 ಕೋಟಿ ರು ಪ್ರಸ್ತಾವನೆ ವಿಸ್ತೃತ ಯೋಜನಾ ವರದಿ ತಯ್ಯಾರಿಕೆ ಹಂತಂದಲ್ಲಿದೆ ಎಂದೂ ಹೇಳಿದ್ದಾರೆ.

ಇವೆಲ್ಲ ರಸ್ತೆಗಳ ಕಾಯಂ ದುರಸ್ಥಿಗಾಗಿ 100 ಕೋಟಿ ರು ಗಳ ಅಗತ್ಯವಿರುತ್ತದೆ. ಅನುದಾನದ ಲಭ್ಯತೆ ನೋಡಿಕೊಂಡು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದೂ ಪಿಡಬ್ಲೂಡಿ ಸಚಿವರಾದ ಸಿಸಿ ಪಾಟೀಲರು ಶಾಸಕ ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಪ್ರಸ್ನೆಗೆ ಸದನದಲ್ಲಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಎರಡೂ ರೂಪದಲ್ಲಿ ಉತ್ತರಿಸಿದ್ದಾರೆ.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

42 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago